Breaking News

ಲಸಿಕೆ​ ಸೆಂಟರ್​ ಕ್ಲೋಸ್​ ಮಾಡ್ಬೇಡಿ ಅಂದಿದ್ಕೆ ನಗರಸಭೆ ಆಯುಕ್ತರ ಮೇಲೆ ಹಲ್ಲೆ ಆರೋಪ

Spread the love

ಹಾಸನ: ಕೋವಿಡ್​ ಲಸಿಕೆ ವಿತರಣೆ ಕೇಂದ್ರವನ್ನ ಕ್ಲೋಸ್​ ಮಾಡದಂತೆ ಹೇಳಿದ ನಗರಸಭೆ ಆಯುಕ್ತರ ಮೇಲೆ ಕಾಲೇಜು ಮಾಲೀಕರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ಇಂದು ದೇಶಾದ್ಯಂತ ಬೃಹತ್​ ಲಸಿಕಾ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಅದರ ನಿಮಿತ್ತ ಹೇಮಾವತಿನಗರದಲ್ಲಿನ ಯತೀಂದ್ರ ಪ್ಯಾರಾಮೆಡಿಕಲ್‌ ಸೈನ್ಸ್ ಕಾಲೇಜಿನಲ್ಲಿ ಲಸಿಕಾ ಕೇಂದ್ರವನ್ನು ತೆರೆಯಲಾಗಿತ್ತು. ಈ ವೇಳೆ ಸಂಜೆ ಐದು ಗಂಟೆಯವರೆಗೆ ಕಾಲೇಜು ಕ್ಲೋಸ್ ಮಾಡದಂತೆ ಆಯುಕ್ತರು ಕಾಲೇಜು ಮಾಲೀಕ ಯತೀಶ್ ಎಂಬುವವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.

ಮನವಿಗೆ ಸ್ಪಂದಿಸದ ಕಾಲೇಜು ಮಾಲೀಕ ತನ್ನ ಸಹೋದರರ ಜೊತೆಗೂಡಿ ನಮ್ಮದು ಖಾಸಗಿ ಕಾಲೇಜು, ನೀನು ಯಾರು ಕೇಳಲು ಎಂದು ತಳ್ಳಾಡಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.


Spread the love

About Laxminews 24x7

Check Also

ಬೆಂಗಳೂರಿನಲ್ಲಿ ರಾತ್ರಿಯಿಡೀ ಮಳೆಯ ಅಬ್ಬರ

Spread the love ಬೆಂಗಳೂರು: ನಗರದಲ್ಲಿ ತಡರಾತ್ರಿ ನಿರಂತರವಾಗಿ ಸುರಿದ ಮಳೆ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ಶುಕ್ರವಾರ ರಾತ್ರಿ 9 ಗಂಟೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