Breaking News
Home / ಜಿಲ್ಲೆ / ಬೆಂಗಳೂರು / ಬೆಂಗಳೂರಿನಲ್ಲಿ ಮತ್ತೊಂದು ಹತ್ಯೆ; ಕುಡಿದ ಅಮಲಿನಲ್ಲಿ ಕೊಲೆಯಾದ ರೌಡಿಶೀಟರ್‌

ಬೆಂಗಳೂರಿನಲ್ಲಿ ಮತ್ತೊಂದು ಹತ್ಯೆ; ಕುಡಿದ ಅಮಲಿನಲ್ಲಿ ಕೊಲೆಯಾದ ರೌಡಿಶೀಟರ್‌

Spread the love

ಬ್ಯಾಟರಾಯನಪುರ ರೌಡಿಶೀಟರ್‌ ಅಶೋಕ್‌ ನಿನ್ನೆ ಕುಡಿದ ಅಮಲಿನಲ್ಲಿದ್ದಾಗ ದಾಳಿ ಮಾಡಿದ್ದ ಕೆಲವರು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿಯೇ ಈ ಕೊಲೆ ನಡೆದಿರಬಹುದು ಎನ್ನಲಾಗುತ್ತಿದೆ.

ಬೆಂಗಳೂರು (ಮೇ 08); ಕಳೆದ 47 ದಿನಗಳಿಂದ ಶಾಂತವಾಗಿದ್ದ ಬೆಂಗಳೂರು ಕ್ರೈಂ ಲೋಕ ಲಾಕ್‌ಡೌನ್ ಅನ್ನು ಸಡಿಲಿಸಿ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಂತೆ ಮತ್ತೆ ಕ್ರಿಯಾಶೀಲವಾಗಿದೆ. ನಿನ್ನೆ ತಡರಾತ್ರಿ ಕುಡಿದ ಮತ್ತಿನಲ್ಲಿದ್ದ ರೌಡಿಶೀಟರ್‌ ಅಶೋಕ್‌ ಅಲಿಯಾಸ್ ದಡಿಯಾ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಬ್ಯಾಟರಾಯನಪುರ ರೌಡಿಶೀಟರ್‌ ಅಶೋಕ್‌ ನಿನ್ನೆ ಕುಡಿದ ಅಮಲಿನಲ್ಲಿದ್ದಾಗ ದಾಳಿ ಮಾಡಿದ್ದ ಕೆಲವರು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿಯೇ ಈ ಕೊಲೆ ನಡೆದಿರಬಹುದು ಎನ್ನಲಾಗುತ್ತಿದೆ.

ಬ್ಯಾಟರಾಯನಪುರದ ಭಾರತೀನಗರದಲ್ಲಿ ಘಟನೆ ನಡೆದಿದ್ದು,ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಪೊಲೀಸರಿಂದ ಶೋಧಕಾರ್ಯ ಆರಂಭವಾಗಿದೆ.


Spread the love

About Laxminews 24x7

Check Also

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಸರಕಾರದ ಹಂತಕ್ಕೆ

Spread the love ಬೆಂಗಳೂರು: ಲೈಂಗಿಕ ಹಗರಣದಲ್ಲಿ ಸಿಲುಕಿರುವ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರು ಜೈಲು ಸೇರಿರುವ ಹಿನ್ನೆಲೆಯಲ್ಲಿ ಮಠಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