ಅಮೃತಸರದ ಗೋಲ್ಡನ್ ಟೆಂಪಲ್‌ನ ಅದ್ಭುತ ವೈಮಾನಿಕ ಚಿತ್ರಣವನ್ನು ಶುಕ್ರವಾರ ಟ್ವಿಟ್ಟರ್ ನಲ್ಲಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದು, ಗುರುಪುರಬ್ ಸಂದರ್ಭದಲ್ಲಿ ಜನರಿಗೆ ಶುಭ ಹಾರೈಸಿದ್ದಾರೆ.ವಿದ್ಯುತ್ ದೀಪಗಳಿಂದ ಸುಂದರವಾಗಿ ಬೆಳಗಿರುವ ಗೋಲ್ಡನ್ ಟೆಂಪಲ್, ಅಕಾಲ್ ತಖ್ತ್ ಮತ್ತು ಸರೋವರದ ಅದ್ಭುತ ವೈಮಾನಿಕ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.
ಈ ವೇಳೆ ಎಲ್ಲರಿಗೂ ಟ್ವೀಟ್ ಮುಖಾಂತರ ಉದ್ಯಮಿ ಆನಂದ್ ಮಹೀಂದ್ರಾ ಅವರು ಗುರುಪುರಬ್‍ನ ಶುಭಾಶಯಗಳನ್ನು ತಿಳಿಸಿದ್ದಾರೆ.
ಆನಂದ್ ಮಹೀಂದ್ರಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಕೂಡ ಉದ್ಯಮಿಗೆ ಶುಭ ಹಾರೈಸಿದ್ದಾರೆ. ಕೆಲವರು ತಾವು ಕ್ಲಿಕ್ ಮಾಡಿದ ಗೋಲ್ಡನ್ ಟೆಂಪಲ್ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ದೇವ್ ಅವರ ಜನ್ಮದಿನದ ಗುರುಪುರಬ್ ಪ್ರಯುಕ್ತ ಭಕ್ತರು ಗೋಲ್ಡನ್ ಟೆಂಪಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ, ಮೇಣದ ಬತ್ತಿಗಳನ್ನು ಬೆಳಗಿಸಿದ್ದಾರೆ. ಈ ವೇಳೆ ಭಕ್ತರು ಸರೋವರದಲ್ಲಿ ಪುಣ್ಯ ಸ್ನಾನ ಕೂಡ ಮಾಡಿದ್ದಾರೆ.
ಗುರುನಾನಕ್ ಅವರು ಏಪ್ರಿಲ್ 15, 1469 ರಂದು ಪಾಕಿಸ್ತಾನದ ಶೇಖಪುರ ಜಿಲ್ಲೆಯಲ್ಲಿರುವ ಲಾಹೋರ್ ಬಳಿಯ ರಾಯ್ ಭೋಯ್ ಕಿ ತಲ್ವಂಡಿಯಲ್ಲಿ ಜನಿಸಿದರು.
Laxmi News 24×7