Breaking News

ಜಿಲ್ಲೆ

ಅರಿಶಿನ – ಕುಂಕುಮ ಪಡೆಯಲು ಹೋಗುತ್ತಿದ್ದ ನವವಿವಾಹಿತೆ ಅಪಘಾತದಲ್ಲಿ ದುರ್ಮರಣ;

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಅರಿಶಿನ – ಕುಂಕುಮಕ್ಕೆ ಹೋಗುತ್ತಿದ್ದ ನವವಿವಾಹಿತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ. ಆಗಸ್ಟ್ 8 ರಂದು ಲಗ್ಗೆರೆ ಮೇಲ್ಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ಗೀತಾ (23) ಸ್ಥಳದಲ್ಲೇ ಸಾವನ್ನಪ್ಪಿದ್ದು, ರಸ್ತೆಯಲ್ಲಿ ಆಕೆಯ ಪತಿ ಸುನೀಲ್ ಅವರ ರೋಧನೆ ಅಲ್ಲಿದ್ದವರ ಮನಕಲುಕುವಂತೆ ಮಾಡಿದೆ. ಅತ್ತ ಚೆನ್ನಪಟ್ಟಣದಲ್ಲಿರುವ ಗೀತಾ ಅವರ ಅಜ್ಜಿ ಸಹ ಮೊಮ್ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು …

Read More »

ಬೆಳಗಾವಿಯಲ್ಲೇ ಮೊದಲಬಾರಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಕೆ…

ಬೆಳಗಾವಿಯಲ್ಲೇ ಮೊದಲಬಾರಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಕೆ… ಶಾಸಕ ಅಭಯ್ ಪಾಟೀಲ್ ಅವರಿಂದ ಲೋಕಾರ್ಪಣೆ ವಾರ್ಡ್ ಸಂಖ್ಯೆ 29ರಲ್ಲಿ ಬೆಳಗಾವಿಯಲ್ಲೇ ಮೊದಲಬಾರಿಗೆ ಡಿಜಿಟಲ್ ಸೈನ್ ಬೋರ್ಡ್ ಉದ್ಘಾಟನೆ ಕಾರ್ಯಕ್ರಮ ಭವ್ಯವಾಗಿ ನಡೆಯಿತು. ಶಾಸಕರಾದ ಅಭಯ ಪಾಟೀಲ ಹಾಗೂ ಶಾಸಕರಾದ ಬಡೆ ಅವರು ಡಿಜಿಟಲ್ ಸೈನ್ ಬೋರ್ಡ್’ನ್ನು ಉದ್ಘಾಟಿಸಿದರು. ಮೊದಲ ಹಂತದಲ್ಲಿ 15 ಡಿಜಿಟಲ್ ಬೋರ್ಡ್‌ಗಳನ್ನು ವಿವಿಧ ಕ್ರಾಸ್‌ಗಳಲ್ಲಿ ಅಳವಡಿಸಲಾಗಿದ್ದು, ಎರಡನೇ ಹಂತದಲ್ಲಿ ಉಳಿದಿರುವ ಕಾಲೋನಿಗಳಲ್ಲಿಯೂ ಇವುಗಳನ್ನು ಅಳವಡಿಸಲಾಗುವುದು ಎಂದು ನಗರಸೇವಕ …

Read More »

ದಸರಾ ದೀಪಾಲಂಕಾರ 2025: ಆಕರ್ಷಕ ಹಾಗೂ ವಿನೂತನವಾಗಿರಲಿ – ಕೆ. ಎಂ. ಮುನಿಗೋಪಾಲ್‌ ರಾಜು

ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್‌ ದೀಪಾಲಂಕಾರವನ್ನು ಈ ಬಾರಿ ಹೊಸ ವಿನ್ಯಾಸಗಳ ಜತೆಗೆ, ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಆಕರ್ಷಣೀಯವಾಗಿಸಲು ಆಸಕ್ತಿ ವಹಿಸಿ, ಕೆಲಸ ಮಾಡಿ ಎಂದು ಅಧಿಕಾರಿಗಳು ಹಾಗೂ ದೀಪಾಲಂಕಾರ ಮಾಡುವ ವಿದ್ಯುತ್‌ ಗುತ್ತಿಗೆದಾರರಿಗೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ವ್ಯವಸ್ಥಾಪಕ ನಿರ್ದೇಶಕ ಕೆ. ಎಂ. ಮುನಿಗೋಪಾಲ್‌ ರಾಜು ಅವರು ಸಲಹೆ ನೀಡಿದ್ದಾರೆ. ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರುವ ನಿಗಮದ ಪ್ರಧಾನ …

Read More »

ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ, ಕಾ‌ರ್ ಹಾಗೂ ಮನೆಗಳ್ಳತನ ಮಾಡಿ ಕಳ್ಳರು ಪರಾರಿ

ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ, ಕಾ‌ರ್ ಹಾಗೂ ಮನೆಗಳ್ಳತನ ಮಾಡಿ ಕಳ್ಳರು ಪರಾರಿ ಚಿಕ್ಕೋಡಿ: ಒಂದು ಮನೆ ಹಾಗೂ ಕಾರ ದರೋಡೆ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮೆಹಬೂಬ್ ನಗರದಲ್ಲಿ ನಡೆದಿದೆ. ಕಾರ್ ಗಾಜು ಒಡೆದು ಬ್ಯಾಗನಲ್ಲಿದ್ದ 6 ಸಾವಿರ ರೂ ಕಳ್ಳತನ ಮಾಡಲಾಗಿದೆ. ಒಬ್ಬರಿಗೆ ಸೇರಿದ ಕಾರಿನ ಗಾಜು ಒಡೆದು ಕಳ್ಳತನ ಮಾಡಿ ಅಲ್ಲಿಂದ ಸ್ವಲ್ಪ ಅಂತರದಲ್ಲಿದ್ದ ಮನೆಯಲ್ಲಿ ಕಳ್ಳತನ ಮಾಡಿ ಮನೆಯಲ್ಲಿದ್ದ 5 …

Read More »

ರೇಖಾ ಬಡಿಗೇರ್ ಬರೆದಿರುವ ಉಧೋ ಉದೋ ಪುಸ್ತಕ ಲೋಕಾರ್ಪಣೆ

ರೇಖಾ ಬಡಿಗೇರ್ ಬರೆದಿರುವ ಉಧೋ ಉದೋ ಪುಸ್ತಕ ಲೋಕಾರ್ಪಣೆ ಸವದತ್ತಿ:ರಾಯಚೂರಿನ ಕನ್ನಡ ಉಪನ್ಯಾಸಕಿ ಶ್ರೀಮತಿ ರೇಖಾ ಬಡಿಗೇರ್ ಅವರು ಬರೆದಿರುವ ಎಲ್ಲಮ್ಮನ ಜೀವನ ಚರಿತ್ರೆ ಕುರಿತು ಉಧೋ ಉದೋ ಪುಸ್ತಕವನ್ನು ಇಂದು ಎಲ್ಲಮ್ಮನ ದೇವಸ್ಥಾನದ ಸನ್ನಿಧಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಅಶೋಕ್ ಬಿ ದುಡಗುಂಟಿ ಲೋಕಾರ್ಪಣೆ ಮಾಡಿದರು. ಎಲ್ಲಮ್ಮ ದೇವಸ್ಥಾನದ ಶ್ರೀ ರೇಣುಕಾದೇವಿಯ ಜೀವನ ಚರಿತ್ರೆಯನ್ನು ಬರೆದಿರುವ …

Read More »

ಬೆಳಗಾವಿ ರಾಜ್ಯದ ಅತಿ ಹೆಚ್ಚು ವಿಸ್ತೀರ್ಣ ಹೊಂದಿದ ದೊಡ್ಡ ಜಿಲ್ಲೆ ಷ್ಟಾಚಾರ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು: ಲೋಕಾಯುಕ್ತ ನ್ಯಾಯಮೂರ್ತಿ

ಬೆಳಗಾವಿ ರಾಜ್ಯದ ಅತಿ ಹೆಚ್ಚು ವಿಸ್ತೀರ್ಣ ಹೊಂದಿದ ದೊಡ್ಡ ಜಿಲ್ಲೆಯಾಗಿದ್ದು, ಆಡಳಿತಾತ್ಮಕವಾಗಿ ಸುಧೀರ್ಘವಾದ ಕ್ಷೇತ್ರವಾಗಿದೆ. ಜಿಲ್ಲೆಯನ್ನು ಮಾದರಿ, ಭ್ರಷ್ಟಾಚಾರ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಗೌರವಾನ್ವಿತ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ ಅವರು ನುಡಿದರು. ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲ್ ನಲ್ಲಿ ಬುಧವಾರ (ಆ.06) ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಲೋಕಾಯುಕ್ತ ಪ್ರಕರಣಗಳ ವಿಲೇವಾರಿ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ …

Read More »

ವೃದ್ಧನ ಡಿಜಿಟಲ್ ಅರೆಸ್ಟ್ ಮಾಡಿ ₹1.77 ಕೋಟಿ ದೋಚಿದ ಸೈಬರ್ ವಂಚಕರು

ಬೆಂಗಳೂರು: ವೃದ್ಧನನ್ನು ಒಂದು ವಾರ ಡಿಜಿಟಲ್ ಬಂಧನದಲ್ಲಿಟ್ಟ ಸೈಬರ್ ವಂಚಕರು 1.77 ಕೋಟಿ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದಾನಂದನಗರದ ಎನ್‌ಜಿಇಎಫ್ ಲೇಔಟ್ ನಿವಾಸಿ ಜಿ.ವಸಂತ ಕುಮಾರ್ (81) ಸೈಬರ್ ವಂಚನೆಗೆ ಒಳಗಾದವರು. ಈ ಸಂಬಂಧ ಅವರು ನೀಡಿದ ದೂರಿನ ಮೇರೆಗೆ ನಗರದ ಪೂರ್ವ ವಿಭಾಗದ ಸಿಇಎನ್​​ ಪೊಲೀಸ್ ಠಾಣೆಯಲ್ಲಿ ಜುಲೈ 23ರಂದು ಪ್ರಕರಣ ದಾಖಲಾಗಿದೆ. ಮುಂಬೈನ ಕೊಲಾಬಾ ಪೊಲೀಸರ ಹೆಸರಿನಲ್ಲಿ ಜುಲೈ 5ರಂದು ಕರೆ …

