Breaking News

JDS ಪಕ್ಷವನ್ನು ಅಲ್ಪಸಂಖ್ಯಾತರರು ನಂಬುವುದಿಲ್ಲ ಎನ್ನುವುದಕ್ಕೆ ಈ ಫಲಿತಾಂಶ ಸಾಕ್ಷಿ: ಜಮೀರ್

Spread the love

ಜೆಡಿಎಸ್ ಪಕ್ಷವನ್ನು ಅಲ್ಪಸಂಖ್ಯಾತರರು ನಂಬುವುದಿಲ್ಲ ಎಂಬುದಕ್ಕೆ ಉಪ ಚುನಾವಣೆ ಫಲಿತಾಂಶ ಸಾಕ್ಷಿ. ಎರಡೂ ಕಡೆ ಠೇವಣಿ ಕಳೆದುಕೊಂಡಿದ್ದಾರೆ. ಹಾನಗಲ್ ನಲ್ಲಿ ಪಕ್ಷೇತರ ಅಭ್ಯರ್ಥಿಗಿಂತ ಕಡಿಮೆ ಮತ ಜೆಡಿಎಸ್ ಗೆ ಬಂದಿದೆ.

 

ಉಪ ಚುನಾವಣೆ ಫಲಿತಾಂಶದ ಕುರಿತಾಗಿ ಮಾತನಾಡಿದ ಅವರು, ಹಾನಗಲ್ ನಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಹೋರಾಟ ನಡೆಸಿತ್ತು. ಸಿದ್ದರಾಮಯ್ಯ, ಡಿ. ಕೆ.ಶಿವಕುಮಾರ್ ಸೇರಿ ಎಲ್ಲ ನಾಯಕರೂ ಶ್ರಮ ಹಾಕಿದರು ಎಂದರು.

ಸಿಂದಗಿಯಲ್ಲಿ ಕಾಂಗ್ರೆಸ್ ಕಳೆದ ಚುನಾವಣೆಗಿಂತ 40 ಸಾವಿರ ಮತ ಹೆಚ್ಚು ಪಡೆದಿದೆ. ಜೆಡಿಎಸ್ ಅಲ್ಲೂ ಅಲ್ಪಸಂಖ್ಯಾತ ಮಹಿಳೆಯನ್ನು ಬಲಿಪಶು ಮಾಡಿದೆ. ಜೆಡಿಎಸ್ ನಂಬಿದರೆ ಕಷ್ಟ ಎನ್ನುವುದು ಅರ್ಥವಾಗಿದೆ. ಅಲ್ಪಸಂಖ್ಯಾತ ಸಮುದಾಯ ಈ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು ಎಂದು ಜಮೀರ್ ಅಹಮದ್ ಹೇಳಿದರು.


Spread the love

About Laxminews 24x7

Check Also

ಮಜಗಾವಿಯ ಆದಿನಾಥ್ ದಿಗಂಬರ ಜೈನ್ ಮಂದಿರದಲ್ಲಿ ಶೋಡಶಕಾರಣ ಪರ್ವ ಕಾರ್ಯಕ್ರಮ….

Spread the love ಮಜಗಾವಿಯ ಆದಿನಾಥ್ ದಿಗಂಬರ ಜೈನ್ ಮಂದಿರದಲ್ಲಿ ಶೋಡಶಕಾರಣ ಪರ್ವ ಕಾರ್ಯಕ್ರಮ…. ಮಜಗಾವಿಯ ಭಗವಾನ್ ಶ್ರೀ 1008 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