ಬೆಂಗಳೂರು: ಈಗ ಜಾರಿಗೆ ತರೋದಕ್ಕೆ ಹೊರಟಿರುವಂತ ಮತಾಂತರ ನಿಷೇಧ ಕಾಯ್ದೆಯ ( Karnataka Anti Conversion Bill ) ಕರಡು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ಧಪಡಿಸಿರೋದಲ್ಲ. 2009ರಲ್ಲಿ ಯಡಿಯೂರಪ್ಪ ( Yediyurappa ) ಸಿಎಂ ಆಗಿದ್ದಂತ ಕಾಲದಲ್ಲಿ ಸಿದ್ಧಪಡಿಸಿರೋದಾಗಿದೆ.
ಒಂದು ವೇಳೆ ಈಗ ನೀವು ಮತಾಂತರ ನಿಷೇಧ ಮಸೂದೆಯನ್ನು ಜಾರಿಗೊಳಿಸಿದ್ರೇ ಆದ್ರೇ.. 2023ಕ್ಕೆ ನಾವು ಅಧಿಕಾರಕ್ಕೆ ಬರುತ್ತೇವೆ. ಆಗ ಕಾಯ್ದೆಯನ್ನು ರದ್ದು ಪಡಿಸಲಾಗುತ್ತದೆ ಎಂಬುದಾಗಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ( Ex CM Siddaramaiah ) ವಿಧಾನಸಭೆಯಲ್ಲಿ ಗುಡುಗಿದರು.
ಇಂದು ವಿಧಾನಸಭೆಯಲ್ಲಿ ( Karnataka Assembly ) ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ ಸಮರವೇ ನಡೆಯುತ್ತಿದೆ. ಸದನದಲ್ಲಿ ಮಾತನಾಡುತ್ತಿರುವಂತ ವಿಪಕ್ಷ ನಾಯಕ ಸಿದ್ಧರಾಮಯ್ಯ, ನಮ್ಮ ಆಡಳಿತ ಕಾಲದಲ್ಲಿ ಮತಾಂತರ ನಿಷೇಧ ಕಾಯ್ದೆಯ ಕುರಿತಂತೆ ಯಾವುದೇ ಪ್ರಸ್ತಾಪ ಆಗಿಲ್ಲ. ಈ ಹಿಂದಿನ ಕರಡಿನ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸೋದಕ್ಕೆ ಮಂಡಿಸೋದಕ್ಕೆ ಸಲ್ಲಿಸಲು ನಾನು ಸಹಿ ಹಾಕಿದ್ದಾಗಿ ತಿಳಿಸಿದರು.
ಈಗ ವಿಧಾನಸಭೆಯಲ್ಲಿ ಬಿಜೆಪಿ ನಡೆಸುತ್ತಿರುವಂತ ಮತಾಂತರ ನಿಷೇಧ ಕಾಯ್ದೆ ಆರ್ ಎಸ್ ಎಸ್ ಅಜೆಂಡಾದೊಂದಿಗೆ ಮಂಡಿಸಲಾಗುತ್ತಿರುವಂತ ಕಾಯ್ದೆಯಾಗಿದೆ. 2009ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಂತ ಸಂದರ್ಭದಲ್ಲಿ ಸಿದ್ಧಪಡಿಸಲಾದಂತ ಕರಡು ಆಗಿದೆ. ಅದರನ್ನು ಈಗ ಮಂಡಿಸಲಾಗಿದೆ. ಇದು ಮಧ್ಯಪ್ರದೇಶದ ಕರಡು ಆಗಿದ್ದು, ಹೆಸರು ಬದಲಿಸಿ ಕರ್ನಾಟಕ ಮತಾಂತರ ಕಾಯ್ದೆ ಎಂದು ಮಂಡಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಮಸೂದೆ ಅನುಮೋದನೆಗೆ ನಾವು ಒಪ್ಪಿಗೆ ಸೂಚಿಸೋದಿಲ್ಲ ಎಂದರು.
ನೀವು ಮತಾಂತರ ಮಸೂಧೆ ಇಂದು ಮಾಡಿಸಿ, ರಾಜ್ಯದಲ್ಲಿ ಜಾರಿಗೆ ತಂದಿದ್ದೇ ಆದಲ್ಲಿ, ನಾವು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ. ಕಾನೂನಿನ ಅಡಿಯಲ್ಲಿ ಹೋರಾಟ ಮಾಡುತ್ತೇವೆ. 2023ರಕ್ಕೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿ ಬರಲಿದೆ. ಆಗ ನೀವು ಈಗ ಜಾರಿಗೆ ತಂದಂತ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸೋದಾಗಿ ಸದನದಲ್ಲೇ ಘೋಷಿಸಿದರು.