Breaking News

ರಾಷ್ಟ್ರೀಯ

ಬಾಂಗ್ಲಾ ವಲಸಿಗರ ಕುರಿತು ರಾಜ್ಯಪಾಲರಿಗೆ ಹಾಗೂ ಪೋಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ ಬಿಜೆಪಿ ನಾಯಕರು.

ಬಾಂಗ್ಲಾ ವಲಸಿಗರ ಕುರಿತು ರಾಜ್ಯಪಾಲರಿಗೆ ಹಾಗೂ ಪೋಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ ಬಿಜೆಪಿ ನಾಯಕರು. ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ,ಕುಮಾರ್ ಬಂಗಾರಪ್ಪ ಸೇರಿದಂತೆ ಇತರ ಬಿಜೆಪಿ ನಾಯಕರು ಇಂದು ರಾಜ್ಯಪಾಲರನ್ನು ಹಾಗೂ ಪೋಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಆಕ್ರಮವಾಗಿ ಬಾಂಗ್ಲಾ ವಲಸಿಗರು ಠಿಖಾನಿ ಹೂಡಿರುವ ಕುರಿತು ಸಮಗ್ರ ವರದಿಯನ್ನು ಸಲ್ಲಿಸಿದ್ದು ಆಕ್ರಮ ವಲಸಿಗರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತ ಒತ್ತಾಯಿಸಿದರು

Read More »

ಚಿರತೆ ದಾಳಿಯಿಂದ ಗಾಯಗೊಂಡ ವ್ಯಕ್ತಿ ಕೈ ಬೆರಳು ತಿಂದ ಚಿರತೆ – LEOPARD ATTACK

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರ ಮೇಲೆ ಚಿರತೆ ದಾಳಿ ಮಾಡಿದೆ. ಸಖರಾಯಪಟ್ಟಣ ಸಮೀಪದ ಮದಗದ ಕೆರೆ ಬಳಿ ಘಟನೆ ನಡೆದಿದೆ. ಮೂರ್ತಣ್ಣ, ಮಂಜಣ್ಣ ಎಂಬಿಬ್ಬರ ಮೇಲೆ ಚಿರತೆ ದಾಳಿ ಮಾಡಿದೆ. ಹಳ್ಳಿಯಿಂದ ಸಖರಾಯಪಟ್ಟಣಕ್ಕೆ ಬರುವಾಗ ಮಾರ್ಗಮಧ್ಯೆ ಘಟನೆ ನಡೆದಿದೆ. ಮೂರ್ತಣ್ಣನ ಎಡಗೈಯ ಒಂದು ಬೆರಳನ್ನು ಚಿರತೆ ತಿಂದಿದೆ. ಸ್ಥಳೀಯರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ …

Read More »

ಅನಾರೋಗ್ಯದಿಂದ ಯೋಧ ನಿಧನ… ರಾಮನಗರಕ್ಕೆ ತಲುಪಿದ ಪಾರ್ಥಿವ ಶರೀರ

ಅನಾರೋಗ್ಯದಿಂದ ಯೋಧನ ಪಾರ್ಥಿವ ಇಂದು ಬೆಳಗಾವಿಯ ಮೂಲಕ ಖಾನಾಪೂರದ ರಾಮನಗರಕ್ಕೆ ತಲುಪಿತು. ಈ ವೇಳೆ ಹಲವಾರು ಜನರು ಅಂತ್ಯಯಾತ್ರೆಯಲ್ಲಿ ಭಾಗಿಯಾಗಿದ್ಧರು. ಜೋಯಿಡಾ ತಾಲೂಕಿನ ರಾಮನಗರದ ಯೋಧ ಶಶಿಕಾಂತ ಕೆ. ಬಾವಾ (44) ಮಂಗಳವಾರ ರಾತ್ರಿ ಹೊಟ್ಟೆ ನೋವಿನಿಂದ ನಿಧನರಾದರು. ಯೋಧ ಶಶಿಕಾಂತ 281 ಶಿಲ್ಡ್ ರೆಜಮೆಂಟಲ್ ಅಟ್ಲರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಆಕಸ್ಮಿಕ ನಿಧನದಿಂದ ರಾಮನಗರದಲ್ಲಿ ಶೋಕ ವ್ಯಕ್ತವಾಗುತ್ತಿದೆ. ಇಂದು ಗುರುವಾರ ಅವರ ಪಾರ್ಥಿವ ಶರೀರವನ್ನು ಸಾಂಬ್ರಾ ವಿಮಾನ ನಿಲ್ದಾಣದ …

Read More »