Read More »

ಬೆಳಗಾವಿ – ಬೆಂಗಳೂರು ವಂದೇ ಭಾರತಕ್ಕೆ ಮುಹೂರ್ತ ಫಿಕ್ಸ್ ; ಎಲ್ಲೆಲ್ಲಿ ನಿಲುಗಡೆ? ಹೀಗಿದೆ ವೇಳಾಪಟ್ಟಿ

ಬೆಳಗಾವಿ : ಬೆಳಗಾವಿ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ಬೆಳಗಾವಿ – ಬೆಂಗಳೂರು ‘ವಂದೇ ಭಾರತ್’ ರೈಲು ಸಂಚರಿಸುವುದಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ಆಗಸ್ಟ್ 10 ರಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ಚಾಲನೆ ನೀಡಲಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ್ ಮಾಹಿತಿ ನೀಡಿದ್ದಾರೆ. ಆಗಸ್ಟ್​ 10 ರಂದೇ ಮೋದಿ ಅವರಿಂದ ಗ್ರೀನ್​ ಸಿಗ್ನಲ್: ಈ ಕುರಿತು ಜಗದೀಶ ಶೆಟ್ಟರ್ ಅವರನ್ನು  ಪ್ರತಿನಿಧಿ ಸಂಪರ್ಕಿಸಿದಾಗ, ನಿನ್ನೆಯಷ್ಟೇ ದೆಹಲಿಯಲ್ಲಿ …

Read More »

ಬೆಳಗಾವಿ ಜನತೆಗೆ ತಟ್ಟಿದ ಸಾರಿಗೆ ನೌಕರರ ಮುಷ್ಕರದ ಬಿಸಿ

ಬೆಳಗಾವಿ: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮುಷ್ಕರದ ಬಿಸಿ ತಟ್ಟಿದ್ದು, ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ವ್ಯತ್ಯಯವಾಗಿದೆ. ಶೇ.30ರಷ್ಟು ಬಸ್​ಗಳು ಮಾತ್ರ ಕಾರ್ಯಾಚರಣೆ ಮಾಡುತ್ತಿವೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯಲ್ಲಿ ಸಾರಿಗೆ ನೌಕರರ ಮುಷ್ಕರದಿಂದಾಗಿ ಬಹಳಷ್ಟು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿಲ್ಲ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಶೇ.10ರಷ್ಟು ಬಸ್​ಗಳು ಮಾತ್ರ ಕಾರ್ಯಾಚರಣೆ ಮಾಡುತ್ತಿದ್ದವು. ಸಾರಿಗೆ ವಿಭಾಗೀಯ …

Read More »

ಪತಿಯನ್ನು ಪತ್ನಿ ಕೃಷ್ಣಾ ನದಿಗೆ ತಳ್ಳಿದ ಪ್ರಕರಣ: ಪೋಕ್ಸೋ ಕಾಯ್ದೆಯಡಿ ಪತಿ ತಾತಪ್ಪ ಅರೆಸ್ಟ್

ರಾಯಚೂರು, ಆಗಸ್ಟ್​ 03: ಪತಿಯನ್ನು ಪತ್ನಿ ಕೃಷ್ಣಾ ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಪೋಕ್ಸೋ ಕಾಯ್ದೆಯಡಿ (Pocso Case) ಪತಿ ತಾತಪ್ಪನನ್ನು ರಾಯಚೂರು (Raichur) ಮಹಿಳಾ ಪೊಲೀಸರು ಬಂಧಿಸಿದ್ದಾರೆ. ತಾತಪ್ಪ ವಿರುದ್ಧ ಬಾಲ್ಯ ವಿವಾಹ (Child Marriage) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆರೋಪಿ ಪತಿ ತಾತಪ್ಪ 16 ವರ್ಷದ ಅಪ್ರಾಪ್ತೆಯನ್ನು ಮದುವೆಯಾಗಿದ್ದನು. ಕೌಟುಂಬಿಕ ಕಲಹ ಹಿನ್ನೆಲೆ ಪತಿ ತಾತಪ್ಪನನ್ನು ಪತ್ನಿ ಕೊಲೆ ಮಾಡಲು ಯತ್ನಿಸಿದ್ದಳು ಎಂಬ ಆರೋಪ …

Read More »