ಚಾಲಕನ ನಿಯಂತ್ರಣ ತಪ್ಪಿ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಆಜಂ ನಗರದ ಎಪಿಎಂಸಿ ರೋಡ್ ಕಾರ್ನರನಲ್ಲಿ ಬೆಳಿಗ್ಗೆ 9.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಬಿದ್ದಿದ್ದ ಕಬ್ಬನ್ನು ಬ್ಯಾರೆ ಟ್ರಾಲಿಗೆ ಹಾಕಲಾಗುತ್ತಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
Read More »ಗಾಂಧೀಜಿಯವರ ಬೃಹತ್ ಗಾತ್ರದ ಕಂಚಿನ ಪ್ರತಿಮೆಧ್ವಂಸ
ಸಿಡ್ನಿ, ನವೆಂಬರ್ 16: ಭಾರತ ಸರ್ಕಾರವು ಆಸ್ಟ್ರೇಲಿಯಾಕ್ಕೆ ಉಡುಗೊರೆಯಾಗಿ ನೀಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬೃಹತ್ ಗಾತ್ರದ ಕಂಚಿನ ಪ್ರತಿಮೆಯನ್ನು ಮೆಲ್ಬೋರ್ನ್ ನಗರದಲ್ಲಿ ಧ್ವಂಸಗೊಳಿಸಲಾಗಿದೆ. ಈ ಘಟನೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಬೇಸರ ವ್ಯಕ್ತಪಡಿಸಿದ್ದು, ಇದು ತೀರಾ ‘ಅವಮಾನಕರ’ ಎಂದು ಖಂಡಿಸಿದ್ದಾರೆ. ಇದರಿಂದ ಭಾರತ-ಆಸ್ಟ್ರೇಲಿಯನ್ ಸಮುದಾಯದಲ್ಲಿ ಬೇಸರ ಮೂಡಿಸಿದೆ. ಭಾರತದ 75 ವರ್ಷಗಳ ಸ್ವಾತಂತ್ರ್ಯದ ಆಚರಣೆಯ ಅಂಗವಾಗಿ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರು ಭಾರತದ ಕಾನ್ಸುಲ್ ಜನರಲ್ ರಾಜ್‌ಕುಮಾರ್ …
Read More »ಕಲ್ಯಾಣ ಕರ್ನಾಟಕ ಸಾರಿಗೆ ಟಿಕೆಟ್’ ಯಡವಟ್ಟು, ಸೋಷಿಯಲ್ ಮೀಡಿಯಾದಲ್ಲಿ ವೈರಲ್.!
ಬೆಂಗಳೂರು: ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ( KKRTC ), ತನ್ನ ಟಿಕೆಟ್ ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ, ನಾಡಿನ ಸಾಂಸ್ಕೃತಿಕ ಹಿರಿಮೆ, ಗರಿಮೆ, ಚುನಾವಣೆ ಸಂದರ್ಭದಲ್ಲಿ ಮತದಾನ ಜಾಗೃತಿಯ ಬಗ್ಗೆ ಜಾಗೃತಿಯನ್ನು ಮೂಡಿಸುವಂತ ಬರಹಗಳನ್ನು ನಮೂದಿಸುತ್ತಿತ್ತು. ಟಿಕೆಟ್ ಪಡೆದಂತ ಪ್ರಯಾಣಿಕ ಅದರ ಮೇಲಿದ್ದಂತ ಬರಹವನ್ನು ಓದುವ ಮೂಲಕ ಜಾಗೃತನಾಗುತ್ತಿದ್ದನು. ಇದೀಗ ಪದ್ಮಶ್ರೀ ಪುರಸ್ಕೃತ ( padma shri ) ಮಂಜಮ್ಮ ಜೋಗತಿಯ ( manjamma jogati ) ಬಗ್ಗೆ ಬರಹವಿದ್ದು, ವಿಜಯನಗರ …
Read More »ಸುಣಧೋಳಿಯಲ್ಲಿ ಸ್ವಾಮೀಜಿಗಳಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪುಷ್ಪಾರ್ಚಣೆ
ಮೂಡಲಗಿ : ಮಠ-ಮಾನ್ಯಗಳಿಗೆ ಭಕ್ತ ಸಮುದಾಯವೇ ನಿಜವಾದ ಆಸ್ತಿ. ಶ್ರೀ ಮಠದ ಶ್ರೇಯೋಭಿವೃದ್ಧಿಗೆ ಭಕ್ತರೂ ಸಹ ತಮ್ಮ ತನು-ಮನ-ಧನದಿಂದ ಸಹಕಾರ ನೀಡುವಂತೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ರವಿವಾರ ಸಂಜೆ ಜಡಿಸಿದ್ಧೇಶ್ವರ ಮಠದಲ್ಲಿ ಜರುಗಿದ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಮಠಗಳ ಉನ್ನತಿಗಾಗಿ ಈ ಭಾಗದಲ್ಲಿ ಧಾರ್ಮಿಕ ವಾತಾವರಣ ನಿರ್ಮಿಸುತ್ತಿರುವ ಮಠಗಳಿಗೆ ಭಕ್ತರು ತಮ್ಮ ವೈಯಕ್ತಿಕ ಮನಸ್ತಾಪಗಳನ್ನು …
Read More »ಬಿಜೆಪಿ ರಣತಂತ್ರ: ಉದಯ್ ಗೌಡಗೆ ಹಾಸನ ಎಂಎಲ್ಸಿ ಟಿಕೆಟ್ ?
