ಮೂಡಲಗಿ: ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕನೋರ್ವ ಗುರುವಾರ ರಾತ್ರಿ ನಾಪತ್ತೆಯಾಗಿರುವ ಘಟನೆ ಕಮಲದನ್ನಿಯಲ್ಲಿ ನಡೆದಿದೆ. ಉದಯ ಪರಿಶುರಾಮ ಹಾದಿಮನಿ (17) ನಾಪತ್ತೆಯಾದ ಯುವಕ. ಮೂಡಲಗಿ ತಾಲೂಕಿನ ಕಮಲದಿನ್ನಿಯ, ಘಟಪ್ರಭಾ ನದಿಯಲ್ಲಿ ಯುವಕ ನಿನ್ನೆ ಸಂಜೆ ವೇಳೆಗೆ ಮೀನು ಹಿಡಿಯಲು ಹೋಗಿದಾಗ ಆಕಸ್ಮಿಕ ಜಾರಿ ಬಿದಿದ್ದು, ನೀರಿನ ರಭಸಕ್ಕೆ ಉದಯ ಕೊಚ್ಚಿ ಹೋಗಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಗ ನಾಪತ್ತೆ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು …
Read More »‘ಮಹಾ’ ಪ್ರವಾಹದಲ್ಲಿ ಕೊಚ್ಚಿ ಹೋದ ಬಸ್ -ಪ್ರಯಾಣಿಕರಿಂದ ರಕ್ಷಣೆಗೆ ಮೊರೆ
ಮುಂಬೈ: ಮಹಾರಾಷ್ಟ್ರದ ಯವತಬಾಳ ಜಿಲ್ಲೆಯ ಉಮರಖೇಡ ಪಟ್ಟಣದ ಸಮೀಪ ಹಳ್ಳವೊಂದರ ಜಲಾವೃತವಾಗಿದ್ದ ಸೇತುವೆ ದಾಟುತ್ತಿದ್ದ ಬಸ್ ವೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡದವರು ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಬಸ್ ನಲ್ಲಿದ್ದ 9ಕ್ಕೂ ಹೆಚ್ಚಿನ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಕಳೆದ ನಾಲ್ಕುದಿನಗಳಿಂದ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಆಗುತ್ತಿದೆ. ಮಳೆಯ ರಭಸಕ್ಕೆ ಮಹಾರಾಷ್ಟ್ರದ ಯವತಬಾಳ ಜಿಲ್ಲೆಯ ಉಮರಖೇಡ ಪಟ್ಟಣದ ಸಮೀಪ ಹಳ್ಳವೊಂದು ತುಂಬಿ ಹರಿಯುತ್ತಿದೆ. ತುಂಬಿ …
Read More »ದಲ್ಲಾಳಿಯ ಪುತ್ರನಿಗೆ ಹಿಗ್ಗಾಮುಗ್ಗ ಥಳಿಸಿದ ವ್ಯಾಪಾರಿಗಳು
ಗದಗ: ಕ್ಷುಲ್ಲಕ ಕಾರಣಕ್ಕಾಗಿ ದಲ್ಲಾಳಿ ಹಾಗೂ ತರಕಾರಿ ಮಾರಾಟಗಾರರ ನಡುವೆ ಮಾರಾಮಾರಿ ನಡೆದಿದ್ದು ಗದಗ ಎಪಿಎಂಸಿ ಆವರಣ ರಣಾಂಗಣವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಗದಗ ಎಪಿಎಂಸಿ ತರಕಾರಿ ಹೋಲ್ ಸೇಲ್ ಮಾರ್ಕೆಟ್ನಲ್ಲಿ ಘಟನೆ ನಡೆದಿದ್ದು ದಲ್ಲಾಳಿ ಅಂಗಡಿಗೆ ನುಗ್ಗಿ ದಲ್ಲಾಳಿ ಪುತ್ರನಿಗೆ ವ್ಯಾಪಾರಿಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ. ರೈತರ ತರಕಾರಿ ಖರೀದಿ ವಿಷಯದಲ್ಲಿ ದಲ್ಲಾಳಿ ಹಾಗೂ ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ವಿಕೋಪಕ್ಕೆ ತಿರುಗಿ ಹೊಎದಾಟ ನಡೆದಿದೆ …
