Breaking News

ಕೋಮಾಗೆ ಜಾರಿದ ಕನ್ನಡ ಹಿರಿಯ ನಟ ಶಿವರಾಂ

Spread the love

ಬೆಂಗಳೂರು: ಮೂರು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಂತ ಸ್ಯಾಂಡಲ್ ವುಡ್ ನಟ ಶಿವರಾಂ ( Sandalwood Actor Shivaram) ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಮೆದುಳಿಗೆ ಡ್ಯಾಮೇಜ್‌ ಆಗಿದ್ದು, ಕೋಮಾಗೆ ಜಾರಿದ್ದಾರೆ.


ಹಿರಿಯ ನಟನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಮೋಹನ್ ಅವ್ರು ಶಿವರಾಂ ಅವ್ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ‘ ಹಿರಿಯ ನಟನ ಬ್ರೇನ್ ಡ್ಯಾಮೇಜ್‌ ಆಗಿದ್ದು, ಮೆದುಳಿನಲ್ಲಿ ರಕ್ತಸ್ರಾವ‌ ಆಗಿದೆ. ಸಧ್ಯ ಅವ್ರು ಕೋಮಾಗೆ ಜಾರಿದ್ದು, ಸ್ಥಿತಿ ಗಂಭೀರವಾಗಿದೆ. ಇನ್ನು ಅವ್ರು ಹೃದಯ ಸೇರಿ ಇತರೆ ಆಗಾಂಗಗಳ ಸ್ಥಿತಿ ಉತ್ತಮವಾಗಿವೆ. ಆದ್ರೆ, ಮೆದುಳು ಮಾತ್ರ ನಿಷ್ಕ್ರೀಯವಾಗಿದೆ. ಅವ್ರ ವಯಸ್ಸಿನ ಕಾರಣದಿಂದ ಯಾವುದೇ ಸರ್ಜರಿ ಮಾಡಲು ಸಾಧ್ಯವಾಗ್ತಿಲ್ಲ. ಆದ್ರೆ, ಮಿರಕಲ್‌ ನಡೆಯಬೋದು ಎಂದು ನಿರೀಕ್ಷಿಸುತ್ತಿದ್ದೇನೆ. ಚಿಕಿತ್ಸೆಗೆ ಸ್ಪಂದಿಸಿದ್ರೆ ಯಾವುದೇ ತೊಂದೆರೆ ಆಗುವುದಿಲ್ಲ. ಕುಟುಂಬಸ್ಥರು ಭರವಸೆ ಕಳೆದುಕೊಳ್ಳುವುದು ಬೇಡ ‘ ಎಂದರು

ಮೂರು ದಿನಗಳ ಹಿಂದೆ ಕಾರಿನಲ್ಲಿ ತೆರಳುತ್ತಿದ್ದಂತ ಕನ್ನಡದ ಹಿರಿಯ ನಟ ಶಿವರಾಂ ( Kannada Actor Shivaram ) ಕಾರು, ಅಪಘಾತಗೊಂಡಿತ್ತು. ಈ ಅಪಘಾತದಿಂದಾಗಿ ಹೊಸಕೆರೆಹಳ್ಳಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಗಾಗಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದರು.

ನಿನ್ನೆ ಮನೆಯಲ್ಲಿ ಪೂಜೆ ಮಾಡುವಾಗ ಬಿದ್ದು, ಪ್ರಜ್ಞೆಹೀನ ಸ್ಥಿತಿಗೆ ತಲುಪಿದ್ದಾರೆ. ತಕ್ಷಣ ಮನೆಯವ್ರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಧ್ಯ ಶಿವರಾಂ ಅವ್ರ ಸ್ಥಿತಿ ಗಂಭೀರವಾಗಿದೆ.


Spread the love

About Laxminews 24x7

Check Also

ಐನಾಪೂರ ಗ್ರಾಮದ ಕಾರಿಮಠ ವಸತಿ ಪ್ರದೇಶದ ವಾಲ್ಮೀಕಿ ನಾಯಕ ಸಮುದಾಯದವರಿಂದ ಸನ್ಮಾನ

Spread the loveಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಇಂದು ಸನ್ಮತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನೋದ್ ಬರಗಾಲೆ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