Breaking News

ರಾಷ್ಟ್ರೀಯ

ರಾಕಸಕೊಪ್ಪ ಜಲಾಶಯದ ನೀರು ಹೊರಕ್ಕೆ

ಬೆಳಗಾವಿ: ತಾಲ್ಲೂಕಿನ ರಾಕಸಕೊಪ್ಪ ಜಲಾಶಯ ಭರ್ತಿಯಾಗಲು ಒಂದು ಅಡಿ ಮಾತ್ರ ಬಾಕಿ ಉಳಿದಿದೆ. ಹಾಗಾಗಿ, ಶುಕ್ರವಾರದಿಂದಲೇ ಎರಡು ಕ್ರಸ್ಟ್‌ಗೇಟ್‌ಗಳನ್ನು ತೆರೆದು ಆರು ಇಂಚು ಅಂತರದಿಂದ ನೀರು ಹೊರ ಹರಿಸಲಾಗುತ್ತಿದೆ. ಪಶ್ಚಿಮ ಘಟ್ಟ ಪ್ರದೇಶ ಮತ್ತು ಮಾರ್ಕೆಂಡೇಯ ನದಿಯ ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಮಾರ್ಕೆಂಡೇಯ ನದಿಗೆ ಕಟ್ಟಿರುವ ರಾಕಸಕೊಪ್ಪ ಅಣೆಕಟ್ಟೆ ಈ ಬಾರಿ ವಾಡಿಕೆಗಿಂತ ಮುಂಚಿತವಾಗಿಯೇ ಭರ್ತಿಯಾಗಿದೆ. ಜಲಾಶಯದ ಕೆಳಹಂತದ ಗ್ರಾಮಗಳ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು …

Read More »

ಗೋಕಾಕ- ಶಿಂಗಳಾಪುರ ಸೇತುವೆ ಮುಳುಗಡೆ

ಗೋಕಾಕ: ಘಟಪ್ರಭಾ ನದಿಯ ಹಿನ್ನೀರಿನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದಲ್ಲಿ ಏರಿಕೆ ಉಂಟಾಗುತ್ತಿರುವ ಪರಿಣಾಮ ಗೋಕಾಕ-ಶಿಂಗಳಾಪುರ ಸೇತುವೆ ಶುಕ್ರವಾರ ಸಂಜೆ ಪ್ರವಾಹದಲ್ಲಿ ಮುಳುಗಡೆ ಆಗಿದೆ. ಬ್ರಿಜ್‌ ಕಂ ಬ್ಯಾರೇಜ್ ಪ್ರವಾಹದಲ್ಲಿ ಮುಳುಗಿದ್ದರಿಂದ ಶಿಂಗಳಾಪುರ ಮತ್ತು ಟಕ್ಕೆ ನಿವಾಸಿಗಳು ಅಪಾಯವನ್ನೂ ಲೆಕ್ಕಿಸದೇ ಪ್ರವಾಹದ ಮಧ್ಯೆಯೇ ಸೇತುವೆ ದಾಟುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ ಮೋಹನ ಭಸ್ಮೆ ಸ್ಥಳಕ್ಕೆ ಭೇಟಿ ನೀಡಿದರು. ಪೊಲೀಸ್ ಬಂದೋಬಸ್ತ್‌ ಕಲ್ಪಿಸಲು ಗೋಕಾಕ ಶಹರ ಮತ್ತು …

Read More »

ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿದ್ದು ನಿಜ

ಬೆಂಗಳೂರು, ಜುಲೈ20: ವಾಲ್ಮೀಕಿ ನಿಗಮದಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ನಾವು ಹೇಳುತ್ತಿಲ್ಲ. ಅಕ್ರಮ ಎಸಗಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಾಲ್ಮಿಕಿ ನಿಗಮದಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರದ ಬಗ್ಗೆ ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಎಸ್‌ಐಟಿ ತನಿಖೆಯಲ್ಲಿ ಸರ್ಕಾರಕ್ಕೆ ಸಂಪೂರ್ಣ ಭರವಸೆಯಿದೆ. ರಾಜ್ಯ ಸರ್ಕಾರಕ್ಕೆ ಹಾಗೂ ತನಗೆ ಮಸಿ ಬಳಿಯುವ …

Read More »

ಗಂಧದ ಮರ ಕಡಿದರೆ 5 ವರ್ಷ ಜೈಲು ಶಿಕ್ಷೆ

ಬೆಂಗಳೂರು : ಗಂಧದ ಮರ ಕಡಿದ ವ್ಯಕ್ತಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಗಂಧದ ಮರ ಕಡಿದು ಕಳುವು ಮಾಡಲು ಯತ್ನಿಸಿದ ಆರೋಪಿಗೆ 10 ಸಾವಿರ ದಂಡ ವಿಧಿಸಿದ್ದ ಹೈಕೋರ್ಟ್ ದಂಡದ ಮೊತ್ತವನ್ನು 50 ಸಾವಿರಕ್ಕೆ ಹೆಚ್ಚಿಸಿ 5 ವರ್ಷ ಶಿಕ್ಷೆ ಖಾಯಂಗೊಳಿಸಿದೆ.   ಮಂಡ್ಯ ಜಿಲ್ಲೆಯ ಬಲ್ಲೇನಹಳ್ಳಿ ಗ್ರಾಮದ ದೇವಾರಾಜಾಚಾರಿ ಎಂಬುವವರಿಗೆ ಈ ಶಿಕ್ಷೆನೀಡಲಾಗಿದೆ. ಸೆಕ್ಷನ್ …

