Breaking News

ರಾಷ್ಟ್ರೀಯ

ಉನ್ನತ ಹುದ್ದೆಗಳನ್ನು ಅಲಕಂರಿಸಿರುವವರು ಅತ್ಯಂತ ಇತಿಮಿತಿಯಲ್ಲಿ ಮಾತನಾಡಬೇಕು: ಹೈಕೋರ್ಟ್

ಬೆಂಗಳೂರು: ಪ್ರಾದೇಶಿಕ ಭಾಷೆ ಮತ್ತು ರಾಜ್ಯ ಭಾಷೆಗಳಲ್ಲಿ ಶಿಕ್ಷಣ ಪಡೆಯುವವರು ಅಸಮರ್ಥರು ಎಂದು ಭಾವಿಸಬಾರದು. ಪ್ರಾದೇಶಿ ಭಾಷೆಯಲ್ಲಿ ಶಿಕ್ಷಣ ಪಡೆದವರೂ ಯಶಸ್ವಿಯಾಗಬಹುದು. ಆದರೆ, ಈ ಸಮಸ್ಯೆಗಳನ್ನು ಕಾನೂನು ಅಂಶಗಳಲ್ಲಿ ಪರಿಗಣಿಸಬೇಕು ಎಂದಿರುವ ಹೈಕೋರ್ಟ್, ಈ ವಿಚಾರದಲ್ಲಿ ಉನ್ನತ ಸ್ಥಾನದಲ್ಲಿರುವವರು ಇತಿಮಿತಿಯಲ್ಲಿ ಮಾತನಾಡಬೇಕು ಎಂದು ತಿಳಿಸಿದೆ. ಸಿಬಿಎಸ್ಸಿ ಮತ್ತು ಐಸಿಎಸ್ಸಿ ಮಂಡಳಿಗೆ ಪಠ್ಯ ಕ್ರಮಕ್ಕೆ ಕನ್ನಡ ಭಾಷೆ ಬೋಧನೆ ಕಡ್ಡಾಯ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಎಂಟು ಮಂದಿ ವಿದ್ಯಾರ್ಥಿಗಳ ಪೋಷಕರು ಹೈಕೋರ್ಟ್‌ಗೆ ಅರ್ಜಿ …

Read More »

ಕಲಬುರಗಿಯಲ್ಲಿ ಬೈಕ್​-ಲಾರಿ ಮುಖಾಮುಖಿ ಡಿಕ್ಕಿ: ನವವಿವಾಹಿತೆ ಸೇರಿ ನೇಪಾಳ ಮೂಲದ ಒಂದೇ ಕುಟುಂಬದ ಐವರ ಸಾವು

ಕಲಬುರಗಿ: ಅಫಜಲಪುರ ಮತ್ತು ಬಳ್ಳೂರಗಿ ನಡುವಿನ ರಸ್ತೆಯ ಹಳ್ಳೋರಿ ಕ್ರಾಸ್ ಬಳಿ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ನವವಿವಾಹಿತೆ ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.   ನೇಪಾಳ ದೇಶದ ಸುರಕೇತ ಮೂಲದ ಹಾಗೂ ಸದ್ಯ ನಾಲ್ಕು ವರ್ಷಗಳಿಂದ ಅಫಜಲಪುರ ಪಟ್ಟಣದಲ್ಲಿ ವಾಸವಾಗಿದ್ದ ರತನ್ (25), ಇವರ ಪತ್ನಿ ಅಸ್ಮಿತ್ (21), ಇವರ ಮಕ್ಕಳಾದ ಮಿಲನ್ (5), ಧರಕನ್ (2) ಹಾಗೂ ಅಸ್ಮಿತ್ ಅವರ …

Read More »

ರಾಜ್ಯದಲ್ಲಿ ದೀಪಾವಳಿ ಹಬ್ಬದ ಸಂಬಂಧ ಪಟಾಕಿ ಮಾರಾಟ: ಬಳಕೆ ಸಂಬಂಧ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವ ಸಮಯದಲ್ಲಿ ವಿವಿಧ ರೀತಿಯ ಪಟಾಕಿಗಳನ್ನು ಸ್ಫೋಟಿಸುವುದರಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯದಿಂದ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುವುದನ್ನು ತಡೆಗಟ್ಟಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.   ಪೌರಾಡಳಿತ ನಿರ್ದೇಶನಾಲಯ ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಮಹಾನಗರಪಾಲಿಕೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಶಬ್ದ ಮತ್ತು ವಾಯು ಮಾಲಿನ್ಯ ನಿಯಂತ್ರಿಸಲು ಸುಪ್ರೀಂ ಕೋರ್ಟ್ ಆದೇಶದನ್ವಯ ರಾಜ್ಯದ ಎಲ್ಲ ಮಹಾನಗರಪಾಲಿಕೆಗಳು, …

Read More »

ಭಾರತದ ಬಿರುಗಾಳಿ ಬೌಲಿಂಗ್​ಗೆ ಪತರುಗುಟ್ಟಿದ ಸಿಂಹಳೀಯರು ಟೀಂ ಇಂಡಿಯಾ ಭರ್ಜರಿ ಗೆಲುವು

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್​ ಶರ್ಮಾ ಬಳಗ ಗೆಲುವಿನ ಕೇಕೆ ಹಾಕಿದೆ. ಈ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ ಸತತ 7ನೇ ಜಯ ದಾಖಲಿಸಿದೆ. ಮುಂಬೈ (ಮಹಾರಾಷ್ಟ್ರ): ಶ್ರೀಲಂಕಾದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ರೋಹಿತ್​ ಶರ್ಮಾ ಪಡೆಯ ಬಿರುಗಾಳಿ ಬೌಲಿಂಗ್​ ದಾಳಿಗೆ ಸಿಂಹಳೀಯರು ಪತರುಗುಟ್ಟಿದ್ದು, ಲಂಕಾ ಆಟಗಾರರು ಕೇವಲ 55 ರನ್​ಗಳಿಗೆ ಸರ್ವಪತನ ಕಂಡಿದ್ದಾರೆ. ಇದರಿಂದ ಭಾರತ ತಂಡ ದಾಖಲೆಯ 302 ರನ್​ಗಳಿಂದ ಜಯ ಸಾಧಿಸಿದೆ. …

Read More »

15 ತಿಂಗಳ ಮಗುವಿಗೆ ಅಪರೂಪದ ಕಾಯಿಲೆ! ಚುಚ್ಚುಮದ್ದು ಆಮದು ಸುಂಕಕ್ಕೆ ವಿನಾಯಿತಿ ಕೇಳಿದ ಸಿಎಂ

ಬೆಂಗಳೂರು: ರಾಜ್ಯದ 15 ತಿಂಗಳ ಮಗುವೊಂದು ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ವಿದೇಶದಿಂದ ಆಮದು ಮಾಡಿಕೊಳ್ಳಬೇಕಿರುವ ದುಬಾರಿ ಚುಚ್ಚುಮದ್ದಿನ ಆಮದು ಸುಂಕಕ್ಕೆ ವಿನಾಯಿತಿ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.   ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿಯವರನ್ನು (Narendra Modi) ಟ್ಯಾಗ್ ಮಾಡಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರೇ, ಕರ್ನಾಟಕದ 15 …

Read More »

ಹಾವೇರಿ ಕ್ಷೇತ್ರಕ್ಕೆ ಈಶ್ವರಪ್ಪ ಪುತ್ರನಿಗೆ ಟಿಕೆಟ್‌ ಕೊಟ್ಟರೆ ಸೋಲು: ಬಿ.ಸಿ. ಪಾಟೀಲ್

ದಾವಣಗೆರೆ: ಹಾವೇರಿ ಲೋಕಸಭಾ ಕ್ಷೇತ್ರದಿಂದ (Lok Sabha Election 2024) ಬಿಜೆಪಿ ಟಿಕೆಟ್ ಸಿಕ್ಕಿದರೆ ಸ್ಪರ್ಧಿಸುತ್ತೇನೆ. ಪಕ್ಷ ಬೇರೆಯವರಿಗೆ ಟಿಕೆಟ್ ಕೊಟ್ಟರೂ ಬೆಂಬಲವನ್ನು ನೀಡುತ್ತೇನೆ. ಯಾರಿಗೆ, ಯಾವುದೇ ಜಾತಿಯವರಿಗೆ ಟಿಕೆಟ್‌ ಕೊಟ್ಟರೂ ನನ್ನ ಬೆಂಬಲ ಇದ್ದೇ ಇರುತ್ತದೆ. ಆದರೆ, ಮಾಜಿ ಡಿಸಿಎಂ ಕೆ.ಎಸ್.‌ ಈಶ್ವರಪ್ಪ (Former Deputy CM KS Eshwarappa) ಪುತ್ರ ಕೆ.ಇ. ಕಾಂತೇಶ್‌ ಹಾವೇರಿಗೆ ಬಂದು ಸ್ಪರ್ಧೆ ಮಾಡಿದರೆ ಗೆಲ್ಲುವುದು ಕಷ್ಟ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್‌ …

Read More »

