Breaking News

ಜಿಲ್ಲೆ

ಚಿಕ್ಕೋಡಿ ನಗರದಲ್ಲಿರುವ ಸಂಸದರ ಕಚೇರಿಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ನೆರವೇರಿಸಿದರು.

ಚಿಕ್ಕೋಡಿ ನಗರದಲ್ಲಿರುವ ಸಂಸದರ ಕಚೇರಿಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿ ಪ್ರಯುಕ್ತ, ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ವೀರತನದ ಸ್ಮರಣೆಗೈಯಲಾಯಿತು

Read More »

ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾ ಲಿಂಗೈಕ್ಯ

ಕಲಬುರಗಿ: ಕಲ್ಯಾಣ ನಾಡಿನ ಪ್ರಸಿದ್ಧ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾ (91) ಅವರು ಇಂದು ಲಿಂಗೈಕ್ಯರಾದರು. ವಯೋಸಹಜ ಕಾಯಿಲೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಇವರು ದಾಸೋಹ ಮಹಾ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಮತ್ತಷ್ಟು ಕ್ಷೀಣಿಸಿದ ಹಿನ್ನೆಲೆಯಲ್ಲಿ ಇಂದು ರಾತ್ರಿ 8 ಗಂಟೆಯ ಸುಮಾರಿಗೆ ಆಂಬ್ಯುಲೆನ್ಸ್ ಮೂಲಕ ದಾಸೋಹ ಮಹಾಮನೆಗೆ ಕರೆತರಲಾಗಿತ್ತು. ಬಳಿಕ ಆಂಬ್ಯುಲೆನ್ಸ್ ನಲ್ಲೇ …

Read More »

ಬಾಗಲಕೋಟೆಯಲ್ಲಿಯೂ ಧರ್ಮಸ್ಥಳದ ಅವಹೇಳನವನ್ನು ಖಂಡಿಸಿ ಭಕ್ತರು ಪ್ರತಿಭಟನೆಯನ್ನು ನಡೆಸಿ, ಅವಹೇಳನ ಮಾಡುವವರ ವಿರುದ್ಧ ಕ್ರಮಕೈಗೊಳ್ಳದಿದ್ದರೇ, ಉಗ್ರ ಪ್ರತಿಭಟನೆಯ ಎಚ್ಚರಿಕೆ

ಬಾಗಲಕೋಟೆಯಲ್ಲಿಯೂ ಧರ್ಮಸ್ಥಳದ ಅವಹೇಳನವನ್ನು ಖಂಡಿಸಿ ಭಕ್ತರು ಪ್ರತಿಭಟನೆಯನ್ನು ನಡೆಸಿ, ಅವಹೇಳನ ಮಾಡುವವರ ವಿರುದ್ಧ ಕ್ರಮಕೈಗೊಳ್ಳದಿದ್ದರೇ, ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ. ಧರ್ಮಸ್ಥಳದ ಹೆಗ್ಗಡೆ ಕುಟುಂಬದ ಗೌರವಕ್ಕೆ ಧಕ್ಕೆ ತರಲು ಒಳಸಂಚು ನಡೆಸುತ್ತಿರುವ ದುಷ್ಟ ವ್ಯಕ್ತಿಗಳ ವಿರುದ್ದ ಭಕ್ತಾಭಿಮಾನಿಗಳಲ್ಲಿ ಆಕ್ರೋಶ ಉಕ್ಕಿದೆ. ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಇಂದು ಭಕ್ತರು ಪ್ರತಿಭಟನೆ ನಡೆಸಿದರು. ಧರ್ಮಸ್ಥಳದ ಭಕ್ತಾಭಿಮಾನಿಗಳ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿ, ಧರ್ಮಾಧಿಕಾರಿಗಳಾದ ವೀರೆಂದ್ರ ಹೆಗಡೆ ಅವರ ಹೆಸರಿಗೆ ಮಸಿ ಬಳಿಯುವ …

Read More »

ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ. ಧರ್ಮಸ್ಥಳದ ಭಕ್ತಾಭಿಮಾನಿಗಳ ವೇದಿಕೆಯಿಂದ ಹೋರಾಟ

ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ, ಅಪಪ್ರಚಾರ ವಿಚಾರ ಕುಂದಾನಗರಿ ಬೆಳಗಾವಿಯಲ್ಲಿ ಧರ್ಮಸ್ಥಳ ಭಕ್ತರಿಂದ ಬೃಹತ್ ಪ್ರತಿಭಟನೆ ನಗರದ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ. ಧರ್ಮಸ್ಥಳದ ಭಕ್ತಾಭಿಮಾನಿಗಳ ವೇದಿಕೆಯಿಂದ ಹೋರಾಟ ಸರ್ಕಾರವೇ ರಚಿಸಿರೋ ಎಸ.ಐ.ಟಿ ತನಿಖೆ ನಡೆಸುತ್ತಿದೆ ಈವರೆಗೂ ಈ ತನಿಖಾ ತಂಡ ಇನ್ನೂ ಸರ್ಕಾರಕ್ಕೆ ವರದಿಯೇ ಕೊಟ್ಟಿಲ್ಲ ಧರ್ಮಸ್ಥಳ ಮಂಜುನಾಥ ಸ್ವಾಮಿ, ಡಾ.ವೀರೇಂದ್ರ ಹೆಗ್ಗಡೆ ಕುಟುಂಬಸ್ಥರ ವಿರುದ್ಧ ನಿರಾಧಾರ ಆರೋಪ ಮಾಡಿದ್ದಾರೆ ಗಿರೀಶ್ ಮಟ್ಟಣ್ಣವರ, …

Read More »

ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವ ಎಂಬಿಪಿ;

ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವ ಎಂಬಿಪಿ; ಮತ್ತೆ ಆಗಮಿಸಿದ ಮಳೆಯಿಂದ ಮತ್ತೆ ಶುರುವಾಯಿತು ಆತಂಕ ವಿಜಯಪುರ ನಗರದಲ್ಲಿ ಮಳೆ ಮತ್ತೆ ಆರ್ಭಟಿಸುತ್ತಿದೆ. ನಗರದಲ್ಲಿ ಮತ್ತೆ ಮಳೆ ಶುರುವಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿತ್ತು. ಇಂದು ಬೆಳಿಗ್ಗೆ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಮಳೆಯಿಂದ ಆದ ಹಾನಿ ಪರಿಹಾರ ಕುರಿತು ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದರು. ಸಭೆಯಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ …

Read More »

ಅರಿಶಿನ – ಕುಂಕುಮ ಪಡೆಯಲು ಹೋಗುತ್ತಿದ್ದ ನವವಿವಾಹಿತೆ ಅಪಘಾತದಲ್ಲಿ ದುರ್ಮರಣ;

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಅರಿಶಿನ – ಕುಂಕುಮಕ್ಕೆ ಹೋಗುತ್ತಿದ್ದ ನವವಿವಾಹಿತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ. ಆಗಸ್ಟ್ 8 ರಂದು ಲಗ್ಗೆರೆ ಮೇಲ್ಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ಗೀತಾ (23) ಸ್ಥಳದಲ್ಲೇ ಸಾವನ್ನಪ್ಪಿದ್ದು, ರಸ್ತೆಯಲ್ಲಿ ಆಕೆಯ ಪತಿ ಸುನೀಲ್ ಅವರ ರೋಧನೆ ಅಲ್ಲಿದ್ದವರ ಮನಕಲುಕುವಂತೆ ಮಾಡಿದೆ. ಅತ್ತ ಚೆನ್ನಪಟ್ಟಣದಲ್ಲಿರುವ ಗೀತಾ ಅವರ ಅಜ್ಜಿ ಸಹ ಮೊಮ್ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು …

Read More »

ಬೆಳಗಾವಿಯಲ್ಲೇ ಮೊದಲಬಾರಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಕೆ…

ಬೆಳಗಾವಿಯಲ್ಲೇ ಮೊದಲಬಾರಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಕೆ… ಶಾಸಕ ಅಭಯ್ ಪಾಟೀಲ್ ಅವರಿಂದ ಲೋಕಾರ್ಪಣೆ ವಾರ್ಡ್ ಸಂಖ್ಯೆ 29ರಲ್ಲಿ ಬೆಳಗಾವಿಯಲ್ಲೇ ಮೊದಲಬಾರಿಗೆ ಡಿಜಿಟಲ್ ಸೈನ್ ಬೋರ್ಡ್ ಉದ್ಘಾಟನೆ ಕಾರ್ಯಕ್ರಮ ಭವ್ಯವಾಗಿ ನಡೆಯಿತು. ಶಾಸಕರಾದ ಅಭಯ ಪಾಟೀಲ ಹಾಗೂ ಶಾಸಕರಾದ ಬಡೆ ಅವರು ಡಿಜಿಟಲ್ ಸೈನ್ ಬೋರ್ಡ್’ನ್ನು ಉದ್ಘಾಟಿಸಿದರು. ಮೊದಲ ಹಂತದಲ್ಲಿ 15 ಡಿಜಿಟಲ್ ಬೋರ್ಡ್‌ಗಳನ್ನು ವಿವಿಧ ಕ್ರಾಸ್‌ಗಳಲ್ಲಿ ಅಳವಡಿಸಲಾಗಿದ್ದು, ಎರಡನೇ ಹಂತದಲ್ಲಿ ಉಳಿದಿರುವ ಕಾಲೋನಿಗಳಲ್ಲಿಯೂ ಇವುಗಳನ್ನು ಅಳವಡಿಸಲಾಗುವುದು ಎಂದು ನಗರಸೇವಕ …

