Breaking News

ರಾಷ್ಟ್ರೀಯ

ಗೋಲ್ಡನ್ ಟೆಂಪಲ್‌ನ ಅದ್ಭುತ ವೈಮಾನಿಕ ಫೋಟೋ ಹಂಚಿಕೊಂಡ ಉದ್ಯಮಿ ಮಹೀಂದ್ರಾ

ಅಮೃತಸರದ ಗೋಲ್ಡನ್ ಟೆಂಪಲ್‌ನ ಅದ್ಭುತ ವೈಮಾನಿಕ ಚಿತ್ರಣವನ್ನು ಶುಕ್ರವಾರ ಟ್ವಿಟ್ಟರ್ ನಲ್ಲಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದು, ಗುರುಪುರಬ್ ಸಂದರ್ಭದಲ್ಲಿ ಜನರಿಗೆ ಶುಭ ಹಾರೈಸಿದ್ದಾರೆ.ವಿದ್ಯುತ್ ದೀಪಗಳಿಂದ ಸುಂದರವಾಗಿ ಬೆಳಗಿರುವ ಗೋಲ್ಡನ್ ಟೆಂಪಲ್, ಅಕಾಲ್ ತಖ್ತ್ ಮತ್ತು ಸರೋವರದ ಅದ್ಭುತ ವೈಮಾನಿಕ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ. ಈ ವೇಳೆ ಎಲ್ಲರಿಗೂ ಟ್ವೀಟ್ ಮುಖಾಂತರ ಉದ್ಯಮಿ ಆನಂದ್ ಮಹೀಂದ್ರಾ ಅವರು ಗುರುಪುರಬ್‍ನ ಶುಭಾಶಯಗಳನ್ನು ತಿಳಿಸಿದ್ದಾರೆ. ಆನಂದ್ ಮಹೀಂದ್ರಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ …

Read More »

ರೈಲು ಹಳಿಯ ಮೇಲೆ ಬಾಂಬ್ ಸ್ಫೋಟ

ನವದೆಹಲಿ,ನ.20- ಜಾರ್ಖಂಡ್‍ನ ಧನ್‍ಬಾದ್ ವಿಭಾಗದಲ್ಲಿ ರೈಲು ಹಳಿಯ ಮೇಲೆ ಸ್ಫೋಟ ಸಂಭವಿಸಿ ಒಂದು ಡೀಸೆಲ್ ಎಂಜಿನ್ ಹಳಿತಪ್ಪಿದ ಘಟನೆ ಇಂದು ಮುಂಜಾನೆ ಜರುಗಿದೆ. ಇದು ಒಂದು ಬಾಂಬ್  ಸ್ಫೋಟವಾಗಿದ್ದು ಧನಬಾದ್ ವಿಭಾಗದ ಗರ್ವಾ ರಸ್ತೆ ಮತ್ತು ಬರ್ಕಣದ ನಡುವೆ ಸೋಟಗೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದು ಒಂದು ನಕ್ಸಲ್ ಸಂಬಂತ ಘಟನೆಯಾಗಿದೆ ಎಂದು ಮೂಲಗಳು ಸೂಚಿಸಿವೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಹಳಿಯ ಮೇಲೆ ಸಂಚಾರ ಪುನರಾರಂಭವಾಗುವುದನ್ನು ಕಾಯಲಾಗುತ್ತಿದೆ …

Read More »

