Breaking News

ರಾಷ್ಟ್ರೀಯ

ಗಾಂಧಿಯನ್ನು ಕೊಂದವರ ಪ್ರತಿಮೆ ಮಾಡಿ ಪೂಜಿಸುವ ಕೆಲಸ,ಇದಕ್ಕಿಂತ ದೇಶದ್ರೋಹ ಮತ್ತೊಂದಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ಯಾವುದಕ್ಕಾಗಿ ಗಾಂಧೀಜಿ ಹೋರಾಟ ಮಾಡಿದ್ರು ಅದು ಈಗ ದೇಶದಲ್ಲಿ ನೆಲೆಸುತ್ತಿಲ್ಲ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ರೈತ ಸಂಘಟನೆಗಳು ಆಚರಿಸುತ್ತಿರುವ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಾಂಧೀಜಿ ದೇಶದಲ್ಲಿ ಶಾಂತಿ ನೆಲೆಸಬೇಕು, ಎಲ್ಲರೂ ನೆಮ್ಮದಿಯಿಂದ ಬಾಳಬೇಕು, ಸೌಹಾರ್ದತೆ ನೆಲೆಸಬೇಕು ಎಂದುಕೊಂಡವರು. ಸ್ವಾತಂತ್ರ್ಯಕ್ಕಾಗಿ ಎಷ್ಟು ಹೋರಾಡಿದ್ರೋ ಅದಕ್ಕಿಂತಲೂ ಹೆಚ್ಚು ಶಾಂತಿ ಸೌಹಾರ್ದತೆಗಾಗಿ ಹೋರಾಡಿದವರು. ಗಾಂಧೀಜಿ ಜೊತೆಗೆ ಬಹಳಷ್ಟು ಜನ ಹೋರಾಟ ಮಾಡಿದ್ದಾರೆ, ಅವರನ್ನೂ ನಾವು ಸ್ಮರಿಸಬೇಕು …

Read More »

“ಕರ್ನಾಟಕಕ್ಕೆ ಮಹಾದಾಯಿ ನದಿಯ 1 ಹನಿ ನೀರನ್ನೂ ಕೊಡಲ್ಲ”

ಪಣಜಿ,ಜ.30- ನನ್ನ ಪಕ್ಷದವರೇ ಇರಲಿ ಅಥವಾ ಬೇರೆ ಯಾರೇ ಇರಲಿ ರಾಜ್ಯದ ಹಿತ ಕಡೆಗಣಿಸಿ ಮಹಾದಾಯಿ ನದಿಯಿಂದ ಒಂದೂ ಹನಿಯನ್ನೂ ಕರ್ನಾಟಕಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತೆ ಕ್ಯಾತೆ ತೆಗೆದಿದ್ದಾರೆ. ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಮಂಡಿಸಿದ್ದ ನಿಲುವಳಿ ಸೂಚನೆ ಮೇಲೆ ಉತ್ತರಿಸಿರುವ ಪ್ರಮೋದ್ ಸಾವಂತ್, ಮಹದಾಯಿಯಿಂದ ನೀರು ಹರಿಸುವಂತೆ ನನ್ನ ಪಕ್ಷವೇ ನನ್ನ ಮೇಲೆ ಒತ್ತಡ ಹಾಕಿದರೂ ನಾನು ಭಾಗುವುದಿಲ್ಲ ಎಂದು …

Read More »

ಗೋಕಾಕದಲ್ಲಿ ಸರಕಾರಿ ವೈದ್ಯರಿಂದ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮ

ಗೋಕಾಕದಲ್ಲಿ ಗೋಕಾಕ ತಾಲೂಕಾ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗೋಕಾಕ ನಗರಸಭೆಯ ಆಯುಕ್ತರಾದ ಶಿವಾನಂದ ಹೀರೆಮಠ ಇವರು ರಿಬ್ಬನ್ ಕಟ್ ಮಾಡಿ ನಗರಸಭೆಯ ಉಪಾದಕ್ಷ ಬಸವರಾಜ ಆರೆನ್ನವರ ಇವರು ಬ್ಯಾಂಡ ಬಾರಿಸುವ ಮೂಲಕ‌ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ನಾಳೆ ದಿನ ಜನೆವರಿ 31 ರವಿವಾರದಂದು ಸ್ಥಳಿಯ ಪ್ರಾಥಮಿಕ …

Read More »