Read More »1.27 ಕೋಟಿ ರೂ. ವೆಚ್ಚದ ಹೊಸ ಸರ್ಕಾರಿ ಪ್ರೌಢ ಶಾಲೆ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಗ್ರಾಮಸ್ಥರ ಒಗ್ಗಟ್ಟಿನ ಹೋರಾಟದಿಂದ ಮಂಜೂರಾಗಿ ರದ್ದಾಗಿದ್ದ ಸರ್ಕಾರಿ ಪ್ರೌಢ ಶಾಲೆಯನ್ನು ಮರಳಿ ಮಂಜೂರಾತಿ ಪಡೆದು ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟ ತಿಗಡಿ ಗ್ರಾಮಸ್ಥರನ್ನು ಅರಭಾವಿ ಶಾಸಕರೂ ಆಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದರು. ತಾಲೂಕಿನ ತಿಗಡಿ ಗ್ರಾಮದಲ್ಲಿ ಶನಿವಾರದಂದು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 1.27 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರೌಢ ಶಾಲೆಯ ನೂತನ ಕಟ್ಟಡಕ್ಕೆ ಗುದ್ದಲಿ …
Read More »ಡಾಲ್ಮಿಯಾ ಭಾರತ ಸಿಮೆಂಟ್ ಪ್ರೈ ಲಿ., ಸಮಾಜಮುಖಿ ಕಾರ್ಯ ಶ್ಲಾಘನೀಯವಾದದ್ದು : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಸಮಾಜಮುಖಿ ಕಾರ್ಯಗಳಿಗೆ ಹೆಸರಾಗಿರುವ ಡಾಲ್ಮಿಯಾ ಸಿಮೆಂಟ್ ಕಾರ್ಖಾನೆ ಈ ಭಾಗದಲ್ಲಿ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ನೀಡುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮೂರು ಬೊಲೇರೋ ವಾಹನ ನೀಡಿರುವುದು ಸ್ತುತ್ಯಾರ್ಹವೆಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರದಂದು ಡಾಲ್ಮಿಯಾ ಭಾರತ ಸಿಮೆಂಟ್ ಲಿ., ಯಾದವಾಡ ಯುನಿಟ್‍ದಿಂದ 30 ಲಕ್ಷ ರೂ. ವೆಚ್ಚದ ಮೂರು …
Read More »ಮೂರು ದಿನಗಳೊಳಗೆ ಸಂತ್ರಸ್ತರ ಮನೆಗಳ ಸಮೀಕ್ಷೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಕಳೆದ ಜುಲೈ ತಿಂಗಳಲ್ಲಿ ಸುರಿದ ಮಳೆ ಹಾಗೂ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ನದಿ ತೀರದ ಗ್ರಾಮಗಳ ಸಂತ್ರಸ್ತರು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬುಧವಾರದಂದು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದ ಆವರಣದಲ್ಲಿ ಅರಭಾವಿ ಕ್ಷೇತ್ರದ 21 ಗ್ರಾಮಗಳ ನದಿ ತೀರದ ಸಂತ್ರಸ್ತರು ಶಾಸಕರ ಬಳಿ ಅಳಲು ಮಂಡಿಸಿದರು. ನದಿ ತೀರದ ಗ್ರಾಮಗಳಾದ ಅಡಿಬಟ್ಟಿ, ಚಿಗಡೊಳ್ಳಿ, …
Read More »ಇಲ್ಲಿನ ಎಲ್ಲ ವಿದ್ಯಾರ್ಥಿಗಳು ದಿನನಿತ್ಯ ಎಲ್ಲಾ ವಿದ್ಯಾರ್ಥಿಗಳು 18 ಕಿ.ಮೀ. ದೂರ ಪ್ರಯಾಣ ಮಾಡಿದರಷ್ಟೇ ಶಾಲಾ ಕಾಲೇಜು ಗಳಿಗೆ ತಲುಪಲು ಸಾಧ್ಯ.
