Breaking News

ರಾಷ್ಟ್ರೀಯ

ಬೋನಸ್ ನೀಡದ್ದಕ್ಕೆ ಗ್ರಾಮ ಪಂಚಾಯಿತಿಗೆ ಚಪ್ಪಲಿ ಹಾರ

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮ ಪಂಚಾಯಿತಿಗೆ ಗಾಂಧಿ ಜಯಂತಿಯಂದೇ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಗಾಂಧಿ ಜಯಂತಿ ಆಚರಣೆ ಮಾಡಿ ಕಚೇರಿಗೆ ಬಾಗಿಲು ಹಾಕಿ ಹೋಗಲಾಗಿತ್ತು. ಸಿಬ್ಬಂದಿ ಮನೆಗೆ ಹೋದ ನಂತರ ಈ ಕೃತ್ಯ ಎಸಗಲಾಗಿದೆ. ಈ ಬಗ್ಗೆ ದೇವನಹಳ್ಳಿ ತಾಲೂಕು ಪಂಚಾಯಿತಿ ಇಒ ವಸಂತ್ ಕುಮಾರ್ ಸೂಚನೆ ಮೇರೆಗೆ ಪಿಡಿಒ ಶಿವರಾಜ್ ವಿಜಯಪುರ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ. ಪ್ರತಿ ವರ್ಷ ದಸರಾ …

Read More »

ಈ ವರ್ಷವೇ ಸುವರ್ಣಸೌಧದಲ್ಲಿ ಚನ್ನಮ್ಮ, ರಾಯಣ್ಣ ಪ್ರತಿಮೆ ಸ್ಥಾಪನೆ: ಬೊಮ್ಮಾಯಿ

  ಬೆಂಗಳೂರು: ‘ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 50 ಕೋಟಿ ಅನುದಾನ ಒದಗಿಸಲಾಗಿದ್ದು, ಇದೇ ವರ್ಷ ಬೆಳಗಾವಿಯ ಸುವರ್ಣಸೌಧದಲ್ಲಿ ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.   ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಕಿತ್ತೂರು ಚನ್ನಮ್ಮಾಜಿ ವಿಜಯ ಜ್ಯೋತಿ ಯಾತ್ರೆ’ಗೆ ಚಾಲನೆ ನೀಡಿ, ಮಾತನಾಡಿದರು. ‘ಕಿತ್ತೂರು ಉತ್ಸವ …

Read More »

ಬಿಸಿಯೂಟ ವೆಚ್ಚ ಶೇ.9.6 ಹೆಚ್ಚಳ; 2 ವರ್ಷಗಳ ಬಳಿಕ ಕೇಂದ್ರದ ಕ್ರಮ

ನವದೆಹಲಿ: ಎರಡು ವರ್ಷಗಳ ನಂತರ ಕೇಂದ್ರ ಸರ್ಕಾರ ಮಧ್ಯಾಹ್ನದ ಬಿಸಿಯೂಟ ವೆಚ್ಚವನ್ನು ಪ್ರತಿ ಮಗುವಿಗೆ ಶೇ. 9.6ರಷ್ಟು ಹೆಚ್ಚಳ ಮಾಡಿದೆ. ಬಿಸಿಯೂಟಕ್ಕೆ ಸಂಬಂಧಿಸಿದ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೇಂದ್ರ ಹಣಕಾಸು ಇಲಾಖೆ ಇದಕ್ಕೆ ಅನುಮೋದನೆ ನೀಡಿದೆ. ಈ ವೆಚ್ಚ ಹೆಚ್ಚಳವೂ ಹಾಲಿ ತಿಂಗಳಿನಿಂದಲೇ ಜಾರಿಗೆ ಬರಲಿದೆ. ತರಕಾರಿ, ಬೇಳೆಕಾಳುಗಳು ಸೇರಿದಂತೆ ಅಡುಗೆ ಅನಿಲ ದರ ಹೆಚ್ಚಳದ ಹಿನ್ನೆಲೆಯಲ್ಲಿ ಬಿಸಿಯೂಟದ ವೆಚ್ಚವನ್ನು ಹೆಚ್ಚಿಸಬೇಕೆಂದು ಶಾಲಾ ಅಭಿವೃದ್ಧಿ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರು ಮನವಿ …

Read More »

