ಬೆಳ್ತಂಗಡಿ : 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ 5000 ಕ್ಕೂ ಮಿಕ್ಕಿ ಮಂದಿ ಸ್ಪರ್ಧಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಈ ನೆಲೆಯಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನ ಪ್ರಶಸ್ತಿಯನ್ನು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಮುಖ್ಯಸ್ಥರಾದ, ಡಾ. ಮನೀಶ್ ವೈಷ್ಣವ್, ಅವರು ಶಾಸಕ ಹರೀಶ್ ಪೂಂಜ ಅವರಿಗೆ 75 ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯ ಸಂದರ್ಭದಲ್ಲಿ( ಆ. 15, ಆದಿತ್ಯವಾರ) ರಂದು ಬೆಳ್ತಂಗಡಿಯಲ್ಲಿ ಹಸ್ತಾಂತರಿಸಿದರು.
ವಾಟ್ಸ್ಯಾಪ್ ನಂಬರಿಗೆ ಸಾವಿರಾರು ಸಂದೇಶಗಳ ಮೂಲಕ ಸ್ಪರ್ಧಿಗಳು ಹಾಡಿದ ದೇಶಭಕ್ತಿ ಗೀತೆ ತಲುಪಿದ್ದು ಪ್ರತಿಯೊಬ್ಬರ ಸಂದೇಶವನ್ನು ನೋಡಿ, ಸ್ಪರ್ಧಿಗಳ ಆಧಾರ್ ಕಾರ್ಡ್ ಪರಿಶೀಲಿಸಿ 5000ದಲ್ಲಿ ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿದ 3500 ಸ್ಪರ್ಧಿಗಳನ್ನು ಸ್ಪರ್ಧೆಯ ನಿಯಮಾನುಸಾರ ಗಣನೆಗೆ ತೆಗೆದುಕೊಳ್ಳಲಾಗಿದೆ.
ಒಂದೇ ತಾಲೂಕಿನ 3500 ಜನರು ಅವರವರ ಮನೆಯಲ್ಲಿ ಆನ್ಲೈನ್ ಮೂಲಕ ದೇಶಭಕ್ತಿಗೀತೆಯನ್ನು ಹಾಡುವ ಮೂಲಕ ವಿಶ್ವದಾಖಲೆಯ ಮನ್ನಣೆ ಪಡೆದಿದೆ. ಇದು ತಾಲೂಕಿನ ಜನರ ಪ್ರತಿಭೆಗೆ ಸಿಕ್ಕ ಗೌರವವಾಗಿದೆ.
Laxmi News 24×7