Breaking News

ಖತಲ್‌ ರಾತ್ರಿ ಮಾಡುವವರೇ ಕಾಂಗ್ರೆಸ್ಸಿಗರು: ಬಸವರಾಜ ಬೊಮ್ಮಾಯಿ

Spread the love

ವಿಜಯಪುರ: ‘ಖತಲ್‌ ರಾತ್ರಿ’ ಮಾಡುವವರೇ ಕಾಂಗ್ರೆಸ್ ಪಕ್ಷದವರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಸಿಂದಗಿ ಮತಕ್ಷೇತ್ರದ ಕನ್ನೂಳ್ಳಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ಅಂಗವಾಗಿ ನಡೆದ ರೋಡ್ ಶೋ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ವಾರ್ಥ ರಾಜಕಾರಣ ಮಾಡಿ, ಗಳಿಸಿದ್ದ ಹಣವನ್ನು ಹಂಚುತ್ತಾರೆ ಎಂದು ದೂರಿದರು.

‘ಡಿಕೆಶಿ ವಿವಿಧ ಉಪ ಚುನಾವಣೆಗಳಲ್ಲಿ ಗೋಣಿ ಚೀಲದಲ್ಲಿ ಹಣ ಹಂಚಿದ್ದಾರೆ. ಅವರ ಅನುಭವವನ್ನು ಹೇಳುವ ಮೂಲಕ ಬಿಜೆಪಿ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೆ ಸತ್ಯ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳಲ್ಲಿ ಗೆಲುವು. ಅಷ್ಟೇ ಅಲ್ಲ ಮುಂಬರುವ 2023ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿಯೂ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಪತ್ನಿ ಹಾಗೂ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ

Spread the loveಕಾರವಾರ: ದಾಂಡೇಲಿ ಸಮೀಪದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ್​ ಸುತಾರ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