ಬೆಳಗಾವಿ : ದೇಶದ ಮೂರನೇ ಕಿಸಾನ್ ರೈಲು ಇಂದು ಬೆಂಗಳೂರಿನಿಂದ ದೆಹಲಿಗೆ ಸಂಚಾರ ನಡೆಸಲಿದೆ. ರೈಲಿನ ಮೂಲಕ ಅಂತರಾಜ್ಯ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಉಪಯೋಗವಾಗಲಿದ್ದು, ರೈತರಲ್ಲಿ ಹೊಸ ನೀರಿಕ್ಷೆಯನ್ನು ಹುಟ್ಟಿಸಿದೆ. ಬೆಂಗಳೂರು ನಿಂದ ದೆಹಲಿಯನ್ನು ತಲುಪಲು ರೈಲು 54 ಗಂಟೆಯ ಸಮಯ ತೆಗೆದುಕೊಳ್ಳಲಿದೆ. ರಾಜ್ಯದಲ್ಲಿ ಇದೇ ಮೊದಲ ಸಲ ಕಿಸಾನ್ ರೈಲು ಸಂಚಾರ ಇಂದಿನಿಂದ ಆರಂಭವಾಗಲಿದೆ. ಪ್ರತಿ ಶನಿವಾರ ಸಂಜೆ 4.45ಕ್ಕೆ ಬೆಂಗಳೂರಿನಿಂದ ಹೊರಟ ರೈಲು ಸೋಮವಾರ ರಾತ್ರಿ 11.45ಕ್ಕೆ ದೆಹಲಿ ತಲುಪಲಿದೆ. ಅನೇಕ ರೈಲು ನಿಲ್ದಾಣಗಳಲ್ಲಿ ಕೃಷಿ ಉತ್ಪನಗಳ ಲೋಡ್- ಅನ್ ಲೋಡಿಂಗ್ ಗೆ ಸಮಯದ ಅವಕಾಶ ನೀಡಲಾಗಿದೆ. ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ಸಾಗಟ ಮಾಡಲು ಅನಕೂಲವಾಗಿದೆ. ಕಿಸಾನ್ ರೈಲು ಬೆಂಗಳೂರಿನಿಂದ 2751 ಕಿ.
ಮೀ ಸಂಚರಿಸಲಿದೆ.
ಕಿಸಾನ್ ರೈಲು, ಮೈಸೂರು, ಹಾಸನ, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಲೋಂಡ, ಬೆಳಗಾವಿ, ಮೀರಜ್, ಪುಣೆ, ಮನ್ಮಾದ್, ಭುಸಾವಲ್, ಇಟಾರ್ಸ್, ಭೋಪಾಲ್, ಝಾನ್ಸಿ, ಆಗ್ರ ದಂಡು, ಮಥುರಾ ಮೂಲಕ ದೆಹಲಿ ತಲುಪಲಿದೆ. ಕಿಸಾನ್ ರೈಲು ಬಗ್ಗೆ ರೈತರಲ್ಲಿ ಹೊಸ ನೀರಿಕ್ಷೆ ಸೃಷ್ಠಿಯಾಗಿದೆ. ತಮ್ಮ ಪದಾರ್ಥಗಳನ್ನು ಬೇರೆಡೆ ಕಡಿಮೆ ವೆಚ್ಚದಲ್ಲಿ ಸಾಗಾಟ ಮಾಡಿ ಮಾರಾಟ ಮಾಡಲು ಅನಕೂಲವಾಗಲಿದೆ ಎನ್ನುವುದು ರೈತರ ಆಕಾಂಕ್ಷೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಇಲ್ಲಿಂದ ಅನೇಕ ರಾಜ್ಯಗಳಿಗೆ ನಿತ್ಯ ತರಕಾರಿ, ಹಾಲು ಸರಬರಾಜು ಆಗುತ್ತದೆ. ಬೆಳಗಾವಿಯ ಗೆಣಸು ಏಷ್ಯಾ ಖಂಡದಲ್ಲಿಯೇ ಖ್ಯಾತಿಯನ್ನು ಪಡೆದಿದೆ. ಇನ್ನೂ ಹಸಿ ಮೆಣಸಿನಕಾಯಿ ಬೆಳೆಯನ್ನು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳಲಾಗುತ್ತದೆ. ಅಂದಾಜು 50 ಕೋಟಿ ರೂಪಾಯಿ ವಹಿವಾಟು ಮೆಣಸಿನಕಾಯಿಂದಲೇ ನಡೆಯುತ್ತದೆ.
