ಸಾರ್ವಜನಿಕ ಶ್ರೀ ಪಾಂಡುರಂಗ ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಭಾಗವಹಿಸಿದ್ದರು. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಕಡಬಿ ಗ್ರಾಮದಲ್ಲಿ 8 ನೇ ವರ್ಷದ ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ ಕೊಟುರ ಶಿವಾಪುರ ಗ್ರಾಮದ ಶ್ರೀ ದ್ಯಾಮವ್ವದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರು ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ …
Read More »ಪಂಢರಪುರ ದಿಂಡಿ ಯಾತ್ರೆಗೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಪಂಢರಪುರ ದಿಂಡಿ ಯಾತ್ರೆಗೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಗೋಕಾಕ : ಪಂಢರಪುರ ಶ್ರೀ ಪಾಂಡುರಂಗ ದೇವರ ದಿಂಡಿ ಯಾತ್ರೆಗೆ ವಿಧಾನ ಪರಿಷತ್ ಸದಸ್ಯ ಲಖನ್ ಅವರು ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಸಂತರು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರಿಗೆ ಸತ್ಕಾರ ಮಾಡಿದರು
Read More »ಸಿದ್ದರಾಮಯ್ಯ ಪತ್ನಿಗೆ ಸೈಟ್ ಸಿಕ್ಕಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ
ಮೈಸೂರು, ಜುಲೈ 3: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿ ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಆರೋಪಗಳು ಕೇಳಿಬರುತ್ತಿವೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ …
Read More »ಗೋಕಾಕ | ನಕಲಿ ನೋಟು ಪತ್ತೆ: ಐವರ ಬಂಧನ
ಗೋಕಾಕ: ಗೋಕಾಕ-ಬೆಳಗಾವಿ ರಸ್ತೆಯ ಕಡಬಗಟ್ಟಿ ಗ್ರಾಮದ ಮೂಲಕ ಸಾಗುವ ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದನ್ನು ತಪಾಸಣೆ ಮಾಡಿದಾಗ ₹100, ₹500 ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದು, ಐವರನ್ನು ಬಂಧಿಸಲಾಗಿದೆ. ಈಚೆಗೆ ಬೆಳಗಿನ ಜಾವ ಗಸ್ತು ಪೊಲೀಸರು ನಡೆಸಿದ ತಪಾಸಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಮೂಡಲಗಿ ತಾಲ್ಲೂಕಿನ ಅರಭಾವಿಯ ಅನ್ವರ ಮೊಹ್ಮದಸಲೀಂ ಯಾದವಾಡ, ಮಹಾಲಿಂಗಪೂರದ ಸದ್ದಾಮ ಮುಸಾ ಯಡಹಳ್ಳಿ, ರವಿ ಚನ್ನಪ್ಪ ಹ್ಯಾಗಡಿ, ದುಂಡಪ್ಪ ಮಹಾದೇವ ವನಶೆಣವಿ ಮತ್ತು ವಿಠ್ಠಲ …
Read More »ಪೋಷಣ್ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್: ಹೆಬ್ಬಾಳಕರ
ಬೆಳಗಾವಿ: ‘ತಮ್ಮ ಕೆಲಸಗಳಿಗೆ ಉತ್ತಮ ಮೊಬೈಲ್ ಅಗತ್ಯ ಎಂದು ಅಂಗನವಾಡಿ ಕಾರ್ಯಕರ್ತೆಯರು ಕಳೆದ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದರು. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಸ್ಪಂದಿಸಿರಲಿಲ್ಲ. ನಾನು ಮುಖ್ಯಮಂತ್ರಿಗೆ, ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದರಿಂದ ಮೊಬೈಲ್ ಮಂಜೂರಾಗಿವೆ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದ್ದಾರೆ. ‘ಮೊಬೈಲ್ ಮಂಜೂರು ಮಾಡಿದ್ದು ಕೇಂದ್ರ ಸರ್ಕಾರ’ ಎಂಬ ಶಾಸಕ ಅಭಯ ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಕೇಂದ್ರ ಸರ್ಕಾರ ಪೋಷಣ್ ಅಭಿಯಾನದ ಅಡಿಯಲ್ಲಿ …
Read More »ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ
ವಿಜಯಪುರ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡುತ್ತಿದ್ದಾರೆ ಎಂಬ ಭೀತಿಯಿಂದ ತೆಪ್ಪದ ಮೂಲಕ ನದಿಯಲ್ಲಿ ಹೊರಟಿದ್ದಾಗ ಬಿರುಗಾಳಿಗೆ ತೆಪ್ಪ ಮುಳುಗಿದ ಘಟನೆ ಮಂಗಳವಾರ ಸಂಜೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದು, ಓರ್ವನ ಶವ ಪತ್ತೆಯಾಗಿದೆ. ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಏತ ನೀರಾವರಿ ಜಾಕವೆಲ್ ಬಳಿ ದುರಂತ ಸಂಭವಿಸಿದೆ. 35 ವರ್ಷದ ಪುಂಡಲೀಕ ಎನ್ ಕಂಚಿ ಎಂಬಾತನ …
Read More »ಉದ್ಯೋಗ ವಾರ್ತೆ : ‘KSRTC’ ಯಿಂದ 13,000 ಚಾಲಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!
