Breaking News

ವಿಮಾನ ನಿಲ್ದಾಣದಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ಶಾಹಿದ್​ ಕಪೂರ್​ ಪತ್ನಿ

Spread the love

ಶಾಹಿದ್​ ಕಪೂರ್ ಮತ್ತು ಮೀರಾ ರಜಪೂತ್​ ಅವರು ಮಾಲ್ಡೀವ್ಸ್​ ಪ್ರವಾಸಕ್ಕೆ ಹೋಗಿದ್ದರು. ವಾಪಸ್​ ಬರುವಾಗ ಮುಂಬೈ ಏರ್​ಪೋರ್ಟ್​ನಲ್ಲಿ ಮೀರಾ ಧರಿಸಿದ್ದ ಡ್ರೆಸ್​ ಎಲ್ಲರ ಕಣ್ಣು ಕುಕ್ಕಿದೆ. ಅದು ಟ್ರೋಲ್​ಗೆ ಕಾರಣ ಆಗಿದೆ.​

ಬಾಲಿವುಡ್​ನ ಖ್ಯಾತ ನಟ ಶಾಹಿದ್​ ಕಪೂರ್​ ಅವರ ಪತ್ನಿ ಮೀರಾ ರಜಪೂತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾರೆ. ಅದಕ್ಕೆಲ್ಲ ಕಾರಣ ಅವರು ಧರಿಸಿರುವ ಬಟ್ಟೆ. ಯಾವ ರೀತಿಯ ಬಟ್ಟೆ ಧರಿಸಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಸೆಲೆಬ್ರಿಟಿಗಳು ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ. ಮೀರಾ ರಜಪೂತ್​ ಅವರು ಇತ್ತೀಚೆಗೆ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ರೀತಿಗೆ ಎಲ್ಲರೂ ಬೆರಗಾಗಿದ್ದಾರೆ. ಒಂದು ವರ್ಗದ ನೆಟ್ಟಿಗರು ತುಂಬ ವ್ಯಂಗ್ಯವಾಗಿ ಕಾಲೆಳೆಯುತ್ತಿದ್ದಾರೆ.

ಇಬ್ಬರು ಮಕ್ಕಳ ತಾಯಿ ಮೀರಾ ರಜಪೂತ್​. ಅವರು ಚಿತ್ರರಂಗಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಿದೆಯಾದರೂ ಅದು ನಿಜವಾಗಿಲ್ಲ. ನೋಡಲು ಹೀರೋಯಿನ್​ ರೀತಿಯೇ ಸುಂದರವಾಗಿರುವ ಮೀರಾ ಅವರು ಗ್ಲಾಮರಸ್​ ಫೋಟೋಶೂಟ್​ಗಳ ಮೂಲಕ ಮಿಂಚುತ್ತಾರೆ. ಈ ನಡುವೆ ವಿಮಾನ ನಿಲ್ದಾಣದಲ್ಲಿ ಹಾಟ್​ ಆಗಿ ಕಾಣಿಸಿಕೊಂಡಿದ್ದನ್ನು ಜನರು ಯಾಕೋ ಸಹಿಸುತ್ತಿಲ್ಲ.

ಇಬ್ಬರು ಮಕ್ಕಳನ್ನು ಕರೆದುಕೊಂಡು ಶಾಹಿದ್​ ಕಪೂರ್​ ಮತ್ತು ಮೀರಾ ರಜಪೂತ್​ ಅವರು ಮಾಲ್ಡೀವ್ಸ್​ ಪ್ರವಾಸಕ್ಕೆ ಹೋಗಿದ್ದರು. ಇತ್ತೀಚೆಗೆ ಅವರು ಪ್ರವಾಸ ಮುಗಿಸಿ ಬಂದಿದ್ದಾರೆ. ವಾಪಸ್​ ಬರುವಾಗ ಪಾಪರಾಜಿಗಳು ಮುಂಬೈ ಏರ್​ಪೋರ್ಟ್​ನಲ್ಲಿ ಅವರ ಫೋಟೋ ಮತ್ತು ವಿಡಿಯೋ ಸೆರೆ ಹಿಡಿದಿದ್ದಾರೆ. ಅದರಲ್ಲಿ ಮೀರಾ ಧರಿಸಿರುವ ಡ್ರೆಸ್​ ಹೈಲೈಟ್​ ಆಗಿದೆ.

ಮೀರಾ ಅವರು ಪ್ಯಾಂಟ್​ ಬದಲಿಗೆ ಅತಿ ಚಿಕ್ಕ ಶಾರ್ಟ್ಸ್​ ಧರಿಸಿರುವುದು ಟ್ರೋಲಿಗರ ಕಣ್ಣು ಕುಕ್ಕುತ್ತಿದೆ. ಅದನ್ನು ಕಂಡು ಬಗೆಬಗೆಯಲ್ಲಿ ಕಮೆಂಟ್​ ಮಾಡಲಾಗುತ್ತಿದೆ. ‘ಅವರು ಏನು ಧರಿಸಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಅವರಿಗೆ ಹುಚ್ಚು ಹಿಡಿದಿದೆ ಎನಿಸುತ್ತದೆ’ ಎಂದು ವ್ಯಕ್ತಿಯೊಬ್ಬರು ಖಾರವಾಗಿ ಕಮೆಂಟ್​ ಮಾಡಿದ್ದಾರೆ. ‘ಮೀರಾ ಯಾಕೆ ಬೆತ್ತಲಾಗಿ ಬರುತ್ತಿದ್ದಾರೆ? ಬಟ್ಟೆ ಹಾಕುವುದನ್ನು ಮರೆತು ಅವರು ರಸ್ತೆಗೆ ಬಂದಿರಬಹುದು. ಇಷ್ಟೆಲ್ಲ ಹಣ ಗಳಿಸುವವರು ಒಳ್ಳೆಯ ಬಟ್ಟೆ ಯಾಕೆ ಕೊಂಡುಕೊಳ್ಳುವುದಿಲ್ಲ? ಇದೆಲ್ಲ ಪ್ರಚಾರದ ಗಿಮಿಕ್​ ಇದಕ್ಕಾಗಿ ಒಂದು ವಾರದಿಂದ ಪ್ಲ್ಯಾನ್​ ಮಾಡಿರುತ್ತಾರೆ’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ.

2015ರ ಜುಲೈ 7ರಂದು ಶಾಹಿದ್​ ಕಪೂರ್​ ಮತ್ತು ಮೀರಾ ರಜಪೂತ್​ ಮದುವೆಯಾದರು. ಈ ಜೋಡಿಗೆ ಮಿಶಾ ಮತ್ತು ಝೈನ್​ ಎಂಬಿಬ್ಬರು ಮಕ್ಕಳಿದ್ದಾರೆ. ನಿರ್ದೇಶಕರಾದ ರಾಜ್ ಮತ್ತು ಡಿಕೆ ಅವರ ಹೊಸ ವೆಬ್​ ಸರಣಿಯಲ್ಲಿ ಶಾಹಿದ್​ ಕಪೂರ್​ ನಟಿಸುತ್ತಿದ್ದಾರೆ.


Spread the love

About Laxminews 24x7

Check Also

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ, ಅಮೃತ 2.0 ಯೋಜನೆಯಡಿಯಲ್ಲಿ,

Spread the love ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶೇಡಬಾಳ ಗ್ರಾಮದ ಬಸವಣ್ಣ ದೇವಾಲಯ ಆವರಣದಲ್ಲಿ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