Read More »

ಏರ್ ಲೈನ್ಸ್, ಬ್ಯಾಂಕಿಂಗ್ ಗೂ ತಟ್ಟಿದ ಮೈಕ್ರೋಸಾಫ್ಟ್ ತಾಂತ್ರಿಕ ಸಮಸ್ಯೆ!

ಮೈಕ್ರೋಸಾಫ್ಟ್ ತಾಂತ್ರಿಕ ಸಮಸ್ಯೆ ಏರ್ ಲೈನ್ಸ್, ಬ್ಯಾಂಕಿಂಗ್ ಸೇರಿದಂತೆ ಭಾರತದಲ್ಲಿ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಹೊಸ ಕ್ರೌಡ್‌ಸ್ಟ್ರೈಕ್ (ಸೈಬರ್ ಸೆಕ್ಯುರಿಟಿ ಸಾಫ್ಟ್‌ವೇರ್ ಸಂಸ್ಥೆ) ಅಪ್‌ಡೇಟ್ ಸ್ಥಗಿತಕ್ಕೆ ಕಾರಣ ಎಂದು ಉಲ್ಲೇಖಿಸಲಾಗಿದೆ. ಏರ್ ಲೈನ್ಸ್ ಮೇಲೆ ಪರಿಣಾಮ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಮೈಕ್ರೋಸಾಫ್ಟ್ ತಾಂತ್ರಿಕ ಸಮಸ್ಯೆ ತಟ್ಟಿದ್ದು ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಉಂಟಾಗಿದೆ. ಚೆಕ್ ಇನ್, ಬೋರ್ಡಿಂಗ್ ಗಳಲ್ಲಿ ವಿಳಂಬ ಉಂಟಾಗಿ, ಹಲವು …

Read More »

ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ವಿಶೇಷ ರೈಲು ಸಂಚಾರ

ಬೆಂಗಳೂರು: ಗುಡ್ಡ ಕುಸಿತದಿಂದಾಗಿ ಬೆಂಗಳೂರು-ಮಂಗಳೂರು ಸಂಪರ್ಕಿಸುವ ಎರಡು ಮುಖ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಸ್ ಸಂಚಾರ ವ್ಯತ್ಯಯವಾಗಿರುವ ಹಿನ್ನಲೆ, ಜನರ ಅನುಕೂಲಕ್ಕಾಗಿ ಎರಡು ಹೆಚ್ಚುವರಿ ವಿಶೇಷ ರೈಲು ಸಂಚಾರ ಆರಂಭಿಸಲು ನೈಋತ್ಯ ರೈಲ್ವೆ ಮುಂದಾಗಿದೆ. ರೈಲು ಸಂಖ್ಯೆ 06547 ಜುಲೈ 19 ರಂದು ರಾತ್ರಿ 11 ಗಂಟೆಗೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 11:40 ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಈ ರೈಲು ಬೆಂಗಳೂರು ಕಂಟೋನ್ಮೆಂಟ್, ಎಸ್‌ಎಂವಿಟಿ ಬೆಂಗಳೂರು, ಚಿಕ್ಕಬಾಣಾವರ, ನೆಲಮಂಗಲ, …

Read More »

ಜಲಾಶಯ ಭರ್ತಿಗೆ ಕೆಲವೇ ಅಡಿ ಬಾಕಿ,

ಬೆಂಗಳೂರು, ಜುಲೈ 19: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ 10 ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಉಪನದಿಗಳು ಅವುಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯಗಳಲ್ಲಿ ಅತ್ಯಧಿಕ ನೀರು ಸಂಗ್ರಹವಾಗಿದೆ. ಈ ಪೈಕಿ ಹೇಮಾವತಿ ಜಲಾಶಯದಲ್ಲೂ ಸಹ ಅತ್ಯಧಿಕ ಒಳಹರಿವು ದಾಖಲಾಗಿದೆ. ಇಂದು ಜುಲೈ 19ರಂದು ನೀರಿನ ಸಂಗ್ರಹ ಮಟ್ಟ ಎಷ್ಟಿದೆ, ಅಪ್ಡೇಟ್ ಮಾಹಿತಿ ಇಲ್ಲಿದೆ. ಹೇಮಾವತಿ ನದಿಯು ಕಾವೇರಿ ಉಪನದಿಗಳಲ್ಲಿ ಒಂದಾಗಿದೆ. ಈ ನದಿಗೆ ಹಾಸನ ಜಿಲ್ಲೆಯ ಗೂರೂರು …

Read More »

ಮೈಕ್ರೋಸಾಫ್ಟ್‌ ತಾಂತ್ರಿಕ ದೋಷ.ಜಾಗತಿಕವಾಗಿ ಬಳಕೆದಾರರ ಪರದಾಟ

ಮೈಕ್ರೋಸಾಫ್ಟ್‌ ತಾಂತ್ರಿಕ ದೋಷ.ಜಾಗತಿಕವಾಗಿ ಬಳಕೆದಾರರ ಪರದಾಟ ನವದೆಹಲಿ: ಸಾಫ್ಟ್‌ ವೇರ್‌ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್‌ ವಿಂಡೋಸ್‌ ನಲ್ಲಿ ತಾಂತ್ರಿಕ ದೋಷ ( Technical Issues) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ (ಜುಲೈ 19) ಭಾರತ ಸೇರಿದಂತೆ ಜಾಗತಿಕವಾಗಿ ಮೈಕ್ರೋಸಾಫ್ಟ್‌ ಬಳಕೆದಾರರು ಪರದಾಡುವಂತಾಗಿತ್ತು. ಭಾರತದಲ್ಲಿ ವಿಸ್ತಾರ, ಇಂಡಿಗೋ, ಸ್ಪೈಸ್‌ ಜೆಟ್‌ ಮತ್ತು ಅಕ್ಸಾ ವಿಮಾನ ಸಂಸ್ಥೆಗಳು ಟಿಕೆಟ್‌ ಬುಕ್ಕಿಂಗ್‌, ಚೆಕ್‌ ಇನ್‌ ಸೇರಿದಂತೆ ಹಲವು ತಾಂತ್ರಿಕ ದೋಷಗಳನ್ನು ಎದುರಿಸಿದ್ದು, ಏರ್‌ ಲೈನ್ಸ್‌ ಸದ್ಯ ಪ್ರಯಾಣಿಕರನ್ನು …

Read More »

ನನ್ನ ಮದುವೆಗೂ ಮುನ್ನ ದರ್ಶನ್ ಜೈಲಿನಿಂದ ರಿಲೀಸ್ ಆಗ್ತಾರೆ : ನಿರ್ದೇಶಕ ತರುಣ್ ಸುಧೀರ್ ಹೇಳಿಕೆ

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಭೇಟಿ ಮಾಡಲು ಇಂದು ನಿರ್ದೇಶಕ ತರುಣ್ ಸುಧೀರ್ ಜೈಲಿಗೆ ಆಗಮಿಸಿದ್ದರು. ಈ ವೇಳೆ ನಟ ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು ನನ್ನ ಮದುವೆ ವಿಷಯ ದರ್ಶನ್ ಅವರಿಗೆ ಮೊದಲೇ ಗೊತ್ತಿತ್ತು. ಹಾಗಾಗಿ ನನ್ನ ಮದುವೆ ಅಸ್ಟೊತ್ತಿಗೆ ದರ್ಶನ್ ಜೈಲಿನಿಂದ ರಿಲೀಸ್ ಆಗುತ್ತಾರೆ ಎಂದು ತಿಳಿಸಿದರು. ರೇಣುಕಾ …

Read More »

FASTAG ಮುಂಭಾಗದಲ್ಲಿಇಲ್ಲದಿದ್ದರೆ ಡಬಲ್‌ ಟೋಲ್‌!

ಹೊಸದಿಲ್ಲಿ: ಉದ್ದೇಶಪೂರ್ವಕವಾಗಿ ವಾಹನದ ಮುಂದಿನ ಗಾಜಿಗೆ ಫಾಸ್ಟಾಗ್‌ ಅಂಟಿಸದೇ ಇರುವವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHIA), ದುಪ್ಪಟ್ಟು ಟೋಲ್‌ ವಿಧಿಸಲು ಮುಂದಾಗಿದೆ. ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿರುವ ಎನ್‌ಎಚ್‌ಐಎ, ಫಾಸ್ಟಾಗ್‌ ಅಂಟಿಸದಿರುವುದರಿಂದ ಟೋಲ್‌ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬವಾ ಗುತ್ತಿದೆ. ಇದನ್ನು ತಡೆಯಲು ದುಪ್ಪಟ್ಟು ಶುಲ್ಕ ವಿಧಿಸಬೇಕು ಎಂದು ಸೂಚಿಸಿದೆ. ಫಾಸ್ಟಾಗ್‌ ನಿಯಮಗಳನ್ನು ಪಾಲಿಸ ದಿದ್ದರೆ ವಿಧಿಸಲಾಗುವ ದಂಡಗಳ ಕುರಿತು ಟೋಲ್‌ ಪ್ಲಾಜಾಗಳಲ್ಲಿ ಎಲ್ಲರಿಗೂ ಕಾಣಿಸುವಂತೆ ಮಾಹಿತಿ ಪ್ರದರ್ಶಿಸಬೇಕು. ಫಾಸ್ಟಾಗ್‌ ಇಲ್ಲದ …

Read More »