7 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಕ್ರಮ: C.M. ಬೊಮ್ಮಾಯಿ

ಬೆಂಗಳೂರು: ‘ಏಳು ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಬಾಕಿಯಿದ್ದು ಶೀಘ್ರವೇ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.   ನಗರದಲ್ಲಿ ಭಾನುವಾರ ಗಾಂಧಿ ಸ್ಮಾರಕ ನಿಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಡಾ.ಸಿ.ಆರ್‌.ಚಂದ್ರಶೇಖರ್‌ ಅವರಿಗೆ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು. ’23 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ. ಜಾಗದ ಸಮಸ್ಯೆಯ ಕಾರಣಕ್ಕೆ ಕೆಲವು ಜಿಲ್ಲೆಗಳಲ್ಲಿ …

Read More »

194 ಕೋಟಿ ರೂ. ವೆಚ್ಚದ ಕೌಜಲಗಿ ಭಾಗದ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿ ರೈತರಿಗೆ ವರದಾನ : ಶಾಸಕ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ಕೌಜಲಗಿ ಭಾಗದ ರೈತರ ಬಹು ವರ್ಷಗಳ ಬೇಡಿಕೆಯಾಗಿರುವ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದ್ದು, ರೈತರ ಎಫ್.ಐ.ಸಿ ಕಾಮಗಾರಿಗೆ 32 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಚಿಕ್ಕ ನೀರಾವರಿ ಇಲಾಖೆಯಿಂದ 162 ಕೋಟಿ ರೂ. ಮೊತ್ತದ ಕಲ್ಮಡ್ಡಿ ಏತ ನೀರಾವರಿ ಯೋಜನೆಯ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದೆ. ರೈತರ ಜಮೀನುಗಳಿಗೆ ಹೊಲಗಾಲುವೆ ಮೂಲಕ ನೀರು …

Read More »

ಇಂದು ಗಾಂಧಿ ಜಯಂತಿ; ಸೇವಾಕಾರ್ಯಕ್ಕೆ ಗಾಂಧೀಜಿ ಪ್ರೇರಣೆ

ಬೆಳಗೆರೆ ಕೃಷ್ಣಶಾಸ್ತ್ರಿಗಳು ಮೊದಲಿನಿಂದ ಗಾಂಧೀಜಿಯವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು. 1936ರಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಭೇಟಿ ಕೊಟ್ಟಾಗ ಬೆಳಗೆರೆ ಕೃಷ್ಣಶಾಸ್ತ್ರಿಗಳು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದರು. ಮೋಹನದಾಸ ಕರಮಚಂದ್‌ ಗಾಂಧಿ, ಜನಸಾ ಮಾನ್ಯರ “ಬಾಪು’ (ತಂದೆ), ಮಹಾತ್ಮಾ, ಹುಟ್ಟಿ ಇಂದಿಗೆ 153 ವರ್ಷಗಳಾಗಿವೆ. “ಮೋಹನ’ ಎಂದರೆ ಮನಸ್ಸನ್ನು ಆಕರ್ಷಿಸುವುದು ಎಂದರ್ಥ. ನಿಜವಾಗಿ, ಮೋಹನ ದಾಸ ಕರಮಚಂದ್‌ ಗಾಂಧಿಯವರ ಆಕರ್ಷಣೆಗೆ ಒಳಗಾಗದವರೇ ಇಲ್ಲ. “ಗಾಂಧಿ ಒಬ್ಬ ವ್ಯಕ್ತಿ ಅಲ್ಲ, ಒಂದು ಪಂಥ ಎನ್ನುವುದು ಅಂದಿನ ದಿನಗಳಲ್ಲಿ ಕೇಳಿ ಬರುತ್ತಿದ್ದ …

Read More »

ಜೈ ಜವಾನ್‌, ಜೈ ಕಿಸಾನ್‌ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರಿಗೊಂದು ಸಲಾಂ

ದೇಶದ ಎರಡನೇ ಪ್ರಧಾನಿ, ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೋರಾಟ ನಡೆಸಿದ ಮತ್ತು ಬಡವರ ಏಳಿಗೆಗಾಗಿ ಸರ್ವಥಾ ಶ್ರಮಿಸಿದ, 1965ರ ಇಂಡೋ-ಪಾಕಿಸ್ಥಾನ ಯುದ್ಧದಲ್ಲಿ ಸೇನೆಯನ್ನು ಹುರಿದುಂಬಿಸಿ ಭಾರತ ಗೆಲ್ಲುವಂತೆ ಮಾಡಿದ ಮಹಾನ್‌ ನಾಯಕರಿವರು. 1964ರಿಂದ 1966ರ ವರೆಗೆ ಪ್ರಧಾನಿ ಹುದ್ದೆಯಲ್ಲಿದ್ದ ಇವರು, ದೇಶದ ಏಳಿಗೆಗಾಗಿ ನೀಡಿದ ಕೊಡುಗೆಗಳು ನೂರಾರು. ಇಂದು ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಜನ್ಮದಿನ. ತನ್ನಿಮಿತ್ತವಾಗಿ ಅವರ ಕುರಿತ ವಿಶೇಷ ಸಂಗತಿಗಳು ಇವು… 1904, ಅಕ್ಟೋಬರ್‌ 2 ಇದು …

