Breaking News

ಇಬ್ಬರು ಮಹಾಪುರುಷರಿಗೆ ಮಾಡಿರುವ ಅಪಮಾನವನ್ನ ಖಂಡಿಸ್ತೀನಿ: ಹೆಬ್ಬಾಳ್ಕರ್​

Spread the love

ಬೆಳಗಾವಿ: ನಮ್ಮ ರಾಜ್ಯದಲ್ಲಾಗಲಿ, ಹೊರರಾಜ್ಯದಲ್ಲಾಗಲಿ ಶಿವಾಜಿ ಮಹಾರಾಜ ಪುತ್ಥಳಿಗೆ ಅವಮಾನ ಮಾಡಿರುವುದು, ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ಭಗ್ನ ಮಾಡಿರುವ ಘಟನೆ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಇಬ್ಬರು ಮಹಾಪುರುಷರಿಗೆ ಅಪಮಾನ ಮಾಡಿರುವುದನ್ನು ನಾನು ಖಂಡಿಸುತ್ತೀನಿ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್​ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಹೇಳಿದರು.

ನಗರದ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ರಾಜಕೀಯ ಬೇಳೆ ಬೇಯಿಸಲು ಈ ರೀತಿ ಮಾಡುತ್ತಿದ್ದಾರೆ. ಸಮಾಜದ, ರಾಜ್ಯದ ಮಧ್ಯೆ ಹೀಗೆ ಮಾಡಿ ಒಕ್ಕೂಟ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಕುರುಬ ಮತ್ತು ಮರಾಠ ಸಮುದಾಯದ ನಾಯಕರ ಜೊತೆ ಸೌಹಾರ್ದಯುತವಾಗಿ ಚರ್ಚೆ ಮಾಡಿದ್ದೇನೆ. ಎಂಇಎಸ್ ನಿಷೇಧ ಬಗ್ಗೆ ಚರ್ಚೆ ಮಾಡ್ತಾರೋ, ಇಲ್ಲವೋ ಗೊತ್ತಿಲ್ಲ. ಆದ್ರೆ ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.

ಸಮಾಜದ ಕೆಲವರು ಮಾತ್ರ ಈ ರೀತಿಯ ಕೃತ್ಯಗಳನ್ನ ಎಸಗುತ್ತಿದ್ದಾರೆ. ಇಡೀ ಸಮಾಜಕ್ಕೆ ನಾವು ಕೆಟ್ಟ ಹೆಸರನ್ನ ತರೋದು ಬೇಡ. ತಪ್ಪಿತಸ್ಥರು ಇದಾರೆ. ಯಾರೂ ತಪ್ಪು ಮಾಡಿದ್ದಾರೆ ಎಂದು ಹೇಳುವ ಧೈರ್ಯ ನನಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಹೆಬ್ಬಾಳ್ಕರ್ ಆಗ್ರಹಿಸಿದರು.


Spread the love

About Laxminews 24x7

Check Also

ಕ್ರಾಂತಿ ಮಹಿಳಾ ಮಂಡಳ ಉಮಾ ಸಂಗೀತ ಪ್ರತಿಷ್ಠಾನದಿಂದ ಹಿರಿಯ ನಾಗರಿಕ ದಿನಾಚರಣೆ ಗುರು, ಹಿರಿಯರನ್ನು ಗೌರವಿಸಿ: ಜಯ ಜೋಶಿ

Spread the love ಕ್ರಾಂತಿ ಮಹಿಳಾ ಮಂಡಳ ಉಮಾ ಸಂಗೀತ ಪ್ರತಿಷ್ಠಾನದಿಂದ ಹಿರಿಯ ನಾಗರಿಕ ದಿನಾಚರಣೆ ಗುರು, ಹಿರಿಯರನ್ನು ಗೌರವಿಸಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