ಕೊತ್ವಾಲ್‌ ರಾಮಚಂದ್ರನನ್ನು ಬಳಸಿ ಮೇಲೆ ಬಂದ ಡಿಕೆಶಿ: ಆರಗ

ರಾಯಚೂರು: ಹುಚ್ಚು ಹಿಡಿದವರಿಗೆ ಇಡೀ ಪ್ರಪಂಚವೇ ಹುಚ್ಚು ಹಿಡಿದಂತೆ ಕಾಣಿಸುತ್ತದೆ. ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ನಮ್ಮ ಬಗ್ಗೆ ಅಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದರು.   ಸಿರವಾರ ಪಟ್ಟಣದಲ್ಲಿ ನಡೆದ ಜನ ಸ್ವರಾಜ್‌ ಯಾತ್ರೆಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ಕೊತ್ವಾಲ್‌ ರಾಮಚಂದ್ರ ಅಂಥವರನ್ನು ಬಳಸಿಕೊಂಡು ಮೇಲೆ ಬಂದವರು. ಆದರೆ, ನಾವು ಜನರಿಂದ ಬೆಳೆದು ಬಂದಿದ್ದೇವೆ. ಜಲಿಯನ್‌ ವಾಲಾಬಾಗ್‌ ಎಂದು ಶುದ್ಧವಾಗಿ …

Read More »

ಠಾಣೆಯಲ್ಲಿ ಸಿಬ್ಬಂದಿ ಎದುರು ಅಸಭ್ಯ ವರ್ತನೆ ಆರೋಪ: ಹುಬ್ಬಳ್ಳಿ ಪೊಲೀಸ್​ ಕಾನ್ಸ್​​ಟೇಬಲ್​ ಅಮಾನತು

ಹುಬ್ಬಳ್ಳಿ: ಠಾಣೆಯಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದಡಿ ನಗರದ ಕಸಬಾಪೇಟ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ ಶ್ರೀಕಾಂತ ಗೋಣೆಪ್ಪನವರ ಅವರನ್ನು ಅಮಾನತು ಮಾಡಲಾಗಿದೆ. ಶಿಸ್ತಿನ ಇಲಾಖೆಯಲ್ಲಿ ಶ್ರೀಕಾಂತ ಅಶಿಸ್ತಿನಿಂದ ವರ್ತಿಸುತ್ತಿದ್ದರು. ಠಾಣೆಯಲ್ಲಿ ಅಧಿಕಾರಿ, ಸಿಬ್ಬಂದಿ ಎದುರು ಶರ್ಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದರು. ಹೀಗೆ ಮಾಡದಂತೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ದುರ್ವರ್ತನೆ ಮುಂದುವರಿಸಿದ್ದರು ಎನ್ನಲಾಗ್ತಿದೆ.   ಈ ಕಾರಣಕ್ಕೆ ಡಿಸಿಪಿ ಕೆ. ರಾಮರಾಜನ್ ಅವರು ತಮ್ಮ ವರ್ಗಾವಣೆಗೂ ಮುನ್ನವೇ ಶ್ರೀಕಾಂತ ಅಮಾನತು …

Read More »

ಬೆಳಗಾವಿಯ ಶಿವಬಸವನಗರದ ಹೆಸ್ಕಾಮ್ ಕಲ್ಯಾಣ ಮಂಟಪದ ಎದುರು ರಸ್ತೆ ಬದಿಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಜರ್ಮನ್ ಶೆಫರ್ಡ ಶ್ವಾನ ಪ್ರಾಣ ಬಿಟ್ಟಿದೆ.

   ಬೆಳಗಾವಿಯ ಶಿವಬಸವನಗರದ ಹೆಸ್ಕಾಮ್ ಕಲ್ಯಾಣ ಮಂಟಪದ ಎದುರು ರಸ್ತೆ ಬದಿಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಜರ್ಮನ್ ಶೆಫರ್ಡ ಶ್ವಾನ ಪ್ರಾಣ ಬಿಟ್ಟಿದೆ. ತನ್ಮೂಲಕ, ನಾಯಿಯೊಂದು ತನ್ನ ಪ್ರಾಣ ತೆತ್ತು ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದೆ.   ಶುಕ್ರವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ. ಶಿವಬಸವ ನಗರದ ಹೆಸ್ಕಾಮ್ ಕಲ್ಯಾಣ ಮಂಟಪವಿರುವ ಮುಖ್ಯ ರಸ್ತೆಯ ಬದಿಯ ಫುಟ್ ಪಾಥ್ ಮೇಲೆ ಜೀವಂತ ತಂತಿ ಬಿದ್ದಿತ್ತು. ಡಾ.ರಾಜು ನಾಯಕ ಅವರ ಜೆರ್ಮನ್ …

