Breaking News

ರಾಷ್ಟ್ರೀಯ

ಪಂಚಮಸಾಲಿಗಳಿಗೆ 2ಎ ಮೀಸಲಾತಿ: ಸಚಿವನಾಗಿ ಬೀದಿಯಲ್ಲಿ ಹೋರಾಡಲಾಗಲ್ಲ- ನಿರಾಣಿ

ಬೆಳಗಾವಿ: ‘ನಾನು ಸಚಿವ ಸ್ಥಾನದಲ್ಲಿದ್ದುಕೊಂಡು, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಬೀದಿಯಲ್ಲಿ ನಿಂತು ಹೋರಾಡಲು ಸಾಧ್ಯವಾಗುವುದಿಲ್ಲ’ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು. ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಬಸವ ಜಯಮೃತ್ಯುಂಜಯ ಸ್ವಾಮೀಜಿ ನಮ್ಮ ಗುರುಗಳು. ಅವರನ್ನು ಸಮಾಜದ ಪೀಠಕ್ಕೆ ನಾವೇ ಆಯ್ಕೆ ಮಾಡಿದ್ದು. ನಮ್ಮ ಹೋರಾಟಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ಯಾರನ್ನು ದೃಷ್ಟಿಯಲ್ಲಿಟ್ಟುಕೊಂಡು ಆರೋಪ ಮಾಡಿದ್ದಾರೋ ನನಗೆ ಗೊತ್ತಿಲ್ಲ’ …

Read More »

ಸಿಎಂ ಮಮತಾಗೆ ಅಳಿವು-ಉಳಿವಿನ ಪ್ರಶ್ನೆಯಾದ ಬೈಎಲೆಕ್ಷನ್

ನವದೆಹಲಿ, ಸೆ.30- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹುದ್ದೆಯ ಅಳಿವು ಉಳಿವನ್ನು ನಿರ್ಧರಿಸುವ ಭವಾನಿಪುರ ಸೇರಿದಂತೆ ಒಟ್ಟು ನಾಲ್ಕು ವಿಧಾನ ಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆದಿದೆ. ಪಶ್ಚಿಮಬಂಗಾಳದ ಭವಾನಿಪುರ, ಸಂಸೆರ್ಗಂಜ್, ಜಂಗಿಪುರ್ ಕ್ಷೇತ್ರಗಳು ಒಡಿಸಾ ರಾಜ್ಯದ ಪುರಿ ಜಿಲ್ಲೆಯ ಪಿಪಿಲಿ ವಿಧಾನಸಭಾಕ್ಷೇತ್ರಕ್ಕೆ ಉಪಚುನಾವಣೆಗಳು ನಡೆದಿವೆ. ಬೆಳಗ್ಗೆ ಏಳರಿಂದ ಸಂಜೆ ಆರು ಗಂಟೆಯವರೆಗೂ ಮತದಾನ ನಡೆದಿದೆ. ಬೆಳಗ್ಗೆ ಮತದಾನದಲ್ಲಿ ಉತ್ಸಾಹ ಕಂಡು ಬಂದಿದ್ದು, ಜನ ಸಾಲುಗಟ್ಟಿ ಮತ …

Read More »

ಕಾಂಗ್ರೆಸ್ ಸಭೆಯಲ್ಲಿ ಜಟಾಪಟಿಗೆ ಬಿದ್ದು ಘೋಷಣೆ ಕೂಗಿದ ಕಾರ್ಯಕರ್ತರು

ಶಿರಸಿ: ಕಾಂಗ್ರೆಸ್ ಸಭೆಯಲ್ಲಿ ಆರ್.ವಿ.ದೇಶಪಾಂಡೆ ಹಾಗೂ ಘೋಟ್ನೇಕರ್ ಬೆಂಬಲಿಗರು ಗೊಂದಲ ಸೃಷ್ಟಿಸಿದ ಘಟನೆ ಶಿರಸಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್​ನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಭೆಯಲ್ಲಿ ಘೋಟ್ನೇಕರ್ ಹಾಗೂ ಆರ್.ವಿ.ದೇಶಪಾಂಡೆ ಬೆಂಬಲಿಗರ ನಡುವೆ ಜಯಘೋಷದ ಗೊಂದಲ ಏರ್ಪಟ್ಟಿತು. ಭಾಷಣದ ವೇಳೆ ಹಳಿಯಾಳದ ರಾಜಕೀಯ ಸ್ಥಿತಿ ವಿವರಿಸಿ ದೇಶಪಾಂಡೆ ಹಾಗೂ ಬ್ಲಾಕ್ ಅಧ್ಯಕ್ಷರ ವಿರುದ್ಧ ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ …

Read More »

ಕಿಡಿಗೇಡಿಗಳ ಕಲ್ಲು ತೂರಾಟದಲ್ಲಿ ಸಾರ್ವಜನಿಕರ ತುರ್ತು ಸೇವೆಯ 112 ವಾಹನ.

