ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಕಾಯ್ದೆ ರದ್ದು ಮಾಡುವಂತೆ ಕೋರಿ ಸಹಿ ಸಂಗ್ರಹ ಮನವಿ ಪತ್ರದೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರೀಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃಷಿ ಕಾಯ್ದೆ ರದ್ದು ಮಾಡಬೇಕು ಎಂದು ಆಗ್ರಹಿಸಿ 2 ಕೋಟಿ ಸಹಿ ಸಂಗ್ರಹ ಮನವಿ ಪತ್ರದೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು …
Read More »ತಹಶೀಲ್ದಾರ್ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ !
ಬಳ್ಳಾರಿ : ಜಿಲ್ಲೆ ಸಿರಗುಪ್ಪ ತಾಲ್ಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಬಿ.ಕೂಡಲಗಿ ಅವರ ಪತ್ನಿ ಶಂಕ್ರಮ್ಮ ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತಿಚೇಗೆ ಎಸ್.ಬಿ.ಕೂಡಲಗಿ ಅವರನ್ನು ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಗೊಳಿಸಲಾಗಿತ್ತು. ಇದರಿಂದ ಮನನೊಂದು ಅವರ ಪತ್ನಿ ಶಂಕ್ರಮ್ಮ(50) ಸರ್ಕಾರಿ ವಸತಿ ಗೃಹದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ. ತಹಶೀಲ್ದಾರ್ ಎಸ್.ಬಿ.ಕೂಡಲಗಿ ನಿವಾಸಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಭೇಟಿ ಮಾಡಿ, ಸಾಂತ್ವಾನ ಹೇಳಿದರು. ಸ್ಥಳಕ್ಕೆ …
Read More »ರಿಪಬ್ಲಿಕ್ ಟಿವಿಗೆ ಬ್ರಿಟನ್ ದಂಡ: ಬ್ರಿಟಿಷರನ್ನು 280 ಬಾರಿ ಕ್ಷಮೆ ಕೋರಿ ಸಾವರ್ಕರ್ ದಾಖಲೆ ಮುರಿದು ಸಾರ್ವಜನಿಕರಿಂದ ಅಪಹಾಸ್ಯಕ್ಕೆ ಗುರಿಯಾದ ಅರ್ನಾಬ್ ಗೋ ಸ್ವಾಮಿ
ಹೊಸದಿಲ್ಲಿ: ಬ್ರಿಟನ್ ನ ಟಿವಿ ನಿಯಂತ್ರಣ ಪ್ರಾಧಿಕಾರ ಆಫ್ ಕಾಮ್ 20 ಲಕ್ಷ ರೂ. ದಂಡ ವಿಧಿಸಿದ ಬಳಿಕ 280 ಬಾರಿ ಕ್ಷಮೆ ಕೋರುವ ಮೂಲಕ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಸಾರ್ವಜನಿಕರಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭ ಬ್ರಿಟಿಷ್ ಸರಕಾರಕ್ಕೆ ಹಲವು ಬಾರಿ ಕ್ಷಮೆ ಕೋರುವ ಮೂಲಕ ಕಾರಾಗೃಹದಿಂದ ಬಿಡುಗಡೆಗೊಂಡಿದ್ದ ಹಿಂದುತ್ವವಾದಿ ಸಾವರ್ಕರ್ ಅವರಿಗೆ ಗೋಸ್ವಾಮಿಯನ್ನು ಹೋಲಿಸಿರುವ ಜನರು ಕ್ಷಮೆ ಯಾಚನೆಯಲ್ಲಿ ಸಾರ್ವಕರ್ …
Read More »ಬೆಳಗಾವಿ : ಹೃದಯಾಘಾತದಿಂದ ಗ್ರಾಪಂ.ಚುನಾವಣೆಯ ಕಣದಲ್ಲಿದ್ದ ಅಭ್ಯರ್ಥಿ ಸಾವು
ಚಿಕ್ಕೋಡಿ : ಗ್ರಾಪಂ. ಚುನಾವಣೆಯ ಕಣದಲ್ಲಿದ್ದಅಭ್ಯರ್ಥಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲ್ಲೂಕಿನ ಜೋಡಕುರಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಮಾರುತಿಗೌಡ ಭೀಮಗೌಡ ಪಾಟೀಲ್(65) ಬೆಳಿಗ್ಗೆ ಚಹಾ ಕುಡಿಯುತ್ತಲೇ ಕೊನೆಯುಸಿರೆಳಿದ್ದಾರೆ. ಇವರು ಗ್ರಾಮದ ವಾರ್ಡ್ ನಂ.3ರಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಡಿ.27ರಂದು ಮತದಾನ ನಡೆಯಲಿದೆ. ಮಾರುತಿಗೌಡ ಅವರು ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು.
