Breaking News

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕಾಗಿ ಆನ್​​ಲೈನ್ ಬುಕಿಂಗ್ ಆರಂಭ

Spread the love

ಪತ್ತನಂತಿಟ್ಟ: ಕೇರಳದ ಪ್ರಸಿದ್ಧ ಶಬರಿಮಲೆ ದೇಗುಲದಲ್ಲಿ(Sabarimala shrine) ಮಂಡಲ-ಮಕರವಿಳಕ್ಕು (Mandala-Makaravilakku) ಆನ್​​ಲೈನ್ ಬುಕಿಂಗ್ ಆರಂಭವಾಗಿದೆ. ಸೋಮವಾರದಿಂದ ಬುಕಿಂಗ್ ಆರಂಭವಾಗಿದೆ ಎಂದು ದಿನಮಲರ್ ಮತ್ತು ಇತರ ಸ್ಥಳೀಯ ಪ್ರಕಟಣೆಗಳು ವರದಿ ಮಾಡಿವೆ. ಮಂಡಲ-ಮಕರವಿಳಕ್ಕಿನ ಯಾತ್ರಾ ಕಾಲವು ನವೆಂಬರ್ 16 ರಿಂದ ಆರಂಭವಾಗುತ್ತದೆ ಮತ್ತು ಆರಂಭಿಕ ದಿನಗಳಲ್ಲಿ ಕೇವಲ 25,000 ಭಕ್ತರಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗುತ್ತದೆ. ಭಕ್ತರ ಸಂಬಂಧಿತ ವಿವರಗಳು ಮತ್ತು ಫೋಟೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಶಬರಿಮಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕಿಂಗ್ ಮಾಡಬಹುದು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ರಾಜ್ಯದ ಕೊವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಈ ತಿಂಗಳ ಆರಂಭದಲ್ಲಿ ನಡೆದ ಸಭೆಯ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತೀರ್ಥಯಾತ್ರೆಯ ಸಮಯದಲ್ಲಿ ಭಕ್ತರ ಪ್ರವೇಶದ ಬಗ್ಗೆ ನಿರ್ಧಾರ ಕೈಗೊಂಡರು. ಇದರಲ್ಲಿ ದೇವಸ್ವಂ, ಸಾರಿಗೆ, ಅರಣ್ಯ, ಆರೋಗ್ಯ ಮತ್ತು ಜಲ ಸಂಪನ್ಮೂಲಗಳ ರಾಜ್ಯ ಮಂತ್ರಿಗಳು ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರು ಭಾಗವಹಿಸಿದ್ದರು.

ಶಬರಿಮಲೆಯಲ್ಲಿ ಯಾತ್ರಾರ್ಥಿಗಳ ದಟ್ಟಣೆಯನ್ನು ನಿಯಂತ್ರಿಸುವ ಇತರ ಮಾರ್ಗಸೂಚಿಗಳು, ಸಭೆಯಲ್ಲಿ ರೂಪಿಸಲಾದ ವರ್ಚುವಲ್ ಕ್ಯೂ ವ್ಯವಸ್ಥೆ ಮುಂದುವರಿಯುತ್ತದೆ.ಎರಡು ಲಸಿಕೆ ಡೋಸ್ ತೆಗೆದುಕೊಂಡವರು ಅಥವಾ ಋಣಾತ್ಮಕ ಆರ್‌ಟಿ-ಪಿಸಿಆರ್ ವರದಿಯನ್ನು ಹೊಂದಿರುವವರಿಗೆ ಮಾತ್ರ ದೇಗುಲ ಪ್ರವೇಶಕ್ಕೆ ಅನುಮತಿ ನೀಡಲಾಗುವುದು.

ಸಭೆಯಲ್ಲಿ ದೇವಸ್ವಂ ಬೋರ್ಡ್ ಎಲ್ಲರಿಗೂ ‘ನೆಯ್ಯಭಿಷೇಕ’ (ತುಪ್ಪದ ಅಭಿಷೇಕ) ನೀಡಲು ವ್ಯವಸ್ಥೆ ಮಾಡಬೇಕು ಮತ್ತು ದರ್ಶನದ ನಂತರ ಭಕ್ತರನ್ನು ಸನ್ನಿಧಾನದಲ್ಲಿ ಉಳಿಯಲು ಅನುಮತಿಸಲಾಗುವುದಿಲ್ಲ ಎಂಬ ತೀರ್ಮಾನ ಕೈಗೊಳ್ಳಲಾಗಿದೆ.

ಈ ನಿರ್ಬಂಧಗಳ ಹೊರತಾಗಿ ವಾಹನಗಳನ್ನು ನಿಲಕಲ್​​ವರೆಗೆ ಮಾತ್ರ ಅನುಮತಿಸಲಾಗುತ್ತದೆ ಮತ್ತು ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪಂಪಾ ನದಿಗೆ ತಲುಪಲು ಬಳಸಬೇಕು.ಅಲ್ಲಿ ಸ್ನಾನಕ್ಕೆ ಅನುಮತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕೊವಿಡ್ -19 ಪಾಸಿಟಿವ್ ಅಲ್ಲದ, ಆದರೆ ಇತರ ರೋಗಗಳಿಂದ ಬಳಲುತ್ತಿದ್ದರೆ ಭಕ್ತರು ಆರೋಗ್ಯ ತಪಾಸಣೆಯ ನಂತರವೇ ಯಾತ್ರೆಗೆ ಬರಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.

ಕಳೆದ 24 ಗಂಟೆಗಳಲ್ಲಿ ಕೇರಳವು 6,996 ಹೊಸ ಕೊವಿಡ್ -19 ಪ್ರಕರಣಗಳನ್ನು ದಾಖಲಿಸಿದೆ ಎಂದು ರಾಜ್ಯ ಸರ್ಕಾರದ ಆರೋಗ್ಯ ಬುಲೆಟಿನ್ ಸೋಮವಾರ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 84 ಕೊವಿಡ್ ಸಂಬಂಧಿತ ಸಾವುಗಳು ಮತ್ತು 16,576 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 1,01,419 ಸಕ್ರಿಯ ಕೊವಿಡ್ -19 ಪ್ರಕರಣಗಳಿವೆ. ಆಗಸ್ಟ್‌ನಲ್ಲಿ ಓಣಂ ಹಬ್ಬದ ನಂತರದ 30,000 ಪ್ರಕರಣಗಳನ್ನು ದಾಟಿದ ನಂತರ ರಾಜ್ಯವು ದಿನನಿತ್ಯದ ಹೊಸ ಪ್ರಕರಣಗಳಲ್ಲಿ ಇಳಿಕೆಯನ್ನು ತೋರಿಸುತ್ತಿದೆ.

ಏತನ್ಮಧ್ಯೆ, ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು, ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇಕಡಾ 80 ಕ್ಕಿಂತಲೂ ಹೆಚ್ಚು ಜನರು ಕೊವಿಡ್ -19 ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ಎಲ್‌ಡಿಎಫ್ ಸರ್ಕಾರ ನಡೆಸಿದ ಇತ್ತೀಚಿನ ಸೆರೋ ಅಧ್ಯಯನದ ವರದಿ ಹೇಳಿದೆ ಎಂದಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಸಮೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸುತ್ತಿದ್ದರು.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