Breaking News

ರಾಷ್ಟ್ರೀಯ

ಗೋಕಾಕ: ‘ಈದ್ ಮಿಲಾದ ಮತ್ತು ಗಣೇಶ್ ಹಬ್ಬವನ್ನು ಎಲ್ಲರೂ ಒಂದಾಗಿ ಭಾವೈಕ್ಯ ಮತ್ತು ಶಾಂತಿಯುತವಾಗಿ ಆಚರಿಸೋಣ’ ಎಂದ ತಹಶೀಲ್ದಾರ್ ಮೋಹನ ಭಸ್ಮೆ

ಗೋಕಾಕ: ‘ಈದ್ ಮಿಲಾದ ಮತ್ತು ಗಣೇಶ್ ಹಬ್ಬವನ್ನು ಎಲ್ಲರೂ ಒಂದಾಗಿ ಭಾವೈಕ್ಯ ಮತ್ತು ಶಾಂತಿಯುತವಾಗಿ ಆಚರಿಸೋಣ’ ಎಂದು ತಹಶೀಲ್ದಾರ್ ಮೋಹನ ಭಸ್ಮೆ ಕರೆ ನೀಡಿದರು. ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ನಗರಸಭೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.   ‘ಗಣೇಶ ಚತುರ್ಥಿಯಲ್ಲಿ ಹಸಿರು ಪಟಾಕಿಗಳನ್ನು ಬಳಸಬೇಕು. ಸಾರ್ವಜನಿಕರ ಭಾವನೆಗೆ ಧಕ್ಕೆಯಾಗದಂತೆ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಹಬ್ಬದ …

Read More »

ಸಿಎಂ ಬದಲಾವಣೆ ಇಲ್ಲ, ಊಹಾಪೋಹಕ್ಕೆ ಅವಕಾಶವಿಲ್ಲ; ಡಾ.ಪರಮೇಶ್ವರ

ಬೆಂಗಳೂರು: ಮುಖ್ಯಮಂತ್ರಿ ರಾಜೀನಾಮೆ ಕೊಡುವ ಅಗತ್ಯವೇ ಇಲ್ಲ. ಹಾಗಾಗಿ ‘ಅಕಸ್ಮಾತ್ ಬದಲಾವಣೆ’ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ನಾವು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವಾಗ ‘ಅಕಸ್ಮಾತ್’ ಪ್ರಶ್ನೆ ಬರುವುದಿಲ್ಲ. ಹೀಗಾಗಿ ಸಿಎಂ ಬದಲಾವಣೆ, ಮುಂದಿನ ಸಿಎಂ ಚರ್ಚೆಯೇ ಇಲ್ಲ. ಊಹಾಪೋಹಕ್ಕೂ ಅವಕಾಶವಿಲ್ಲ ಎಂದು ಅವರು ತಿಳಿಸಿದರು. ಎಂದು ಸ್ಪಷ್ಟಪಡಿಸಿದರು.

Read More »

ಬೆಂಗಳೂರು-ಮದುರೈ ಸೇರಿ 3 ಹೊಸ ವಂದೇ ಭಾರತ್ ರೈಲಿಗೆ ಮೋದಿ ಚಾಲನೆ, ರೈಲಿನ ವೇಳಾಪಟ್ಟಿ ಇಲ್ಲಿದೆ

ನವದೆಹಲಿ: ಇಂದು ನವದೆಹಲಿಯಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಹೊಸದಾಗಿ ಮೂರು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು. ಈ ಮೂಲಕ ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ರೈಲು ಸಂಪರ್ಕವನ್ನು ಹೆಚ್ಚಿಸಿದರು.     ರೈಲ್ವೇ ಸಚಿವಾಲಯವು ಭಾರತದ ‘ಮೇಕ್ ಇನ್ ಇಂಡಿಯಾ’ ಮತ್ತು ಆತ್ಮನಿರ್ಭರ್ ಭಾರತ್ ಉಪಕ್ರಮಗಳೊಂದಿಗೆ ಹೊಂದಿಕೆಯಾಗುವ, ವೇಗವಾದ, ಹೆಚ್ಚು ಆರಾಮದಾಯಕ ಪ್ರಯಾಣವನ್ನು ಉತ್ತೇಜಿಸುವಲ್ಲಿ ಈ ರೈಲುಗಳ ಮಹತ್ವವನ್ನು ಎತ್ತಿ ತೋರಿಸಿದೆ. …

Read More »

