ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿನ ‘ಸಿಂಧು’ ಎಂಬ ಹೆಸರಿನ ಹೆಣ್ಣು ಹುಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಈ ಹುಲಿಗೆ ಅಂದಾಜು 17 ರಿಂದ 18 ವರ್ಷ ವಯಸ್ಸಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ವಯೋಸಹಜವಾಗಿ ಮೃತಪಟ್ಟಿರುತ್ತದೆ ಎಂದು ಉಪಸಂರಕ್ಷಣಾಧಿಕಾರಿ ಹಾಗೂ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜೇಶ್ ನಾಯ್ಕ ತಿಳಿಸಿದ್ದಾರೆ.ಎರಡು ತಿಂಗಳಲ್ಲಿ ಎರಡು ಹುಲಿ ಸಾವು: ಕಳೆದ ತಿಂಗಳು ಜೂನ್ನಲ್ಲಿ ಇದೇ ಮೃಗಾಲಯದಲ್ಲಿ ದೇವಿ ಹೆಸರಿನ ಹೆಣ್ಣು ಹುಲಿ ವಯೋಸಹಜ …
Read More »ನಾಲ್ವಡಿ ಒಡೆಯರ್ ಅವರೊಂದಿಗೆ ಸಿದ್ದರಾಮಯ್ಯನವರ ಹೋಲಿಕೆ ಕೆಲಸದ ವಿಚಾರವಾಗಿಯೇ ವಿನಃ ವ್ಯಕ್ತಿಗತವಲ್ಲ: ಸಚಿವ ಮಹದೇವಪ್ಪ
ನಾಲ್ವಡಿ ಒಡೆಯರ್ ಅವರೊಂದಿಗೆ ಸಿದ್ದರಾಮಯ್ಯನವರ ಹೋಲಿಕೆ ಕೆಲಸದ ವಿಚಾರವಾಗಿಯೇ ವಿನಃ ವ್ಯಕ್ತಿಗತವಲ್ಲ: ಸಚಿವ ಮಹದೇವಪ್ಪ ದಾವಣಗೆರೆ/ಹಾವೇರಿ: “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನಪರ, ಸಾಮಾಜಿಕ ನ್ಯಾಯದ ಪರವಾಗಿ ಮಹತ್ವದ ಸಮ ಸಮಾಜವನ್ನು ನಿರ್ಮಾಣ ಮಾಡಿದವರು. ಒಬ್ಬ ವ್ಯಕ್ತಿಯನ್ನು ಮತ್ತೊಬ್ಬ ವ್ಯಕ್ತಿ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ, ಅವರು ಅವರಿಗೆ ಸಾಟಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೊಂದಿಗೆ ಸಿಎಂ ಸಿದ್ದರಾಮಯ್ಯನವರ ಹೋಲಿಕೆ ಕೆಲಸದ ವಿಚಾರವಾಗಿಯೇ ವಿನಃ ವ್ಯಕ್ತಿಗತವಲ್ಲ. ಕಾಮಾಲೆ ಕಣ್ಣಿಂದ ನೋಡಿದ್ದೆಲ್ಲ ಹಳದಿ, …
Read More »ಉತ್ತರಕನ್ನಡದಲ್ಲಿ ಭಾರಿ ಮಳೆ
ಕಾರವಾರ (ಉತ್ತರಕನ್ನಡ): ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರಿ ಗಾಳಿ ಸಹಿತ ಮಳೆಗೆ ಜನಜೀವನ ತತ್ತರಗೊಂಡಿದೆ. ಜಿಲ್ಲೆಯ ಕೆಲ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಮುಂದುವರೆದಿರುವುದು ಒಂದೆಡೆಯಾದರೆ, ಹಲವೆಡೆ ಹೆದ್ದಾರಿಗಳಲ್ಲಿ ಗುಡ್ಡ ಕುಸಿತವಾಗುತ್ತಿರುವುದು ಇನ್ನಷ್ಟು ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ 312 ಮಿ.ಮೀ ಮಳೆಯಾಗಿದೆ. ಅದರಲ್ಲಿಯೂ ಘಟ್ಟದ ಮೇಲ್ಭಾಗದ ಸಿದ್ದಾಪುರ ತಾಲೂಕು ಸೇರಿದಂತೆ ಕರಾವಳಿ ತಾಲೂಕುಗಳಲ್ಲಿ 400 ರಿಂದ 600 ಮಿ.ಮೀ.ವರೆಗೆ ಮಳೆ …
Read More »ಕಲಬುರಗಿ: ಮಳೆ ಅಬ್ಬರಕ್ಕೆ ಮನೆಗಳು ಕುಸಿತ, ಜಾನುವಾರುಗಳು ನೀರುಪಾಲು