Read More »

ಸಂಕನೂರು ಹಳ್ಳದಲ್ಲಿ ಕೊಚ್ಚಿಹೋದ ನಾಲ್ವರು ಮಹಿಳೆಯರು

ಕೊಪ್ಪಳ: ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಹಳ್ಳದಲ್ಲಿ ಕೊಚ್ಚಿ ಹೋದವರನ್ನು ಸಂಕನೂರು ಗ್ರಾಮದ ಗಿರಿಜಾ ಕಲ್ಲನಗೌಡ ಮಾಲಿ ಪಾಟೀಲ್ (32), ಭುವನೇಶ್ವರಿ ಶಾಂತವೀರಯ್ಯ ಪೊಲೀಸ್ ಪಾಟೀಲ್ (40) ಪವಿತ್ರಾ ಸಿದ್ದಯ್ಯ ಪೊಲೀಸ್ ಪಾಟೀಲ್(45) ವೀಣಾ ಬಸವರಾಜ ಮಾಲಿ ಪಾಟೀಲ್(19) ಕೊಚ್ಚಿ ಹೋಗಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಿದ್ದಾರೆ.   ಈ ಮಹಿಳೆಯರು ಗ್ರಾಮ ಸಮೀಪದಲ್ಲಿನ ಸೀಡ್ಸ್ ಕಂಪನಿಯಲ್ಲಿ ಹತ್ತಿ ಬೀಜ …

Read More »

ನಾನು ಬ್ಲ್ಯಾಕ್‌ ಇದ್ದೇನೆ, ಆದ್ರೆ ಬ್ಲ್ಯಾಕ್‌ ಮೇಲರ್ ಅಲ್ಲ:H.D.K.

ರಾಮನಗರ: ನಾನು ಬ್ಲ್ಯಾಕ್‌ ಇದ್ದೇನೆ, ಆದರೆ ಬ್ಲ್ಯಾಕ್‌ ಮೇಲರ್ (Blackmail) ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD KumaraSwamy) ತಿಳಿಸಿದ್ದಾರೆ. ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (CP Yogeshwar) ಕಾರಿಗೆ ಜೆಡಿಎಸ್ (JDS) ಕಾರ್ಯಕರ್ತರಿಂದು ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದರು. ಚನ್ನಪಟ್ಟಣದ ಭೈರಾಪಟ್ಟಣ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ನಾನು ಬ್ಲ್ಯಾಕ್‌ ಇದ್ದೇನೆ, ಆದರೆ ಬ್ಲ್ಯಾಕ್‌ ಮೇಲರ್ …

Read More »

ಯುವ ದಸರಾ’ದಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರ ಸಂಗಮ

ಮೈಸೂರು: ಮಳೆ ನಿಂತ ಮೇಲೆ ನಿರ್ಮಾಣವಾಗಿದ್ದ ತಂಪಾದ ವಾತಾವರಣದಲ್ಲಿ ಮೂಡಿ ಬಂದ ವರ್ಣರಂಜಿತ ‘ಸ್ಯಾಂಡಲ್‌ವುಡ್‌ ನೈಟ್‌’ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ರಂಗದ ನಟ-ನಟಿಯರು ಡೈಲಾಗ್, ಹಾಡು ಮತ್ತು ನೃತ್ಯದ ಮೂಲಕ ರಂಜಿಸಿದರು.   ಹೊರಗೆ ಮಳೆಯಾಗುತ್ತಿದ್ದರೆ, ಒಳಗೆ ರಂಜನೆಯ ಸುರಿಮಳೆ ಜೋರಾಗಿಯೇ ಸುರಿಯಿತು. ಯುವ ದಸರಾ ಉಪ ಸಮಿತಿಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ರಾತ್ರಿ ನಡೆದ ಯುವ ದಸರಾದಲ್ಲಿ ನಟ-ನಟಿಯರು ಸರಣಿ ಕಾರ್ಯಕ್ರಮ ನೀಡಿ ರಂಜಿಸಿದರು. ಆಗಾಗ ಪುನೀತ್‌ ರಾಜ್‌ಕುಮಾರ್‌ …

Read More »