ಬೆಂಗಳೂರು : KSRTC ಬಸ್ ಚಾಲಕರಾಗಬೇಕು ಎಂದು ಅಂದುಕೊಂಡವರಿಗೆ ಇಲ್ಲಿದೆ ಸುವರ್ಣಾವಕಾಶ. KSRTC 13 ಸಾವಿರ ಬಸ್ ಚಾಲಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಆಯಾ ಬಸ್ ಡಿಪೋಗಳು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಚಾಮರಾಜನಗರ, ರಾಮನಗರ, ಆನೇಕಲ್ ಡಿಪೋದಲ್ಲಿ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಚಾಮರಾಜನಗರ ಡಿಪೋದಲ್ಲಿ ಕೆಲಸ ಬೇಕಿದ್ರೆ 8050980889, 8618876846. ಹಾಗೂ ರಾಮನಗರ, ಅನೇಕಲ್ ನಲ್ಲಿ ಕೆಲಸ ಬೇಕಿದ್ರೆ 8050980889, 8618876846 ಸಂಪರ್ಕಿಸಬಹುದಾಗಿದೆ. …
Read More »ವಸತಿ ರಹಿತರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್..!
ಚನ್ನಪಟ್ಟಣ : ಸೈಟ್ ಇಲ್ಲದವರಿಗೆ ಸೈಟ್ ಹಾಗೂ ಮನೆ ಇಲ್ಲದವರಿಗೆ ಮನೆ ಕೊಡಿಸುವ ಕಾರ್ಯಕ್ರಮವನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನನ್ನದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಚನ್ನಪಟ್ಟಣದ ಮಳೂರಿನಲ್ಲಿ ಇಂದು ಹಮ್ಮಿಕೊಂಡಿದ್ದ ‘ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಬೃಹತ್ ಜನಸ್ಪಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. ಜನರನ್ನು ಸರ್ಕಾರವೇ ನೇರವಾಗಿ ಈ ಕಾರ್ಯಕ್ರಮದಡಿ ಸಂಪರ್ಕಿಸುತ್ತಿದೆ. ಪ್ರತಿನಿತ್ಯ ಜನರು ಸರ್ಕಾರಿ ಕಚೇರಿಗಳಿಗೆ …
Read More »ಖಾಸಗಿ ಕಂಪನಿಯಿಂದ ಬಾರದ ಹಣ; ನಾಲ್ವರು ಕೆಂಪು ಮೆಣಸಿನಕಾಯಿ ಬೆಳೆಗಾರರು ಆತ್ಮಹತ್ಯೆ ಯತ್ನ
ಬಳ್ಳಾರಿ: ತಮ್ಮ ಉತ್ಪನ್ನಗಳನ್ನು ಖರೀದಿಸಿದ ಖಾಸಗಿ ಕಂಪನಿಯು ಕಳೆದ ಒಂದೂವರೆ ವರ್ಷಗಳಿಂದ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ನಾಲ್ವರು ಮೆಣಸಿನಕಾಯಿ ರೈತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರುದ್ರೇಶ್ (55), ಹನುಮಂತ್ (40), ಶೇಖರ್ (45) ಮತ್ತು ಕುನೇಶ್ (50) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಣ ಪಾವತಿ ಮಾಡಲು ವಿಳಂಬ ಮಾಡಿದ್ದನ್ನು ವಿರೋಧಿಸಿ ಇತರ ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿಷ ಸೇವಿಸಿದ್ದಾರೆ. ಅವರನ್ನು …
Read More »ನನಗೆ ಜಾಮೀನು ಕೊಡಿಸಿ: ಜೈಲಿನಿಂದಲೇ ನಿರ್ಮಾಪಕರು, ನಿರ್ದೇಶಕರಿಗೆ ‘ನಟ ದರ್ಶನ್’ ಕರೆ ಮಾಡಿ ದುಂಬಾಲು
ಬೆಂಗಳೂರು: ನನಗೆ ಜೈಲಿನಲ್ಲಿ ಇರೋಕೆ ಆಗ್ತಿಲ್ಲ. ನನಗೆ ಜಾಮೀನು ಕೊಡಿಸುವಂತೆ ಜೈಲಿನಿಂದಲೇ ನಿರ್ಮಾಪಕರು, ನಿರ್ದೇಶಕರಿಗೆ ಕರೆ ಮಾಡುತ್ತಿರುವಂತ ನಟ ದರ್ಶನ್ ದುಂಬಾಲು ಬೀಳುತ್ತಿರುವುದಾಗಿ ತಿಳಿದು ಬಂದಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವಂತ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವಂತ ಟೆಲಿಪೋನ್ ಬೂತ್ ನಿಂದ ವಾರಕ್ಕೆ ಮೂರು ಬಾರಿ ಕರೆ ಮಾಡೋದಕ್ಕೆ ಜೈಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ತನ್ನ ಸರದಿಯಲ್ಲದೇ ಜೈಲಿನಲ್ಲಿರುವಂತ …
Read More »
Laxmi News 24×7