ಬೆಂಗಳೂರು: ಕೆಎಎಎಸ್ ಅಧಿಕಾರಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತ ಅಧಿಕಾರಿ ಡಾ.ಸುಧಾ ಮೇಲೆ ನಡೆದ ಎಸಿಬಿ ರೇಡ್‍ನಲ್ಲಿ ಮತ್ತೊಂದು ತಿಮಿಂಗಲ ಸಿಕ್ಕಿ ಬಿದ್ದಿದೆ. ಸುಧಾ ಅತ್ಯಾಪ್ತೆ ರೇಣುಕಾ ಚಂದ್ರಶೇಖರ್ ಮನೆ ಮೇಲೆ ರೇಡ್ ಮಾಡಿದ್ದ ಎಸಿಬಿ ಅಧಿಕಾರಿಗಳು ಸಿಕ್ಕಿದ ಸಂಪತ್ತುಗಳನ್ನು ನೋಡಿ ದಂಗಾಗಿ ಹೋಗಿದ್ದಾರೆ. ಬ್ಯಾಟರಾಯನಪುರದಲ್ಲಿರುವ ರೇಣುಕಾ ಚಂದ್ರಶೇಖರ್ ಪ್ಲಾಟ್‍ನಲ್ಲಿ ಮಣಬಾರದಷ್ಟು ಚಿನ್ನಾಭರಣ, ನಗ-ನಾಣ್ಯ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಇದೆಲ್ಲದರ ಒಟ್ಟು ಮೌಲ್ಯ 250 …
Read More »ಕೌರವನ ಜೊತೆ ಕಾಲ ಕಳೆದ ಡಿ ಬಾಸ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟ, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿ ಕಾಲ ಕಳೆದಿದ್ದಾರೆ. ಸಚಿವರೊಂದಿಗೆ ಕಾಲ ಕಳೆದಿರು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಬಿ.ಸಿ.ಪಾಟೀಲ್ ಅವರ ಅಧೀಕೃತ ನಿವಾಸಕ್ಕೆ ಭೇಟಿ ನೀಡಿದ್ದ ಡಿ ಬಾಸ್ ಸ್ವಲ್ಪ ಹೊತ್ತು ಹರಟೆ ಹೊಡೆದು ಕಾಲ ಕಳೆದಿದ್ದಾರೆ. ಈ ವೇಳೆ ಬಿ.ಸಿ.ಪಾಟೀಲ್ ಮಾತ್ರವಲ್ಲದೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಕಾಣಿಸಿಕೊಂಡಿದ್ದು, ಇಬ್ಬರು ಸಚಿವರ ಜೊತೆ ದರ್ಶನ್ ಮಾತುಕತೆ …
Read More »ಪಬ್ಲಿಕ್ ಟಿವಿ ಸಿಇಒ ಅರುಣ್ ಕುಮಾರ್, ಸಿಒಒ ಸಿ.ಕೆ ಹರೀಶ್ ಮಕ್ಕಳಿಗೆ ಟ್ಯಾಬ್ ಗಳನ್ನು ವಿತರಣೆ ಮಾಡಿದರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಟ್ಯಾಬ್ ವಿತರಣೆ
ಬೆಂಗಳೂರು: ನಿಮ್ಮ ಪಬ್ಲಿಕ್ ಟಿವಿ ಹಾಗೂ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದ ‘ಜ್ಞಾನದೀವಿಗೆ’ ಕಾರ್ಯಕ್ರಮದ ವತಿಯಿಂದ ವಿವಿಧ ಜಿಲ್ಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಟ್ಯಾಬ್ ಗಳನ್ನು ವಿತರಣೆ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್, ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಗವರ್ನರ್ ಕೇಶವಮೂರ್ತಿ, ಆರೋಗ್ಯ ಸಚಿವ ಸುಧಾಕರ್, ಶಿಕ್ಷಣ ಸಚಿವ ಸುರೇಶ್ ಕುಮಾರ್, ಪಬ್ಲಿಕ್ ಟಿವಿ ಸಿಇಒ ಅರುಣ್ ಕುಮಾರ್, ಸಿಒಒ ಸಿ.ಕೆ ಹರೀಶ್ ಮಕ್ಕಳಿಗೆ ಟ್ಯಾಬ್ …
Read More »ನಾನು 100 ಟ್ಯಾಬ್ ನೀಡ್ತೀನಿ, ಸಾಧ್ಯವಾದ್ರೆ ನೀವೂ ಟ್ಯಾಬ್ ನೀಡಿ- ಶಿವಣ್ಣ ಮನವಿ
ಬೆಂಗಳೂರು: ನಿಮ್ಮ ಪಬ್ಲಿಕ್ ಟಿವಿ ಹಾಗೂ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ‘ಜ್ಞಾನ ದೀವಿಗೆ’ ಕಾರ್ಯಕ್ರಮಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೀಗ ನಟ ಶಿವರಾಜ್ ಕುಮಾರ್ ಅವರು ಕೈ ಜೋಡಿಸಿ, 100 ಟ್ಯಾಬ್‍ಗಳನ್ನು ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ಶಕ್ತಿ ಇರುವವರು ಒಂದು ಟ್ಯಾಬ್ ಆದರೂ ನೀಡಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ. ಜ್ಞಾನ ದೀವಿಗೆ’ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, …
Read More »ಸಿಟಿ ರವಿಯವರ ರಾಜೀನಾಮೆಯನ್ನು ರಾಜ್ಯಪಾಲ ವಿಆರ್ ವಾಲಾ ಅವರು ಅಂಗೀಕಾರ ಮಾಡಿದ್ದಾರೆ.
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರ ರಾಜೀನಾಮೆಯನ್ನು ರಾಜ್ಯಪಾಲ ವಿಆರ್ ವಾಲಾ ಅವರು ಅಂಗೀಕಾರ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ರಾಜ್ಯ ಸರ್ಕಾರದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತ ಸಂಸ್ಕøತಿ ಇಲಾಖೆ ಸಚಿವರಾಗಿದ್ದ ಸಿಟಿ ರವಿಯರವನ್ನು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಿತ್ತು. ಈ ಕಾರಣದಿಂದ ಸಿಟಿ ರವಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿಯಲ್ಲಿ ಓರ್ವ ವ್ಯಕ್ತಿಗೆ ಒಂದೇ ಹುದ್ದೆ ಎಂಬ ನಿಯಮವಿದೆ. ಹೀಗಾಗಿ …
Read More »ಹಸಿರು ಪಟಾಕಿಗೆ ಗ್ರೀನ್ ಸಿಗ್ನಲ್
ಬೆಂಗಳೂರು,ನ.7- ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿ ಹಬ್ಬದಲ್ಲಿ ಹೆಚ್ಚು ವಾಯುಮಾಲಿನ್ಯ ಉಂಟು ಮಾಡದ ಹಸಿರು ಪಟಾಕಿಯನ್ನು ಮಾತ್ರ ಬಳಕೆ ಮಾಡುವಂತೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡು ಪ್ರಕಟಣೆ ಹೊರಡಿಸಿದೆ. ಈ ಸಂಬಂಧ ಮಾರ್ಗಸೂಚಿ ಒಳಗೊಂಡ ವಿವರವಾದ ಅಧಿಕೃತ ಆದೇಶ ಇಂದು ಹೊರಬೀಳುವ ಸಾಧ್ಯತೆಯಿದೆ. ಕೊರೋನಾ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕರ ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ದೀಪಾವಳಿ ಹಬ್ಬವನ್ನು ಸರಳವಾಗಿ, ಅರ್ಥಗರ್ಭಿತ ಹಾಗೂ ಭಕ್ತಿಪೂರ್ವಕವಾಗಿ ಆಚರಿಸುವುದು ಸೂಕ್ತ. ಈ …
Read More »ಕೊರೊನಾ ವೇಳೆ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗೆ ಭರ್ಜರಿ ಆಫರ್ ನೀಡಿದ ಬಿಎಂಟಿಸಿ
ಬೆಂಗಳೂರು: ಕೊರೊನಾ ವೇಳೆಯಲ್ಲೂ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗೆ ಬಿಎಂಟಿಸಿ ಭರ್ಜರಿ ಆಫರ್ ನೀಡಿದೆ. ಕೊರೊನಾ ಲಾಕ್‍ಡೌನ್ ಬಳಿಕ ಕೊರೊನಾದ ಜೊತೆಗೆ ಬಿಎಂಟಿಸಿ ಬಸ್‍ಗಳನ್ನು ಸರ್ಕಾರ ರಸ್ತೆಗಿಳಿಸಿತ್ತು. ಸಾರ್ವಜನಿರ ಹಿತ ದೃಷ್ಟಿಯಿಂದ ಅಂದು ಬಿಎಂಟಿಸಿ ನೌಕಕರು ಕೊರೊನಾ ನಡುವೆಯೂ ಎದರದೇ ಕಾರ್ಯನಿರ್ವಹಿಸಿದ್ದರು. ಕೊರೊನಾ ವೇಳೆಯೂ ಕೆಲಸ ಮಾಡಿದ್ದ ಸಿಬ್ಬಂದಿಗೆ ಬಿಎಂಟಿಸಿ ಒಂದು ದಿನ ವಂಡರ್ ಲಾಗೆ ಹೋಗುವ ಆಫರ್ ನೀಡಿದೆ. ಬಿಎಂಟಿಸಿ ಸಿಬ್ಬಂದಿಗಳಿಗೆ ಒಟ್ಟು 200 ವಂಡರ್ ಲಾ ಉಚಿತ ಪಾಸ್‍ಗಳನ್ನು ವಿತರಿಸಿದ್ದು, …
Read More »ಮಕ್ಕಳಿಗೆ ಕೊರೊನಾ ಸೋಂಕು ಆವರಿಸಿರುವ ಕಾರಣ ರಾಜ್ಯ ಸರ್ಕಾರ ಸದ್ಯದ ಮಟ್ಟಿಗೆ ಶಾಲೆಗಳನ್ನು ತೆರೆಯದಿರಲು ತೀರ್ಮಾನಿಸಿದೆ.
