ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಪಿ.ಎಸ್.ಐ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದಿದೆ. ಸುರೇಶ ಬಾಬಾಸಾಬ ಖೋತ (59) ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ಪಿಎಸ್‌ಐಯಾಗಿ ಕರ್ತವ್ಯನಿರ್ವಹಿಸುತ್ತಿದ್ದರು. ಗಣೇಶೋತ್ಸವ ಹಿನ್ನೆಲೆಯಲ್ಲಿ ಬಂದೋಬಸ್ತ್ ಮುಗಿಸಿಕೊಂಡು ಮರಳಿ ಮನೆಗೆ ಬಂದಾಗ ಹೃದಯಾಘಾತವಾಗಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ನಿವಾಸದಲ್ಲಿ ಘಟನೆ ನಡೆದಿದ್ದು ತಕ್ಷಣವೇ ಮಹಾರಾಷ್ಟ್ರದ ಮೀರಜ್ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಪಿಎಸ್‌ಐ ಸಾವನ್ನಪ್ಪಿದ್ದರಿಂದ …
Read More »ಎಮ್ಮೆಗಳಿಗೂ ಇಲ್ಲೊಂದು ಬ್ಯೂಟಿ ಪಾರ್ಲರ್ ಇದೆ
ಇಲ್ಲೊಂದು ಬ್ಯೂಟಿ ಪಾರ್ಲರ್ ಇದೆ. ಒಳಗೆ ಹೋದ ತಕ್ಷಣ ಘಮಘಮ ಎನ್ನುವ ಸೋಪು ಹಾಕಿ ಸ್ನಾನ ಮಾಡಿಸುತ್ತಾರೆ. ಅನಗತ್ಯ ಮೈಗೂದಲು ತೆಗೆಯುತ್ತಾರೆ. ಮೈತುಂಬ ಎಣ್ಣೆ ಹಚ್ಚಿ ಮಾಲೀಶ್ ಮಾಡುತ್ತಾರೆ. ಕಾಲುಗಳಿಗೆ ಗೆಜ್ಜೆ ಕಟ್ಟಿ, ಕಿವಿಯೋಲೆ ಹಾಕಿ ಅಲಂಕಾರ ಮಾಡುತ್ತಾರೆ. ಇಷ್ಟಾದ ಮೇಲೆ ವಯ್ಯಾರಿ ಬಿಂಕ ಬಿನ್ನಾಣದಿಂದ ಹೊರಬರುತ್ತಾಳೆ. ಅರೆರೇ! ಇದೇನು ಮದುವಣಿಗಿತ್ತಿಯನ್ನು ತಯಾರು ಮಾಡುತ್ತಿದ್ದಾರೆಯೇ ಎಂದು ಕೇಳಬೇಡಿ. ಇಲ್ಲಿ ಸುಂದರಿಯಂತೆ ಅಲಂಕಾರಗೊಳ್ಳುತ್ತಿರುವುದು ಎಮ್ಮೆ! ಹೌದು, ಇದು ಎಮ್ಮೆಗಳ ಪಾರ್ಲರ್..! ಮಹಾರಾಷ್ಟ್ರದ …
Read More »ಹಾವೇರಿ | ನೀರಿಲ್ಲ, ವಿದ್ಯುತ್ತಿಲ್ಲ: ಸೊರಗಿದ ಹುರುಳಿಕುಪ್ಪಿ ಆಸ್ಪತ್ರೆ
ಹಾವೇರಿ: ಮಳೆ ಬಂದರೆ ಸೋರುವ ಕಟ್ಟಡ, ಆವರಣದಲ್ಲಿ ಹೆಚ್ಚಾಗಿರುವ ಕಸ-ಕಂಟಿ, ತುರ್ತು ಪರಿಸ್ಥಿತಿಯಲ್ಲಿ ಲಭ್ಯವಾಗದ ಚಿಕಿತ್ಸೆ, ನೀರಿನ ಸೌಲಭ್ಯ ಹಾಗೂ ವಿದ್ಯುತ್ ಸಂಪರ್ಕವಿಲ್ಲದೇ ದಿನದೂಡುತ್ತಿರುವ ಸಿಬ್ಬಂದಿ, ಅರ್ಧಕ್ಕೆ ನಿಂತ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ… ಜಿಲ್ಲೆಯ ಸವಣೂರು ತಾಲ್ಲೂಕಿನ ಹುರುಳಿಕುಪ್ಪಿ ಗ್ರಾಮದಲ್ಲಿರುವ ಆರೋಗ್ಯ ವಿಸ್ತರಣಾ ಚಿಕಿತ್ಸಾಲಯ ಕೇಂದ್ರದ ದುಸ್ಥಿತಿ ಇದು. ಮೂಲಸೌಕರ್ಯಗಳ ಕೊರತೆಯಿಂದಾಗಿ ಕೇಂದ್ರ ಸೊರಗುತ್ತಿದೆ. ಗ್ರಾಮಸ್ಥರ ಹೋರಾಟದ ಫಲವಾಗಿ ಉದ್ಘಾಟನೆಗೊಂಡಿದ್ದ ಕೇಂದ್ರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗದಿದ್ದರಿಂದ, ಹುರುಳಿಕುಪ್ಪಿ ಹಾಗೂ …
