ನವದೆಹಲಿ, ಮೇ 8: ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ನಲ್ಲಿ (Operation Sindoor) ಕುಟುಂಬದವರು ಹಾಗೂ ಸಂಬಂಧಿಕರು ಮೃತಪಟ್ಟಿರುವುದಾಗಿ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-e-Mohammad) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ (Masood Azhar) ಹೇಳಿಕೊಂಡಿದ್ದಾನೆ. ಕುಟುಂಬದ 10 ಮಂದಿ ಸದಸ್ಯರು ಮತ್ತು ನಾಲ್ವರು ಅತ್ಯಾಪ್ತರು ಸಾವಿಗೀಡಾಗಿದ್ದಾರೆ ಎಂದು ಆತ ತಿಳಿಸಿರುವುದಾಗಿ ವರದಿಯಾಗಿದೆ. ಆದಾಗ್ಯೂ ಆತನಲ್ಲಿ ಕಣ್ಣೀರು ಕಂಡುಬಂದಿಲ್ಲ. ಅಷ್ಟೇ ಯಾಕೆ, ವಿಷಾದವಾಗಲೀ ಹತಾಶೆಯಾಗಲೀ ಇಲ್ಲ. ಇದನ್ನು ಸ್ವತಃ ಆತನೇ ಹೇಳಿಕೊಂಡಿದ್ದಾನೆ. ಇಷ್ಟೆಲ್ಲ ಆದ ಮೇಲೂ ಆತನಿಗಿರುವುದು ಭಯೋತ್ಪಾದನೆಯ ಕನಸು …
Read More »ಬೆಳಗಾವಿ-ರಾಯಚೂರು ರಾಷ್ಟ್ರೀಯ ಎಕ್ಸ ಪ್ರೆಸ್‌ವೇ ಮುಖಾಂತರ ಹುಬ್ಬಳಿ-ಧಾರವಾಡ, ಬಾಗಲಕೋಟ, ವಿಜಯಪುರ ಹಾಗೂ ರಾಯಚೂರದಿಂದ ಬರುವ ಜನರಿಗೆ ವಿಮಾನ ನಿಲ್ದಾಣಕ್ಕೆ ನೇರವಾಗಿ ಹೊಗಲು ಸುಮಾರು 4 ಕಿ.ಮೀ ಬೈಪಾಸ್
ಬೆಳಗಾವಿ: ಬೆಳಗಾವಿ-ರಾಯಚೂರು ರಾಷ್ಟ್ರೀಯ ಎಕ್ಸ ಪ್ರೆಸ್‌ವೇ ಮುಖಾಂತರ ಹುಬ್ಬಳಿ-ಧಾರವಾಡ, ಬಾಗಲಕೋಟ, ವಿಜಯಪುರ ಹಾಗೂ ರಾಯಚೂರದಿಂದ ಬರುವ ಜನರಿಗೆ ವಿಮಾನ ನಿಲ್ದಾಣಕ್ಕೆ ನೇರವಾಗಿ ಹೊಗಲು ಸುಮಾರು 4 ಕಿ.ಮೀ ಬೈಪಾಸ್ ರಸ್ತೆಯನ್ನು ನಿರ್ಮಿಸುವ ಸಲುವಾಗಿ ಯೋಜನೆಯಲ್ಲಿ ಬದಲಾವಣೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸೂಚಿಸಿದ್ದಾರೆ. ಬುಧವಾರ ನಗರದ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು …
Read More »ಬೆಣ್ಣೆ ನಗರಿಯಲ್ಲಿ ಇತ್ತೀಚಿಗೆ ನಡೆದಿದ್ದ ರೌಡಿಶೀಟರ್ ಕಣುಮಾ ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆ ನಡೆದಿದೆ.
