ಕಾರ್ಗಿಲ್ ವಿಜಯ ದಿವಸ ಆಚರಣೆ: ನಮ್ಮ ಸೈನಿಕರೇ ನಮ್ಮ ನಿಜವಾದ ದೇವರು: ಸಚಿವ ಎಂ.ಬಿ.ಪಾಟೀಲ ಕಾರ್ಗಿಲ್ ವಿಜಯದ 26ನೇ ವರ್ಷಾಚರಣೆಯ ಅಂಗವಾಗಿ ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ವಿಜೃಂಭಣೆಯಿಂದ ಕಾರ್ಗಿಲ್ ವಿಜಯದಿವಸ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪಾಲ್ಗೊಂಡು ಮಾತನಾಡಿದರು. “ನಾವೆಲ್ಲರೂ ಪಟ್ಟಣಗಳಲ್ಲಿ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದರೆ ಗಡಿಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರೇ ಕಾರಣ. ನಮ್ಮ ದೇಶದ …
Read More »‘ನನ್ನ ಬೆಳಗಾವಿಗಾಗಿ ನನ್ನ ಸಲಹೆ’: ಹೊಸ ಅಭಿಯಾನ ಆರಂಭಿಸಿದ ಪೊಲೀಸ್ ಕಮಿಷನರ್
ಬೆಳಗಾವಿ: ಉತ್ತಮ, ಸುರಕ್ಷಿತ ಬೆಳಗಾವಿ ನಗರ ನಿರ್ಮಾಣಕ್ಕೆ ಪೊಲೀಸ್ ಕಮಿಷನರ್ ಪಣ ತೊಟ್ಟಿದ್ದು, ಆ ನಿಟ್ಟಿನಲ್ಲಿ ಹೊಸ ಪ್ರಯೋಗಗಳಿಗೆ ಕೈ ಹಾಕಿದ್ದಾರೆ. ಪೊಲೀಸ್ ವೆಬ್ ಸೈಟ್ ನಲ್ಲಿ ಸಾರ್ವಜನಿಕರಿಗಾಗಿಯೇ ಒಂದು ಪೇಜ್ ತೆರೆದಿದ್ದಾರೆ. “ನನ್ನ ಬೆಳಗಾವಿಗಾಗಿ ನನ್ನ ಸಲಹೆ” ಎಂಬ ಘೋಷವಾಕ್ಯದಡಿ ಸಾರ್ವಜನಿಕರಿಗೆ ಸಲಹೆ ನೀಡುವಂತೆ ಕೋರಿದ್ದಾರೆ. ಇದರಿಂದ ಬೆಳಗಾವಿ ಪೊಲೀಸರು ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಹೌದು, ಬೆಳಗಾವಿ ಪೊಲೀಸ್ ಕಮಿಷನರ್ ಆಗಿ ಭೂಷಣ ಗುಲಾಬರಾವ್ ಬೊರಸೆ ಅಧಿಕಾರ ಸ್ವೀಕರಿಸುತ್ತಿದ್ದಂತೆ ಹೊಚ್ಚ …
Read More »ಕಾರ್ಮಿಕ ಇಲಾಖೆಯಲ್ಲಿ ಬರೋಬ್ಬರಿ 8 ಕೋಟಿ ಗೋಲ್ಮಾಲ್ ಹಗರಣ!!! 13 ಜನರ ವಿರುದ್ಧ ಎಫ್.ಐ.ಆರ್. ದಾಖಲು
ಕಾರ್ಮಿಕ ಇಲಾಖೆಯಲ್ಲಿ ಬರೋಬ್ಬರಿ 8 ಕೋಟಿ ಗೋಲ್ಮಾಲ್ ಹಗರಣ!!! 13 ಜನರ ವಿರುದ್ಧ ಎಫ್.ಐ.ಆರ್. ದಾಖಲು ಬಾಗಲಕೋಟೆ ಕಾರ್ಮಿಕ ಇಲಾಖೆಯಲ್ಲಿ ಬರೋಬ್ಬರಿ 8 ಕೋಟಿ ಗೋಲ್ಮಾಲ್ ಹಗರಣ ಪ್ರಕರಣದಲ್ಲಿ 13 ಜನರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಬಾಗಲಕೋಟೆ ಕಾರ್ಮಿಕ ಇಲಾಖೆಯಲ್ಲಿ ಬರೋಬ್ಬರಿ 8 ಕೋಟಿ ಗೋಲ್ಮಾಲ್ ಹಗರಣ ಪ್ರಕರಣ ಬೆಳಕಿಗೆ ಬಂದಿದೆ. ಫಲಾನುಭವಿಗಳ ಖಾತೆಯ ಕೋಟಿ ಕೋಟಿ ಸಹಾಯಧನವೇ ಕೊಳ್ಳೆ ಹೊಡೆಯಲಾಗಿದೆ. ಮೊದ ಮೊದಲು 2 ಕೋಟಿ ಹಗರಣ ಮಾತ್ರ …
Read More »ಲೋಕಾಯುಕ್ತ ದಾಳಿ: ರಾಶಿರಾಶಿ ಚಿನ್ನ, ನಗದು ಸೇರಿ 37.41 ಕೋಟಿಯ ಆಸ್ತಿ ಪತ್ತೆ
ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಆರೋಪದಡಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳೂ ಸೇರಿದಂತೆ ಏಕಕಾಲದಲ್ಲಿ 41 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಪ್ರಮಾಣದ ಚರ-ಸ್ಥಿರಾಸ್ತಿ ಪತ್ತೆ ಮಾಡಿದ್ದಾರೆ. ಅಸಮತೋಲನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದರು. ಐಐಎಸ್ ಮಹಿಳಾ ಅಧಿಕಾರಿ ಒಳಗೊಂಡಂತೆ ಎಂಟು …
