ಬೆಂಗಳೂರು : ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ರಾಜ್ಯದಾದ್ಯಂತ ರಾತ್ರಿ 10:00 ರಿಂದ ಬೆಳಿಗ್ಗೆ 5:00 ರವರೆಗೆ ಹೇರಲಾಗಿದ್ದ ಕರ್ಫ್ಯೂ ಅನ್ನುಇಂದಿನಿಂದ (ನವೆಂಬರ್ 5) ಹಿಂಪಡೆಯಲಾಗಿದೆ.
ಅಕ್ಟೋಬರ್ 25 ರಂದು ಹಿಂದಿನ ಆದೇಶದ ಅವಧಿ ಮುಗಿದ ನಂತರ ಕರ್ನಾಟಕದಾದ್ಯಂತ ರಾತ್ರಿ ಕರ್ಫ್ಯೂ ಕುರಿತಾಗಿ ಇದ್ದ ಊಹಾಪೋಹಗಳನ್ನು ಕೊನೆಗೊಳಿಸಿರುವ ರಾಜ್ಯ ಸರ್ಕಾರ ಶುಕ್ರವಾರ ಔಪಚಾರಿಕವಾಗಿ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿದೆ.
ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಹೊರಡಿಸಿದ ಹೊಸ ಆದೇಶದಲ್ಲಿ,ರಾತ್ರಿ ಕರ್ಫ್ಯೂ ವಿಸ್ತರಿಸುವ ಹಿಂದಿನ ಆದೇಶವನ್ನು ರದ್ದುಗೊಳಿಸಲಾಗಿದೆ.
ರಾಜ್ಯದಲ್ಲಿ ಗುರುವಾರ 261 ಹೊಸ ಕೋವಿಡ್ -19 ಪ್ರಕರಣಗಳು ಮತ್ತು ಐದು ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Laxmi News 24×7