ಒಂದೇ ದಿನದಂದು 100 ಅಬಕಾರಿ ಅಧಿಕಾರಿಗಳ ವರ್ಗ

ಬೆಂಗಳೂರು: ಒಂದೇ ದಿನದಂದು ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಬಿ’ ಮತ್ತು ‘ಸಿ’ ವೃಂದದ 100 ಅಬಕಾರಿ ಅಧಿಕಾರಿಗಳನ್ನು ಎತ್ತಂಗಡಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ, ಅಬಕಾರಿ ಉಪ ಆಯುಕ್ತರ ಹುದ್ದೆ ಕಾರ್ಯನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳಿಗೆ ಬೇರೆ ಜಿಲ್ಲೆಯಲ್ಲಿರುವ ಅಬಕಾರಿ ಹುದ್ದೆಗೆ ಪ್ರಭಾರ ಮೇರೆಗೆ ನಿಯೋಜಿಸಲಾಗಿದೆ. ಈ ಮೂಲಕ ಒಬ್ಬ ಉಪ ಆಯುಕ್ತರಿಗೆ ಎರಡು ಹುದ್ದೆ ಕರುಣಿಸಲಾಗಿದೆ. ಬೆಂಗಳೂರಿನ ವ್ಯಾಪ್ತಿಯ 8 ಅಬಕಾರಿ ಉಪ ಆಯುಕ್ತರ ಹುದ್ದೆಗಳಿವೆ. ಹೆಚ್ಚು ಹಣ ಕೊಡುವ ಅಧಿಕಾರಿಗೆ …

Read More »

ಗೋಕಾಕ ಜಲಪಾತಕ್ಕೆ ಶಾಶ್ವತವಾಗಿರೋ ಸ್ಟಿಲ್ ಬ್ಯಾರಿಕೇಡ್(ರಕ್ಷಾಗೋಡೆ) ನಿರ್ಮೀಸಿದ ಗೋಕಾಕ ಪೊಲೀಸರು

ಗೋಕಾಕ ಜಲಪಾತಕ್ಕೆ ಶಾಶ್ವತವಾಗಿರೋ ಸ್ಟಿಲ್ ಬ್ಯಾರಿಕೇಡ್(ರಕ್ಷಾಗೋಡೆ) ನಿರ್ಮೀಸಿದ ಗೋಕಾಕ ಪೊಲೀಸರು ಗೋಕಾಕ ಫಾಲ್ಸ್ ನಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿರುವುದನ್ನು ಮನಗಂಡು ಎಸ್ಪಿ ಬೆಳಗಾವಿಯವರ ಮಾರ್ಗದರ್ಶನದಂತೆ ಇಂದು ಗೋಕಾಕ ಪೊಲೀಸರು ಗೋಕಾಕ ಜಲಪಾತಕ್ಕೆ ಶಾಶ್ವತವಾಗಿರೋ ಸ್ಟಿಲ್ ಬ್ಯಾರಿಕೇಡ್(ರಕ್ಷಾಗೋಡೆ) ನಿರ್ಮೀಸಿದರು‌ ಪ್ರತಿಬಾರಿಯೂ ಮಳೆ ಬಂದಾಗ ನೀರು ಹೆಚ್ಚಾದ ಸಮಯದಲ್ಲಿ ಪ್ರವಾಸಿಗರು ಜಲಪಾತದ ತುದಿಗೆ ಹೋಗಿ ಹುಚ್ಚಾಟ ಮೆರೆಯುತ್ತಿದ್ದನ್ನು ಮನಗಂಡು ಗೋಕಾಕ ಜಲಪಾತಕ್ಕೆ ಶಾಶ್ವತ ಬ್ಯಾರಿಕೇಡ್ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ …

Read More »