ಬಿಜೆಪಿಯವ್ರು ಸುಮ್ಮನಿರಲಾಗದೆ ಮೈ ಪರಚಿಕೊಳ್ತಿದ್ದಾರೆ: ಚೆಲುವರಾಯಸ್ವಾಮಿ

ಮಂಡ್ಯ: ಬಿಜೆಪಿಯವ್ರು ಸುಮ್ಮನಿರಲಾಗದೆ ಮೈ ಪರಚಿಕೊಳ್ತಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಿಗೆ ಯಾವುದು ವಿಚಾರ ಇಲ್ಲ, ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದ ಮುಖಂಡರನ್ನು ಮಾತನಾಡಿಸುವ ಸೌಜನ್ಯ ರಾಷ್ಟ್ರೀಯ ನಾಯಕರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.   ಇತಿಹಾಸದಲ್ಲಿ ಮೊದಲ ರಾಜ್ಯಪಾಲರ ಭಾಷಣ, ಮೊದಲ ಬಜೆಟ್‌ಗೆ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಿರದ ಇತಿಹಾಸವೇ ಇಲ್ಲ. ನಾನೇನಾದ್ರೂ

Read More »

ರೈತನ ಮೇಲೆ ಹುಲಿ ದಾಳಿ; ಗ್ರಾಮದ ಕೆಲವರಿಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ

ಮೈಸೂರು: ತೊಂದರೆ ಕೊಟ್ಟು ಓಡಾಡುತ್ತಿದ್ದ ಹುಲಿಯನ್ನು ಸೆರೆ ಹಿಡಿದಿಲ್ಲ ಎಂದು ಕೋಪಗೊಂಡ ನಂಜನಗೂಡು ತಾಲೂಕಿನ ಮಹಾದೇವ ನಗರದ ಕೆಲವರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿದ್ದಾರೆ.   ಏನಿದು ಘಟನೆ?: ನಂಜನಗೂಡು ತಾಲೂಕಿನ ಮಲ್ಕುಂಡಿ ಸಮೀಪದ ಹೆಡಿಯಾಲ ಕುದುರೆಗುಂಡಿ ಹಿನ್ನೀರು ಪ್ರದೇಶದಲ್ಲಿ ರೈತರೊಬ್ಬರು ಜಾನುವಾರುಗಳನ್ನು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಹುಲಿಯೊಂದು ದಾಳಿ ಮಾಡಿ ಹಸುವನ್ನು ಕೊಂದು ಹಾಕಿತ್ತು. ಹಸುವನ್ನು ರಕ್ಷಿಸಲು ಹೋಗಿದ್ದ ರೈತ ವೀರಭದ್ರ ಭೋವಿ (71) ಅವರ ಮೇಲೂ ದಾಳಿ …

Read More »

ಎರಡನೇ ಬಾರಿಗೆ ದಾಖಲೆಯ 1.72 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ: ಕರ್ನಾಟಕದಿಂದ ಕೋಟಿ ಆದಾಯ ಗೊತ್ತಾ?

ನವದೆಹಲಿ: ಅಕ್ಟೋಬರ್​ ತಿಂಗಳಲ್ಲಿ ಒಟ್ಟು 1.72 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) (GST Revenue Collection) ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಇಂದು ತಿಳಿಸಿದೆ. ಕಳೆದ ವರ್ಷ ಇದೇ ಅಕ್ಟೋಬರ್​ ತಿಂಗಳ ಜಿಎಸ್​ಟಿ ಆದಾಯಕ್ಕೆ ಹೋಲಿಸಿದರೆ, ಈ ಬಾರಿ ಶೇ.13ರಷ್ಟು ಅಧಿಕ ಆದಾಯ ಸಂಗ್ರಹವಾಗಿದೆ ಎಂದು ಹೇಳಿದೆ. ಅಕ್ಟೋಬರ್​ನಲ್ಲಿ ಒಟ್ಟಾರೆ 1,72,003 ಕೋಟಿ ರೂ. ಜಿಎಸ್​ಟಿ ಆದಾಯ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್​ಟಿ (CGST) …

Read More »

ನ್ನಡದಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮನವಿ

ಬೆಂಗಳೂರು: ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್​ ಭಾಷೆಯಲ್ಲಿ ಮಾತ್ರ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡದಲ್ಲಿ ಪ್ರವೇಶ ಪರೀಕ್ಷೆ ನಡೆಸುವಂತೆ ಈ ಹಿಂದೆ ಒತ್ತಾಯಿಸಿದ್ದೆ. ಅಗತ್ಯ ಬಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಷಾ ಮಾಧ್ಯಮವನ್ನು ಮರುಪರಿಶೀಲಿಸುವಂತೆ ಪ್ರಧಾನಿ ಮೋದಿಗೆ ಮತ್ತೊಮ್ಮೆ ಪತ್ರ ಬರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಆಯೋಜನೆ ಮಾಡಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ …

Read More »