  ಘಟಪ್ರಭಾ: ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಘಟಪ್ರಭಾದ ದಳವಾಯಿ ನಗರದಲ್ಲಿ ಜನರ ತುರ್ತು ಸೇವೆಗಾಗಿರುವ ಪೊಲೀಸ್ ಇಲಾಖೆಯ 112 ವಾಹನದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ವಾಹನ ಜಖುಂಗೊಳಿಸಿ ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ ಇಬ್ಬರು ಪೊಲೀಸರು ಅಪಾಯದಿಂದ ಪರಾಗಿದ್ದು 7 ಜನರ ಮೇಲೆ ಪೊಲೀಸರೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.   ಘಟನೆಯ ವಿವರ: ಗೋಕಾಕ ತಾಲೂಕಿನ ಶಿಂಗಳಾಪೂರ ಗ್ರಾಮದ ಯುವತಿಯೊರ್ವಳನ್ನ ಘಟಪ್ರಭಾ ದಳವಾಯಿ …

Read More »

ವಿದ್ಯುತ್ ಬಿಲ್ ವಸೂಲಿಗೆ ತೆರಳಿದ್ದ ಬೆಸ್ಕಾಂ ಸಿಬ್ಬಂದಿಗೆ ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು

ತುಮಕೂರು: ವಿದ್ಯುತ್ ಬಿಲ್ ವಸೂಲಿಗಾಗಿ ತೆರಳಿದ್ದ ಬೆಸ್ಕಾಂ ಸಿಬ್ಬಂದಿಗೆ ಗ್ರಾಮಸ್ಥರು ಕಲ್ಲು, ದೊಣ್ಣೆಗಳಿಂದ ಹೊಡೆದ ಘಟನೆ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಚಿಕ್ಕನಕೋಟೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ವಿದ್ಯುತ್ ಬಿಲ್ ವಸೂಲಿಗಾಗಿ ಶಾಖಾಧಿಕಾರಿ ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಕಲ್ಲು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗ್ರಾಮಸ್ಥರು ಹಲ್ಲೆ ನಡೆಸಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಲೈನ್ ಮ್ಯಾನ್​ಗಳಾದ ಭೂತರಾಜು, ನರಸಿಂಹರಾಜು, ತಿಪ್ಪೇಸ್ವಾಮಿ ಎಂಬುವರ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಾಳುಗಳೆಲ್ಲರನ್ನೂ ಶಿರಾ …

Read More »

ಶಾಹೀನ್ ಚಂಡಮಾರುತ- ಅ.3ರ ವರೆಗೆ ರಾಜ್ಯದಲ್ಲಿ ಭಾರೀ ಮಳೆ

ಬೆಂಗಳೂರು: ಶಾಹೀನ್ ಚಂಡಮಾರುತ ಹಿನ್ನೆಲೆ ಇಂದಿನಿಂದ ಅಕ್ಟೋಬರ್ 3 ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆ ಶಾಹೀನ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಇಂದಿನಿಂದ ಕರ್ನಾಟಕದಲ್ಲೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಅ.3ರ ವರೆಗೂ ಕರ್ನಾಟಕದ ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.   ಇಂದಿನಿಂದ ಅ.3 ರವರೆಗೆ ಉಡುಪಿ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, …

Read More »

ಪಾರ್ಕಿನಲ್ಲಿ ಆಟ ಆಡುವಾಗ ವಿದ್ಯುತ್ ತಗುಲಿ ಬಾಲಕ ಸಾವು

ಕಲಬುರಗಿ: ಪಾರ್ಕ್ ನಲ್ಲಿ ಆಟ ಆಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವನ್ನಪ್ಪಿದ ಆಘಾತಕಾರಿ ಘಟನೆ ನಗರದ ಎನ್.ಜಿ.ಓ. ಕಾಲೋನಿಯ ಹನುಮಾನ್ ಮಂದಿರದ ಉದ್ಯಾನವನದಲ್ಲಿ ನಡೆದಿದೆ. ನಗರದ ಎನ್.ಜಿ.ಓ. ಕಾಲೋನಿಯ ಮಹಾದೇವಿ ಸುರೇಶ ದಂಪತಿ ಪುತ್ರ 6 ವರ್ಷದ ಸಿದ್ದು ಮೃತ ಬಾಲಕ. ವಿದ್ಯುತ್ ತಂತಿ ತಗಲಿ ಮೃತಪಟ್ಟಿದ್ದಾನೆ. ಹನುಮಾನ್ ಮಂದಿರದ ಉದ್ಯಾನವನದಲ್ಲಿನ ಹೈ ಮಾಸ್ಕ್ ದೀಪದ ವಿದ್ಯುತ್ ವೈರ್ ಕಟ್ ಆಗಿ ಬಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. …

Read More »

