ಚೆನ್ನೈ: ನಟ ಸೂರ್ಯ, ಲಿಜೋ ಮೋಲ್ ಜೋಸ್ ಮತ್ತು ಮಣಿಕಂದನ್ ಅವರನ್ನೊಳಗೊಂಡ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ಜೈ ಭೀಮ್’ ಸಿನಿಮಾ ಹಾಲಿವುಡ್ ನ ಕಲ್ಟ್ ಕ್ಲಾಸಿಕ್ ದಿ ರಿಡೆಂಪ್ಶನ್’ ಅನ್ನು ಹಿಂದಿಕ್ಕಿದ್ದು, 250ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಜ್ಞಾನವೇಲ್ ನಿರ್ದೇಶನದ ಸೂರ್ಯ ಅವರ 2 ಡಿ ಎಂಟರ್ ಟೈನ್ ಮೆಂಟ್ ನಿರ್ಮಾಣದ ಜೈ ಭೀಮ್ ಚಿತ್ರ 9.6 ರೇಟಿಂಗ್ ನೆರವಿನೊಂದಿಗೆ ಅಗ್ರಸ್ಥಾನದಲ್ಲಿದೆ. ಶಾವ್ಶಾಂಕ್ ರಿಡೆಂಪ್ಶನ್’ 9.3 ರೇಟಿಂಗ್ ನೊಂದಿಗೆ …
Read More »ಹುಂಡಿ ಹಣ ಎಗರಿಸುವ ಮುನ್ನ ದೇವರಿಗೆ ನಮಸ್ಕರಿಸಿದ
ದೇವರ ಫೋಟೋ ತೆಗೆದು, ಕಾಲಿಗೆ ನಮಸ್ಕರಿಸಿದ ಕಳ್ಳ ಮಹಾರಾಷ್ಟ್ರದ ಥಾಣೆಯ ಖೋಪಾಟ್ ಬಸ್ ಡಿಪೋ ಬಳಿಯಿರುವ ಆಂಜನೇಯ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಯುವಕನೊಬ್ಬ ದೇಗುಲಕ್ಕೆ ಎಂಟ್ರಿಯಾಗುತ್ತಾನೆ. ಯಾರಿಗೂ ಅನುಮಾನ ಬರದಂತೆ ತನ್ನ ಮೊಬೈಲ್ ಕ್ಯಾಮರಾದಲ್ಲಿ ದೇವರ ಫೋಟೋಗಳನ್ನು ತೆಗೆಯುತ್ತಾನೆ. ಅತ್ತ ಇತ್ತ ನೋಡುತ್ತಾನೆ. ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ನಂತರ ಆಂಜನೇಯನ ವಿಗ್ರಹದ ಬಳಿ ಬರುತ್ತಾನೆ. ನಂತರ ದೇವರ ಪಾದ ಮುಟ್ಟಿ ನಮಸ್ಕರ ಮಾಡುತ್ತಾನೆ. ಇದಾದ ಕೆಲವೇ ಕ್ಷಣಗಳಲ್ಲಿ …
Read More »ಲಖನ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಲಖನ್ ಜಾರಕಿಹೊಳಿ ಪರ ಬ್ಯಾಟ್ ಬ ಗೋಕಾಕ : ಡಿಸೆಂಬರ್ ತಿಂಗಳಲ್ಲಿ ಜರುಗಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ ಮಾಡಿ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪಕ್ಷದ ಮುಖಂಡರಲ್ಲಿ ಮನವಿ ಮಾಡಿಕೊಂಡರು. ಶನಿವಾರದಂದು ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಸಭಾಭವನದಲ್ಲಿ ಅರಭಾವಿ ಮಂಡಲ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ …
Read More »ದೆಹಲಿಯಲ್ಲಿ ಶಾಲೆಗಳಿಗೆ ಒಂದು ವಾರ ರಜೆ ಘೋಷಣೆ ಮಾಡಿದ ಸಿಎಂ
ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಹಿನ್ನಲೆಯಲ್ಲಿ ಸಿಎಂ ಅರವಿಂದ್ ಕ್ರೇಜಿವಾಲ್ ಶಾಲೆಗಳಿಗೆ ಒಂದು ವಾರ ರಜೆ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಸೋಮವಾರದಿಂದ ಒಂದು ವಾರದವರೆಗೆ, ಶಾಲೆಗಳು ಭೌತಿಕವಾಗಿ ಮುಚ್ಚಲ್ಪಡುತ್ತವೆ ಅಂತ ಅವರು ಹೇಳಿದರು. ಇದೇ ವೇಳೆ ಅವರು (coronavirus)ಸರ್ಕಾರಿ ಕಚೇರಿಗಳು ಒಂದು ವಾರದವರೆಗೆ 100% ಸಾಮರ್ಥ್ಯದಲ್ಲಿ ಮನೆಯಿಂದಲೇ (WFH) ಕಾರ್ಯನಿರ್ವಹಿಸುತ್ತವೆ. ಖಾಸಗಿ ಕಚೇರಿಗಳಿಗೆ ಸಾಧ್ಯವಾದಷ್ಟು WFH ಆಯ್ಕೆಗೆ ಹೋಗಲು ಸಲಹೆ ನೀಡಲಾಗುವುದು …