ಬಸ್ ಸೌಲಭ್ಯ ವಂಚಿತ ವಿದ್ಯಾರ್ಥಿಗಳು *ಇಲ್ಲಿನ ಎಲ್ಲ ವಿದ್ಯಾರ್ಥಿಗಳು ದ ಮೂಡಲಗಿ ತಾಲೂಕಿನ ಪಿಜಿ ಹುಣಶಾಳ ಗ್ರಾಮದಲ್ಲಿ: ಸಾರಿಗೆ ಸಂಸ್ಥೆ ಬಸ್ ಸಕಾಲಕ್ಕೆ ಆಗಮಿಸದೇ ಇರುವುದರಿಂದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೋವಿಡ್ ಮಾರ್ಗಸೂಚಿ ತೆರವಾದ ನಂತರ ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳ ಸೇವೆ ಅಪರೂಪವಾಗಿದೆ. ಮುಖ್ಯ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಕಡೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಬಸ್ ಸೇವೆ ಆರಂಭಗೊಂಡಿಲ್ಲ. ಇದರಿಂದ …
Read More »ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಅಪಾರ ಪ್ರಧಾನಿಗಳ ಜನ್ಮದಿನಕ್ಕೆ ಶುಭಕೋರಿದ-ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಕೋವಿಡ್ ಸೋಂಕಿನ ಸಂರಕ್ಷಣೆಗಾಗಿ ಅರಭಾಂವಿ ವಿಧಾನಸಭಾ ಮತಕ್ಷೇತ್ರದಲ್ಲಿ ಶೇ.60ರಷ್ಟು ಲಸಿಕೆಗಳನ್ನು ನೀಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶುಕ್ರವಾರದಂದು ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ನಿಗದಿತ ಗುರಿ ತಲುಪಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿರುವದಾಗಿ ಹೇಳಿದರು. ಅರಭಾವಿ ಕ್ಷೇತ್ರದಾದ್ಯಂತ 2.95 ಲಕ್ಷ ಜನರಿಗೆ ಲಸಿಕೆ ಗುರಿಯನ್ನು ಹೊಂದಿದ್ದು, ಇಲ್ಲಿಯವರಿಗೆ ಸುಮಾರು 1.60 ಲಕ್ಷ ಜನರಿಗೆ ಲಸಿಕೆಗಳನ್ನು ಹಾಕಲಾಗಿದ್ದು, ಕೊವೀಡ್ …
Read More »ಈ ರಾಷ್ಟ್ರದ ಶಿಲ್ಪಿಗಳು ಶಿಕ್ಷಕರು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ
ಮೂಡಲಗಿ : ಶಿಕ್ಷಕರು ಈ ರಾಷ್ಟ್ರದ ಶಿಲ್ಪಿಗಳು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ನಿಮಿತ್ಯ ಇಲ್ಲಿಯ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ರವಿವಾರದಂದು ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದೇಶ ನೀಡಿರುವ ಅವರು, ಶಿಕ್ಷಕರಿಂದ ಮಾತ್ರ ಈ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವೆಂದು ಹೇಳಿದರು. ಕಳೆದ ಒಂದೂವರೆ ದಶಕದಿಂದ ಅರಭಾವಿ ಮತಕ್ಷೇತ್ರದಲ್ಲಿ ಶಿಕ್ಷಣದ …
Read More »SSLC ಮತ್ತು PUC ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೇಸಿಐ ಗೋಕಾಕ ವತಿಯಿಂದ
👑***ಜೇಸಿಐ ಗೋಕಾಕ*** 👑 *ವಿದ್ಯಾರ್ಥಿ/ ವಿದ್ಯಾರ್ಥಿನಿಯರೇ* ಕಳೆದ ವರ್ಷದಂತೆ ಈ ವರ್ಷವೂ ಸಹ ನಮ್ಮ *ಜೇಸಿಐ ಗೋಕಾಕ* ಸಂಸ್ಥೆಯ ವತಿಯಿಂದ *SSLC* ಮತ್ತು *PUC* ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿ ದೆ..ಕಾರಣ *ಮೂಡಲಗಿ ಮತ್ತು ಗೋಕಾಕ* *ವಲಯದ* 2021 ರಲ್ಲಿ SSLC ಮತ್ತು PUC ಪರೀಕ್ಷೆಯಲ್ಲಿ *90/%* ಮತ್ತು ಅಧಿಕ ಅಂಕ ಪಡೆದು ಉತ್ತೀರ್ಣರಾದ ವಿಧ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಈ ನಾಡಿನ ಪೂಜ್ಯರ, ಹಿರಿಯರ ಮತ್ತು ಮುಖಂಡರ ಸಮ್ಮುಖದಲ್ಲಿ ಮೆಡಲ್ …
Read More »