ರಾಮಮಂದಿರದ ತಾಂತ್ರಿಕ ಉಸ್ತುವಾರಿಯಾಗಿ ಕನ್ನಡಿಗ ಎಂಜಿನಿಯರ್

ಬೆಂಗಳೂರು – ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀ ರಾಮಚಂದ್ರನ ದೇವಾಲಯದ ತಾಂತ್ರಿಕ ಉಸ್ತುವಾರಿಯಾಗಿ  ದೇಶದ ಹಿರಿಯ ಜಿಯೋ ಟೆಕ್ನಿಕಲ್ ಎಂಜಿನಿಯರ್, ಕನ್ನಡಿಗ ಪ್ರೊ. ಟಿ.ಜಿ. ಸೀತಾರಾಮ್ ನೇಮಕವಾಗಿದ್ದಾರೆ. ಗುವಾಹಟಿ ಐಐಟಿ ನಿರ್ದೇಶಕರಾಗಿರುವ ಚಿತ್ರದುರ್ಗ ಮೂಲದ ಪ್ರೊ. ಟಿ.ಜಿ. ಸೀತಾರಾಮ್, ಜಿಯೋ ಟೆಕ್ನಿಕಲ್ ಎಂಜಿನಿಯರಿಂಗ್ ನಲ್ಲಿ ನುರಿತ ತಜ್ಞರಾಗಿದ್ದು, ಇವರ ತಂಡದ ಸಲಹೆಯಂತೆಯೇ ಶ್ರೀ ರಾಮ ಮಂದಿರದ ತಳಪಾಯದ ಕೆಲಸ ನಡೆಯುತ್ತದೆ. ಇವರ ಮಾರ್ಗದರ್ಶನದಲ್ಲಿ ಭವ್ಯವಾದ, ಯಾವುದೇ ಕಂಪನಗಳಿಗೆ ಅಲುಗಾಡದ ಹಾಗೆ …

Read More »

ಬಸವರಾಜ ಬೊಮ್ಮಾಯಿ ಗಡಿ ಉಸ್ತುವಾರಿ ಸಚಿವರಾಗಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಪತ್ರೆ

ಬೆಳಗಾವಿ – ಗಡಿ ಉಸ್ತುವಾರಿ ಸಚಿವರನ್ನಾಗಿ ಬಸವರಾಜ ಬೊಮ್ಮಾಯಿ ಅವರನ್ನು ನೇಮಕ ಮಾಡಬೇಕು ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ಜೊತೆಗೆ, ಮಹಾರಾಷ್ಟ್ರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದೆ. ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಈ ಪತ್ರ ಬರೆದಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಗಡಿ ವಿವಾದ ಪ್ರಕರಣವನ್ನು ಮಹಾರಾಷ್ಟ್ರ ಸರಕಾರ ಪದೇ ಪದೇ ಕೆಣಕುತ್ತಿದೆ. ಅಲ್ಲಿಯ ಮುಖ್ಯಮಂತ್ರಿಗಳು ಸಾಧ್ಯವಿರುವ ಎಲ್ಲ …

Read More »

ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಹೋರಾಟ ಅಗತ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಮಂಡ್ಯ: ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪುತ್ತಿದ್ದು, ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಪ್ರತಿಯೊಬ್ಬರು ಹೋರಾಟ ಮಾಡಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಶುಕ್ರವಾರ ಜಯ ಕರ್ನಾಟಕ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡವನ್ನು ಪ್ರತಿಯೊಬ್ಬರು ನಿರಂತರವಾಗಿ ಪ್ರೀತಿಸಿ, ಪ್ರೋತ್ಸಾಹಿಸಬೇಕು. ರಾಜ್ಯ, ಹೊರ ರಾಜ್ಯಗಳಲ್ಲಿಯೂ ಕನ್ನಡ ಕ್ರಾಂತಿಯಾಗಬೇಕು. ನಾಡು, ನುಡಿ ವಿಷಯಕ್ಕೆ ಬಂದಾಗ ಪಕ್ಷಾತೀತ ಹೋರಾಟ …

Read More »

ಲಾರಿ- ಆಟೋ ನಡುವೆ ಭೀಕರ ಅಪಘಾತ ; ಮದುವೆಗೆ ಬಟ್ಟೆ ತರಲು ಹೊರಟ್ಟಿದ್ದ ಆರು ಜನರು ಸಾವು !