Read More »

ಸೇರಿ ಮೂವರು ಸಚಿವರ ದಿಢೀರ್ ರಾಜೀನಾಮೆ

ಜೈಪುರ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದ ಸಂಪುಟ ಪುನಾರಚನೆ ಕಸರತ್ತು ಆರಂಭವಾಗಿದ್ದು, ಮೂವರು ಸಚಿವರು ರಾಜೀನಾಮೆ ನೀಡಿದ್ದಾರೆ. ಕಂದಾಯ ಸಚಿವ ಹರೀಶ್ ಚೌಧರಿ, ವೈದ್ಯಕೀಯ ಮತು ಆರೋಗ್ಯ ಸಚಿವ ಡಾ.ರಘು ಶರ್ಮಾ ಮತ್ತು ಶಿಕ್ಷಣ ಸಚಿವ ಗೋವಿಂದ ಸಿಂಗ್ ದೋತಸ್ರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು,ರಾಜೀನಾಮೆ ಈ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ರವಾನಿಸಿದ್ದಾರೆ. ರಾಜಸ್ಥಾನ ಸಚಿವ ಸಂಪುಟದ ಮೂವರು ಸಚಿವರು ರಾಜೀನಾಮೆ ನೀಡಿದ್ದು, …

Read More »

ವಿವೇಕರಾವ್ ಪಾಟೀಲ್ ಮನೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ,

*ಚಿಕ್ಕೋಡಿ ಬ್ರೇಕಿಂಗ್*   ವಿವೇಕರಾವ್ ಪಾಟೀಲ್ ಮನೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ,   ಒಂದು ಗಂಟೆಗೂ ಹೆಚ್ಚಿನ ಕಾಲ ವಿವೇಕ್ ಕತೆ ರಮೇಶ್ ಚರ್ಚೆ,   ಕಾಂಗ್ರೇಸ್ ನಿಂದ ಪರಿಷತ್ ಟಿಕೇಟ್ ವಂಚಿತರಾಗಿರೋ ವಿವೇಕರಾವ್ ಪಾಟೀಲ್, ಬೆಕ್ಕೇರಿ ಗ್ರಾಮದ ವಿವೇಕರಾವ್ ಪಾಟೀಲ್ ಮನೆಗೆ ಭೇಟಿ ನೀಡಿ ಮಾತುಕತೆ,   ಬಿಜೆಪಿಗೆ ಬರುವಂತೆ ವಿವೇಕ್ ಬಳಿ ಮನವಿ ಮಾಡಿರುವ ರಮೇಶ್ ಜಾರಕಿಹೊಳಿ,   ಸ್ವತಂತ್ರ ಸ್ಪರ್ಧೆಯ ಬಗ್ಗೆ ಇನ್ನೂ …

Read More »

ರಾಜ್ಯಾದ್ಯಂತ ಮುಂದಿನ ಐದು ದಿನ ಭಾರೀ ಮಳೆ : ಮುನ್ಸೂಚನೆ ನೀಡಿದ ಹವಮಾನ ಇಲಾಖೆ

ಬೆಂಗಳೂರು: ಮುಂದಿನ ಐದು ದಿನ ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೊದಲ ಮೂರು ದಿನ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದ್ದು, ನಂತರದ ಎರಡು ದಿನ ಮೋಡ ಕವಿದ ವಾತಾವರಣ ಇರಲಿದೆ. ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳು ಮಳೆ ಸಾಧ್ಯತೆ ಇದ್ದು, ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ನಾಳೆ ಯಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳಿಗೂ ಯಲ್ಲೋ ಅಲರ್ಟ್ ಘೋಷಣೆ …