ವಿದ್ಯಾರ್ಥಿಗಳು ತರಗತಿಗೆ ಚಕ್ಕರ್, ರೊಮ್ಯಾನ್ಸ್​ಗೆ ಹಾಜರ್

ಕೊಪ್ಪಳ: ಆತ ಪ್ರೇಮಿಯೇ ಇರಲಿ, ಪತಿಯೇ ಆಗಿರಲಿ. ತನ್ನ ಹೊರತಾಗಿ ಬೇರೊಂದು ಹೆಣ್ಣನ್ನು ಕಣ್ಣೆತ್ತಿ ನೋಡಿದ್ರೂ ಸಿಡಿಮಿಡಿಗೊಳ್ಳುವುದು ಭಾರತೀಯ ಹೆಣ್ಣು ಮಕ್ಕಳ ಹುಟ್ಟುಗುಣ. ಆದರೆ ಇಲ್ಲೊಂದು ಕಡೆ ಅಕ್ಕ ಪಕ್ಕ ಕುಳಿತು ಇಬ್ಬರು ಯುವತಿಯರನ್ನು ಒಬ್ಬನೇ ಮುದ್ದಾಡುವ ದೃಶ್ಯ ಸಾಮಾನ್ಯವಾಗಿದ್ದು, ಇದು ಸ್ವಾತಂತ್ರ್ಯನಾ? ಸ್ವೇಚ್ಚಾಚಾರವೇ ಎಂಬ ಪ್ರಶ್ನೆ ಮೂಡಿದೆ. ಕೊಪ್ಪಳದ ಗಂಗಾವತಿಯ ನ್ಯಾಯಾಧೀಶರ ನಿವಾಸ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂದಿನ ಜಾಗವನ್ನು ಕಾಲೇಜ್ ವಿದ್ಯಾರ್ಥಿಗಳು ಪ್ರಣಯದ ಅಡ್ಡ ಮಾಡಿಕೊಂಡಿದ್ದಾರೆ. …

Read More »

ಶಿಕ್ಷಣ ಕೇಂದ್ರಗಳೇ ಈಗ ಕೊರೊನಾ ಹಬ್..? ಒಂದೇ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಪಾಸಿಟಿವ್..!

ಮಂಡ್ಯ: ಕೊರೊನಾದ ಮೂರನೇ ಅಲೆ ಆತಂಕದ ಮಧ್ಯೆ ಒಂದನೇ ತರಗತಿಯಿಂದ ಶಾಲೆ ಆರಂಭಿಸಲು ಸರ್ಕಾರ ಚರ್ಚೆ ನಡೆಸುತ್ತಿದೆ. ಆತಂಕದ ಬೆಳವಣಿಗೆ ಏನಂದರೆ ಕೆಲವೊಂದು ಶಾಲಾ-ಕಾಲೇಜುಗಳು ಕೊರೊನಾ ಹಾಟ್​ಸ್ಪಾಟ್ ಕೇಂದ್ರವಾಗುತ್ತಿವೆಯಾ ಅನ್ನೋ ಅನುಮಾನ ಶುರುವಾಗಿದೆ. ಇದೀಗ ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಕಾಲೇಜಿನ 412 ವಿಧ್ಯಾರ್ಥಿಗಳ ಪೈಕಿ 28 ಮಂದಿಗೆ ಸೋಂಕು ದೃಢವಾಗಿದೆ. ಸೋಂಕಿತರಿಗೆ ನಾಗಮಂಗಲ ಪಟ್ಟಣದ …

Read More »

₹13,165 ಕೋಟಿ ರಕ್ಷಣಾ ಉಪಕರಣಗಳ ಖರೀದಿಗೆ ರಾಜನಾಥ್​​ ಸಿಂಗ್​​ ಅನುಮೋದನೆ

ನವದೆಹಲಿ: ಸೇನಾ ಪಡೆಗಳಿಗೆ ಮತ್ತಷ್ಟು ಶಕ್ತಿ ತುಂಬಲು ರಕ್ಷಣಾ ಸ್ವಾಧೀನ ಮಂಡಳಿ ಮುಂದಾಗಿದೆ. ಹೀಗಾಗಿಯೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​​​​ ಅಧ್ಯಕ್ಷತೆಯಲ್ಲಿ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ₹13,165 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉಪಕರಣಗಳನ್ನು ಖರೀದಿಸಲು ಅನುಮತಿ ನೀಡಿದೆ. ಭಾರತೀಯ ಮೂರು ಸೇನಾ ಪಡೆಗಳಿಗೂ ಎಎಲ್‌ಎಚ್‌ ಹೆಲಿಕಾಪ್ಟರ್‌ ಸೇರಿದಂತೆ ಹಲವು ರಕ್ಷಣಾ ಉಪಕರಣಗಳನ್ನು ಈ ಯೋಜನೆಯಡಿ ಖರೀದಿಸಲಾಗುತ್ತದೆ. ಈ ಕ್ರಮದಿಂದಾಗಿ ಸ್ಥಳೀಯವಾಗಿ ಅವಲಂಬನೆಯಾಗುವ ಮೂಲಕ ಆತ್ಮ ನಿರ್ಭರ …

Read More »