ತೆಲಂಗಾಣ : ಲಾರಿ- ಆಟೋ ನಡುವೆ ಭೀಕರ ರಸ್ತೆ ಅಪಘಾತ ಸಂಭಿಸಿದ್ದು, ಸ್ಥಳದಲ್ಲೇ ಆರು ಜನರು ಮೃತಪಟ್ಟಿರುವ ಘಟನೆ ಮೆಹಬೂಬಾಬಾದ್ ಜಿಲ್ಲೆಯ ಗುಡೂರ್ ವಲಯದ ಮರ್ರಿಮಿಟ್ಟದಲ್ಲಿ ಇಂದು ನಡೆದಿದೆ. ಮೃತರು ಒಂದೇ ಕುಟುಂಬದವರಾಗಿದ್ದು, ಮದುವೆಗೆ ಬಟ್ಟೆ ತರಲು ತೆರಳುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ವದು ಸೇರಿ ಆಟೋದಲ್ಲಿ ಆರು ಮಂದಿ ಇದ್ದರು ಎನ್ನಲಾಗಿದೆ. ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸ್ಥಳಕ್ಕೆ ಪೊಲೀಸರು …

Read More »

ಬೆಳಗಾವಿ TAPMS ನಿರ್ದೇಶಕ ಚುನಾವಣೆ: ಆಶಿಫ್ ಮುಲ್ಲಾಗೆ ಭರ್ಜರಿ ಜಯ

ಬೆಳಗಾವಿ: ತಾಲೂಕಾ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಮಿತಿ(ಟಿಎಪಿಎಂಎಸ್) ದಿಂದ ಎಂಪಿಎಂಸಿಯ ನಿರ್ದೇಶಕ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಾರಿಹಾಳದ ಆಶಿಫ್ ಮುಲ್ಲಾ 9 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಪ್ರತಿ ಸ್ಪರ್ಧಿ ಶಿವನಗೌಡ ಪಾಟೀಲ್ 6 ಮತಗಳ ಪಡೆದು ಪರಾಭವಗೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ಎಂ.ಎಸ್. ಗೌಡಪ್ಪಗೋಳ ಅವರು ಕಾರ್ಯನಿರ್ವಹಿಸಿದರು. ಚುನಾವಣೆ ಗೆಲುವಿಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಟಿಎಪಿಎಂಎಸ್ …

Read More »

ಮೇ.24 ರಿಂದ ಜೂ. 10ರವರೆಗೆ ದ್ವಿತಿಯ ಪಿಯುಸಿ ಪರೀಕ್ಷೆ !

ಬೆಂಗಳೂರು : ದ್ವಿತಿಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾ ಪಟ್ಟಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ.24ರಿಂದ ಜೂನ್ 10ರವರೆಗೆ ಪರೀಕ್ಷೆ ನಡೆಯಲಿವೆ. ಈ ನಡುವೆ, ದಿನಾಂಕ ಬಗ್ಗೆ ಆಕ್ಷೆಪಣೆಗಳಿದ್ದರೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ದ್ವಿತೀಯ PU ಪರೀಕ್ಷೆ ವೇಳಾಪಟ್ಟಿ ಹೀಗಿದೆ 1) ಮೇ 24: ಭೌತಶಾಸ್ತ್ರ, ಇತಿಹಾಸ 2) ಮೇ 25: ಮೈನಾರಿಟಿ ಲಾಂಗ್​ವೇಜಸ್​ 3) ಮೇ 26: …

Read More »

ಮುಂದಿನ ಸಿಎಂ ನಾನೇ: ಶಾಸಕ ಬಸನಗೌಡ ಯತ್ನಾಳ ಘೋಷಣೆ

  ದಾವಣೆಗರೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರ್ಚಿ ಅಲುಗಾಡುತ್ತಿದೆ. ನಾನು ಮಂತ್ರಿಯಾಗಬೇಕೆಂದು ಯಾರ ಕೈಕಾಲು ಹಿಡಿಯುವವನಲ್ಲ. ”ನಮಗೆ ಬರೋದಿದೆ ಸಿಎಂ ಕುರ್ಚಿ” ಎಂದು ಹೇಳುವ ಮೂಲಕ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು. ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಪಾದಯಾತ್ರೆ ಸಮಾವೇಶದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು. ಮುಖ್ಯಮಂತ್ರಿ ಆಗಿದ್ದವರು ಕೈಗಾರಿಕಾ ಮಂತ್ರಿಯಾಗಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ …

Read More »