Read More »

ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಕಗ್ಗಂಟಾಗಿದ್ದು, ಟಿಕೆಟ್‌ ಹಂಚಿಕೆಯ ಚೆಂಡು ಹೈಕಮಾಂಡ್‌ ಅಂಗಳಕ್ಕೆ

ಬಳ್ಳಾರಿ: ವಿಧಾನ ಪರಿಷತ್‌ ಚುನಾವಣೆಯ ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಕಗ್ಗಂಟಾಗಿದ್ದು, ಟಿಕೆಟ್‌ ಹಂಚಿಕೆಯ ಚೆಂಡು ಹೈಕಮಾಂಡ್‌ ಅಂಗಳಕ್ಕೆ ಹೋಗಿ ತಲುಪಿದೆ. ಆಕಾಂಕ್ಷಿಗಳ ಮಧ್ಯೆ ಹೆಚ್ಚಿದ ಪೈಪೋಟಿ, ಮುಖಂಡರಲ್ಲಿ ಒಮ್ಮತ ಮೂಡದಿರುವುದರಿಂದ ಅಭ್ಯರ್ಥಿ ಘೋಷಣೆಗೆ ವಿಳಂಬವಾಗುತ್ತಿದ್ದು, ಜಿಲ್ಲೆಯ ಮುಖಂಡರೊಂದಿಗೆ ಆಕಾಂಕ್ಷಿಗಳು ಸಹ ಗುರುವಾರ ದೆಹಲಿಗೆ ದೌಡಾಯಿಸಿದ್ದಾರೆ.   ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್‌ ಚುನಾವಣೆಗೆ ಅ ಧಿಸೂಚನೆ ಪ್ರಕಟವಾಗಿ ಕೆಲ ದಿನ ಕಳೆದರೂ, ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಮುಖ್ಯವಾಗಿ ಕಾಂಗ್ರೆಸ್‌ …

Read More »

ವಿಧಾನ ಪರಿಷತ್ ಚುನಾವಣೆ: ಲಿಂಗಾಯತ ಅಭ್ಯರ್ಥಿಗಳಿಗೆ ಕಾಂಗ್ರೆಸ್, ಬಿಜೆಪಿ ಮನ್ನಣೆ; ಇತರ ಸಮುದಾಯಗಳ ಕಡೆಗಣನೆ!

ಬೆಳಗಾವಿ : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ವಿವಿಧ ಪ್ರಬಲ ಸಮುದಾಯಗಳಿಂದ ಬೆಂಬಲ ಸಿಗುತ್ತಿದ್ದರೂ, ಈ ಭಾಗದ ನಾಲ್ಕು ಪ್ರಮುಖ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎರಡೂ ಪಕ್ಷಗಳು ಪ್ರಭಾವಿ ಲಿಂಗಾಯತ ಮುಖಂಡರನ್ನು ಕಣಕ್ಕಿಳಿಸಲು ಮುಂದಾಗಿವೆ.   ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಬಹುತೇಕ ಹಾಲಿ ವಿಧಾನ ಪರಿಷತ್ ಸದಸ್ಯರು ಲಿಂಗಾಯತ ಸಮುದಾಯದವರಾಗಿದ್ದಾರೆ. ಬೆಳಗಾವಿ/ಚಿಕ್ಕೋಡಿ, ಹುಬ್ಬಳ್ಳಿ-ಧಾರವಾಡ-ಗದಗ-ಹಾವೇರಿ, ವಿಜಯಪುರ-ಬಾಗಲಕೋಟ ಮತ್ತು ಕಲಬುರ್ಗಿ ಮತ್ತು ಯಾದಗಿರಿಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಬಹುತೇಕ ಹಾಲಿ ಎಂಎಲ್‌ಸಿಗಳು …

Read More »