Breaking News

‘ಓಲ್ಡ್‌ ಮಾಂಕ್‌’ ಫ‌ನ್‌ ಟೈಮ್‌: ಪುನೀತ್‌ ಕೈಯಿಂದ ಹೊರಬಂದ ಟ್ರೇಲರ್‌

Spread the love

ಸದ್ಯ ಥಿಯೇಟರ್‌ಗಳಲ್ಲಿ ಶೇಕಡ ನೂರರಷ್ಟು ಪ್ರೇಕ್ಷಕರ ಪ್ರವೇಶಾವಕಾಶ ಇಲ್ಲದಿರುವ ಕಾರಣ, ಅನೇಕ ಸಿನಿಮಾಗಳು ತಮ್ಮ ಬಿಡುಗಡೆಗೆಯನ್ನು ಮುಂದೂಡಿ ಕೊಂಡಿಕೊಂಡಿವೆ. ಆದರೂ ಶೀಘ್ರದಲ್ಲಿಯೇ ಥಿಯೇಟರ್‌ಗಳಲ್ಲಿ ಪೂರ್ಣ ಪ್ರವೇಶಾವಕಾಶ ಸಿಗಬಹುದು ಎಂಬ ನಿರೀಕ್ಷೆಯಿಂದ, ಅನೇಕ ಸಿನಿಮಾಗಳು ಭರ್ಜರಿಯಾಗಿಯೇ ತಮ್ಮ ಪ್ರಮೋಶನ್‌ ಕೆಲಸಗಳನ್ನು ನಡೆಸುತ್ತಿವೆ. ಕಳೆದ ಎರಡು ಮೂರು ವಾರಗಳಿಂದ ಬ್ಯಾಕ್‌ಟುಬ್ಯಾಕ್‌ ಹೊಸ ಸಿನಿಮಾಗಳ ಫ‌ಸ್ಟ್‌ಲುಕ್‌, ಟೀಸರ್‌, ಟ್ರೇಲರ್, ಹಾಡುಗಳು ಬಿಡುಗಡೆಯಾಗುತ್ತಿವೆ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸ ಸಿನಿಮಾಗಳ ಸದ್ದು ಜೋರಾಗುತ್ತಿದೆ.

ಇನ್ನು ನಟ ಶ್ರೀನಿ ಅಭಿನಯದ “ಓಲ್ಡ್‌ ಮಾಂಕ್‌’ ಸಿನಿಮಾದ ಮೊದಲ ಟ್ರೇಲರ್‌ ಕೂಡ ಈ ವಾರ ಹೊರಬಂದಿದೆ. ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ “ಓಲ್ಡ್ ಮಾಂಕ್‌’ ನ ಟ್ರೇಲರ್‌ ಬಿಡುಗಡೆಗೊಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಪುನೀತ್‌ ರಾಜಕುಮಾರ್‌, “ಶ್ರೀನಿ ಹಿಂದಿನ ಸಿನಿಮಾಗಳನ್ನು ನೋಡಿದ್ದೆ. ಡಬಲ್‌ಮೀನಿಂಗ್‌ನಂತಿದ್ದರೂ, ಈ ಟ್ರೇಲರ್ ನಲ್ಲಿರುವ ಡೈಲಾಗ್ಸ್‌ ಚೆನ್ನಾಗಿದೆ.ಈ ಸಿನಿಮಾಕೂಡ ಹಾಗೇಚೆನ್ನಾಗಿರುತ್ತದೆ ಎಂಬ ನಂಬಿಕೆ ಇದೆ’ ಎಂದು ಹಾರೈಸಿದರು.

 

ಚಿತ್ರದ ಬಗ್ಗೆ ಮಾತನಾಡಿದ ನಾಯಕ ಕಂ ನಿರ್ದೇಶಕ ಶ್ರೀನಿ, “ವೈಕುಂಠದಲ್ಲಿ ಮಹಾವಿಷ್ಣು ಹಾಗೂ ನಾರದರ ಸಂಭಾಷಣೆ ಮೂಲಕ ಈ ಸಿನಿಮಾದ ಕಥೆ ಶುರುವಾಗುತ್ತದೆ. ಸಾಕಷ್ಟುಟೈಟಲ್‌ ಹುಡಕಾಟನಡೆದ ನಂತರ ಸಿನಿಮಾದ ಸಬೆjಕ್ಟ್ಗೆ ಸೂಕ್ತವೆಂಬ ಕಾರಣಕ್ಕೆ “ಓಲ್ಡ್ ಮಾಂಕ್‌’ ಟೈಟಲ್‌ ಸೆಲೆಕ್ಟ್ ಮಾಡಿದ್ದೇವೆ. ಇದೊಂದು ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಸಿನಿಮಾ. ಎಲ್ಲರಿಗೂಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.

ಇನ್ನು ಅದಿತಿ ಪ್ರಭುದೇವ “ಓಲ್ಡ್‌ ಮಾಂಕ್‌’ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. “ಇಲ್ಲಿಯವರೆಗೆ ನಾನು ಮಾಡಿದ ಸಿನಿಮಾಗಳಿಗಿಂತ ವಿಭಿನ್ನ ಪಾತ್ರ ಮತ್ತು ಸಬ್ಜೆಕ್ಟ್‌ಈ ಸಿನಿಮಾದಲ್ಲಿದೆ. ತುಂಬಖುಷಿಯಿಂದಈ ಸಿನಿಮಾ ಮಾಡಿದ್ದೇವೆ. ನೋಡುಗರಿಗೂ ಸಿನಿಮಾ ಅಷ್ಟೇ ಖುಷಿ ಕೊಡುತ್ತದೆ. “ಓಲ್ಡ್‌ ಮಾಂಕ್‌’ ಮೇಲೆ ತುಂಬನಿರೀಕ್ಷೆ ಇದೆ’ ಅನ್ನೋದು ಅದಿತಿ ಮಾತು.

ಉಳಿದಂತೆ ಹಿರಿಯ ನಟ ರಾಜೇಶ್‌, ಸುನೀಲ್‌ ರಾವ್‌, ಸುಜಯ್‌ ಶಾಸ್ತ್ರಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. “ಓಲ್ಡ್‌ ಮಾಂಕ್‌’ ಹಾಡುಗಳಿಗೆ ಸೌರಭ್‌- ವೈಭವ್‌ ಸಂಗೀತ, ಪ್ರಸನ್ನ ಸಂಭಾಷಣೆ ಇದೆ.


Spread the love

About Laxminews 24x7

Check Also

ಕೇರಳ ಸಿಎಂ ಪುತ್ರಿಯ ಕಂಪನಿ ವಿರುದ್ಧ ತನಿಖೆಗೆ ಆದೇಶ ಪ್ರಶ್ನಿಸಿ ಮೇಲ್ಮನವಿ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್‌

Spread the love ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ.ವೀಣಾ ಅವರು ನಿರ್ದೇಶಕಿಯಾಗಿರುವ ಎಕ್ಸಲಾಜಿಕ್‌ ಸಲ್ಯೂಷನ್‌ ಪ್ರೈವೇಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