ಕನಕಪುರ ನಗರಸಭೆಯ ಸಭಾಂಗಣದಲ್ಲಿ ನಡೆದ ತಾಲ್ಲೂಕು ಕೆಡಿಪಿ ಸಭೆಯಲ್ಲಿ ಪಾಲ್ಗೊಂಡೆನು. ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವಷ್ಟು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಪ್ರಮುಖವಾಗಿ 1) ಕನಕಪುರ ತಾಲ್ಲೂಕಿನಲ್ಲಿ ಇಲ್ಲಿಯವರೆಗೂ Covid19 ನಿಯಂತ್ರಣಕ್ಕೆ ತಗೆದುಕೊಂಡ ಕ್ರಮಗಳು ಮತ್ತು ಮುಂದೆ ತಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ
2) ಕೊರೋನಾ ಹೊಡೆತದಿಂದ ಬಹಳಷ್ಟು ತೊಂದರೆಗೀಡಾದ ಅಸಂಘಟಿತ ಕಾರ್ಮಿಕ ವರ್ಗ, ವಲಸೆ ಕಾರ್ಮಿಕರು, ಆಟೋ/ಕ್ಯಾಬ್ ಚಾಲಕರು, ನೇಕಾರರಿಗೆ ವಿತರಣೆ ಮಾಡಿರುವ ಮತ್ತು ಭಾಕಿ ವಿತರಣೆ ಆಗಬೇಕಿರುವ ಸಹಾಯಧನದ ಬಗ್ಗೆ
3) ರೈತರಿಗೆ ಕಿಸಾನ್ ಯೋಜನೆಯಡಿ ನೀಡಿರುವ ಮತ್ತು ಭಾಕಿ ಇರುವ ಸಹಾಯಧನದ ವಿಚಾರಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ರವಿಯವರು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಬಸಪ್ಪನವರು, ತಾಲ್ಲೂಕು ಪಂಚಾಯಿತ್ ಅಧ್ಯಕ್ಷರಾದ ಶ್ರೀ ನಾಗಣ್ಣನವರು ಹಾಗೂ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಸದಸ್ಯರು ಮತ್ತು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
https://youtu.be/I1U-UG-NHuk