Read More »ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಹ್ಯಾಕರ್ ಶ್ರೀಕಿ ಪುರಾಣ
ಬೆಂಗಳೂರು: ಹ್ಯಾಕರ್ ಶ್ರೀಕಿ ಬಂಧನದ ಬಳಿಕ ಏನೇನು ನಡೆಯಿತು ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕ್ ಖರ್ಗೆ ವಿವರಿಸಿದ್ದು ಹೀಗೆ… 2020 ನವೆಂಬರ್ 14ಕ್ಕೆ ಶ್ರೀಕೃಷ್ಣ ಸಿಸಿಬಿ ಮುಂದೆ ಶರಣಾಗುತ್ತಾನೆ. 3 ದಿನ ರಿಪೋರ್ಟಿಂಗ್ ಆಗುವುದೇ ಇಲ್ಲ. 17ರಂದು ಬಂಧನ ಎಂದು ತೋರಿಸುತ್ತಾರೆ, ಹ್ಯಾಕಿಂಗ್ ದೂರಿನ ಮೇರೆಗೆ 14 ದಿನ ಕಸ್ಟಡಿಗೆ ಕಳಿಸುತ್ತಾರೆ. ವಿದೇಶದಿಂದ ಹೈಡ್ರೋ ಗಾಂಜಾವನ್ನು ಬಿಟ್ ಕಾಯಿನ್ ಮೂಲಕ ತರಿಸುತ್ತಿದ್ದಾರೆಂದು ಡಿ.2ರಂದು ಮತ್ತೆ 12 ದಿನ ಕಸ್ಟಡಿಗೆ ತೆಗೆದುಕೊಳ್ಳುತ್ತಾರೆ. ಗೇಮಿಂಗ್ ವೆಬ್ಸೈಟ್ …
Read More »ಇಂದು ಸಹ ಮಳೆ, ಬೆಂಗಳೂರಿನಲ್ಲಿ ಹೆಚ್ಚಾದ ಚಳಿ
ಬೆಂಗಳೂರಿನ (Bengaluru) ಕೆಲ ಭಾಗಗಳಲ್ಲಿ ಜಿಟಿ ಜಿಟಿ ಮಳೆ(Rainfall)ಯಾಗಲಿದೆ. ಕಳೆದ ಮೂನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಮಳೆ ಜೊತೆಗೆ ಶೀತಗಾಳಿ ಸಹ ಬೀಸುತ್ತಿರುವ ಪರಿಣಾಮ ಚಳಿ ಪ್ರಮಾಣ ಸಹ ಏರಿಕೆಯಾಗಿದೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ 19 ಮಿ.ಮೀ.ನಷ್ಟು ಮಳೆಯಾಗಿದೆ. ವಿಮಾನ ನಿಲ್ದಾಣ ಭಾಗದಲ್ಲಿ 10.4 ಮಿ.ಮೀ., ಹೆಚ್ಎಎಲ್ ನಲ್ಲಿ 15.6 ಮಿ.ಮೀ.ನಷ್ಟು ಮಳೆಯಾಗಿದೆ. ಇಂದು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು …
Read More »ದೇವೇಗೌಡರ ಹಾಗೂ ಕುಮಾರಸ್ವಾಮಿ ಹೆಸರು ಹೇಳಿದಂತೆ ಓಡಿ ಬಂದು ಒತ್ತೋರು ಯಾರೂ ಇಲ್ಲ. :
ಹಾಸನ: ಜನವರಿಯಲ್ಲಿ ತೆರವಾಗುತ್ತಿರುವ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ (Council Election) ಘೋಷಣೆ ಹಿನ್ನೆಲೆ ಜಿಲ್ಲೆಯ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಅವರ ಅಧಿಕೃತ ನಿವಾಸದಲ್ಲಿ ಜೆಡಿಎಸ್ ಶಾಸಕರು, ಮುಖಂಡರು, ಕಾರ್ಯಕರ್ತರ ಸಭೆ (JDS Meeting) ನಡೆಸಿದರು. ಅಭ್ಯರ್ಥಿ ಆಯ್ಕೆ ಸಂಬಂಧ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(H. D. Deve Gowda), ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರುಗಳಾದ ಎಚ್.ಡಿ.ರೇವಣ್ಣ, ಕೆ.ಎಸ್.ಲಿಂಗೇಶ್, ಮಾಜಿಶಾಸಕರು, ಜಿ.ಪಂ. ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಯಿತು. ಟಿಕೆಟ್ ಗಾಗಿ …