Read More »ಟ್ರೇನ್ ಡಿಕ್ಕಿ ಹೊಡೆದು ವೃದ್ಧ ಪಾದಚಾರಿ ಸ್ಥಳದಲ್ಲೇ ಸಾವು!
ಟ್ರೇನ್ ಡಿಕ್ಕಿ ಹೊಡೆದು ವೃದ್ಧ ಪಾದಚಾರಿ ಸ್ಥಳದಲ್ಲೇ ಸಾವು! ಬೆಳಗಾವಿ ಸಮರ್ಥ ನಗರದಲ್ಲಿ ಘಟನೆ ಖಡಕ್ ಗಲ್ಲಿಯ ನಿವಾಸಿ ಪಾಡುಗರಂಗ ಬಾತಕಾಂಡೆ(75) ರೈಲ್ವೇ ಹಳಿ ದಾಟುವಾಗ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವು ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ, ಪರಿಶೀಲನೆ ರೈಲ್ವೇ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ಸಂಬವಿಸಿದೆ ಬೆಳಗಾವಿ ಮಹಾನಗರದ ಸಮರ್ಥ ನಗರದ ಹತ್ತಿರ ಖಡಕ್ ಗಲ್ಲಿಯ ನಿವಾಸಿ ಪಾಡುಗರಂಗ …
Read More »ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಪ್ರಸ್ತುತ ಕೇಂದ್ರ
ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಪ್ರಸ್ತುತ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆಗಾಗಿ ಕಾಯುತ್ತಿದೆ ಎಂದು ನವಲಗುಂದ ಶಾಸಕ ಎನ್.ಎಚ್. ಕೊನರೆಡ್ಡಿ ಹೇಳಿದರು ಮಂಗಳವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಮಹಾದಾಯಿ ಯೋಜನೆ ಬಹಳ ಮುಖ್ಯವಾಗಿದೆ ಟೀಕಿಸುವ ಬದಲು ಅದನ್ನು ಕಾರ್ಯಗತಗೊಳಿಸಬೇಕು ಈ ಹಿಂದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಸಂಪರ್ಕಿಸುತ್ತಿದ್ದ ದಿವಂಗತ ಅನಂತ್ ಕುಮಾರ್ ಅವರನ್ನು ಅವರು ನೆನಪಿಸಿಕೊಂಡರು. ಈಗ, ಕೇಂದ್ರ ಸಚಿವ …
Read More »ಒಂದೇ ವೇದಿಕೆಯಲ್ಲಿ ಪಂಚಪೀಠಾಧೀಶ್ವರರು
ದಾವಣಗೆರೆ: ನಗರದಲ್ಲಿ ನಡೆದ ಅದ್ಧೂರಿ ಶೃಂಗ ಸಮ್ಮೇಳನದಲ್ಲಿ ವೀರಶೈವ ಪಂಚಪೀಠಗಳ ಪೀಠಾಧೀಶ್ವರರು, ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಭಕ್ತರಿಗೆ ದರ್ಶನ ನೀಡಿದರು. ದರ್ಶನದ ಜೊತೆಗೆ ಎಲ್ಲ ಶ್ರೀಗಳು ತಮ್ಮ ಹಿತವಚನ ನೀಡಿದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ರೇಣುಕಾ ಮಂದಿರದಲ್ಲಿ ಸೋಮವಾರ ನಡೆದ ಶಿವಾಚಾರ್ಯ ಶೃಂಗ ಸಮ್ಮೇಳನದಲ್ಲಿ ಮಾತನಾಡಿದ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು, ವೀರಶೈವ ಧರ್ಮದಲ್ಲಿ ಪಂಚಪೀಠಗಳಿಗೆ ಇರುವ ಮಹತ್ವ ಯಾವುದಕ್ಕೂ ಇಲ್ಲ. …
Read More »ಬಿಹಾರ ಉದ್ಯಮಿಗೆ 10 ಕೋಟಿ ರೂಪಾಯಿ ವಂಚನೆ ಆರೋಪ: ಆರೋಪಿ ರೋಶನ್ ಸಲ್ಡಾನ್ ಪ್ರಕರಣ ಸಿಐಡಿಗೆ
