ಹಾವೇರಿ : ”ಹಾನಗಲ್ಲ ಜನರ ಪುರುಷಾರ್ಥಕ್ಕೆ ಪ್ರಣಾಳಿಕೆ ಮಾಡಿದ್ದೇವೆ.ಯಾವಾಗಲೂ ನಾವು ಅಭಿವೃದ್ಧಿ ಪರವಾಗಿ ಕೆಲಸ ಮಾಡಿದ್ದೇವೆ” ಎಂದು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ, ”ಯಾವ ಪುರುಷಾರ್ಥಕ್ಕೆ ಹಾನಗಲ್ ಚುನಾವಣಾ ಪ್ರಣಾಳಿಕೆ ಮಾಡಿದ್ದಿರಿ” ಎಂಬ ಡಿ. ಕೆ. ಶಿವಕುಮಾರ್ ಅವರ ಹೇಳಿಕೆಗೆ ಈ ತಿರುಗೇಟು ನೀಡಿದ್ದಾರೆ. ”ಕಾಂಗ್ರೆಸ್ ನವರಿಗೆ ಇಂತಹ ಚಿಂತನೆ ಬರುವುದಿಲ್ಲ. ಅದಕ್ಕಾಗಿ ಅವರು ಆರೋಪ ಮಾಡುತ್ತಿದ್ದಾರೆ” ಎಂದರು.
”ಹಾನಗಲ್ಲ ಕ್ಷೇತ್ರದಲ್ಲಿ ಎಂದೆಂದೂ ಕಂಡಿರದ ಸಾಮಾಜಿಕ ಸಮೀಕರಣ ಕಂಡು ಬರುತ್ತಿದ್ದು, ಎಲ್ಲ ವರ್ಗದವರು ಬಿಜೆಪಿಗೆ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ” ಎಂದರು.
”ಎರಡೂ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ. ವಿಧಾನಸೌದಲ್ಲಿ ಎಲ್ಲ ಕೆಲಸ, ಕಾರ್ಯಗಳು ಸರಾಗವಾಗಿ ನಡೆಯುತ್ತಿವೆ. ನಮ್ಮ ಸಚಿವರು ಕ್ಷೇತ್ರದಲ್ಲಿ ಒಂದೇರಡು ದಿನ ಪ್ರಚಾರ ನಡೆಸಿ ಹೋಗುತ್ತಿದ್ದಾರೆ. ಅವರು ಸಹ ಈ ಹಿಂದಿನ ಉಪಚುನಾವಣೆಗಳಲ್ಲಿ ಇದೇ ರೀತಿ ಮಾಡಿಲ್ಲವ? . ನಮಗೂ ಗೊತ್ತಿದೆ” ಎಂದು, ”ವಿಧಾನಸೌಧಕ್ಕೆ ಬೀಗ ಜಡಿದು ಪ್ರಚಾರಕ್ಕೆ ಬಂದಿದ್ದಾರೆ” ಎಂದು ಆರೋಪಿಸಿದ್ದ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
Laxmi News 24×7