ಕಲಬುರಗಿ: ಜಿಲ್ಲೆಯಾದ್ಯಂತ ಕಳೆದರೆಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಹಳ್ಳಗಳು ತುಂಬಿ ಹರಿಯುತ್ತಿವೆ. ಹಲವಡೆ ಮನೆಗಳ ಗೋಡೆ ಕುಸಿದಿದ್ದು, ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋದ ಘಟನೆಗಳು ಸಂಭವಿಸಿವೆ. ಕಮಲಾಪುರ ತಾಲೂಕಿನ ಕುದಮೂಡ ಗ್ರಾಮದ ಸೇತುವೆ ಮೇಲೆ ಹಳ್ಳದ ನೀರಿನ ರಭಸಕ್ಕೆ ಸಿಲುಕಿ ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ. ಗ್ರಾಮದ ರೈತರು ತಮ್ಮ ಜಾನುವಾರುಗಳನ್ನು ಜಮೀನುಗಳಿಗೆ ಕರೆದೊಯ್ಯುವಾಗ ಘಟನೆ ನಡೆದಿದೆ. ತಮ್ಮ ಕಣ್ಣೆದುರಲ್ಲೇ ತಾವು ಸಾಕಿ, ಸಲುಹಿದ ಜಾನುವಾರುಗಳು ಕೊಚ್ಚಿಕೊಂಡು ಹೋಗುತ್ತಿರುವಾಗ ಕಾಪಾಡಲು ಸಾಧ್ಯವಾಗದೆ ರೈತರು …
Read More »ಗುಮ್ಮಟನಗರಕ್ಕೆ ಹೊಸ ಐಷಾರಾಮಿ ಹೋಟೆಲ್ ‘ಪ್ರವಾಸಾ’ ಸೇರ್ಪಡೆ
ಗುಮ್ಮಟನಗರಕ್ಕೆ ಹೊಸ ಐಷಾರಾಮಿ ಹೋಟೆಲ್ ‘ಪ್ರವಾಸಾ’ ಸೇರ್ಪಡೆ ಗುಮ್ಮಟನಗರಿಗೆ ಮತ್ತೊಂದು ಐಷಾರಾಮಿ ಹೋಟೆಲ್ ನ ಪ್ರವೇಶವಾಗಿದೆ. ಇದರಿಂದಾಗಿ ಬಸವನಾಡಿನ ಪ್ರವಾಸೋದ್ಯಮಕ್ಕೆ ಇನ್ನಷ್ಟು ಶಕ್ತಿ ಬಂದಂತಾಗಲಿದೆ. ಸ್ವತಂತ್ರ ಕಾಲೊನಿಯ ವಿಜಯಪುರ – ಅಥಣಿ ರಸ್ತೆಯಲ್ಲಿನ ‘ಪ್ರವಾಸಾ’ ಹೆಸರಿನ ಹೋಟೆಲ್ ನಿಜಕ್ಕೂ ಇಲ್ಲಿಗೆ ಬರಲಿರುವ ಪ್ರವಾಸಿಗರಿಗೆ ಅನುಕೂಲಕರ ವಸತಿ ಹಾಗೂ ಆತಿಥ್ಯವನ್ನು ಒದಗಿಸಲಿದೆ. ಶನಿವಾರ ಹೋಟೆಲ್ ಉದ್ಘಾಟಿಸಿ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಿತೇಂದ್ರಕುಮಾರ್ ಜೈನ್ ಹಾಗೂ ಅವರ ತಂಡಕ್ಕೆ ಶುಭಹಾರೈಸಿದೆ. ಆತಿಥ್ಯ …
Read More »ಶಾಸಕರಾದ ಶ್ರೀ ಆಸಿಫ್ ಸೇಠ್ ಅವರು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಆಯೋಜಿಸಿದ್ದ 26ನೇ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ್ ವಿಜಯೋತ್ಸವ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಸಕರಾದ ಶ್ರೀ ಆಸಿಫ್ ಸೇಠ್ ಅವರು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಆಯೋಜಿಸಿದ್ದ 26ನೇ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ್ ವಿಜಯೋತ್ಸವ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಗಿಲ್ ವೀರರು ಮತ್ತು ಅವರ ಕುಟುಂಬಗಳು, ಹಿರಿಯ ಮಾಜಿ ಸೈನಿಕರು, ಪ್ರತಿಭಾನ್ವಿತ ವಿದ್ಯಾರ್ಥಿಗಳು, ಅಂಗವಿಕಲರು ಮತ್ತು ಅನಾಥ ಮಕ್ಕಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಹಿರಿಯ ಮಾಜಿ ಸೈನಿಕರು ಮತ್ತು ಸ್ಥಳೀಯ ನಾಯಕರು …
Read More »ಶ್ರೀ ಶಿವಯೋಗಿ ಟೇಕ್ವಾಂಡೋ ಸ್ಪೋರ್ಟ್ ಅಕಾಡೆಮಿ ಘಟಪ್ರಭಾ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸತ್ಕಾರ
