Breaking News

ರಾಷ್ಟ್ರೀಯ

ಯತ್ನಾಳ ಎಲ್ಲಿಂದ ಮಾಹಿತಿ ಸಂಗ್ರಹಿಸುತ್ತಾರೆ ಎಂಬುದೇ ವಿಚಿತ್ರ: ಹೆಬ್ಬಾಳಕರ

ಬೆಳಗಾವಿ: ‘ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಹೈಕಮಾಂಡ್‌ಗೆ ₹2,000 ಕೋಟಿ, ಮಂತ್ರಿ ಸ್ಥಾನಕ್ಕೆ ₹500 ಕೋಟಿ ನೀಡಬೇಕಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೇ ಈ ಹಿಂದೆ ಹೇಳಿದ್ದರು. ಈಗ ಸಿದ್ದರಾಮಯ್ಯ ವಿರುದ್ಧ ನಮ್ಮವರೇ ದಾಖಲೆ ನೀಡುತ್ತಿದ್ದಾರೆ ಎನ್ನುತ್ತಿದ್ದಾರೆ. ಅವರು ಎಲ್ಲಿಂದ ಇಂಥ ವಿಷಯ ಸಂಗ್ರಹಿಸುತ್ತಾರೆ ಎಂಬುದೇ ವಿಚಿತ್ರ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿರುಗೇಟು ನೀಡಿದರು. ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಲು …

Read More »

ಪ್ರವಾಹದಿಂದ ಜೀವಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಿ’

ಬೆಳಗಾವಿ: ‘ಜಿಲ್ಲೆಯ ಎಲ್ಲ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ, ಊಟೋಪಹಾರ, ಔಷಧ ಸಾಮಗ್ರಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪ್ರವಾಹದಿಂದ ಜನರು ಮತ್ತು‌ ಜಾನುವಾರುಗಳ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಾಲ್ ಸೂಚಿಸಿದರು.   ಅತಿವೃಷ್ಟಿಯಿಂದ ಉಂಟಾದ ಹಾನಿ, ಪ್ರವಾಹ ನಿರ್ವಹಣೆ ಸಂಬಂಧ ಇಲ್ಲಿನ ಜಿಲ್ಲಾಧಿಕಾರಿ‌ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ‘ಆಗಸ್ಟ್‌ನಲ್ಲಿ ಮಳೆ ಪ್ರಮಾಣ ಹೆಚ್ಚುವ ಸಾಧ್ಯತೆ …

Read More »

ಘಟಪ್ರಭಾ ನದಿ ಪ್ರವಾಹ: ಮರೀಚಿಕೆಯಾದ ಶಾಶ್ವತ ಸ್ಥಳಾಂತರ

ಮಹಾಲಿಂಗಪುರ: ಘಟಪ್ರಭಾ ನದಿ ಪ್ರವಾಹದಿಂದ ನಡುಗಡ್ಡೆಯಾಗಿರುವ ಹಳೆ ನಂದಗಾಂವ ಗ್ರಾಮದ 52 ಕುಟುಂಬಗಳ ಶಾಶ್ವತ ಸ್ಥಳಾಂತರದ ಬೇಡಿಕೆ ಮರೀಚಿಕೆಯಾಗಿದ್ದು, ಮನೆಗಳ ಹಂಚಿಕೆ ಗೊಂದಲಮಯವಾಗಿ ಪರಿಣಮಿಸಿದೆ. ಗ್ರಾಮಸ್ಥರ ಶಾಶ್ವತ ಸ್ಥಳಾಂತರಕ್ಕಾಗಿ 1982ರಲ್ಲಿಯೇ ಹಕ್ಕು ಪತ್ರ ಹಾಗೂ 10 ಎಕರೆ ಭೂಮಿ ನೀಡಲಾಗಿದೆ. ಪ್ರತಿ ಮನೆಯ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಜಾಗೆ ಅಳತೆ ಮಾಡಲಾಗಿದೆ. ಅಲ್ಲದೆ ಗ್ರಾಮ ಪಂಚಾಯ್ತಿ ಪ್ರತಿ ವರ್ಷ ಇದಕ್ಕಾಗಿ ಭೂಬಾಡಿಗೆಯನ್ನು ಕೆಲ ಗ್ರಾಮಸ್ಥರಿಂದ ಪಡೆಯುತ್ತಿದೆ. ಸ್ಥಳಾಂತರಕ್ಕಾಗಿ ಹಕ್ಕು …

Read More »

ತುಂಗಾ ನದಿ ಅಬ್ಬರಕ್ಕೆ ಶೃಂಗೇರಿ ಜನರ ಜೀವನವೇ ಜಲಾವೃತ.