Read More »ಏಕದಿನ ನಾಯಕತ್ವಕ್ಕೂ ವಿದಾಯ ಹೇಳಲಿದ್ದಾರೆ ಕೊಹ್ಲಿ; ರವಿಶಾಸ್ತ್ರಿ
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ತೊರೆದಿದ್ದು, ಇದೀಗ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಲಿದ್ದಾರೆ. ಕೊಹ್ಲಿ ಇನ್ನೂ ODI ಮತ್ತು ಟೆಸ್ಟ್ ತಂಡಗಳ ನಾಯಕರಾಗಿದ್ದಾರೆ, ಆದರೆ ಇತರ ಎರಡೂ ಸ್ವರೂಪಗಳಲ್ಲಿ ಅವರ ನಾಯಕತ್ವದ ಭವಿಷ್ಯವು ಪ್ರಶ್ನೆಯಾಗಿಯೇ ಉಳಿದಿದೆ. ಕೊಹ್ಲಿಯೊಂದಿಗೆ ಸತತ 4 ವರ್ಷಗಳಿಂದ ಟೀಂ ಇಂಡಿಯಾಗಾಗಿ ಕೆಲಸ ಮಾಡಿದ್ದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಮುಂದಿನ ದಿನಗಳಲ್ಲಿ ಭಾರತದ ಹಿರಿಯ ಬ್ಯಾಟ್ಸ್‌ಮನ್ ಇತರ …
Read More »ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ದೆಹಲಿ: ಇಂದು (ನವೆಂಬರ್ 13, ಶನಿವಾರ) ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸತತ ಒಂಬತ್ತನೇ ದಿನವೂ ಇಂಧನ ದರ (Fuel Price) ಸ್ಥಿರವಾಗಿದೆ. ನವೆಂಬರ್ 3ನೇ ತಾರೀಕಿನಂದು ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಮನ್ನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಅನೇಕ ರಾಜ್ಯಗಳು ವ್ಯಾಟ್ ಅನ್ನು ಕಡಿಮೆ ಮಾಡಿತ್ತು. ಆ ಬಳಿಕ ಹಲವೆಡೆ ಇಂಧನ ದರದಲ್ಲಿ ಕೊಂಚ ಇಳಿಕೆ ಆಗಿತ್ತು. ನಿರಂತರ ಏರಿಕೆ ಕಾಣುತ್ತಿದ್ದ ಪೆಟ್ರೋಲ್ (Petrol …
Read More »ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ-ಶಾಸಕ ಬಾಲಚಂದ್ರ ಜಾರಕಿಹೊಳಿ
M.L.C. ಚುನಾವಣೆ ಬಾಲಚಂದ್ರ ಜಾರಕಿಹೊಳಿ EXCLUSIVE ಹೇಳಿಕೆ. ಗೋಕಾಕ: ಡಿಸೆಂಬರ್ 10 ರಂದು ಬೆಳಗಾವಿ ಜಿಲ್ಲೆಯ 2 ಸ್ಥಾನಗಳಿಗೆ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಜೊತೆಗೆ ನಮ್ಮ ಸಂಘಟನೆಗೆ ಸೇರಿರುವ ಅಭ್ಯರ್ಥಿಯನ್ನು ಬೆಂಬಲಿಸಿ ಅವರನ್ನು ಬಹುಮತದಿಂದ ಆಯ್ಕೆ ಮಾಡುವಂತೆ ಕೆಎಮ್‍ಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು. ಶುಕ್ರವಾರ ಸಂಜೆ ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಅರಭಾವಿ ಮತಕ್ಷೇತ್ರದ …
Read More »