Breaking News

ಬ್ರೇಕ್ ಫೇಲ್- ಡಿಪೋದಿಂದ ಹೊರ ನುಗ್ಗಿದ ಬಸ್………..

Spread the love

ಬೆಂಗಳೂರು: ಬ್ರೀಕ್ ಫೇಲ್‍ನಿಂದಾಗಿ ಬಸ್‍ವೊಂದು ಡಿಪೋದಿಂದ ಹೊರ ನುಗ್ಗಿದ ಘಟನೆ ಪೂರ್ಣಪ್ರಜ್ಞ ನಗರದಲ್ಲಿ ನಡೆದಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೂರ್ಣಪ್ರಜ್ಞ ನಗರದ ಡಿಪೋ 33ರಲ್ಲಿ ಇಂದು ಬೆಳಗ್ಗೆ 10:45 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಸಿಬ್ಬಂದಿ ನಿಲ್ಲಿಸಿದ್ದ 2 ಬೈಕ್, ಒಂದು ಸೈಕಲ್‍ಗೆ ಜಖಂಗೊಡಿವೆ. ಬಸ್ ಏನಾದ್ರು ಇನ್ನು ಸ್ವಲ್ಪ ಮುಂದೆ ಬಂದಿದ್ದರೆ ದೊಡ್ಡ ಹಳ್ಳಕ್ಕೆ ಬೀಳುತ್ತಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಪೋ 33ರ ಮ್ಯಾನೇಜರ್, ಅಪಘಾತ ಸಂಭವಿಸಿದ ಬಸ್ ರೂಟ್‍ನಲ್ಲಿ ಸಂಚಾರ ಮಾಡುವುದಲ್ಲ. ಡಿಪೋದಲ್ಲಿ ಇದ್ದ ಬಸ್ ಅನ್ನು ಟೆಸ್ಟಿಂಗ್ ನಡೆಸುತ್ತಿದ್ದಾಗ ಈ ಘಟನೆಯಾಗಿದೆ. ಬಸ್ ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