Breaking News

ಅರ್ಧದಷ್ಟು ಜನರು ಸದ್ದಿಲ್ಲದೆ ತಕ್ಷಣ ಪ್ರಾಣ ಬಿಡುವ ಕಾಯಿಲೆ ಯಾವುದು ಗೊತ್ತಾ..?

Spread the love

ಈ ಕಾಯಿಲೆ ಬಂದ ತಕ್ಷಣದಲ್ಲೇ ಜನರು ತಕ್ಷಣವೇ ಸದ್ದಿಲ್ಲದೆ ಪ್ರಾಣ ಬಿಡುತ್ತಾರೆ. ಮಾತನಾಡುವುದಕ್ಕೂ, ಹೇಳಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ ಪಟ್ ಅಂತ ಪ್ರಾಣ ಹೋಗುತ್ತದೆ. ಯಾವುದಿದು ಕಾಯಿಲೆ ಅಂತೀರ. ಅದೇ ಕಂಡ್ರಿ ‘ಹೃದಯಾಘಾತ’. ಇದು ಕೆಲವರಿಗೆ ದೀರ್ಘ ಕಾಲದ ಸಮಸ್ಯೆಯಾಗಿ ಕಾಡಿದರೆ ಬಹುತೇಕರಿಗೆ ಸದ್ದಿಲ್ಲದೆ ತಮ್ಮ ಪ್ರಾಣಕ್ಕೆ ಎರವಾಗುತ್ತದೆ.ಮೊದಲ ರೀತಿಯ ಹೃದಯಾಘಾತಕ್ಕೆ ಸಾಂಪ್ರದಾಯಿಕ ಲಕ್ಷಣಗಳಿರುತ್ತವೆ.

 

ಕಾಣಿಸಿಕೊಂಡ ತಕ್ಷಣದಲ್ಲೇ ಎದೆ ನೋವಾಗಿ, ಉಸಿರಾಟದ ತೊಂದರೆ ಹಾಗೂ ಶೀತ ಮತ್ತು ಬೆವರು ಉಂಟಾಗುತ್ತದೆ. ಆಗ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಗುಣ ಪಡಿಸಬಹುದು. ಎರಡನೇ ರೀತಿಯಲ್ಲಿ ಎರಗುವ ಹೃದಯಾಘಾತಕ್ಕೆ ಯಾವುದೇ ರೀತಿಯ ಲಕ್ಷಣಗಳುಂಟಾಗುವುದಿಲ್ಲ ಹೃದಯ ಸ್ನಾಯುಗಳಲ್ಲಿ ರಕ್ತದ ಹರಿವು ತೀರ ಕಡಿಮೆಯಾಗಿ ತಕ್ಷಣ ಪ್ರಾಣ ಹೋಗುತ್ತದೆ’ ಎಂದು ಅಮೆರಿಕಾದ ವೇಕ್ ಫಾರೆಸ್ಟ್ ಬ್ಯಾಪ್ಟಿಸ್ಟ್ ಮೆಡಿಕಲ್ ಸೆಂಟರ್’ ಸಂಸ್ಥೆಯ ವರದಿ ತಿಳಿಸಿದೆ.

‘ಇದು ಇದ್ದಕ್ಕಿಂದಂತೆ ಬಂದು ಕ್ಷಣಾರ್ಧದಲ್ಲಿ ಎರಗುತ್ತದೆ. ಹೃದಯ ಪೂರ್ಣ ಸ್ತಂಭನವಾದ ಮೇಲೆ ಯಾವುದೇ ಚಿಕಿತ್ಸೆ ನೀಡಿದರೂ ಪ್ರಯೋಜನವಾಗುವುದಿಲ್ಲ’ ಎಂದು ವೇಕ್ ಫಾರೆಸ್ಟ್ ಬ್ಯಾಪ್ಟಿಸ್ಟ್ ಮೆಡಿಕಲ್ ಸೆಂಟರ್’ ಸಂಸ್ಥೆಯ ಎಲ್ಸಾಯದ್ ಝೆಡ್ ಸೋಲಿಮನ್ ತಿಳಿಸುತ್ತಾರೆ. ಸಂಶೋಧಕರ ತಂಡವು 10 ವರ್ಷಗಳಲ್ಲಿ ಹೃದಯಾಘಾತ ಸಮಸ್ಯೆಯಿರುವ 9,498 ಮಧ್ಯ ವಯಸ್ಕರನ್ನು ನೋಂದಾಯಿಸಿಕೊಂಡು ವರದಿ ಸಿದ್ದಪಡಿಸಿದ್ದು,

ಇದರಲ್ಲಿ 317 ಮಂದಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆ ಸದ್ದಿಲ್ಲದೆ ಎರಗಿದರೆ 386 ಮಂದಿಗೆ ಸಾಂಪ್ರದಾಯಿಕ ಲಕ್ಷಣಗಳು ಉಂಟಾಗುತ್ತದೆ’ ಎಂದು ತಿಳಿಸಿದೆ. ತಕ್ಷಣ ಎರಗುವ ಹೃದಯಾಘಾತದಿಂದ ಪ್ರಾಣ ಬಿಡುವವರ ಸಂಖ್ಯೆ ಶೇ.34 ಹೆಚ್ಚಾಗಿದ್ದು,ಇದು ಪುರುಷರಲ್ಲಿ ಸಾಮಾನ್ಯವಾಗಿದ್ದರೆ ಮಹಿಳೆಯರಲ್ಲಿ ಈ ಸಂಭವ ಹೆಚ್ಚು ಎಂದು ವರದಿ ತಿಳಿಸುತ್ತದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