ಬೆಂಗಳೂರು,ನ.6-ನೆರೆಯ ಆಂಧ್ರಪ್ರದೇಶ ಸೇರಿದಂತೆ ಮತ್ತಿತರ ಕಡೆ ಶಿಕ್ಷಕರು ಮತ್ತು ಮಕ್ಕಳಿಗೆ ಕೊರೊನಾ ಸೋಂಕು ಆವರಿಸಿರುವ ಕಾರಣ ರಾಜ್ಯ ಸರ್ಕಾರ ಸದ್ಯದ ಮಟ್ಟಿಗೆ ಶಾಲೆಗಳನ್ನು ತೆರೆಯದಿರಲು ತೀರ್ಮಾನಿಸಿದೆ. ಈಗಾಗಲೇ ತೀರ್ಮಾನವಾಗಿರುವಂತೆ ಇದೇ 17ರಿಂದ ಪದವಿ ಕಾಲೇಜುಗಳು ಪ್ರಾರಂಭವಾಗಲಿದ್ದು, ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ಬಳಿಕವಷ್ಟೇ ಸರ್ಕಾರ ಶಾಲೆಗಳನ್ನು ಆರಂಭಿಸುವ ಬಗ್ಗೆ ಸೂಕ್ತವಾದ ತೀರ್ಮಾನವನ್ನು ಕೈಗೊವೈದ್ಯಕೀಯ, ಎಂಜಿನಿಯರಿಂಗ್, ಡಿಪ್ಲೊಮಾ ಸೇರಿದಂತೆ 17ರಿಂದ ಪದವಿ ಕಾಲೇಜುಗಳಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ)ದ ಮಾರ್ಗಸೂಚಿ ಪ್ರಕಾರ ಪಾಠಪ್ರವಚನಗಳನ್ನು ನಡೆಸಬೇಕೆಂದು …
Read More »ಸಂಪುಟ ವಿಸ್ತರಣೆಗೆ ಶೀಘ್ರದಲ್ಲೇ ದಿನಾಂಕವನ್ನು ನಿಗದಿಪಡಿಸಲಾಗುವುದು.
ಬೆಂಗಳೂರು,ನ.6- ಬಹುನೀರಿಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರ ಜೊತೆ ಚರ್ಚಿಸಲು ಇದೇ 11ರಂದು ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶಕ್ಕಾಗಿ ನಾನು ಕೂಡ ಕಾತುರದಿಂದ ಎದುರು ನೋಡುತ್ತಿದ್ದೇನೆ. ಫಲಿತಾಂಶ ಪ್ರಕಟಗೊಂಡ ನಂತರ ಮೊದಲು ಫೋನ್ ಮೂಲಕ ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಿ ಸಂಪುಟ ವಿಸ್ತರಣೆ ಮಾಡಬೇಕೆ ಇಲ್ಲವೇ ದೆಹಲಿಗೆ ಬರಬೇಕೇ ಎಂದು ಕೇಳುತ್ತೇನೆ. ನಿಮ್ಮ ವಿವೇಚನೆಯಂತೆ ನಿರ್ಧಾರ ಕೈಗೊಳ್ಳಿ ಎಂದು ವರಿಷ್ಠರು ಸೂಚಿಸಿದರೆ ಸಂಪುಟ …
Read More »ಗ್ರಾಮ ಪಂಚಾಯಿತಿ ಚುನಾವಣೆ2021 ಫೆಬ್ರವರಿಗೆ ಮುಂದೂಡುವ ಸಾಧ್ಯತೆ
ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಡಿಸೆಂಬರನಲ್ಲಿ ನಡೆಯಬೇಕಿತ್ತು. ಡಾ.ಎಂ.ಕೆ.ಸುದರ್ಶನ್ ನೇತೃತ್ವದ ತಜ್ಞರ ಸಮಿತಿ ಚುನಾವಣೆ ನಡೆಸುವುದು ಅಪಾಯಕಾರಿ ಎಂದು ವರದಿ ಸಲ್ಲಿಸಿದೆ. ಆದ ಕಾರಣ 2021 ಫೆಬ್ರವರಿಗೆ ಮುಂದೂಡುವ ಸಾಧ್ಯತೆ ಇದೆ. ತಜ್ಞರ ಸಮಿತಿಯೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವುದು ಈ ವೇಳೆ ನಡೆಸುವುದು ಸೂಕ್ತವಲ್ಲ ಎಂಬ ವರದಿ ನೀಡಿರುವುದರಿಂದ ರಾಜ್ಯ ಸರ್ಕಾರ, ಚುನಾವಣಾ ಆಯೋಗ ಮತ್ತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಿದೆ. ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. …
Read More »