ಬೆಳಗಾವಿಯಲ್ಲಿ ನಡೆಯುತ್ತಿರುವ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಗುಜನಾಳ ಗ್ರಾಮ ಪಂಚಾಯತ ಮತಗಟ್ಟೆಗೆ ಶಾಸಕ ಸತೀಶ್ ಜಾರಕಿಹೊಳಿ ಭೇಟಿ ನೀಡಿದರು.
ಇಂದು ಬೆಳಗಾವಿಯ ಎರಡು ಪರಿಷತ್ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಗುಜನಾಳ ಗ್ರಾಮ ಪಂಚಾಯತಿ ಬಳಿ ಮೊಕ್ಕಾಂ ಹೂಡಿದ್ದಾರೆ. ಈ ಮೊದಲೇ ಸತೀಶ್ ಜಾರಕಿಹೊಳಿ ಹೇಳಿದಂತೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗುಜನಾಳ ಗ್ರಾಮ ಪಂಚಾಯತಿಯಲ್ಲಿ ಸ್ಥಾಪಿಸಲಾದ ಮತಗಟ್ಟೆಯ ಬಳಿ ಟಿಕಾಣಿ ಹೂಡಿದ್ದಾರೆ.
ಶಾಸಕರಿಗೆ ಬೂತ್ ಎಜೆಂಟ್ ಆಗಲು ಅವಕಾಶ ಇಲ್ಲ. ಹಾಗಾಗಿ ಬೂತ್ ಬಳಿಯೇ ಮೊಕ್ಕಾ ಹೂಡಿದ್ದಾರೆ. ಗೋಕಾಕ್ ತಾಲೂಕಿನಲ್ಲಿ ಚುನಾವಣೆಯಲ್ಲಿ ಅಕ್ರಮದ ಚಟುವಟಿಕೆಗಳು ನಡೆಯುವ ಶಂಕೆ ಹಿನ್ನೆಲೆಯಲ್ಲಿ ಮೊದಲೇ ಈ ಕುರಿತಂತೆ ಘೋಷಣೆ ಮಾಡಿದ್ದರು. ತಮಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಕೊಣ್ಣೂರ ಪುರಸಭೆಯಲ್ಲಿ ರಾಹುಲ್ ಜಾರಕಿಹೊಳಿ ಏಜೆಂಟ್‍ರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಶಿಂಧಿಕುರಬೇಟ ಗ್ರಾಮ ಪಂಚಾಯತನಲ್ಲಿ ಪ್ರೀಯಾಂಕ ಜಾರಕಿಹೊಳಿಯವರನ್ನು ಏಜೆಂಟ್‍ರನ್ನಾಗಿ ನೇಮಕ ಮಾಡಲಾಗಿದೆ.
ಈಗಾಗಲೇ ಶಾಸಕ ಸತೀಶ್ ಜಾರಕಿಹೊಳಿ ಚುನಾವಣೆ ಅಕ್ರಮ ಹಿನ್ನೆಲೆಯಲ್ಲಿ ಮತದಾನದ ಬೂತ್ ಬಳಿಯೇ ಟಿಕಾಣಿ ಹೂಡಿದ್ದಾರೆ. ಇನ್ನು ಈ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.