ಆಲೂರು: ಗೋಪಾಲಸ್ವಾಮಿ ವಿಧಾನ ಪರಿಷತ್ ಸದಸ್ಯರಾಗಿದ್ದು ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಸ್ಥಳಿಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಸಮಾಜ ಸೇವಕ ಬಿಜೆಪಿ ಹಿರಿಯ ಮುಖಂಡ ಉದಯ್ ಗೌಡರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಗೊಳಿಸುವ ದೃಷ್ಟಿಯಿಂದವ ರಾಜ್ಯ ಬಿಜೆಪಿ ಈ ಚಿಂತನೆ ನಡೆಸುತ್ತಿದೆ ಎನ್ನುವ ಮಾತುಗಳು ಕೆಲವು ಕಾರ್ಯಕರ್ತರ ವಲಯದಿಂದ ಕೇಳಿ ಬರುತ್ತಿದೆ. ಕಳೆದ …
Read More »ಪೇಜಾವರ ಶ್ರೀ ಮಾಂಸ ತಿನ್ನುತ್ತಿದ್ದರೇ ? :ತೀವ್ರ ಆಕ್ರೋಶ, ಕ್ಷಮೆ ಯಾಚಿಸಿದ ಹಂಸಲೇಖ
ಬೆಂಗಳೂರು : ಪೇಜಾವರ ಶ್ರೀಗಳು ದಲಿತರ ಕೇರಿಗೆ ಹೋಗುತ್ತಿದ್ದರು, ಅಲ್ಲಿ ಅವರು ಕೋಳಿ ಮಾಂಸ ಕೊಟ್ಟಿದ್ದರೆ ತಿನ್ನುತ್ತಿದ್ದರೇ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ವ್ಯಾಪಕ ಆಕ್ರೋಶದ ಬಳಿಕ ಸೋಮವಾರ ಬಹಿರಂಗ ಕ್ಷಮೆಯಾಚಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಆ ರೀತಿ ಹೇಳಿಕೆ ನೀಡಬಾರದಿತ್ತು. ನನ್ನ ಹೇಳಿಕೆಯನ್ನು ನನ್ನ ಹೆಂಡತಿಯೇ ವಿರೋಧಿಸಿದ್ದಾಳೆ. ಈ ಕುರಿತು ಕ್ಷಮೆ ಯಾಚಿಸುವುದಾಗಿ ಹೇಳಿದ್ದಾರೆ. ‘ಕ್ಷಮೆ ಇರಲಿ, ಎಲ್ಲಾ ಮಾತುಗಳು …
Read More »ಮಕ್ಕಳನ್ನ ಕರೆದುಕೊಂಡು ಮಹಿಳೆ ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನ ಹಿರಿಯ ನ್ಯಾಯಾಧೀಶ ತರಾಟೆಗೆ ತೆಗೆದುಕೊಂಡ ಘಟನೆ
ರಾಯಬಾಗ: ಚಿಕ್ಕ ಮಕ್ಕಳನ್ನ ಕರೆದುಕೊಂಡು ಭಿಕ್ಷೆ ಬೇಡುತ್ತಿದ್ದ ಮಹಿಳೆ ಕಂಡು ಭಿಕ್ಷುಕ ಮಹಿಳೆಯನ್ನ ಹಿರಿಯ ನ್ಯಾಯಾಧೀಶ ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಾಯಕ್ಕಾ ದೇವಸ್ಥಾನದ ಆವರಣದಲ್ಲಿ ಇಬ್ಬರು ಮಕ್ಕಳನ್ನ ಕರೆದುಕೊಂಡು ಮಹಿಳೆ ಭಿಕ್ಷೆ ಬೇಡುತ್ತಿದ್ದಳು ಇದೆ ದೇವಸ್ಥಾನಕ್ಕೆಂದು ಆಗಮಿಸಿದ್ದ ರಾಯಭಾಗದ ಹಿರಿಯ ನ್ಯಾಯಾಧೀಶ ಬಸವರಾಜಪ್ಪ ಕೆ ಎಂ, ಮಹಿಳೆಯನ್ನ ಕರೆಸಿ ಯಾಕೆ ಮಕ್ಕಳನ್ನ ಕರೆದುಕೊಂಡು ಭಿಕ್ಷೆ ಬೇಡುತ್ತಿರಿ. ಎಲ್ಲಾದರೂ ಕೆಲಸ ಮಾಡಿ …
Read More »ಬೈ ಎಲೆಕ್ಷನ್ ಸೋಲು ; ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕಟೀಲ್ಗೆ ಕೊಕ್ ; ಮುಂದಿನ ಸಾರಥಿ ಯಾರು?
