Breaking News

ಸರ್ಕಾರಿ ಚಿಂತಾಮಣರಾವ್ ಶಾಲೆಯ ಶತಮಾನೋತ್ಸವ

Spread the love

ಬೆಳಗಾವಿ ;ಪಟವರ್ಧನ ಸಂಸ್ಥಾನದ ರಾಜಲಕ್ಷ್ಮೀ ರಾಜೆ ಪಟವರ್ಧನ ಅವರು ತಮ್ಮ ಆಸ್ತಿಯನ್ನು ಶಾಲೆಗೆ ದಾನ ನೀಡಿ ಇತಿಹಾಸದ ಭಾಗವಾಗಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸರ್ಕಾರಿ ಚಿಂತಾಮಣರಾವ್ ಶಾಲೆಯ ಶತಮಾನೋತ್ಸವ ಸವಿನೆನಪಿಗಾಗಿ ಸಭಾಭವನ ಉದ್ಘಾಟನೆ ಹಾಗು ಗುರುಸ್ಮರಣೆ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನು ಅವರು ಹೇಳಿದರು.

 

ಇತಿಹಾಸದ ಒಂದು ಭಾಗವಾಗಿರಬೇಕು. ಇಲ್ಲದಿದ್ದರೆ ಹೊಸ ಇತಿಹಾಸವನ್ನು ರಚನೆ ಮಾಡಿರಬೇಕು. . ಇಲ್ಲಿ ಈ ಶಾಲೆಯಲ್ಲಿ ಕಲಿತಿರುವ ಶಾಸಕ ಅಭಯ ಪಾಟೀಲರು ಇಷ್ಟೊಂದು ನವೀಕರಿಸಿ ಹೊಸ ಇತಿಹಾಸವನ್ನು ಸೃಷ್ಟಿಮಾಡಿದ್ದಾರೆಂದರು.

 

ನಮಗೂ ಮಹಾರಾಜರಿಗೂ ಹಳೆಯ ಸಂಬಂಧವಿದೆ. ನನ್ನ ಗ್ರಾಮ ಕುಂದಗೋಳ ತಾಲುಕಿನ ಹಳ್ಳಿ.. ಅದು ಜಮಖಂಡಿ ಸಂಸ್ಥಾನಕ್ಕೆ ಸೇರುತ್ತದೆ, ಅದು ಸಾಂಗಲಿ ಪಟವರ್ಧನ ಕುಟುಂಬಕ್ಕೆ ಸೇರಿದ ಸಂಸ್ಥಾನ. ಹೀಗಾಗಿ ಅದು ನಮಗೆ ಹೆಮ್ಮೆಯ ವಿಷಯ ಎಂದರು.

ನನ್ನ ತಂದೆ 12 ವರ್ಷದವರಿದ್ದಾಗ ಬರಗಾಲವಿತ್ತು, ಆಗ ಪಟವರ್ಧನ ಮಹಾರಾಜರಿಗೆ ನನ್ನ ತಂದೆ ಭೂಮಿ ಕರವನ್ನು ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿಕೊಂಡಿದ್ದರು. ಆಗ ಪಟವರ್ಧನ ಮಹಾರಾಜರು 12 ಗ್ರಾಮಗಳ ಭೂಮಿ ಕರವನ್ನು ಮನ್ನಾ ಮಾಡಿದ್ದರು ಎಂದು ಬೊಮ್ಮಾಯಿ ಸ್ಮರಿಸಿಕೊಂಡರು.


Spread the love

About Laxminews 24x7

Check Also

ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Spread the love ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