Read More »ನೈಟ್ ಕರ್ಫ್ಯೂ ತೀರ್ಮಾನ ಹುಚ್ಚರ ಸಂತೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದಂತಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ಕೊರೊನಾ ಹೊಸ ಪ್ರಭೇದ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ರಾತ್ರಿ ವೇಳೆ ಮಾತ್ರ ಜಾರಿಗೊಳಿಸಿರುವ ನೈಟ್ ಕರ್ಫ್ಯೂ ವಿಚಾರ ತೀವ್ರ ಟೀಕೆಗೆ ಗುರಿಯಾಗಿದೆ. ವಿಪಕ್ಷ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದೆ. ರೂಪಾಂತರಿ ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರದ ಕ್ರಮಗಳು ಹುಚ್ಚರ ಸಂತೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದಂತಿದೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡುರಾವ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಕಾಟಾಚಾರದ ರಾತ್ರಿ ಕರ್ಫ್ಯೂ ಹೇರಿ …
Read More »ನ್ಯೂಮೋನಿಯಾಗೆ ಸೆರಂ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೈಗೆಟುಕುವ ಬೆಲೆಯ ಲಸಿಕೆ ಮುಂದಿನ ವಾರದಿಂದ ಜನರಿಗೆ ದೊರೆಯುವ ಸಾಧ್ಯತೆಗಳಿವೆ.
ನವದೆಹಲಿ, ಡಿ.24- ನ್ಯೂಮೋನಿಯಾಗೆ ಸೆರಂ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೈಗೆಟುಕುವ ಬೆಲೆಯ ಲಸಿಕೆ ಮುಂದಿನ ವಾರದಿಂದ ಜನರಿಗೆ ದೊರೆಯುವ ಸಾಧ್ಯತೆಗಳಿವೆ. ಭಾರತದಲ್ಲೇ ಅಭಿವೃದ್ದಿಪಡಿಸಿರುವ ಲಸಿಕೆಯನ್ನು ಲೋಕಾರ್ಪಣೆ ಮಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಮುಂದಿನ ವಾರದಿಂದ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ವಿದೇಶಿ ನಿರ್ಮಿತ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. ವಿದೇಶಿ ಲಸಿಕೆಗಳಿಗಿಂತ ಕಡಿಮೆ ದರದಲ್ಲಿ ಸೆರಂ ಸಂಸ್ಥೆಯ ನ್ಯೂಮೋನಿಯಾ ಲಸಿಕೆ ದೊರೆಯಲಿದೆ. ಪೂನಾ ಮೂಲದ …
Read More »ದಿ.25ರಂದು ಅಯ್ಯಪ್ಪ ಸ್ವಾಮಿ ಮಹಾಪೂಜೆ
ಗೋಕಾಕ: ಇಲ್ಲಿಯ ಉಪ್ಪಾರ ಗಲ್ಲಿಯಲ್ಲಿರುವ ಶ್ರೀ ರಾಮ ಸನ್ನಿಧಾನ ಉಪ್ಪಾರ ಕಲ್ಯಾಣ ಮಂಟಪದಲ್ಲಿ ದಿ.25ರಂದು ಈ ವರ್ಷವೂ ಕನ್ಯಾ ಸ್ವಾಮಿ ಪೂಜೆ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಸಂಜೆ 7 ಗಂಟೆಗೆ ಜರುಗಲಿದೆ. ಅಯ್ಯಪ್ಪ ಸ್ವಾಮಿ ಭಕ್ತಾಧಿಗಳು ಆಗಮಿಸಿ ಮಹಾಪ್ರಸಾದ ಸ್ವೀಕರಿಸಿ ಅಯ್ಯಪ್ಪನ ಕೃಪೆಗೆ ಪಾತ್ರರಾಗಬೇಕೆಂದು ಗುರುಸ್ವಾಮಿಗಳು ಪ್ರಕಟನೆಯಲ್ಲಿ ತಿಳಸಿದ್ದಾರೆ.