ಕೊಲಾರದ ಟೊಮೆಟೋ, ಮೈಸೂರು ಬದನೆಕಾಯಿ, ಹಾಸನ ಆಲುಗಡ್ಡೆ ಸೇರಿ ಅನೇಕ ಬೆಳೆಗಳಿಗೆ ರಪ್ತು ಮಾಡಲು ರೈತರಿಗೆ ಅನಕೂಲವಾಗಲಿದೆ. ಉತ್ತಮ ಬೆಳೆ ಬೆಳದರು ಬೆಲೆ ಸಿಗದೇ ರೈತರಿಗೆ ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ರೈಲಿನ ಮೂಲಕ ರಪ್ತು ಮಾಡಿ ಉತ್ತಮ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ. ರೈಲಿನಲ್ಲಿ ಪ್ರತಿ ಟನ್ ಸಾಗಾಣಿಕೆಗೆ 4,860 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಒಟ್ಟು 12 ಬೋಗಿಗಳನ್ನು ಇದಕ್ಕಾಗಿ ಸಿದ್ದಪಡಿಸಲಾಗಿದೆ.
: KSRTC: ಆರು ತಿಂಗಳ ಬಳಿಕ ಮಹಾರಾಷ್ಟ್ರಕ್ಕೆ ರಾಜ್ಯದಿಂದ ಬಸ್ ಸೇವೆ ಆರಂಭ; ಸೆ.22ರಿಂದ ಸಂಚಾರ
ಕೃಷಿ ಉತ್ಪನ್ನಗಳ ಸಾಗಾಟಕ್ಕೆ ರೈಲ್ವೆ ಇಲಾಖೆ ಸಹ ಅನೇಕ ವ್ಯವಸ್ಥೆಯನ್ನು ಮಾಡಿಕೊಂಡಿದೆ. ರೈಲಿನಲ್ಲಿ 10 ಅಧಿಕ ಸಾಮರ್ಥ್ಯದ ಪಾರ್ಸಲ್ ವ್ಯಾನ್ ಮತ್ತು ಎರಡು ಬ್ರೇಕ್ ಲಗೇಜ್ ಕಂ ಜನರೇಟರ್ ಕಾರ್ ಬೋಗಿಗಳಿವೆ. ರೈಲಿನಲ್ಲಿ ಸರಬರಾಜು ಮಾಡುವ ಉತ್ಪನ್ನಗಳನ್ನು ರೈತರು ಮೊದಲು ಕೋಲ್ಡ್ ಬೇಡಿಕೆ ಸಲ್ಲಿಸಿದ್ರೆ ಸಿದ್ಧಪಡಿಸಲು ಇಲಾಖೆ ಸಿದ್ದತೆಯನ್ನು ಮಾಡಿಕೊಂಡಿದೆ.
ಕೃಷಿ, ಹೈನುಗಾರಿಕೆ, ಮತ್ಸ್ಯ, ಮಾಂಸಗಳಂತಹ ಬೇಗನೆ ಹಾಳಾಗುವ ಉತ್ಪನ್ನಗಳನ್ನು ರಾಷ್ಟ್ರದ ವಿವಿಧ ಭಾಗಗಳಿಗೆ ಶೀತಲೀಕರಣ ಘಟಕಗಳ ಸರಣಿ ಮೂಲಕ ಸಾಗಿಸುವ ಬಗ್ಗೆ 2020-2021ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಘೋಷಿಸಿತ್ತು.