Breaking News

ಚಾಮರಾಜ ನಗರ

ಮೇ 3ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ : ಸಚಿವ ಎಸ್.ಟಿ. ಸೋಮಶೇಖರ್

ಚಾಮರಾಜನಗರ- ಮೇ 3ರ ವರೆಗೆ ರಾಜ್ಯದ ಯಾವುದೇ ಭಾಗದಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ರಾಜ್ಯಕ್ಕೆ ಇದರಿಂದ ನಷ್ಟವಾಗುತ್ತಿದ್ದರೂ ಜನತೆ ಹಿತದೃಷ್ಟಿಯಿಂದ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹಲವು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಬಳಿಕ ಸಭೆ ನಡೆಸಿ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಾಮಾಜಿಕ ಅಂತರವನ್ನು …

Read More »

ಕಾಡಿಗೆ ಬೆಂಕಿಯಿಟ್ಟು ಬೇಟೆಯಾಡುತ್ತಿದ್ದ ಖದೀಮರ ಬಂಧನ………..

ಚಾಮರಾಜನಗರ: ಕಾಡಿಗೆ ಬೆಂಕಿಯಿಟ್ಟು ಬೇಟೆಯಾಡುತ್ತಿದ್ದ ನಾಲ್ವರು ಖದೀಮರನ್ನು ಕಾವೇರಿ ವನ್ಯಧಾಮದ ಕೊತ್ತನೂರು ವಲಯದಲ್ಲಿ ಬಂಧಿಸಲಾಗಿದೆ. ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದ ವಿನ್ಸೆಂಟ್, ಸಗಾಯ್ ರಾಜ್, ಚಾರ್ಲಿಸ್ ಸವರಿನಾಥನ್ ಹಾಗೂ ಜ್ಞಾನಪ್ರಕಾಶ್ ಬಂಧಿತ ಬೇಟೆಗಾರರು. ಕಾಡಿಗೆ ಬೆಂಕಿಯಿಟ್ಟು ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನ ಬೇರೆಡೆಗೆ ಸೆಳೆದು ಬೇಟೆಯಾಡುತ್ತಿದ್ದರು ಎನ್ನಲಾಗಿದ್ದು, ಈ ಹಿಂದೆಯೂ ಬೇಟೆಯಾಡಿ ಇವರು ಸಿಕ್ಕಿಬಿದ್ದಿದ್ದರು ಎಂದು ಡಿಎಫ್‍ಒ ಡಾ.ಎಸ್. ರಮೇಶ್ ತಿಳಿಸಿದ್ದಾರೆ. ಬಂಧಿತರಿಂದ ನಾಡಬಂದೂಕು, ಮದ್ದುಗುಂಡು, ಚಾಕುಗಳು, ಸಾಂಬಾರ ಪದಾರ್ಥಗಳು, …

Read More »

ಲಕ್ಷಾಂತರ ಮೌಲ್ಯದ ತರಕಾರಿಯನ್ನ ಉಚಿತವಾಗಿ ಹಂಚಿದ ರೈತ……..

ಚಾಮರಾಜನಗರ: ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ಗಡಿ ಜಿಲ್ಲೆಯ ಜನರು ಪರದಾಡುತ್ತಿದ್ದಾರೆ. ರೈತರು ಕೂಡ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೇ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ಲಕ್ಷಾಂತರ ರೂಪಾಯಿ ಮೌಲ್ಯದ ತರಕಾರಿಯನ್ನು ಕಾಡಂಚಿನ ಜನರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಬಸವನಗುಡಿ ಗ್ರಾಮದ ಬೆಳ್ಳುಳ್ಳಿ ಮಾದೇಶ ತಮ್ಮ ಐದು ಎಕರೆ ಜಮೀನಿನಲ್ಲಿ, ಎಲೆಕೋಸು, ಮೆಣಸಿನಕಾಯಿ, ಬದನೆಕಾಯಿ, ಕರಿಬೇವಿನಸೊಪ್ಪು ಬೆಳೆದಿದ್ದರು. ಆದರೆ ಈ …

Read More »