ರಾಜ್ಯದಲ್ಲಿ ರಮ್​, ವಿಸ್ಕಿ,ಬ್ರಾಂಡಿ ಕೊರತೆ

ಬೆಂಗಳೂರು:ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ರಮ್​, ವಿಸ್ಕಿ,ಬ್ರಾಂಡಿ ಮದ್ಯಗಳ ಕೊರತೆಯಾಗಿದೆ. ರಾಜ್ಯದಲ್ಲಿ 32ಗಿಂತ ಅಧಿಕ ಮದ್ಯ ತಯಾರಿಕಾ ಕಂಪನಿಗಳಿವೆ.ಪ್ರತಿ ನಿತ್ಯ ಆಯಾ ಕಂಪನಿಗಳು ತಮ್ಮ ಬ್ರ್ಯಾಂಡ್​​ ಅಡಿ ಮದ್ಯ ತಯಾರಿಸಿ ಸರ್ಕಾರಕ್ಕೆ ತೆರಿಗೆ ಪಾವತಿಸಿ ಮದ್ಯ ಮಾರಾಟ ಮಾಡುತ್ತಿವೆ. ಆದರೆ, ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ಕೆಲ ತಯಾರಿಕಾ ಕಂಪನಿಗಳು ಸೂಕ್ತವಾಗಿ ಮದ್ಯವನ್ನು ಉತ್ಪಾದಿಸುತ್ತಿಲ್ಲ. ಇದರಿಂದಾಗಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಲ್ಲಿ (ಕೆಎಸ್​ಬಿಸಿಎಲ್​) ಸೂಕ್ತ ಮದ್ಯ …

Read More »

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಮುಂಡೂಡಿದೆ. ರಾಜ್ಯಪಾಲರ ನಡೆ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠ, ಉಭಯ ವಕೀಲರ ಸುದೀರ್ಘ ವಾದ-ಪ್ರತಿವಾದವನ್ನು ಆಲಿಸಿತು.   ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಹಾಗೂ ರವಿವರ್ಮ ಕುಮಾರ್ ವಾದ …

Read More »

ರಾಜ್ಯಪಾಲರ ಕಚೇರಿ ಬಳಸಿಕೊಂಡು, ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಹುನ್ನಾರ:CM&DCM

ಬೆಂಗಳೂರು, ಆಗಸ್ಟ್‌ 31: ರಾಜ್ಯಪಾಲರ ಕಚೇರಿ ಬಳಸಿಕೊಂಡು, ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಹುನ್ನಾರ ಮಾಡಲಾಗುತ್ತಿದೆ. ಕರ್ನಾಟಕ ತಾನು ಬೆಳೆದು ಅನೇಕ ರಾಜ್ಯಗಳ ಬೆಳವಣಿಗೆಗೂ ಸಹಾಯ ಮಾಡುತ್ತಿದೆ. ಇಂತಹ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ರಾಜ್ಯಪಾಲರ ಕಚೇರಿಯಿಂದ ಆಗಬಾರದು ಎಂಬುದಷ್ಟೇ ನಮ್ಮ ಕಾಳಜಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಹೇಳಿದರು.   ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯಪಾಲರ ಹುದ್ದೆ ಸಾಂವಿಧಾನ ನೀಡಿರುವ ಪೀಠ. ರಾಜ್ಯಪಾಲರ …

Read More »

ಅನಾರೋಗ್ಯದಿಂದ ಬಳಲುತ್ತಿರುವ ಹುಲಿಯನ್ನು ದತ್ತು ಪಡೆದ ನಟಿ ಸಂಯುಕ್ತ ಹೊರನಾಡು

ಬೆಂಗಳೂರು: ಸ್ಯಾಂಡಲ್​​ವುಡ್​ ನಟಿ ಸಂಯುಕ್ತ ಹೊರನಾಡು ಅವರು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ. ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾ ಮೂಲಕವಾಗಿ ಹಂಚಿಕೊಂಡಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ 28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ‌ ಮರಿಯನ್ನು ನಟಿ ಸಂಯುಕ್ತಾ ಹೊರನಾಡ್‌ ದತ್ತು ಪಡೆದಿದ್ದಾರೆ. ಈ ಹುಲಿ ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ವಾಸಿಸಲು ಆಗದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಂರಕ್ಷಣಾ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. ಪ್ರಾಣ …

Read More »

ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಉದ್ದು, ಸೋಯಾಬೀನ್ ಗೂ ಬೆಂಬಲ ಬೆಲೆ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆರಡು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲಾಗಿದೆ. ಬೆಂಬಲ ಬೆಲೆ ಯೋಜನೆ ಅಡಿ ಉದ್ದು, ಸೋಯಾಬೀನ್ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ರಾಜ್ಯದಲ್ಲಿ ಹೆಸರು, ಸೂರ್ಯಕಾಂತಿ ಜೊತೆಗೆ ಉದ್ದು ಮತ್ತು ಸೋಯಾಬೀನ್ ಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನಿರ್ದೇಶನ ನೀಡಿದೆ. ರಾಜ್ಯದಲ್ಲಿ 2024 -25ರ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆ ಅಡಿ 19,760 ಮೆಟ್ರಿಕ್ …

Read More »