Breaking News

ರಾಷ್ಟ್ರೀಯ

ಎಂಎ ಪದವಿ ಪರೀಕ್ಷೆ ಬರೆಯುವ ಮೂಲಕ ಪ್ರೇರಣೆಯಾದ ತೃತೀಯ ಲಿಂಗಿ ದಿವ್ಯಾ

ಕಲಬುರಗಿ: ತೃತೀಯ ಲಿಂಗಿಯೊಬ್ಬರು ಎಂಎ ಪದವಿ ಪರೀಕ್ಷೆ ಬರೆಯುವ ಮೂಲಕ ತಮ್ಮ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ. ಹೌದು ಸುಪ್ರೀಂ ಕೋರ್ಟ್ ತೃತೀಯ ಲಿಂಗಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ ಬಳಿಕ ದೇಶದಲ್ಲಿ ಮಂಗಳಮುಖಿ ಮಹಿಳೆಯರ ಶಿಕ್ಷಣದಲ್ಲಿ ಧನಾತ್ಮಕ ಅಭಿವೃದ್ಧಿಯಾಗಿದೆ.   ತನ್ನ ಪರೀಕ್ಷೆಯಲ್ಲಿ ನಿರತರಾಗಿರುವ ದಿವ್ಯಾಕಲಬುರಗಿಯ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ತೃತೀಯ ಲಿಂಗಿ ದಿವ್ಯಾ ಅವರು ಎಂಎ ರಾಜ್ಯಶಾಸ್ತ್ರದ ಅಂತಿಮ ಪರೀಕ್ಷೆ ಬರೆದು …

Read More »

ಪೋಷಕರ ಬುದ್ಧಿವಾದಕ್ಕೆ ಮನನೊಂದು 14 ವರ್ಷದ ಬಾಲಕ ಆತ್ಮಹತ್ಯೆ

ಬೆಳಗಾವಿ: ದೀಪಾವಳಿ ಹಬ್ಬದ ರಜೆ ಇದೆ ಎಂದು ಸುಮ್ಮನೆ ಹೊರಗಡೆ ತಿರುಗಾಡಬೇಡ, ಓದಿನ ಕಡೆಯೂ ಗಮನ ಹರಿಸುವಂತೆ ಪೋಷಕರು ಬುದ್ಧಿವಾದ ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಮಗ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದದಲ್ಲಿ ಸೋಮವಾರ ನಡೆದಿದೆ. ತಮ್ಮ ಮನೆಯ ಮಹಡಿಯ ಮೇಲಿನ ರೂಮಿನಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಬಾಲಕ ಮೂಡಲಗಿಯ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಇನ್ನು ಒಂದು ದಿನದಲ್ಲಿ ಶಾಲೆ …

Read More »

ರಾಯಚೂರು: ಹಣಕ್ಕಾಗಿ ಮಹಿಳಾ ಲ್ಯಾಬ್ ಟೆಕ್ನಿಷಿಯನ್​ ಹತ್ಯೆಗೈದ ಆರೋಪಿಗಳಿಬ್ಬರ ಬಂಧನ

ರಾಯಚೂರು: ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹಟ್ಟಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.   ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ (ಚಿನ್ನದಗಣಿ) ಕಳೆದ ಅ.26 ರಂದು ಕೆಮಿಕಲ್ ಹಾಗೂ ಮಾರಕಾಸ್ತ್ರಗಳಿಂದ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಮೃತ ಲ್ಯಾಬ್ ಟೆಕ್ನಿಷಿಯನ್​ ಮಂಜುಳಾ ಅವರ ಮಗ ಸಚಿನ್ ಪಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ …

Read More »

ತೆಲಂಗಾಣ ಹೈಕೋರ್ಟ್​ ನ್ಯಾಯಮೂರ್ತಿ ಸಿ. ಸುಮಲತಾ ಅವರನ್ನು ಕರ್ನಾಟಕ ಹೈಕೋರ್ಟ್​ಗೆ ವರ್ಗಾವಣೆ

ಬೆಂಗಳೂರು : ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿ ಸಿ ಸುಮಲತಾ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಆದೇಶಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ವರ್ಗಾವಣೆ ಮಾಡಿರುವುದಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಂದ್ರ ಕಶ್ಯಪ್ ಅವರು ತಿಳಿಸಿದ್ದಾರೆ. ನ್ಯಾಯಮೂರ್ತಿ ಸುಮಲತಾ ಅವರನ್ನು ಈ ಹಿಂದೆ ಗುಜರಾತ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಅವರು ಸುಪ್ರೀಂಕೋರ್ಟ್ ಕೊಲಿಜಿಯಂಗೆ …

Read More »

ಮನೆಗೆ ವಿದ್ಯುತ್ ಕಂಬದಿಂದ ಅಕ್ರಮ ಕರೆಂಟ್ ಸಂಪರ್ಕ ಪಡೆದ :H.D.K.