ನಟ ಪ್ರಥಮ್​ಗೆ ಜೀವ ಬೆದರಿಕೆ: ದೊಡ್ಡಬಳ್ಳಾಪುರ ಗ್ರಾ.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ತಾಲೂಕಿನ ಎಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿದ್ದಾಗ ನನ್ನನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ನಟ ಪ್ರಥಮ್, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ತಾಲೂಕಿನ ರಾಮಯ್ಯನಪಾಳ್ಯದ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಕಳೆದ ಐದಾರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳೆಂದು ಹೇಳಿಕೊಂಡಿರುವ ಯಶಸ್ವಿನಿ, ಬೇಕರಿ ರಘು ಎಂಬವರ ಮೇಲೆ ಭಾರತೀಯ …

Read More »

ಮಳೆಯ ಅಬ್ಬರಕ್ಕೆ ದೇಮಿನಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಬಿದ್ದು ಹಾನಿ

ಮಳೆಯ ಅಬ್ಬರಕ್ಕೆ ದೇಮಿನಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಬಿದ್ದು ಹಾನಿ -ಖಾನಾಪೂರ ತಾಲೂಕಿನ ದೇಮಿನಕೊಪ್ಪ ಗ್ರಾಮದಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಮಳೆಯ ಅಬ್ಬರಕ್ಕೆ ಕುಸಿದು ಬಿದ್ದಿದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನಾನುಕೂಲ ಉಂಟಾಗಿದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೇ ಗಮನಹರಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು

Read More »

ನಾಗರಪಂಚಮಿಗೆ ಮುಸ್ಲಿಂ ಬಾಂಧವರಿಂದ ನಾಗಸ್ವರ ವಾದನ; ಕರಾವಳಿಯಲ್ಲಿ ಹೀಗೊಂದು ಸೌಹಾರ್ದತೆ

ಉಡುಪಿ: ಸಾಮಾನ್ಯವಾಗಿ ನಾಗಾರಾಧನೆಯಲ್ಲಿ ತೊಡಗುವವರು ಬಹುತೇಕ ಹಿಂದೂಗಳು ಮಾತ್ರ. ಅಲ್ಲೊಂದು ಇಲ್ಲೊಂದು ಇದಕ್ಕೆ ಅಪವಾದ ಇರುವುದನ್ನು ನಾವು ಕಾಣುತ್ತೇವೆ. ಉಡುಪಿ ಜಿಲ್ಲೆಯ ತೆಂಕ ಎರ್ಮಾಳ್ ಎಂಬಲ್ಲಿಯ ಅಮೀನ್ ಕುಟುಂಬಸ್ಥರ ಮೂಲಸ್ಥಾನದಲ್ಲಿ ಮೂವರು ಮುಸ್ಲಿಂ ಬಾಂಧವರು ನಾಗಸ್ವರ ನುಡಿಸುತ್ತಿರುವುದು ವಿಶೇಷವಾಗಿದೆ. ತಲೆತಲಾಂತರಗಳಿಂದ ಈ ಮುಸ್ಲಿಂ ಸಮುದಾಯದ ಜನರು ಲಯಬದ್ಧವಾದ ನಾಗಸ್ವರವನ್ನು ನುಡಿಸುತ್ತಾ ಬಂದಿದ್ದಾರೆ. ಇಲ್ಲಿನ ಮೂವರು ಮುಸ್ಲಿಮರು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಈ ನಾಗಸ್ವರ ಪೂಜೆ ನಡೆಸುತ್ತಾ ಬರುವ ಮೂಲಕ ಕರಾವಳಿಯ …

Read More »

ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೆ ಸ್ಕೆಚ್; ಕಂಠಪೂರ್ತಿ ಮದ್ಯ ಕುಡಿಸಿ ಕೊಲೆಗೈದ ಆರೋಪಿಗಳ ಬಂಧನ

ದಾವಣಗೆರೆ: ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿಸಿದ ಪತ್ನಿ ಸೇರಿದಂತೆ ಕೊಲೆಗೆ ಸಹಾಯ ಮಾಡಿದ ಇನ್ನಿಬ್ಬರು ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಎಸ್​ಪಿ ಉಮಾಪ್ರಶಾಂತ್ ಅವರು ಮಾತನಾಡಿದ್ದು, ಮೃತ ಲಿಂಗಪ್ಪ ಅವರ ತಾಯಿ ಯಲ್ಲಮ್ಮ ಎಂಬುವವರು 22 ಜನವರಿ 2024ಕ್ಕೆ ಮಗ ಮನೆಯಿಂದ ಹೋದವನು ಮನೆಗೆ ವಾಪಸ್​ ಬಂದಿಲ್ಲ ಎಂದು ಠಾಣೆಗೆ ದೂರು ನೀಡಿದ್ದರು. ಅದಾದ ಮೇಲೆ ಆರೋಪಿ ಲಕ್ಷ್ಮಿ (ಲಿಂಗಪ್ಪನ ಹೆಂಡತಿ) ಅವರ ತಾಯಿ ಮಾಲಮ್ಮ …

