Breaking News

ಬಿಜೆಪಿ ಸರ್ಕಾರ ಬಂದ ಮೇಲೆ ಸಾರ್ವಜನಿಕರ ಬದುಕು ದುಸ್ತರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

Spread the love

ರಾಯಚೂರು : ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಜನಾಶೀರ್ವಾದ ಸಮಾರಂಭವನ್ನು ನಡೆಸುತ್ತಿದ್ದು , ಇದಕ್ಕೂ ಪೂರ್ವದಲ್ಲಿ ಸಾರ್ವಜನಿಕರಿಗೆ ಏನನ್ನು ನೀಡಿ ಆಶೀರ್ವಾದ ಪಡೆಯಲು ಮುಂದಾಗಿರುವುದರ ಬಗ್ಗೆ ಬಿಜೆಪಿಗರು ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ . ಕೆ . ಶಿವಕುಮಾರ ಲೇವಡಿ ಮಾಡಿದ್ದಾರೆ . ಸ್ಥಳೀಯ ಖಾಸಗಿ ಹೋಟೆಲ್ ‌ ನಲ್ಲಿ ವಿಭಾಗೀಯ ಮಟ್ಟದ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ , ಬಿಜೆಪಿ ಸರ್ಕಾರ ಬಂದ ಮೇಲೆ ಸಾರ್ವಜನಿಕರ ಬದುಕು ದುಸ್ತರಗೊಂಡಿದೆ .

ಕೊರೋನಾ ಸಮಯದಲ್ಲಿ ಜನರಿಗೆ ಔಷಧಿ , ಆಸ್ಪತ್ರೆಗಳಿಗೆ ಬೆಡ್ ‌, ಆಯಂಬುಲೆನ್ಸ್ ‌ ನೀಡಿದ್ದಕ್ಕೆ ಆಶೀರ್ವಾದ ಕೇಳುತ್ತಾರೆಯೇ ? ಬಿಎಸ್ ‌ ವೈರನ್ನು ಯಾಕೆ ತೆಗೆದರು , ಕೇಂದ್ರ ಆರೋಗ್ಯ ಸಚಿವರನ್ನು ಯಾಕೆ ಬದಲಾವಣೆ ಮಾಡಿದರು , ಅಚ್ಚೇದಿನ್ ‌ ಯಾರಿಗೆ ಎಲ್ಲಿ ಬಂದಿದೆ ಇದನ್ನು ಬಿಜೆಪಿಗರು ಹೇಳಬೇಕು . ಅಸಂಘಟಿತರಿಗೆ ಘೋಷಿಸಿದ ಪ್ಯಾಕೇಜ್ ‌ ಏನಾಯಿತು ಎಂಬುದನ್ನು ತಿಳಿಸಬೇಕು , ಕೋವಿಡ್ ‌ ನಿಂದ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿರುವುದರ ಬಗ್ಗೆ ಬಿಜೆಪಿಗರೇ ಬಿಡಿಸಿ ಹೇಳಬೇಕು . ಕೇಂದ್ರ ಸಚಿವರಾಗಿದ್ದೇವೆ ಎಂದು ಆಶೀರ್ವಾದ ಯಾತ್ರೆ ನಡೆಸುತ್ತಿದ್ದು ಅದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು .


Spread the love

About Laxminews 24x7

Check Also

ಆರ್​ಸಿಬಿ ಫೈನಲ್​ಗೇರಿದ ಖುಷಿಯಲ್ಲಿ ಪೆಟ್ರೋಲ್ ಚೀಲ ಸಿಡಿಸಿ ಸಂಭ್ರಮಾಚರಣೆ: ರಾಯಚೂರಿನಲ್ಲಿ 8 ಯುವಕರ ಬಂಧನ

Spread the loveರಾಯಚೂರು, : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು (RCB) ಮೇ 29 ರಂದು ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಭರ್ಜರಿ ಗೆಲ್ಲುವು ದಾಖಲಿಸಿ ಐಪಿಎಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