Breaking News

ಪುನೀತ್ ರಾಜ್​ಕುಮಾರ್ ‘ಜೇಮ್ಸ್’ ಹೇಗಿದೆ? ಇಲ್ಲಿದೆ ಟ್ವಿಟರ್ ರಿವ್ಯೂ

Spread the love

ಪುನೀತ್ ರಾಜ್​ಕುಮಾರ್ ಅವರ (Puneeth Rajkumar) ಬಹು ನಿರೀಕ್ಷಿತ ಚಿತ್ರ ಜೇಮ್ಸ್ (James) ಅದ್ದೂರಿ ಬಿಡುಗಡೆಗೊಂಡಿದೆ, ಚಿತ್ರಮಂದಿರಗಳಿಗೆ ರಭಸವಾಗಿಯೇ ಅಪ್ಪಳಿಸಿದೆ. ಅಭಿಮಾನಿಗಳು ಜೇಮ್ಸ್ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಭಾರಿ ಸ್ವಾಗತವನ್ನು ನೀಡಿದ್ದಾರೆ.
ಇಂದು ಪುನೀತ್ ರಾಜ್​ಕುಮಾರ್ ಅವರ ಜನ್ಮದಿನವೂ ಆಗಿರುವುದರಿಂದ ಅವರ (Puneeth Rajkumar Birthday) ಅಭಿನಯವನ್ನು ತೆರೆಯ ಮೇಲೆ ವೀಕ್ಷಿಸಲು ಅವರ ಅಭಿಮಾನಿಗಳು ಚಿತ್ರಮಂದಿರಗಳಿಗೆ ಧಾವಿಸುತ್ತಿದ್ದಾರೆ. ಜೇಮ್ಸ್ ಸಿನಿಮಾ ಚಿತ್ರ ವೀಕ್ಷಿಸಿದವರು ಸಿನಿಮಾ ಹೇಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಜೇಮ್ಸ್ ಚಲನಚಿತ್ರ ಹೇಗಿದೆ? ಇಲ್ಲಿದೆ ಟ್ವಿಟರ್ ರಿವ್ಯೂ. (James Twitter Review)

ಪುನೀತ್ ರಾಜ್​ಕುಮಾರ್ ಅಭಿನಯದ ಜೇಮ್ಸ್ ಚಿತ್ರ ತೆರೆಗೆ ಬರುತ್ತಿದ್ದಂತೆ ಅಭಿಮಾನಿಗಳು ತೆರೆ ಮೇಲೆ ನಟನ ಪ್ರದರ್ಶನ ನೋಡಿ ಥ್ರಿಲ್ ಆಗಿದ್ದಾರೆ. ಅನೇಕ ಅಭಿಮಾನಿಗಳು ಚಲನಚಿತ್ರವನ್ನು ನೋಡಲು ಬಿಡುಗಡೆಯಾದ ಮೊದಲ ದಿನದ ಮೊದಲ ಶೋವನ್ನೇ ಆಗಮಿಸಿದ್ದಾರೆ.ಮುಂಜಾನೆಯಿಂದಲೇ ಶುರುವಾಗಿದೆ ಜೇಮ್ಸ್ ಜಾತ್ರೆ
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಜಾನೆ 5 ಗಂಟೆಯಿಂದಲೇ ಜೇಮ್ಸ್ ಜಾತ್ರೆ ಶುರುವಾಗಿದೆ. ಅಪ್ಪು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ನಿದ್ದೆಗೆಟ್ಟು, ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದ್ದಾರೆ. ಮುಂಜಾನೆಯೇ ಫ್ಯಾಮಿಲಿ ಜೊತೆಗೆ ಬಂದು ಸಿನಿಮಾ ನೋಡಿದ್ದಾರೆ.ವಿಶ್ವದಾದ್ಯಂತ 4 ಸಾವಿರ ಸ್ಕ್ರೀನ್‌ಗಳಲ್ಲಿ ಜೇಮ್ಸ್ ಅಬ್ಬರ

ಪುನೀತ್ ಅಭಿನಯದ ಜೇಮ್ಸ್ ಸಿನಿಮಾ ಬರೀ ಬೆಂಗಳೂರು ಅಥವಾ ರಾಜ್ಯದಲ್ಲಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ರಿಲೀಸ್ ಆಗಿದೆ. ವಿಶ್ವದಾದ್ಯಂತ ಇಂದು ಸುಮಾರು 4000 ಸ್ಕ್ರೀನ್ ಗಳಲ್ಲಿ ಜೇಮ್ಸ್ ರಿಲೀಸ್ ಆಗಿದೆ.ಬೆಟ್ಟದ ಹೂವು, ಅರಸು, ಜಾಕಿ, ಅಣ್ಣಾಬಾಂಡ್, ರಣ ವಿಕ್ರಮ, ಯುವರತ್ನ, ರಾಜಕುಮಾರ, ನಟಸಾರ್ವಭೌಮ ಮತ್ತು ಇನ್ನೂ ಹಲವು ಜನಮೆಚ್ಚಿದ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಮ್ಮನ್ನು ರಂಜಿಸಿದ್ದಾರೆ. ಇದೀಗ ಜೇಮ್ಸ್ ಮೂಲಕ ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಕನ್ನಡದ ಕಣ್ಮಣಿ ಅಪ್ಪು ಅಭಿಮಾನಿಗಳಿಗೆ ರಸದೌತಣ ಉಣಬಡಿಸಲು ಜೇಮ್ಸ್ ಆಗಿ ಬಂದಿದ್ದಾರೆ.


Spread the love

About Laxminews 24x7

Check Also

ಹಾವೇರಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಕಾಲೇಜಿಗಿಲ್ಲ ಉದ್ಘಾಟನೆ ಭಾಗ್ಯ

Spread the loveಹಾವೇರಿ: ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿ ವರ್ಷ ಕಳೆಯುತ್ತಿದ್ದರೂ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಕಾಲೇಜು ಇನ್ನೂ ಉದ್ಘಾಟನೆಯಾಗಿಲ್ಲ. ಕಾಲೇಜಿಗೆ ತೆರಳಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