ರೈತರಿಗೆ ನೆರವಾದ ಸಂಸದ ಡಿಕೆ ಸುರೇಶ್- ನಷ್ಟವಾಗುತ್ತಿದ್ದ ಕಲ್ಲಂಗಡಿ ಖರೀದಿ

ಚಾಮರಾಜನಗರ: ಕೊರೊನಾ ಭೀತಿಯಿಂದ ಬೆಳೆ ನಷ್ಟ ಅನುಭವಿಸುತ್ತಿದ್ದ ರೈತರ ನೋವಿಗೆ ಸಂಸದ ಡಿ.ಕೆ.ಸುರೇಶ್ ಸ್ಪಂದಿಸಿದ್ದು, ಕಲ್ಲಂಗಡಿ, ಟೊಮಟೊ, ಬದನೆಕಾಯಿ ನಷ್ಟವಾಗುತ್ತಿದ್ದುದನ್ನು ಮನಗಂಡು ಸ್ವತಃ ತಾವೇ ಖರೀದಿ ಮಾಡಲು ಮುಂದಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾ.ಪಂ. ವ್ಯಾಪ್ತಿಯ ನಲ್ಲೂರು, ಗದ್ದೆ ಪೋಡಿ ಗ್ರಾಮಗಳಿಗೆ ಭೇಟಿ ನೀಡಿದ್ದು, ಈ ವೇಳೆ ಬೆಳೆ ನಷ್ಟವಾಗುತ್ತಿರುವುದು ಕಂಡು ಬಂದಿದೆ. ಹೀಗಾಗಿ ಸುಮಾರು 18 ಎಕರೆಯಲ್ಲಿ ಬೆಳೆದ ಕಲ್ಲಂಗಡಿಯನ್ನು ಸುರೇಶ್ ಕೊಂಡುಕೊಂಡಿದ್ದಾರೆ. ಕಲ್ಲಂಗಡಿ ಜೊತೆಗೆ …

Read More »

“ಬಡ ಕುಟುಂಬಗಳಿಗೆ ಮಾದಪ್ಪನ ದಾಸೋಹದಿಂದ ಅಕ್ಕಿ, ಮಾಸ್ಕ್ ವಿತರಣೆ”

ಚಾಮರಾಜನಗರ: ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಮಹದೇಶ್ವರಬೆಟ್ಟದ ವ್ಯಾಪ್ತಿಯ ಬಡ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪಡಿತರ ವಿತರಣೆ ಮಾಡಿದರು. ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ದಾಸೋಹ ನಡೆಯದ ಕಾರಣ ಅಲ್ಲಿ ದಾಸ್ತಾನು ಆಗಿರುವ ಸುಮಾರು 89 ಟನ್ ಅಕ್ಕಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಲಹೆಯಂತೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಸುಮಾರು 6,500 …

Read More »

ಚಾಮರಾಜನಗರ:ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದ ಟಿಬೇಟಿಯನ್ ಕ್ಯಾಂಪ್ ಜನತೆ

ಚಾಮರಾಜನಗರ: ಕೊರೊನಾ ತುರ್ತು ಪರಿಸ್ಥಿತಿ ಹಿನ್ನೆಲೆ ಮುಂದಿನ ಜೀವನ ನಿರ್ವಹಣೆಗೆ ಹೇಗೆ ಎಂದು ಕಂಗಾಲಾಗಿರುವ ಗಿರಿಜನ ಹಾಡಿಗಳ ಜನರಿಗೆ ಜಿಲ್ಲೆಯ ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪದ ಟಿಬೇಟಿಯನ್ ಸೆಟ್ಲೆಮೆಂಟ್ ಯೂನಿಯನ್ ಸಿಬ್ಬಂದಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶವನ್ನೇ ಲಾಕ್‍ಡೌನ ಮಾಡಿದೆ. ಇದರಿಂದ ದಿನಗೂಲಿ ಕಾರ್ಮಿಕರಿಗೆ ಜೀವನ ನಡೆಸುವುದು ಕಷ್ಟಕರವಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಪರಿಸ್ಥಿತಿ ಅರಿತ ಹನೂರು ತಾಲೂಕಿನ …

Read More »

ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ : ಬೆಚ್ಚಿ ಬಿದ್ದ ರೈತರು

ಕಬ್ಬು ಕಟಾವು ಮಾಡುವಾಗ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳನ್ನು ನೋಡಿರೋ ರೈತರು ಬೆಚ್ಚಿ ಬಿದ್ದಿದ್ದಾರೆ.   ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮದ ತೊಪಯ್ಯನ ಮಂಜೇಗೌಡರ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಕಂಡುಬಂದಿವೆ. ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರು ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಎರಡು ಚಿರತೆ ಮರಿಗಳು ಗೋಚರಿಸಿವೆ. ಚಿರತೆ ಮರಿಗಳು ಲವಲವಿಕೆಯಿಂದ ಓಡಾಡುತ್ತಿದ್ದು, ಈ ಗ್ರಾಮದ ರೈತರ ಆತಂಕಕ್ಕೆ …

Read More »

ಸಚಿವ, ಶಾಸಕರಿಂದಲೇ ಲಾಕ್‍ಡೌನ್ ನಿಯಮ ಉಲ್ಲಂಘನೆ – ರೈತ ಸಂಘದಿಂದ ದೂರು

ಚಾಮರಾಜನಗರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಇದೀಗ ಜಿಲ್ಲೆಯಲ್ಲಿ ಸಚಿವ ಮತ್ತು ಶಾಸಕರು ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮತ್ತು ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಇಬ್ಬರು ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ರೈತ ಸಂಘದಿಂದ ಎಸ್‍ಪಿಗೆ ಇವರ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಏನಿದೆ? ನೂರಾರು ಬೆಂಬಲಿಗರೊಂದಿಗೆ …

Read More »

ಲಾಕ್‍ಡೌನ್ ಎಫೆಕ್ಟ್: ಮಗುವಿಗೆ ಚಿಕಿತ್ಸೆ ಕೊಡಿಸಲಾಗದೆ ಪೋಷಕರ ಪರದಾಟ

ಚಾಮರಾಜನಗರ: ಲಾಕ್‍ಡೌನ್ ಪರಿಣಾಮ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೆ ಹೆತ್ತವರು ಸಂಕಟ ಪಡುತ್ತಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆದಿದೆ. ಕೂಲಿಗಾಗಿ ಬಂದ ಧಾರವಾಡ ಮೂಲದ 14 ವಲಸೆ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರ ಕಷ್ಟ ಹೇಳತೀರದಾಗಿದೆ. ಈ ಪೈಕಿ ಗುರುನಾಥ್ ಮತ್ತು ತುಳಸಮ್ಮನ ಅವರ ಚಿಕ್ಕ ಮಗುವಿನ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಹೆತ್ತವರು ಒದ್ದಾಡುತ್ತಿದ್ದಾರೆ. ಗುರುನಾಥ್ ದಂಪತಿ ಧಾರವಾಡ ಜಿಲ್ಲೆ ಕುಂಬಾರಕೊಪ್ಪ ಗ್ರಾಮದವರಾಗಿದ್ದು, ಕೊಳ್ಳೇಗಾಲದ ಚೆಸ್ಕಾಂ ಕಟ್ಟಡ ನಿರ್ಮಾಣಕ್ಕೆ ಬಂದಿದ್ದಾರೆ. …

Read More »

ಚಾಮರಾಜನಗರ:400 ಬುಡಕಟ್ಟು ಕುಟುಂಬಗಳಿಗೆ ಪಡಿತರ ಕೊಡದೆ ವಂಚನೆ – ಡಿಸಿಯಿಂದ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಹಿರಿಯಂಬಲ ಹಾಗೂ ಕತ್ತೆಕಾಲು ಪೋಡಿನ 400 ಬುಡಕಟ್ಟು ಸೋಲಿಗರ ಕುಟುಂಬಗಳಿಗೆ ಪಡಿತರ ಧಾನ್ಯ ವಿತರಣೆ ಮಾಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ವರದಿ ಮಾಡಲಾಗಿತ್ತು. ಈ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಕೊನೆಗೂ ವಿತರಣೆಯಲ್ಲಿ ವಂಚನೆ ಮಾಡಿದ್ದ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ಅನ್ನು ಅಮಾನತು ಮಾಡಿ ಆದೇಶಿಸಿದೆ. ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ವರದಿ ತರಿಸಿಕೊಂಡು ಹಿರಿಯಂಬಲ ಬ್ರಹ್ಮೇಶ್ವರ ನ್ಯಾಯಬೆಲೆ ಅಂಗಡಿಯ …

Read More »