Breaking News

ರಾಷ್ಟ್ರೀಯ

ಲಂಡನ್​ನಲ್ಲಿ ಬಸವೇಶ್ವರ ಪ್ರತಿಮೆಗೆ ಯು.ಟಿ.ಖಾದರ್​, ಬಸವರಾಜ ಹೊರಟ್ಟಿ ನಮನ

ಲಂಡನ್​: ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಅವರು ಲಂಡನ್​ಗೆ ಭೇಟಿ ನೀಡಿದ್ದು, ಭಾನುವಾರ ಲ್ಯಾಂಬೆತ್ ನಗರದ ಥೇಮ್ಸ್ ನದಿ ದಂಡೆ ಮೇಲಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.   ಲ್ಯಾಂಬೆತ್‌ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರು ಖಾದರ್ ಹಾಗೂ ಹೊರಟ್ಟಿ ಅವರನ್ನು ಸ್ವಾಗತಿಸಿದರು. ಖಾದರ್​ ಬಸವಣ್ಣನವರ ಪ್ರತಿಮೆಗೆ ವಿಭೂತಿ ಹಚ್ಚಿದರು. ಈ ಸಂದರ್ಭದಲ್ಲಿ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ …

Read More »

‘ಬರ’ ಸಿಡಿಲು: ಬೆಳೆ ಸಂರಕ್ಷಣೆಗೆ ಟ್ಯಾಂಕರ್‌ ನೀರಿನ ಮೊರೆ ಹೋದ ರೈತರು

ಕೊಪ್ಪಳ: ಕೊಪ್ಪಳ ಜಿಲ್ಲೆಯಾದ್ಯಂತ ಸಕಾಲಕ್ಕೆ ಮಳೆಯಾಗದೇ ಬರ ತಾಂಡವವಾಡುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಅಲ್ಪಸ್ವಲ್ಪ ತೇವಾಂಶದಿಂದ ಜೀವ ಹಿಡಿದುಕೊಂಡಿದ್ದ ಬೆಳೆಗಳು ಒಣಗುತ್ತಿವೆ. ಅಳಿದುಳಿದಿರುವ ಈ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಮಾಡುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರು: ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ, ಯರೇಹಂಚಿನಾಳ, ಸೊಂಪುರ ಸೇರಿದಂತೆ ವಿವಿಧ ಗ್ರಾಮದಲ್ಲಿ ರೈತರು ಬೆಳೆ ಸಂರಕ್ಷಿಸಲು ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರುಣಿಸುವುದು ಸರಳ ಕೆಲಸವಲ್ಲ. ಹೀಗಿದ್ದರೂ ಇರುವ ಒಂದಿಷ್ಟು ಬೆಳೆಯನ್ನಾದರೂ ಉಳಿಸಿಕೊಳ್ಳೋಣ ಎಂದು …

Read More »

ಇಂಗಳಿ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ 29 ಲಕ್ಷ ಅನುದಾನ?:ಶಶಿಕಲಾ ಜೊಲ್ಲೆ

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮ ದೇವರು ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ವಿಶೇಷ ಪ್ರಯತ್ನದಿಂದ ರೂ. 29 ಲಕ್ಷ ಅನುದಾನದ ಅಭಿವೃದ್ಧಿ ಕಾಮಗಾರಿಗೆ ಗ್ರಾಮದ ಬಿಜೆಪಿ ಕಾರ್ಯಕರ್ತರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮೊದಲಿಗೆ ಶ್ರೀ ಬೀರೇಶ್ವರ ಸಹಕಾರಿ ಇಂಗಳಿ ಶಾಖೆಯ ನಿರ್ದೇಶಕ ಪ್ರಕಾಶ ಮಿರ್ಜಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಂಕರ ಪವಾರ ಮಾತನಾಡಿ, …

Read More »

ರಾಶಿ ಭವಿಷ್ಯ ನಿಮ್ಮ ಪರಿಶ್ರಮಕ್ಕೆ ಫಲ ಸಿಗುವ ಶುಭ ದಿನ

ಮೇಷ: ಈ ವಾರದಲ್ಲಿ ವ್ಯವಹಾರದಲ್ಲಿ ಸಾಕಷ್ಟು ಸಕ್ರಿಯರಾಗಲಿದ್ದೀರಿ. ದೂರದ ಊರುಗಳಿಗೆ ಪ್ರಯಾಣಿಸಲು, ಹೊಸ ವ್ಯಕ್ತಿಗಳನ್ನು ಸಂಪರ್ಕಿಸಲು ಮತ್ತು ಹಳೆಯ ಸಂಬಂಧಗಳನ್ನು ಪರಿಶೋಧಿಸಲು ನೀವು ಯತ್ನಿಸಲಿದ್ದು ನಿಮ್ಮ ವ್ಯವಹಾರಕ್ಕೆ ಒಳ್ಳೆಯ ಡೀಲ್‌ ಅಂತಿಮಗೊಳಿಸಲಿದ್ದೀರಿ. ಉದ್ಯೋಗಿಗಳು ಸಹ ತಮ್ಮ ಕೆಲಸದಲ್ಲಿ ನಿರತರಾಗಲಿದ್ದಾರೆ. ಕೆಲವು ಎದುರಾಳಿಗಳು ತಮ್ಮ ತಲೆ ಎತ್ತಬಹುದು. ಆದರೆ ನೀವು ತಾಳ್ಮೆಯಿಂದ ಇದ್ದು ನಿಮ್ಮ ವ್ಯವಹಾರಕ್ಕೆ ಮಾತ್ರವೇ ಗಮನ ನೀಡಬೇಕು. ಕಾಲ ಕಳೆದಂತೆ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವೈವಾಹಿಕ ಬದುಕಿನಲ್ಲಿ ಒತ್ತಡ ಕಾಣಿಸಿಕೊಳ್ಳಬಹುದು. …