Read More »ಶಾಸಕ ಮುನಿರತ್ನ ವಿಶ್ವದಲ್ಲೇ ಕಂಡುಕೇಳರಿಯದಂತಹ ಸಂಚು ಮಾಡಿದ್ದಾರೆ : ಡಿಕೆಶಿ
ಬೆಂಗಳೂರು,ಸೆ.21- ವಿಶ್ವದಲ್ಲೇ ಕಂಡಿರದಂತಹ ಸಂಚನ್ನು ಆರ್‌ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ಸ್ವಪಕ್ಷ ಹಾಗೂ ವಿರೋಧಪಕ್ಷದ ವಿರುದ್ಧ ನಡೆಸಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರು ಸತ್ಯಾಸತ್ಯತೆ ತಿಳಿದು ಮಾತನಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾರ್ಯಾರು ಸಿಕ್ಕಿಕೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಮಾತನಾಡುವುದು ಒಳ್ಳೆಯದು ಎಂದರು. ಮುನಿರತ್ನ ಪ್ರಕರಣದಲ್ಲಿ ಎಸ್‌ಐಟಿ ರಚನೆ ಮಾಡಬೇಕೆಂಬುದು ನಮ ಪಕ್ಷದ ಶಾಸಕರು, ಸಚಿವರು, …
Read More »ಮೈಸೂರು ದಸರಾ 2024 : ‘ಯುವ ಸಂಭ್ರಮ’ದ ಪೋಸ್ಟರ್ ಹಾಗೂ ವೆಬ್ ಸೈಟ್ ಬಿಡುಗಡೆ
ಮೈಸೂರು, ಸೆ. 21- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024 ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದ್ದು ಇಂದು ಯುವ ಸಂಭ್ರಮದ ಪೋಸ್ಟರ್ ಬಿಡುಗಡೆ, ದಸರಾ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ. ಮಹಾದೇವಪ್ಪ, ಫೋಸ್ಟರ್ ಹಾಗೂ ದಸರಾ ವೆಬ್ ಸೈಟ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ …
Read More »ಇನ್ಮುಂದೆ ‘ವೈದ್ಯರ ಚೀಟಿ’ ಇಲ್ಲದೇ ‘ಔಷಧಿ’ ಕೊಡುವ ಮೆಡಿಕಲ್ ಸ್ಟೋರ್ ಮೇಲೆ ಕಠಿಣ ಕ್ರಮ : ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ
ಬೆಂಗಳೂರು : ವೈದ್ಯರ ಚೀಟಿ ಇಲ್ಲದೇ ಮಾತ್ರೆ ಕೊಡುವ ‘ಮೆಡಿಕಲ್ ಸ್ಟೋರ್’ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿಯನ್ನು ಬೇರು ಸಮೇತ ಕಿತ್ತುಹಾಕಲು ಪಣತೊಟ್ಟಿರುವ ನಮ್ಮ ಸರ್ಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಔಷಧಿಗಳ ದುರ್ಬಳಕೆಯನ್ನು ತಡೆಗಟ್ಟಲು ವಿಶೇಷ ಅಭಿಯಾನ ನಡೆಸಲಾಗಿದೆ. ಮೆಡಿಕಲ್ ಸ್ಟೋರ್ಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಮಾತ್ರೆಗಳನ್ನು ಕೊಡುತ್ತಿದ್ದಾರೆ, ಸಿಂಥೆಟಿಕ್ ಡ್ರಗ್ಸ್ …
Read More »ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ
ಬಳ್ಳಾರಿ: ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಕಳ್ಳರು ಕಳ್ಳರ ಜೊತೆಗೆ ಸೇರಿಕೊಂಡು ಕಳ್ಳತನ ಮಾಡುವ ಸುದ್ದಿಗಳನ್ನು ಓದಿರುತ್ತೇವೆ. ಆದರೆ ಕಳ್ಳರ ಜೊತೆಗೆ ಪೊಲೀಸ್ ಒಬ್ಬರು ಸೇರಿಕೊಂಡ ದರೋಡೆ ನಡೆಸಿರುವ ಪ್ರಕರಣ ಇದೀಗ ಬಯಲಿಗೆ ಬಂದಿದೆ. ಬಳ್ಳಾರಿಯಲ್ಲಿ ಈ ಘಟನೆ ನಡೆದಿದೆ. ಬ್ರೂಸ್ ಪೇಟ್ ಠಾಣೆಯ ಹೆಡ್ ಕಾನ್ಸಟೇಬಲ್ ಕಳ್ಳರ ಗ್ಯಾಂಗ್ ಗೆ ಸಾಥ್ ನೀಡಿದ್ದು, ಆತನನ್ನು ಇಲಾಖೆಯಿಂದ ಅಮಾನತು ಮಾಡಿ ಬಂಧಿಸಲಾಗಿದೆ. ಘಟನೆಯ ವಿವರ ರಘು …
Read More »ಪ್ಯಾಲೇಸ್ತೇನ್’ ಧ್ವಜ ಹಾರಿಸುವವರನ್ನು ‘ಶೂಟ್’ ಮಾಡಿ ಬಿಸಾಕಿ : ಪ್ರಮೋದ್ ಮುತಾಲಿಕ್ ಹೇಳಿಕೆ
ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಧಾನ ತಾಲೂಕ್ ಅವರು ಮಂಡ್ಯಾಕೆ ಭೇಟಿ ನೀಡುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಅವರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಆಕ್ರೋಶ ಹೊರಹಾಕಿದ ಪ್ರಮೋದ್ ಮುತಾಲಿಕ್, ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಇವೆಲ್ಲಾ ಗಲಭೆ ನಡೆಯುತ್ತಿವೆ. ಇಂತವರನ್ನು ಶೂಟ್ ಮಾಡಬೇಕು ಎಂದು ಕಿಡಿ ಕಾಡಿದರು. ಮದ್ದೂರಿನ ನಿಡಘಟ್ಟದ ಬಳಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದು, …
Read More »ಅತ್ಯಾಚಾರ ಪ್ರಕರಣ; ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್
ಬೆಂಗಳೂರು: ಆತ್ಯಾಚಾರ ಹಾಗೂ HIV ಸೋಂಕಿತ ಮಹಿಳೆಯನ್ನು ಹನಿಟ್ರ್ಯಾಪ್ಗೆ ಬಳಸಿಕೊಂಡ ಆರೋಪದ ಮೇಲೆ ಕಗ್ಗಲೀಪುರ ಪೊಲೀಸರ ವಶದಲ್ಲಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಅವರು ಗುರುವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಮುನಿರತ್ನರನ್ನು ಪೊಲೀಸರು ಶನಿವಾರ ಕೋರ್ಟ್ಗೆ …
Read More »ರೇಣುಕಾ ಸ್ವಾಮಿ ಕೊಲೆ ಪ್ರಕರಣ : ಮೊದಲ ಬಾರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ದರ್ಶನ್
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಆಗಿರುವ ದರ್ಶನ್ ಇದೀಗ ಅವರ ಪರ ವಕೀಲರಿಂದ ಜಾಮೀನು ಕೋರಿ ಬೆಂಗಳೂರಿನ ಸೆಷನ್ಸ್ ಕೋರ್ಟಿಗೆ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಹೌದು ಬೆಂಗಳೂರಿನ ಸೇಷನ್ಸ್ ಕೋರ್ಟಿಗೆ ನಟ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚಿಗೆ ನಟ ದರ್ಶನ್ ಅವರನ್ನು ನೋಡಲು ತಾಯಿ ಮೀನಾ ತೂಗುದೀಪ್, ಅಕ್ಕ ಹಾಗೂ ಭಾವ, ಸೋದರ …
Read More »
Laxmi News 24×7