ದಾವಣಗೆರೆ: ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಹತ್ಯೆಯ ಪ್ರಮುಖ ಆರೋಪಿ ಚಾವಳಿ ಸಂತೋಷ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬುಧವಾರ ಸ್ಥಳ ಮಹಜರ್ ವೇಳೆ ಬಾಲ ಬಿಚ್ಚಿದ್ದ ಚಾವಳಿ ಸಂತೋಷ್ ಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ನಗರದ ಆವರಗೆರೆ ಹೈಸ್ಕೂಲ್ ಬಳಿ ಈ ಘಟನೆ ನಡೆದಿದೆ. ಕಣುಮಾ ಸಂತೋಷ್ ನ ಮರ್ಡರ್ ಮಾಡಲು ಉಪಯೋಗಿಸಿದ್ದ ಮೊಬೈಲ್ ನ್ನು ಆವರಗೆರೆ ಬಳಿಯ ಪ್ರದೇಶವೊಂದರ ಬಳಿ ಆರೋಪಿಗಳು ಎಸೆದು ಪರಾರಿ ಆಗಿದ್ದರು. ಸಿಟಿ …
Read More »ರಾಜ್ಯದಲ್ಲೇ ಮೊದಲ “ಕೃತಕ ಹೃದಯ ಕಸಿ” ಯಶಸ್ವಿ ಶಸ್ತ್ರಚಿಕಿತ್ಸೆ* • ಸ್ಪರ್ಶ್ ಆಸ್ಪತ್ರೆಯಲ್ಲಿ ಇಬ್ಬರು ಉತ್ತರ ಕರ್ನಾಟಕ ರೋಗಿಗಳಿಗೆ ಕೃತಕ ಹೃದಯ ಕಸಿ*
ರಾಜ್ಯದಲ್ಲೇ ಮೊದಲ “ಕೃತಕ ಹೃದಯ ಕಸಿ” ಯಶಸ್ವಿ ಶಸ್ತ್ರಚಿಕಿತ್ಸೆ* • ಸ್ಪರ್ಶ್ ಆಸ್ಪತ್ರೆಯಲ್ಲಿ ಇಬ್ಬರು ಉತ್ತರ ಕರ್ನಾಟಕ ರೋಗಿಗಳಿಗೆ ಕೃತಕ ಹೃದಯ ಕಸಿ* ಬೆಂಗಳೂರು: ಹೃದಯ ವೈಫಲ್ಯಕ್ಕೆ ಒಳಗಾಗಿದ್ದ ಇಬ್ಬರು ರೋಗಿಗಳಿಗೆ ಸ್ಪರ್ಶ್ ಆಸ್ಪತ್ರೆಯಲ್ಲಿ “ಕೃತಕ ಹೃದಯ ಕಸಿ” ನೆರವೇರಿಸಿದ್ದು, ಇದು ರಾಜ್ಯದಲ್ಲೇ ಮೊದಲ ಯಶಸ್ವಿ ಪ್ರಯತ್ನವಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಆರ್ ನಗರ ಸ್ಪರ್ಶ್ ಆಸ್ಪತ್ರೆಯ ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ.ಅಶ್ವಿನ್, ಹೃದಯದ ಎಡ ಹೃತ್ಕರ್ಣದ ಹಾರ್ಟ್‌ಮೇಟ್ …
Read More »ವೈದ್ಯ ಕ್ಷೇತ್ರದ ಪದವೀಧರರು ಸಮಾಜದ ಸ್ವಾಸ್ಥ್ಯ ಕಾಪಾಡುವ ಆರೋಗ್ಯದೂತರು: ಶರಣ ಪ್ರಕಾಶ ಪಾಟೀಲ್* *ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಘಟಿಕೋತ್ಸವದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಭಾಷಣ*
ವೈದ್ಯ ಕ್ಷೇತ್ರದ ಪದವೀಧರರು ಸಮಾಜದ ಸ್ವಾಸ್ಥ್ಯ ಕಾಪಾಡುವ ಆರೋಗ್ಯದೂತರು: ಶರಣ ಪ್ರಕಾಶ ಪಾಟೀಲ್* *ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಘಟಿಕೋತ್ಸವದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಭಾಷಣ* ಬೆಂಗಳೂರು : ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಪದವಿ ಪಡೆಯುವ ಪ್ರತಿಯೊಬ್ಬರಿಗೂ ಸೇವೆಯೇ ಮುಖ್ಯ ಧ್ಯೇಯವಾಗಿರಬೇಕು. ರೋಗಿಗಳನ್ನು ಅತ್ಯಂತ ಶ್ರದ್ಧೆಯಿಂದ ಹಾಗೂ ಹೆಚ್ಚು ಕಾಳಜಿ ವಹಿಸಿ ಆರೈಕೆ ಮಾಡಬೇಕು. ನಿಮ್ಮ ಸೇವೆಯಿಂದ ಸ್ವಸ್ಥ ಸಮಾಜ ನಿರ್ಮಾಣವಾಗಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ …
Read More »ಇದು ಪ್ರಾರಂಭವಷ್ಟೇ. ಉಗ್ರ ಪೋಷಕ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸುತ್ತದೆ: ಶಾಸಕ ಯತ್ನಾಳ
ಇದು ಪ್ರಾರಂಭವಷ್ಟೇ. ಉಗ್ರ ಪೋಷಕ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸುತ್ತದೆ: ಶಾಸಕ ಯತ್ನಾಳ ಭಾರತದಿಂದ ಆಪರೇಷನ್ ಸಿಂಧೂರಕ್ಕೆ ಸಂಬಂಧಿಸಿದಂತೆ ಭಾರತದ ಸೇನೆಯಿಂದ ನಡೆದ ಏರ್ ಸ್ಟ್ರೈಕ್ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ವಾಗತಿಸಿದ್ದಾರೆ. ಟ್ವೀಟ್ ಮೂಲಕ ಪ್ರತಿಕಾರದ ದಾಳಿಗೆ ಸ್ವಾಗತಿಸಿದ್ದು ಪ್ರಧಾನಿ ನರೇಂದ್ರ ಮೋದಿ ಜಿ ಅವರ ನೇತೃತ್ವದಲ್ಲಿ ಭಾರತದ ಸೇನೆ, ನೌಕಾ ಪಡೆ ಹಾಗೂ ವಾಯು ಪಡೆ ಉಗ್ರರ ನೆಲೆಯ ಮೇಲೆ ದಾಳಿ ಮಾಡಿ …