Read More »

ದಸರಾ ದೀಪಾಲಂಕಾರ 2025: ಆಕರ್ಷಕ ಹಾಗೂ ವಿನೂತನವಾಗಿರಲಿ – ಕೆ. ಎಂ. ಮುನಿಗೋಪಾಲ್‌ ರಾಜು

ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್‌ ದೀಪಾಲಂಕಾರವನ್ನು ಈ ಬಾರಿ ಹೊಸ ವಿನ್ಯಾಸಗಳ ಜತೆಗೆ, ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಆಕರ್ಷಣೀಯವಾಗಿಸಲು ಆಸಕ್ತಿ ವಹಿಸಿ, ಕೆಲಸ ಮಾಡಿ ಎಂದು ಅಧಿಕಾರಿಗಳು ಹಾಗೂ ದೀಪಾಲಂಕಾರ ಮಾಡುವ ವಿದ್ಯುತ್‌ ಗುತ್ತಿಗೆದಾರರಿಗೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ವ್ಯವಸ್ಥಾಪಕ ನಿರ್ದೇಶಕ ಕೆ. ಎಂ. ಮುನಿಗೋಪಾಲ್‌ ರಾಜು ಅವರು ಸಲಹೆ ನೀಡಿದ್ದಾರೆ. ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರುವ ನಿಗಮದ ಪ್ರಧಾನ …

Read More »

ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ, ಕಾ‌ರ್ ಹಾಗೂ ಮನೆಗಳ್ಳತನ ಮಾಡಿ ಕಳ್ಳರು ಪರಾರಿ

ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ, ಕಾ‌ರ್ ಹಾಗೂ ಮನೆಗಳ್ಳತನ ಮಾಡಿ ಕಳ್ಳರು ಪರಾರಿ ಚಿಕ್ಕೋಡಿ: ಒಂದು ಮನೆ ಹಾಗೂ ಕಾರ ದರೋಡೆ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮೆಹಬೂಬ್ ನಗರದಲ್ಲಿ ನಡೆದಿದೆ. ಕಾರ್ ಗಾಜು ಒಡೆದು ಬ್ಯಾಗನಲ್ಲಿದ್ದ 6 ಸಾವಿರ ರೂ ಕಳ್ಳತನ ಮಾಡಲಾಗಿದೆ. ಒಬ್ಬರಿಗೆ ಸೇರಿದ ಕಾರಿನ ಗಾಜು ಒಡೆದು ಕಳ್ಳತನ ಮಾಡಿ ಅಲ್ಲಿಂದ ಸ್ವಲ್ಪ ಅಂತರದಲ್ಲಿದ್ದ ಮನೆಯಲ್ಲಿ ಕಳ್ಳತನ ಮಾಡಿ ಮನೆಯಲ್ಲಿದ್ದ 5 …

Read More »

ರೇಖಾ ಬಡಿಗೇರ್ ಬರೆದಿರುವ ಉಧೋ ಉದೋ ಪುಸ್ತಕ ಲೋಕಾರ್ಪಣೆ

ರೇಖಾ ಬಡಿಗೇರ್ ಬರೆದಿರುವ ಉಧೋ ಉದೋ ಪುಸ್ತಕ ಲೋಕಾರ್ಪಣೆ ಸವದತ್ತಿ:ರಾಯಚೂರಿನ ಕನ್ನಡ ಉಪನ್ಯಾಸಕಿ ಶ್ರೀಮತಿ ರೇಖಾ ಬಡಿಗೇರ್ ಅವರು ಬರೆದಿರುವ ಎಲ್ಲಮ್ಮನ ಜೀವನ ಚರಿತ್ರೆ ಕುರಿತು ಉಧೋ ಉದೋ ಪುಸ್ತಕವನ್ನು ಇಂದು ಎಲ್ಲಮ್ಮನ ದೇವಸ್ಥಾನದ ಸನ್ನಿಧಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಅಶೋಕ್ ಬಿ ದುಡಗುಂಟಿ ಲೋಕಾರ್ಪಣೆ ಮಾಡಿದರು. ಎಲ್ಲಮ್ಮ ದೇವಸ್ಥಾನದ ಶ್ರೀ ರೇಣುಕಾದೇವಿಯ ಜೀವನ ಚರಿತ್ರೆಯನ್ನು ಬರೆದಿರುವ …

Read More »