Read More »

ಗಣೇಶೋತ್ಸವ ಮೆರವಣಿಗೆ ಮಾರ್ಗದ ಅಭಿವೃದ್ಧಿ… ಮಹಾನಗರ ಪಾಲಿಕೆಯ ಕಾರ್ಯಕ್ಕೆ ಮಹಾಪೌರ, ಶಾಸಕರಿಂದ ಚಾಲನೆ

ಗಣೇಶೋತ್ಸವ ಮೆರವಣಿಗೆ ಮಾರ್ಗದ ಅಭಿವೃದ್ಧಿ… ಮಹಾನಗರ ಪಾಲಿಕೆಯ ಕಾರ್ಯಕ್ಕೆ ಮಹಾಪೌರ, ಶಾಸಕರಿಂದ ಚಾಲನೆ ಗಣೇಶೋತ್ಸವ ಮೆರವಣಿಗೆ ಮಾರ್ಗದ ಅಭಿವೃದ್ಧಿ… ಬೆಳಗಾವಿ ಮಹಾನಗರ ಪಾಲಿಕೆಯಿಂದ ಕಾಮಗಾರಿ ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ 27 ಲಕ್ಷ ವಿಶೇಷ ಅನುದಾನದಲ್ಲಿ ಕಾಮಗಾರಿಆಗಸ್ಟ್ 27 ರಿಂದ ಆರಂಭಗೊಳ್ಳಲಿರುವ ಗಣೇಶೋತ್ಸವದ ಹಿನ್ನೆಲೆ ಮೆರವಣಿಗೆ ಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಬೆಳಗಾವಿಯ ಮಹಾಪೌರರು ಮತ್ತು ಉತ್ತರ ಶಾಸಕರು ಚಾಲನೆಯನ್ನು ನೀಡಿದರು. ಬೆಳಗಾವಿಯ ಗಣೇಶೋತ್ಸವದ ಮೆರವಣಿಗೆ ಮಾರ್ಗದಲ್ಲಿ ಉಂಟಾದ ತೆಗ್ಗುಗಳನ್ನು ಮುಚ್ಚಿ …

Read More »

ನರಸಿಂಹವಾಡಿಯ ದತ್ತ ಮಂದಿರ ಜಲಾವೃತ

ನರಸಿಂಹವಾಡಿಯ ದತ್ತ ಮಂದಿರ ಜಲಾವೃತ ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಶಿರೋಳ ತಾಲೂಕಿನ ನರಸಿಂಹವಾಡಿ ಗ್ರಾಮದ ದತ್ತ ಮಂದಿರ ಜಲಾವೃತ ವಾಗಿದೆ. ಮಹಾರಾಷ್ಟ್ರದ, ಕರ್ನಾಟಕ ರಾಜ್ಯದ ಆರಾಧ್ಯದೈವ ಆಗಿರುವ ಪಂಚಗಂಗಾ ಹಾಗೂ ಕೃಷ್ಣಾ ನದಿ ಸಂಗಮ‌ ಸ್ಥಾನದಲ್ಲಿರುವ ದತ್ತ ಮಂದಿರ ಜಲಾವೃತವಾಗಿದೆ.ಎದೆ ವರೆಗೂ ನೀರಿದ್ರೂ ದೇವಸ್ಥಾನಕ್ಕೆ ಭಕ್ತರು ಪ್ರದಕ್ಷಿಣೆ ಹಾಕುತ್ತಿದ್ದಾರೆ.

Read More »

ದೆಹಲಿಯಲ್ಲಿಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಉಂಟಾಗಿರುವ ರಸಗೊಬ್ಬರದ ಕೊರತೆ ಕುರಿತು ಚರ್ಚಿ

. ದೆಹಲಿಯಲ್ಲಿಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಉಂಟಾಗಿರುವ ರಸಗೊಬ್ಬರದ ಕೊರತೆ ಕುರಿತು ಚರ್ಚಿಸಿದೆವು. ಚರ್ಚೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯಕ್ಕೆ ಹೆಚ್ಚುವರಿ ರಸಗೊಬ್ಬರವನ್ನು ಒದಗಿಸಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಜೊತೆಗೆ, ರಾಜ್ಯಕ್ಕೆ ಮತ್ತಷ್ಟು ರಸಗೊಬ್ಬರದ ಅವಶ್ಯಕತೆ ಇದ್ದರೆ, ಅದನ್ನು ಪೂರೈಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಸಚಿವರು ತಿಳಿಸಿದರು. …

Read More »