Read More »ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಾತಿಗಣತಿ ವಿಷಯದಲ್ಲಿ ಯಾವುದೇ ಸದುದ್ದೇಶ ಇಲ್ಲ : ಬಿ.ವೈ. ವಿಜಯೇಂದ್ರ
ಬೆಂಗಳೂರು: ಜಾತಿ ಗಣತಿ ಮೂಲಕ ಸಮ ಸಮಾಜದ ನಿರ್ಮಾಣದ ಕನಸು ನರೇಂದ್ರ ಮೋದಿ ಅವರ ಸರ್ಕಾರಕ್ಕಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಾತಿಗಣತಿ ವಿಷಯದಲ್ಲಿ ಯಾವುದೇ ಸದುದ್ದೇಶ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ. ವೈ. ವಿಜಯೇಂದ್ರ ಅವರು ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯ ಹಿಂದುಳಿದ ವರ್ಗದ ನಾಯಕರ ಸಭೆಯಲ್ಲಿ ಅವರು ಮಾತನಾಡಿದರು. ಜಾತಿ ಜನಗಣತಿ ವಿಚಾರದಲ್ಲಿ ಕಾಂಗ್ರೆಸ್ಸಿಗರಿಗೆ ದುರುದ್ದೇಶ ಇದೆ. ಕಾಂಗ್ರೆಸ್ಸಿನವರು ಮತ್ತು …
Read More »ಕಾರಿನ ಟೈರ್ ಸ್ಫೋಟಗೊಂಡು ಭೀಕರ ರಸ್ತೆ ಅಪಘಾತ: ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ
ಹಾವೇರಿ: ಚಲಿಸುತ್ತಿದ್ದ ಇನ್ನೋವಾ ಕಾರಿನ ಟೈರ್ ಬ್ಲಾಸ್ಟ್ ಆದ ಪರಿಣಾಮ ಕಾರು ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಛತ್ರದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತನನ್ನು 46 ವರ್ಷದ ಕುರಿಯನ್ ಚಾಕೊ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಾಮಿಯಲ್ ಚಾಕೊ, ಜುನಾತನ್ ಫ್ರಾನ್ಸ್ ಎಂದು ಗುರುತಿಸಲಾಗಿದೆ. ಮೃತ ಕುರಿಯನ್ ಚಾಕೊ ಮತ್ತು ಗಾಯಾಳುಗಳು ಕೇರಳದ …
Read More »ಸಿಎಂ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಪದ ಬಳಸಿದ ಕೇಂದ್ರ ಕಾರಾಗೃಹದ ವಾರ್ಡನ್ ಮಧುಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಮೈಸೂರು ನಗರ ಕೇಂದ್ರ ಕಾರಾಗೃಹದ ವಾರ್ಡನ್ ಮಧುಕುಮಾರ್ ಅವರನ್ನು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸರು ಬಂಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಕುಡಿದ ಮತ್ತಿನಲ್ಲಿ ಮಧುಕುಮಾರ್ ಅವಾಚ್ಯ ಪದ ಬಳಸಿ ರೆಕಾರ್ಡ್ ಮಾಡಿದ್ದ 5.33 ನಿಮಿಷಗಳ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ಮೇಲೆ ಸಿಎಂ ಗರಂ ಆದ ಘಟನೆ ಉಲ್ಲೇಖಿಸಿ ಏಪ್ರಿಲ್ 28ರಂದು ಮಧುಕುಮಾರ್ ವಿಡಿಯೋ …
Read More »ಯಾಕಪ್ಪ ನಮ್ಮಲ್ಲಿ ಹೆಣ್ಣು ಗಂಡು ಸಿಗಲ್ವಾ ಪಾಕಿಸ್ತಾನದವರನ್ನೇಕೆ ಮದುವೆಯಾಗ್ತೀರಿ??
ಯಾಕಪ್ಪ ನಮ್ಮಲ್ಲಿ ಹೆಣ್ಣು ಗಂಡು ಸಿಗಲ್ವಾ ಪಾಕಿಸ್ತಾನದವರನ್ನೇಕೆ ಮದುವೆಯಾಗ್ತೀರಿ?? ಪಾಕಿಸ್ತಾನದ ವಿರುದ್ಧ ಇನ್ನು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು; ಸಂಪೂರ್ಣ ಮೆಟ್ಟಿಗೆ ಹಚ್ಚಬೇಕು ಪಿಒಕೆ ಖಾಲಿ ಮಾಡಿಸಿ ; ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಪಾಕಿಸ್ತಾನದ ವಿರುದ್ಧ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಸಂಪೂರ್ಣ ಮೆಟ್ಟಿಗೆ ಹಚ್ಚಬೇಕು. ಪಿಒಕೆ ಖಾಲಿ ಮಾಡಿಸಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಬಾಗಲಕೋಟೆಯಲ್ಲಿ ಸೋಮವಾರ ಮಾಧ್ಯಮಗಾರರೊಂದಿಗೆ ಅವರು ಮಾತನಾಡಿದರು. ಪೆಹಲ್’ಗಾಮ್ …
Read More »