ಉಪಕದನದ ಸೋಲು ಗೆಲುವಿನ ಬಳಿಕ, ಕಮಲ ಪಡೆಯ ಕಣ್ಣು ಇದೀಗ 2023ರ ಚುನಾವಣೆಯತ್ತ ನೆಟ್ಟಿದೆ. ಕೇಸರಿ ಪಡೆಯ ಸಾರಥಿಯ ಬದಲಾವಣೆಯೊಂದಿಗೆ ಚುನಾವಣೆ ಎದುರಿಸ್ತಾರಾ ಅನ್ನೋ ಮಾತುಗಳು ಕೂಡ ಮುನ್ನೆಲೆಗೆ ಬಂದಿವೆ. ಬೈ-ಎಲೆಕ್ಷನ್ ಸೋಲು ಗೆಲುವಿನ ಲೆಕ್ಕಾಚಾರದ ಬಳಿಕ ರಾಜ್ಯ ಬಿಜೆಪಿಯ ಕಣ್ಣು 2023ರ ಚುನಾವಣೆಯತ್ತ ನೆಟ್ಟಿದೆ. ಈಗಿನಿಂದ್ಲೆ ಚುನಾವಣೆಯ ಗೆಲುವಿಗಾಗಿ ಪ್ಲಾನ್ಗಳನ್ನ ರೂಪಿಸಲಾಗ್ತಿದೆ. ಈ ಮಧ್ಯ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ಮಾತುಗಳು ಪಿಸುಗುಡುತ್ತಿವೆ. ರಾಜ್ಯದಲ್ಲಿ ಎದುರಾಗಲಿರೋ 2023ರ ವಿಧಾನಸಭಾ …
Read More »ನೆಹರೂ ಪ್ರಧಾನಿಯಾಗಿ 17 ವರ್ಷಗಳ ಕಾಲ ಇದ್ರು. ದೇಶವನ್ನು ಕಟ್ಟಲು ಜೀವವನ್ನು ಮುಡಿಪಾಗಿಟ್ಟಿದ್ದರು:
ಬೆಂಗಳೂರು: ನವೆಂಬರ್14 (November 14th Childrens Day) ಬಹಳ ಮಹತ್ವ ದಿನ. ನೆಹರೂ ಅವರ ಜನ್ಮ ದಿನ (Neharu Birthday). ಇಡೀ ರಾಷ್ಟ್ರದಲ್ಲಿ ನೆಹರೂ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸ್ತಾರೆ. ನೆಹರೂ ಅವರಿಗೆ ಮಕ್ಕಳ ಕಂಡ್ರೆ ಅಪಾರ ಪ್ರೀತಿ, ನಂಬಿಕೆ ಕೂಡ. ದೇಶದ ಭವಿಷ್ಯ ರೂಪಿಸಬೇಕಂದ್ರೆ, ಮಕ್ಕಳಿಂದ ಮಾತ್ರ ಸಾಧ್ಯ ಅಂತ ನಂಬಿಕೆ ಇಟ್ಟಿದ್ದರು. ಅವರ ಹುಟ್ಟಿದ ದಿನವನ್ನ ಮಕ್ಕಳ ದಿನವನ್ನಾಗಿ ಆಚರಿಸಲಾಗ್ತಿದೆ. ನಾಡಿನ ಮಕ್ಕಳ ಭವಿಷ್ಯ ಉಜ್ವಲ ಆಗಲಿ ಅಂತ ಬಯಸ್ತೀನಿ. ಇಂದು ಪಕ್ಷದ ಸದಸ್ಯತ್ವ ಅಭಿಯಾನ …
Read More »ಯೂಪಿಯ ಎಲ್ಲಾ 403 ಕ್ಷೇತ್ರಗಳಲ್ಲೂ ಕಣಕ್ಕಿಳಿಯಲು ನಿರ್ಧರಿಸಿದ ಕಾಂಗ್ರೆಸ್
ನವದೆಹಲಿ, ನ. 14: ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಎಲ್ಲಾ ರಾಜಕೀಯ ಪಕ್ಷಗಳು ಅಣಿಯಾಗುತ್ತಿದ್ದು ಕಾಂಗ್ರೆಸ್ (Congress) ಪ್ರಿಯಾಂಕಾ ಗಾಂಧಿ ವಾದ್ರಾ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸನ್ನದ್ದವಾಗುತ್ತಿದೆ. ಕಾಂಗ್ರೆಸ್ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿ (Manifesto) ವಿಶಿಷ್ಟವಾದ ಘೋಷಣೆ ಮಾಡಲು ಮುಂದಾಗಿದೆ. ಅಲ್ಲಿನ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ (BJP), ಸಮಾಜವಾದಿ ಪಕ್ಷ (Samajawadi Party) ಹಾಗೂ ಬಹುಜನ ಸಮಾಜ ಪಕ್ಷ (Bahujana …
Read More »