ಮಂಗಳೂರು: ದೇಶಾದ್ಯಂತ ಸಿರಿವಂತ ಉದ್ಯಮಿಗಳನ್ನು ವಂಚನೆಯ ಜಾಲದಲ್ಲಿ ಸಿಲುಕಿಸಿ ಅವರಿಂದ ಕೋಟ್ಯಂತರ ಹಣ ಲಪಟಾಯಿಸುತ್ತಿದ್ದ ಆರೋಪಿ ರೋಶನ್ ಸಲ್ಡಾನ್ ವಿರುದ್ಧ ಬಿಹಾರ ಉದ್ಯಮಿಯೊಬ್ಬರು ಮಂಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ. ರೋಶನ್ ಸಲ್ಡಾನ್ ತನಗೆ ಭೂಮಿ ಖರೀದಿ ವಿಚಾರದಲ್ಲಿ 10 ಕೋಟಿಗೂ ಅಧಿಕ ಮೋಸ ಮಾಡಿದ್ದಾಗಿ ಆರೋಪಿಸಿ ದೂರು ನೀಡಿದ್ದಾರೆ. 10 ಕೋಟಿಯಷ್ಟು ಮೊತ್ತದ ವಂಚನೆ ಪ್ರಕರಣ ದಾಖಲಾದರೆ ಅದನ್ನು ಸಿಐಡಿಗೆ ಕೊಡಬೇಕೆಂಬ ಕಾನೂನಿನಂತೆ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮಂಗಳೂರು …
Read More »ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಆರೋಪಿಯಿಂದ ಲಂಚ ಸ್ವೀಕಾರ ಆರೋಪ: ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಲೋಕಾ ಬಲೆಗೆ
ಬೆಂಗಳೂರು : ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಆರೋಪಿಯಿಂದ 1.25 ಲಕ್ಷ ಸ್ವೀಕರಿಸುತ್ತಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗೋವಿಂದಪುರ ಠಾಣೆಯ ಪಿಎಸ್ಐ ಸಾವಿತ್ರಿ ಬಾಯಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಮೊಹಮ್ಮದ್ ಯೂನಸ್ ಎಂಬಾತನಿಂದ 1.25 ಲಕ್ಷ ರೂ. ಸ್ವೀಕರಿಸುತ್ತಿದ್ದಾಗಲೇ ಸಾವಿತ್ರಿ ಬಾಯಿ ಅವರನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣವೇನು?: ವಿವಾಹವಾಗಿರುವುದನ್ನು ಮುಚ್ಚಿಟ್ಟು ಲೀವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಮೊಹಮ್ಮದ್ ಯೂನಸ್ನನ್ನು ಪ್ರಶ್ನಿಸಿದಾಗ ತನ್ನ ಮೇಲೆ ಹಲ್ಲೆಗೈದಿರುವುದಾಗಿ …
Read More »ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಸುಪ್ರೀಂ ಕೋರ್ಟ್ನಲ್ಲಿ ಬಿಗ್ ರಿಲೀಫ್
ಬೆಂಗಳೂರು, ಜುಲೈ 21: ಮುಡಾ ಹಗರಣ (MUDA Scam) ಸಂಬಂಧ ಜಾರಿ ನಿರ್ದೇಶನಾಲಯ (ED) ತನಿಖೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ (Parvathi Siddaramaiah) ಹಾಗೂ ಸಚಿವ ಭೈರತಿ ಸುರೇಶ್ಗೆ ಸುಪ್ರೀಂ ಕೋರ್ಟ್ನಲ್ಲಿ ಬಿಗ್ ರಿಲೀಫ್ ದೊರೆತಿದೆ. ಪಾರ್ವತಿ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ನೋಟಿಸ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ. ಅಷ್ಟೇ ಅಲ್ಲದೆ, ಇಡಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅರ್ಜಿಯ …
Read More »