Breaking News

10 ದಿನದ ವನವಾಸ ಮುಗಿಸಿ ಕೊನೆಗೂ ಜೈಲಿನಿಂದ ಹೊರ ಬಂದ ರೇವಣ್ಣ!

Spread the love

ಬೆಂಗಳೂರು: ಅಪಹರಣ ಪ್ರಕರಣದಲ್ಲಿ (Kidnap Case) ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಸೇರಿದ್ದ ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ (Former Minister HD Revanna) ಇಂದು ಜೈಲಿನಿಂದ ಹೊರ ಬಂದಿದ್ದಾರೆ.

ಸೋಮವಾರವೇ ಜಾಮೀನು (Bail) ಸಿಕ್ಕಿದ್ರೂ ಎಲ್ಲಾ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸೋದು ವಿಳಂಬವಾಗಿದ್ದರಿಂದ ಇಂದು ಜೈಲಿನಿಂದ ಹೊರ ಬರಬೇಕಾಯ್ತು.

ಇಂದು ಮಧ್ಯಾಹ್ನ 12;45ರ ವೇಳೆಗೆ ಎಚ್‌ಡಿ ರೇವಣ್ಣ ಜಾಮೀನು ಷರತ್ತು ಪ್ರಕ್ರಿಯೆ ಪೂರ್ಣಗೊಂಡಿತ್ತು. ನಂತರ ಅವರನ್ನು ಮಧ್ಯಾಹ್ನ 1.35ರ ವೇಳೆಗೆ ವೇಳೆ ಜೈಲಿನಿಂದ ಬಿಡುಗಡೆ ಗೊಳಿಸಲಾಯಿತು. ಎಚ್‌ಡಿ ರೇವಣ್ಣ ಜೊತೆ ಸಾರಾ ಮಹೇಶ್ ಕೂಡ ಕಾರ್‌ನಲ್ಲಿದ್ದರು.

ನಿನ್ನೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಆದೇಶ ಹೊರಡಿಸುತ್ತಿದ್ದಂತೆ ರೇವಣ್ಣ ಅವರ ಅಭಿಮಾನಿಗಳು ರಾತ್ರಿಯೇ ಪರಪ್ಪನಗ ಅಗ್ರಹಾರದ (Parappana Agrahara Prison) ಮುಂದೆ ಸೇರಿದ್ದರು. ಬಿಡುಗಡೆ ಮಂಗಳವಾರ ಎಂಬ ವಿಷಯ ತಿಳಿದಿದ್ದರಿಂದ ಹಿಂದಿರುಗಿದ್ದರು.

ಇಂದು ಬೆಳಗ್ಗೆ 10 ಗಂಟೆಗೆ ಮತ್ತೆ ಪರಪ್ಪನ ಅಗ್ರಹಾರ ಜೈಲಿನ ಮುಂದೆ ರೇವಣ್ಣ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು ಸೇರಿದ್ದರು. ಮೇ 4ರಂದು ಎಸ್‌ಐಟಿ ಅಧಿಕಾರಿಗಳು ರೇವಣ್ಣರನ್ನು ಬಂಧಿಸಿದ್ದರು. 10 ದಿನಗಳ ಬಳಿಕ ರೇವಣ್ಣರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