Read More »

ದಾವಣಗೆರೆ: ಮತ್ತಿ ಗ್ರಾಮದಲ್ಲಿ ವಾಂತಿ – ಭೇದಿಯಿಂದ ಇಬ್ಬರ ಸಾವು

ದಾವಣಗೆರೆ: ತಾಲೂಕಿನ ಮತ್ತಿ ಗ್ರಾಮದ ಗ್ರಾಮಸ್ಥರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಒಂದೇ ವಾರದಲ್ಲಿ ಇಬ್ಬರು ವೃದ್ಧರು ವಾಂತಿಬೇಧಿಯಿಂದ ಸಾವನಪ್ಪಿದ್ದಾರೆ ಎಂಬ ಆರೋಪವನ್ನು ಇಲ್ಲಿನ ಗ್ರಾಮಸ್ಥರು ಮಾಡುತ್ತಿದ್ದಾರೆ. ವಾಂತಿ – ಭೇದಿಯಿಂದ ಕಳೆದ ಶನಿವಾರ ಮತ್ತು ಭಾನುವಾರ ಮತ್ತಿ ಗ್ರಾಮದ (80) ವರ್ಷದ ಶಾಂತಮ್ಮ ಹಾಗೂ (70) ವರ್ಷದ ಸೋಮಣ್ಣ ಎಂಬವರು ತೀವ್ರ ಅಸ್ವಸ್ಥರಾಗಿ ಕಡಿಮೆ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈಗಾಗಲೇ ಗ್ರಾಮದಲ್ಲಿ 30-40 ಜನ ವಾಂತಿ – ಭೇದಿಯಿಂದ …

Read More »

ಬಿಗ್​ ಬಾಸ್​ ಸೀಸನ್​ 10ರಲ್ಲಿ ಉರಗ ತಜ್ಞ ಸ್ನೇಕ್‌ ಶ್ಯಾಮ್‌ ಹಾವುಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

  ಅಭಿನಯ ಚಕ್ರವರ್ತಿ ಸುದೀಪ್​​ ನಡೆಸಿಕೊಡುವ ಜನಪ್ರಿಯ ಬಿಗ್​ ಬಾಸ್​ ಸೀಸನ್​ 10 ನಾನಾ ವಿಷಯಗಳಿಂದ ಸದ್ದು ಮಾಡುತ್ತಿದೆ. ಸಾವಿರಾರು ಹಾವುಗಳನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ರವಾನಿಸಿರುವ ಸ್ನೇಕ್‌ ಶ್ಯಾಮ್‌ ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ‘ಅಸಮರ್ಥ’ರ ಗುಂಪಿನಲ್ಲಿರುವ ಸ್ಪರ್ಧಿ. ಆದ್ರೆ ಪ್ರಾಣಿಪ್ರಪಂಚದ, ಅದರಲ್ಲಿಯೂ ಹಾವುಗಳ ಕುರಿತಾದ ಜ್ಞಾನದಲ್ಲಿ ಅವರೆಂಥ ಸಮರ್ಥರು ಎಂಬುದನ್ನು ತಿಳಿದುಕೊಳ್ಳಬೇಕಾದರೆ ‘JioCinema’ದಲ್ಲಿ ಲಭ್ಯವಿರುವ ಬಿಗ್‌ ಬಾಸ್‌ ಕನ್ನಡದ ‘Live Shorts’ ಸೆಗ್ಮೆಂಟ್‌ನಲ್ಲಿರುವ ಈ ವಿಡಿಯೋ …

Read More »

40 ವರ್ಷಗಳ ನಂತರ ಭಾರತ – ಶ್ರೀಲಂಕಾ ನಡುವೆ ಪ್ರಯಾಣಿಕರ ಹೈಸ್ಪೀಡ್ ದೋಣಿ ಶುರು

ಚೆನ್ನೈ (ತಮಿಳುನಾಡು): ತಮಿಳುನಾಡಿನ ನಾಗಪಟ್ಟಣಂ ಹಾಗೂ ಶ್ರೀಲಂಕಾದ ಕಂಕಸಂತುರೈ ನಡುವಿನ ಪ್ರಯಾಣಿಕರ ಹೈಸ್ಪೀಡ್ ದೋಣಿ ಸೇವೆ 40 ವರ್ಷಗಳ ನಂತರ ಪುನರಾರಂಭಗೊಂಡಿದೆ. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್, ತಮಿಳುನಾಡು ಲೋಕೋಪಯೋಗಿ ಮತ್ತು ಬಂದರು ಸಚಿವ ಇ.ವಿ. ವೇಲು ಶನಿವಾರ ನಾಗಪಟ್ಟಣಂ ಬಂದರಿನಿಂದ ದೋಣಿ ಸೇವೆಗೆ ಚಾಲನೆ ನೀಡಿದರು. ತಮಿಳುನಾಡು ಮತ್ತು ಶ್ರೀಲಂಕಾದ ಉತ್ತರ ಪ್ರಾಂತ್ಯದ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಈ ದೋಣಿ ಸೇವೆಯ ಕಾರ್ಯಾಚರಣೆ ಹೆಚ್ಚಿಸುತ್ತದೆ. …

Read More »

ವಿದ್ಯುತ್​ ತಂತಿ ಸ್ಪರ್ಶಿಸಿ ಬೆಳಗಾವಿಯ ಭಾಗ್ಯನಗರದ 10ನೇ ಕ್ರಾಸ್​ನಲ್ಲಿ ಬಾಲಕ ಸಾವು

ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೋರ್ವ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿಯ ಭಾಗ್ಯನಗರದ 10ನೇ ಕ್ರಾಸ್​ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಉತ್ತರ ಪ್ರದೇಶ ಮೂಲದ ಕುಟುಂಬದ 14 ವರ್ಷದ ರಜತ್ ಗೌರವ ಮೃತ ಬಾಲಕ. ಕಾರು ತೊಳೆಯುತ್ತಿದ್ದ ವೇಳೆ ವಿದ್ಯುತ್​ ತಂತಿ ಸ್ಪರ್ಶಿಸಿ ಈ ಅವಘಡ ಸಂಭವಿಸಿದೆ. 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಜತ್ ಶಾಲೆಗೆ ರಜೆ ಇದ್ದ ಕಾರಣ, ಬೆಳಗ್ಗೆ ಮನೆ ಮನೆಗೆ ದಿನಪತ್ರಿಕೆ ಹಾಕುವ ಕೆಲಸ ಮಾಡುತ್ತಿದ್ದ. ಇಂದು …

Read More »

ಅರಣ್ಯ ಇಲಾಖೆಯಿಂದ ವೀಕ್ಷಕರ ಹುದ್ದೆಗೆ ನೇಮಕಾತಿ; ಅಕ್ಟೋಬರ್​ 26 ಅರ್ಜಿ ಸಲ್ಲಿಕೆಗೆ ಕಡೆಯ ದಿನ

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 13 ವೃತ್ತಗಳ ಹಂತದಲ್ಲಿ ಒಟ್ಟು 310 ಹುದ್ದೆಗಳ ಭರ್ತಿಗೆ ಅರ್ಜಿಗೆ ಆಹ್ವಾನಿಸಲಾಗಿದೆ. ರಾಜ್ಯ ಅರಣ್ಯ ಇಲಾಖೆಯಲ್ಲಿ ವಿವಿಧ ವೃತ್ತಗಳಲ್ಲಿ ಹಂತದಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 310 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 13 ವೃತ್ತಗಳ ಹಂತದಲ್ಲಿ ಈ ಹುದ್ದೆಗೆ ನೇಮಕಾತಿ ನಡೆಯಲಿದೆ. ಎಸ್​ಎಸ್​ಎಲ್​ಸಿ ಓದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕುರಿತು ನೇಮಕಾತಿ, …

Read More »

ಬಳ್ಳಾರಿ: ಕಾಲೇಜಿನಿಂದ ವಿದ್ಯಾರ್ಥಿನಿ ಅಪಹರಿಸಿ ಗ್ಯಾಂಗ್ ರೇಪ್

ಬಳ್ಳಾರಿ: ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ಬಳ್ಳಾರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಳ್ಳಾರಿ ಮಹಿಳಾ ಠಾಣೆಯಲ್ಲಿ ನಾಲ್ವರ ವಿರುದ್ಧ ಸಂತ್ರಸ್ತ ಯುವತಿಯ ತಂದೆ ದೂರು ದಾಖಲಿಸಿದ್ದಾರೆ. ಬಳ್ಳಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿ ನವೀನ್ ಎಂಬಾತನನ್ನು ಬಂಧಿಸಿ, ಉಳಿದವರಿಗಾಗಿ ಬಲೆ ಬೀಸಿದ್ದಾರೆ. ಸಂತ್ರಸ್ತ ಯುವತಿ ಬಳ್ಳಾರಿ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅಕ್ಟೋಬರ್ 11 ರಂದು ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ವೇಳೆ …

Read More »