ಶೃಂಗೇರಿ: ಭಾರಿ ಮಳೆಗೆ ಮಲೆನಾಡು ಅಕ್ಷರಶ ಕಂಗಾಲಾಗಿದೆ, ತುಂಗೆಯ ಅಬ್ಬರಕ್ಕೆ ನೂರಾರು ಎಕರೆ ಹೊಲ – ಗದ್ದೆ-ತೋಟಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಶೃಂಗೇರಿ ದೇಗುಲದ ಪಾರ್ಕಿಂಗ್ ಪ್ರದೇಶ, ಗಾಂಧಿ ಮೈದಾನವೂ ಜಲಾವೃತಗೊಂಡಿದ್ದು, ಶೃಂಗೇರಿ ದೇಗುಲದ ಕಪ್ಪೆಶಂಕರ ನಾರಾಯಣ ದೇಗುಲ, ಗುರುಗಳ ಸಂಧ್ಯಾವಂದನೆ ಮಂಟಪವೂ ಜಲಾವೃತಗೊಂಡಿದೆ. ಗಾಂಧಿ ಮೈಧಾನದಲ್ಲಿರುವ ಅಂಗಡಿಗಳು ಅರ್ಧ ಮುಳುಗಿದ್ದು ತುಂಗಾ ನದಿ ಅಬ್ಬರಕ್ಕೆ ಶೃಂಗೇರಿ ಜನರ ಬದುಕೇ ಅತಂತ್ರಗೊಂಡಿದೆ.

Read More »

SC-ST’ ಒಳಮೀಸಲಾತಿಗೆ `ಸುಪ್ರೀಂಕೋರ್ಟ್’ ಗ್ರೀನ್ ಸಿಗ್ನಲ್

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪ ವರ್ಗೀಕರಣಕ್ಕೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಬಹುಮತದಿಂದ ತೀರ್ಪು ನೀಡಿದೆ. ಮಹತ್ವದ ತೀರ್ಪಿನಲ್ಲಿ, ಏಳು ನ್ಯಾಯಾಧೀಶರ ಪೀಠವು – 6:1 ಬಹುಮತದಿಂದ- ಎಸ್ಸಿ / ಎಸ್ಟಿ ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಉಪ ವರ್ಗೀಕರಣಕ್ಕೆ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದೆ. ಉದ್ಯೋಗ ಮತ್ತು ಪ್ರವೇಶದಲ್ಲಿ ಕೋಟಾಕ್ಕಾಗಿ ಎಸ್ಸಿ ಮತ್ತು ಎಸ್ಟಿ ವರ್ಗಗಳಲ್ಲಿ ಉಪ ವರ್ಗೀಕರಣ ಮಾಡಲು ರಾಜ್ಯಗಳಿಗೆ ಅಧಿಕಾರವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ನ 7 ನ್ಯಾಯಾಧೀಶರ ಪೀಠವು 6:1 ಬಹುಮತದಿಂದ, ಮೀಸಲಾತಿ ವರ್ಗಗಳ ಅಂದರೆ ಪರಿಶಿಷ್ಟ …

Read More »

ತುಂಗಭದ್ರೆಯ ಚೆಲುವಿಗೆ ಮನಸೋತ ಪ್ರವಾಸಿಗರು

ಮುನಿರಾಬಾದ್: ಇಲ್ಲಿನ ತುಂಗಭದ್ರಾ ಜಲಾಶಯವು ನಿರಂತರ ಮಳೆಯಿಂದ ಭರ್ತಿಯಾಗಿದ್ದು, ಹೆಚ್ಚುವರಿ ನೀರು ನದಿಗೆ ಹರಿಸಲಾಗುತ್ತಿದೆ. ಜಲಾಶಯದಿಂದ ಧುಮ್ಮಿಕ್ಕುವ ನೀರು ಮತ್ತು ನೊರೆಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಜಲಾಶಯ ಹಿನ್ನೀರಿನ ಲೇಕ್ ವ್ಯೂ ಪ್ರವಾಸಿ ಮಂದಿರದ ಬಳಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದರು. ತೆರೆ ಬರುವ ವೇಳೆ ಮತ್ತು ಗಾಳಿಯ ಪರಿಣಾಮ ಸಿಡಿಯುವ ನೀರ ಸಿಂಚನಕ್ಕೆ ಮೈವೊಡ್ಡಿ ಮಕ್ಕಳು ಸಮೇತ ಪ್ರವಾಸಿಗರು ಪುಳಕಗೊಂಡರು. ಅಲ್ಲಿನ ಸಿಬ್ಬಂದಿಯ ಎಚ್ಚರಿಕೆ …

Read More »

ಸಾಕು ನಾಯಿಯೊಂದು ರಕ್ತದಾನ ಮಾಡಿ ಇನ್ನೊಂದು ನಾಯಿಯ ಪ್ರಾಣ ಉಳಿಸಿದೆ.