Read More »ಡಿ.25 ರಿಂದ ಜ.10 ರವರೆಗೆ ರೈತರ ಕೃಷಿ ಜಮೀನುಗಳಿಗೆ 6.80 ಟಿಎಮ್‍ಸಿ ನೀರು ಬಿಡುಗಡೆ- ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಜಿಎಲ್‍ಬಿಸಿಗೆ 2400, ಜಿಆರ್‍ಬಿಸಿಗೆ 2000, ಸಿಬಿಸಿ ಕಾಲುವೆಗೆ 550 ಕ್ಯೂಸೆಕ್ಸ್ ನೀರು ಬಿಡುಗಡೆ
ಗೋಕಾಕ : ಹಿಡಕಲ್ ಜಲಾಶಯದಿಂದ ಡಿಸೆಂಬರ್ 25 ರಿಂದ 15 ದಿನಗಳವರೆಗೆ ರೈತರ ಕೃಷಿ ಜಮೀನುಗಳಿಗೆ ನೀರು ಹಾಯಿಸಲು 6.80 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಹಿಡಕಲ್ ಜಲಾಶಯದಿಂದ ನೀರನ್ನು ಬಿಡುಗಡೆ …
Read More »ಸ್ಥಾಯಿ ಸಮಿತಿ ಅದ್ಯಕ್ಷರಾಗಿ ಸಾವಂತ ತಳವಾರ ಆಯ್ಕೆ ಶುಭ. ಹಾರೈಸಿದ ಸದಸ್ಯರು
ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯ ವಾರ್ಡ ನಂಬರ 19 ನೆಯ ಸದಸ್ಯರಾದ ಸಾವಂತ ತಳವಾರ ಇವರನ್ನು ಸರ್ವ ಸದಸ್ಯರು ಕೂಡಿಕೊಂಡು ಒಮ್ಮತದಿಂದ. ಕೊಣ್ಣೂರ ಪುರಸಭೆಗೆ ಸ್ಥಾಯಿ ಸಮಿತಿ ಅದ್ಯಕ್ಷರನ್ನಾಗಿ ಆಯ್ಕೆ ಮಾಡಿದರು, ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಯಾದ. ಶಿವಾನಂದ ಹೀರೆಮಠ ,ಅದಕ್ಷರಾದ ರಜಿಯಾಬೇಗಂ ಹೊರಕೇರಿ ಉಪಾದಕ್ಷರಾದ ಮಲ್ಲಪ್ಪ ಹುಕ್ಕೇರಿ, ಸದಸ್ಯರಾದ ಪ್ರಕಾಶ ಕರನಿಂಗ,ವಿನೋದ ಕರನಿಂಗ, ಅಟಲ್ ಕಡಲಗಿ, ಮಾರುತಿ ಪೂಜೇರಿ,ಗೂಳಪ್ಪ ಅಸೂದೆ,ಅಶೋಕ ಕುಮಾರನಾಯಿಕ,ಕುಮಾರ ಕೊಣ್ಣೂರ, ರಾಮಲಿಂಗ್, ಮಗದುಮ್, ಇಮ್ರಾನ್ ಜಮಾದಾರ ಮಹಿಳಾ …
Read More »ಸಚಿವ ರಮೇಶ್ ಜಾರಕಿಹೊಳಿ ಪ್ರಯತ್ನ : ಮಾರಿಹಾಳ ಗ್ರಾಪಂ.ಗೆ 5 ಸ್ಥಾನಗಳು ಅವಿರೋಧ ಆಯ್ಕೆ
ಬೆಳಗಾವಿ : ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರ ಪ್ರಯತ್ನ ದಿಂದ ಸಮೀಪದ ಮಾರಿಹಾಳ ಗ್ರಾಮ ಪಂಚಾಯತಿಯ 18 ಸ್ಥಾನಗಳ ಪೈಕಿ 5 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಅವಿರೋಧ ಆಯ್ಕೆಯಾದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮಗಳ ಅಭ್ಯುದಯಕ್ಕಾಗಿ ಗ್ರಾಮ ಪಂಚಾಯತಿಯಲ್ಲಿ ಸರ್ವ ಸಮ್ಮತ ಅರ್ಹವ್ಯಕ್ತಿಗಳ ಅವಿರೋಧ ಆಯ್ಕೆಯಾಗಬೇಕು ಇದರಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟು ಹಾಗೂ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು. ಕೇಂದ್ರ ಹಾಗೂ ರಾಜ್ಯ …
Read More »
Laxmi News 24×7