ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ವೃದ್ಧನೊಬ್ಬ, ತನಗೆ ಪೊಲೀಸರಿಂದ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಲ್ಲದೇ ಆತ್ಮಹತ್ಯೆಗೂ ಯತ್ನಿಸಿದ ಘಟನೆ ಸಿಎಂ ನಿವಾಸ ಆರ್.ಟಿ.ನಗರದಲ್ಲಿ ನಡೆದಿದೆ.
ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್ ಪೆಕ್ಟರ್ ನಿಂದ ಅನ್ಯಾಯವಾಗಿದೆ, ನನಗೆ ನ್ಯಾಯ ಕೊಡಿಸಿ ಎಂದು ಸಿಎಂ ಬಳಿ ವೃದ್ಧ ಕಣ್ಣೀರಿಟ್ಟಿದ್ದಾನೆ.
ಪೊಲೀಸರು ಕೆಲವರೊಂದಿಗೆ ಸೇರಿ ಸೈಟ್ ವಿಚಾರವಾಗಿ ತನಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ನ್ಯಾಯ ಸಿಕ್ಕಿಲ್ಲ ಎನ್ನುತ್ತ, ತನ್ನ ಬಳಿ ಇದ್ದ ದ್ರಾವಣದ ಬಾಟಲ್ ತೆಗೆದ ವೃದ್ಧ ಅದನ್ನು ಮುಖ್ಯಮಂತ್ರಿಗಳಿಗೆ ತೋರಿಸಿ ಸೇವಿಸಲು ಮುಂದಾಗಿದ್ದಾರೆ. ತಕ್ಷಣ ತಡೆದ ಪೊಲೀಸರು ವೃದ್ಧರನ್ನು ಪಕ್ಕಕ್ಕೆ ಕರೆದೊಯ್ದು ಮಾಹಿತಿ ಪಡೆದುಕೊಂಡಿದ್ದಾರೆ.