ಶ್ರೀ ಶಿವಯೋಗಿ ಟೇಕ್ವಾಂಡೋ ಸ್ಪೋರ್ಟ್ ಅಕಾಡೆಮಿ ಘಟಪ್ರಭಾ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸತ್ಕಾರ ಬೆಂಗಳೂರು : ಶ್ರೀ ಶಿವಯೋಗಿ ಟೇಕ್ವಾಂಡೋ ಸ್ಪೋರ್ಟ್ ಅಕಾಡೆಮಿ ಘಟಪ್ರಭಾ ವಿದ್ಯಾರ್ಥಿಗಳು 42 ರಾಜ್ಯ ಟೇಕ್ವಾಂಡೋ ಚಾಂಪಿಯನ್ಸ್ ಗಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸತ್ಕಾರ ಮಾಡಿದರು. ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳು ರಂಗನಾಥ ಸ ನಾವಿ, ಅನುಷ್ಕಾ ಮೇತ್ರಿ, ಉತ್ತಮ ಕಾಟೋಜಿ, ಸತೀಶ್ ಮೇತ್ರಿ, ಸುಪ್ರೀತ ನಾಯಕ, ಸುಶ್ಮಿತಾ ಮೇತ್ರಿ, ಶಿವಂ ಕುಲಗೋಡ, …
Read More »ಸಂಗನಕೇರಿ ಮತ್ತು ಸುತ್ತಮುತ್ತಲಿನ ಬಡ ಜನತೆಗೆ ಉತ್ತಮವಾದ ಆರೋಗ್ಯ ಸೇವೆಯನ್ನು ದೊರಕಿಸಿಕೊಡಲು ಸಂಗನಕೇರಿ ಪಟ್ಟಣದಲ್ಲಿ ಸುಸಜ್ಜಿತವಾದ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲಾಗುತ್ತಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು
ಮೂಡಲಗಿ- ಸಂಗನಕೇರಿ ಮತ್ತು ಸುತ್ತಮುತ್ತಲಿನ ಬಡ ಜನತೆಗೆ ಉತ್ತಮವಾದ ಆರೋಗ್ಯ ಸೇವೆಯನ್ನು ದೊರಕಿಸಿಕೊಡಲು ಸಂಗನಕೇರಿ ಪಟ್ಟಣದಲ್ಲಿ ಸುಸಜ್ಜಿತವಾದ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲಾಗುತ್ತಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು. ಶನಿವಾರದಂದು ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯತ ವ್ಯಾಪ್ತಿಯ ಸಂಗನಕೇರಿ ಪಟ್ಟಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸರ್ಕಾರಿ ಆಸ್ಪತ್ರೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. …
Read More »ಕಾರ್ಗಿಲ್ ವಿಜಯ ದಿವಸ ಆಚರಣೆ: ನಮ್ಮ ಸೈನಿಕರೇ ನಮ್ಮ ನಿಜವಾದ ದೇವರು: ಸಚಿವ ಎಂ.ಬಿ.ಪಾಟೀಲ
ಕಾರ್ಗಿಲ್ ವಿಜಯ ದಿವಸ ಆಚರಣೆ: ನಮ್ಮ ಸೈನಿಕರೇ ನಮ್ಮ ನಿಜವಾದ ದೇವರು: ಸಚಿವ ಎಂ.ಬಿ.ಪಾಟೀಲ ಕಾರ್ಗಿಲ್ ವಿಜಯದ 26ನೇ ವರ್ಷಾಚರಣೆಯ ಅಂಗವಾಗಿ ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ವಿಜೃಂಭಣೆಯಿಂದ ಕಾರ್ಗಿಲ್ ವಿಜಯದಿವಸ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪಾಲ್ಗೊಂಡು ಮಾತನಾಡಿದರು. “ನಾವೆಲ್ಲರೂ ಪಟ್ಟಣಗಳಲ್ಲಿ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದರೆ ಗಡಿಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರೇ ಕಾರಣ. ನಮ್ಮ ದೇಶದ …
Read More »ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ
ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲ್ಲೂಕಿನ ಗೊಡಚಿನಮಲ್ಕಿ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ …
Read More »