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್​​ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ …

Read More »

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳ ನಿರ್ಮಾಣ

ಮಂಗಳೂರು : ಕಡಲನಗರಿ ಮಂಗಳೂರಿನಲ್ಲಿ ಹಲವು ಯೋಜನೆಗಳು ಪ್ರಗತಿಯಲ್ಲಿದೆ. ಇದೀಗ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣವಾಗಿದೆ. ಇಲ್ಲಿ ಒಲಿಂಪಿಕ್​ಗೂ ತಯಾರಿ ನಡೆಸಲು ತರಬೇತಿ ಸಿಗುತ್ತದೆ ಎಂಬುದು ವಿಶೇಷವಾಗಿದೆ. ನಗರದ ಎಮ್ಮೆಕೆರೆಯಲ್ಲಿ 2.50 ಎಕರೆ ಪ್ರದೇಶದಲ್ಲಿ ಈ ಈಜುಕೊಳ ನಿರ್ಮಾಣಗೊಂಡಿದೆ. ಸಾಧಾರಣವಾಗಿ ಈಜುಕೊಳಗಳು ನೆಲ ಅಂತಸ್ತಿನಲ್ಲಿರುತ್ತವೆ. ಕೆಲವೊಂದು ಬಹುಮಹಡಿಯ ಮೇಲಂತಸ್ತಿನಲ್ಲಿ ಸಣ್ಣ ಮಟ್ಟಿನ ಈಜುಕೊಳ ಇದೆಯಾದರೂ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳಗಳು ನೆಲ ಅಂತಸ್ತಿನಲ್ಲಿರುತ್ತವೆ. ಆದರೆ ಮಂಗಳೂರಿನಲ್ಲಿ …

Read More »

ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ದೀಪಾವಳಿ ಸಂಭ್ರಮ: ‘ಗ್ರಾಮಾಯಣ’ದಿಂದ ವಿಶೇಷ ವಿಡಿಯೋ ರಿಲೀಸ್​

ವಿನಯ್​ ರಾಜ್​ಕುಮಾರ್​ ನಟನೆಯ ‘ಗ್ರಾಮಾಯಣ’ ಚಿತ್ರತಂಡ ದೀಪಾವಳಿ ಹಬ್ಬಕ್ಕೆ ವಿಶೇಷ ವಿಡಿಯೋವೊಂದನ್ನು ರಿಲೀಸ್​ ಮಾಡಿದೆ. ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ದೀಪಾವಳಿ ಸಂಭ್ರಮ: ‘ಗ್ರಾಮಾಯಣ’ದಿಂದ ವಿಶೇಷ ವಿಡಿಯೋ ರಿಲೀಸ್​ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಸ್ಟಾರ್‌ಡಮ್​ ಗಿಟ್ಟಿಸಿಕೊಂಡಿರುವ ನಟ ವಿನಯ್ ರಾಜ್​ಕುಮಾರ್. ಸದ್ಯ ‘ಪೆಪೆ’ ಹಾಗೂ ‘ಗ್ರಾಮಾಯಣ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿನಯ್​ ರಾಜ್​ಕುಮಾರ್ ಅವರ​ ತಾತ ಹುಟ್ಟಿದ ಮನೆ ಅಂದ್ರೆ ಡಾ.ರಾಜ್​ಕುಮಾರ್​ ಅವರ ಮನೆ ಗಾಜನೂರಿನಲ್ಲಿ ಬಹಳ ವಿಶೇಷವಾಗಿ …

Read More »