ಕೊಪ್ಪಳ, ಆಗಸ್ಟ್ 1: ರಕ್ತದಾನ ಶ್ರೇಷ್ಠ ದಾನ ಎನ್ನುತ್ತಾರೆ. ಆದರೆ, ಇತ್ತೀಚೆಗೆ ಸೂಕ್ತ ಸಮಯದಲ್ಲಿ ರಕ್ತ ಸಿಗದೆ ಅನೇಕರು ಮೃತಪಡುತ್ತಿರುವ ಘಟನೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಮನುಷ್ಯರೇ ಮನುಷ್ಯರಿಗೆ ರಕ್ತದಾನ ಮಾಡಿ ಜೀವ ಉಳಿಸಲು ಹಿಂದುಮುಂದು ನೋಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಒಂದು ನಾಯಿ ಇನ್ನೊಂದು ನಾಯಿ ಜೀವ ಉಳಿಸಲು ರಕ್ತದಾನ ಮಾಡಿರುವ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಇದು ಅಚ್ಚರಿಯನಿಸಿದರು ಕೂಡಾ ನಿಜ. ಕೊಪ್ಪಳದಲ್ಲಿ ಬುಧವಾರ ಸಾಕಿದ ನಾಯಿಯೊಂದು ಮತ್ತೊಂದು …

Read More »

ಸಂತ್ರಸ್ತರಿಗೆ ಪರಿಹಾರದ ಅಭಯ ನೀಡಿದ ಯುವ ಮುಖಂಡ ಸರ್ವೋತ್ತಮ

ತಿಗಡಿ, ಸುಣಧೋಳಿ, ಹುಣಶ್ಯಾಳ ಪಿವೈ, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಗ್ರಾಮಗಳಿಗೆ ಭೇಟಿ ನೀಡಿದ ಸರ್ವೋತ್ತಮ ಜಾರಕಿಹೊಳಿ ಮೂಡಲಗಿ- ಪ್ರವಾಹಕ್ಕೀಡಾಗಿರುವ ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭರವಸೆ ನೀಡಿದರು. ತಾಲೂಕಿನ ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಸಂತ್ರಸ್ತರಿಗೆ ಅಗತ್ಯವಿರುವ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಈಗಾಗಲೇ ಮನವಿ ಮಾಡಿಕೊಂಡಿದ್ದೇನೆ ಎಂದು …

Read More »

ರಾಜ್ಯದಲ್ಲಿ ನಾಳೆ ‘ವ್ಯಸನ ಮುಕ್ತ ದಿನಾಚರಣೆ’

ಬೆಂಗಳೂರು : ಬಾಗಲಕೋಟೆಯ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ರಾಜ್ಯದಲ್ಲಿ ವ್ಯಸನ ಮುಕ್ತ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ. ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು. ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1930 ರ ಆಗಸ್ಟ್ 1 ರಂದು ಜನಿಸಿದ ಅವರು ತಮ್ಮ 10ನೇ ವಯಸ್ಸಿಗೆ …

Read More »

ಭೀಕರ ಭೂಕುಸಿತದಲ್ಲಿ ಚಾಮರಾಜನಗರದ ನಾಲ್ವರು ಮೃತ್ಯು

ಚಾಮರಾಜನಗರ/ಮಂಡ್ಯ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಚಾಮರಾಜನಗರದ ನಾಲ್ವರು ಮೃತಪಟ್ಟಿದ್ದು, ಕೆ.ಆರ್.ಪೇಟೆ ಮೂಲದ ಮಹಿಳೆಯ ಮಗು ಸೇರಿ ಇಬ್ಬರು ನಾಪತ್ತೆಯಾಗಿದ್ದು, ಕುಟುಂಬದ ಮೂವರು ಆಸ್ಪತ್ರೆಯಲ್ಲಿದ್ದಾರೆ. ವಯನಾಡಿನ ಮೇಪ್ಪಾಡಿಯಲ್ಲಿ ನೆಲೆಸಿದ್ದ ಪುಟ್ಟಸಿದ್ದಶೆಟ್ಟಿ (62) ಹಾಗೂ (55), ಚಾಮರಾಜನಗರ ತಾಲೂಕಿನ ಇರಸವಾಡಿ ಮೂಲದ, ವಯ ನಾಡು ಜಿಲ್ಲೆಯಲ್ಲಿ ವಾಸವಿದ್ದ ರಾಜೇಂದ್ರ (50), ರತ್ನಮ್ಮ (45) ಮೃತ ದುರ್ದೈವಿಗಳು. ಈ ಪೈಕಿ ರಾಜೇಂದ್ರ, ರತ್ನಮ್ಮ ಮೃತ ದೇಹ ಪತ್ತೆಯಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ ಗುಂಡ್ಲುಪೇಟೆ …

Read More »