ಪತ್ನಿ ನವಾಜ್​ರಿಂದ ಬೇರ್ಪಟ್ಟ ರೇಮಂಡ್ಸ್​ ಅಧ್ಯಕ್ಷ ಗೌತಮ್ ಸಿಂಘಾನಿಯಾ

ನವದೆಹಲಿ: ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಮತ್ತು ಅವರ ಪತ್ನಿ ನವಾಜ್ ಸಿಂಘಾನಿಯಾ ಸೋಮವಾರ ಬೇರ್ಪಡುವುದಾಗಿ ಘೋಷಿಸಿದ್ದಾರೆ.   “ಈ ದೀಪಾವಳಿ ಹಿಂದಿನಂತೆ ಇರುವುದಿಲ್ಲ. ದಂಪತಿಗಳಾಗಿ ಒಟ್ಟಿಗೆ 32 ವರ್ಷ ಕಳೆದಿದ್ದೇವೆ, ಪೋಷಕರಾಗಿ ಜವಾಬ್ದಾರಿ ನಿಭಾಯಿಸಿದ್ದೇವೆ ಮತ್ತು ಯಾವಾಗಲೂ ಪರಸ್ಪರ ಶಕ್ತಿಯ ಮೂಲವಾಗಿದ್ದೆವು… ನಮ್ಮ ಜೀವನದಲ್ಲಿ ಮತ್ತೆರಡು ಸುಂದರ ಜೀವಗಳು ಸೇರ್ಪಡೆಯಾಗಿದ್ದರಿಂದ ನಾವು ಬದ್ಧತೆ, ಸಂಕಲ್ಪ, ನಂಬಿಕೆಯೊಂದಿಗೆ ಪ್ರಯಾಣಿಸಿದ್ದೇವೆ” ಎಂದು ಗೌತಮ್ ಸಿಂಘಾನಿಯಾ ಎಕ್ಸ್ (ಟ್ವಿಟರ್) …

Read More »

ಲೋಕಸಭೆ ಚುನಾವಣೆ: ಬೆಳಗಾವಿ ಲಿಂಗಾಯತ, ಚಿಕ್ಕೋಡಿ ಕುರುಬರಿಗೆ ಟಿಕೆಟ್ ಚಿಂತನೆ – ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರಕ್ಕೆ ಲಿಂಗಾಯತ, ಚಿಕ್ಕೋಡಿಯಲ್ಲಿ ಕುರುಬ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಲು ಚಿಂತನೆ ನಡೆದಿದೆ. ರಾಜ್ಯದ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಗುರಿ ಹೊಂದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ಕಾಂಗ್ರೆಸ್​ ಭವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆಸಿದ್ದೇವೆ. ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಾಗಿದ್ದು, ಎಲ್ಲ ರೀತಿಯ ಮಾನದಂಡಗಳನ್ನು ಅನುಸರಿಸಿ, ಮೂರು ಹಂತಗಳಲ್ಲಿ …

Read More »

ರಾಣಿಪೇಟೆಯಲ್ಲಿ ಪಟಾಕಿ ಸಿಡಿದು ಬಾಲಕಿ ಸಾವು; ಬೆಳಕಿನ ಹಬ್ಬದಲ್ಲಿ ಕತ್ತಲಾದ ಬದುಕು

ರಾಣಿಪೇಟೆ (ತಮಿಳುನಾಡು) : ಬೆಳಕಿನ ಹಬ್ಬದ ಸಂಭ್ರಮದಲ್ಲಿ ಅವಘಡವೊಂದು ನಡೆದು ಬದುಕು ಕತ್ತಲಾಗಿದೆ. ದೀಪಾವಳಿ ಸಂಭ್ರಮಾಚರಣೆಯಲ್ಲಿದ್ದ ತಮಿಳುನಾಡಿನ ರಾಣಿಪೇಟೆ ಜಿಲ್ಲೆಯ ಮಂಪಕ್ಕಂನ ಆದಿ ದ್ರಾವಿಡರ ವಸತಿ ಪ್ರದೇಶದಲ್ಲಿ ಸೂತಕದ ಛಾಯೆ ಆವರಿಸಿದೆ. ಭಾನುವಾರ ಪಟಾಕಿ ಸಿಡಿಸುವ ಸಮಯದಲ್ಲಿ ಪುಟ್ಟ ಬಾಲಕಿಯೋರ್ವಳು ಸಾವನ್ನಪ್ಪಿದ್ದಾಳೆ. ಆದಿ ದ್ರಾವಿಡರ ವಸತಿ ಪ್ರದೇಶದ ನಿವಾಸಿಗಳಾದ ರಮೇಶ್ (28) ಮತ್ತು ಅಶ್ವಿನಿ (25) ಎಂಬುವರ 4 ವರ್ಷದ ಕಂದಮ್ಮ ಮೃತ ದುರ್ದೈವಿ. ದೀಪಾವಳಿ ಹಬ್ಬದ ನಿಮಿತ್ತ ರಮೇಶ್ ಅವರ …

Read More »