Breaking News

Complete unlock – ರಾಜ್ಯದಲ್ಲಿ ಚಿತ್ರಮಂದಿರ, ಜಿಮ್, ಮೆಟ್ರೋ, ಈಜು ಇತ್ಯಾದಿ ಕ್ಷೇತ್ರಗಳಿಗೂ ಸಡಿಲಿಕೆ ಸಾಧ್ಯತೆ

Spread the love

ಬೆಂಗಳೂರು(ಜೂನ್ 17): ಸಿನಿಮಾ ಥಿಯೇಟರ್, ಪಬ್, ರೆಸ್ಟೋರೆಂಟ್, ಮೆಟ್ರೋ ಸಂಚಾರ, ವಿದೇಶಿ ರಫ್ತು, ಸ್ವಿಮ್ಮಿಂಗ್ ಫುಲ್ ಹಾಗೂ ಜಿಮ್…. ಹೀಗೆ  ಕೊರೋನಾ ಲಾಕ್ ಡೌನ್​ನಿಂದ ಅನ್ ಲಾಕ್​ಗೆ ಎದುರು ನೋಡ್ತಿರುವ ಈ ಕ್ಷೇತ್ರಗಳಿಗೆ ವಿನಾಯಿತಿ ಸಿಗಬಹುದು ಎಂಬ ನಿರೀಕ್ಷೆ ಈ ಬಾರಿ ಹುಸಿಯಾಗುವ ಸಾಧ್ಯತೆ ಇಲ್ಲ. ಈ ಕ್ಷೇತ್ರಗಳಿಗೆ ವಿನಾಯಿತಿ ಕೊಡಲು ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದಾರೆ ಎನ್ನಲಾಗಿದೆ..

ಇಂದು ವಿವಿಧ ರಾಜ್ಯಗಳ ಸಿಎಂ ಗಳ ಜೊತೆ ನಡೆದ ವೀಡಿಯೋ ಕಾನ್ಪೆರೆನ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ತೀರ್ಮಾನ ಪ್ರಕಟ ಆಗಿಲ್ಲ, ಅಂತಿಮವಾಗಿ ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಪ್ರಕಾರವೇ ಇವುಗಳಿಗೆ ವಿನಾಯಿತಿ ನೀಡುವ ಬಗ್ಗೆ ತೀರ್ಮಾನ ವಾಗಲಿದೆ. ಸದ್ಯ ಇಂದಿನ ವಿಡಿಯೋ ಕಾನ್ಪೆರೆನ್ಸ್​ನಲ್ಲಿ ಸಿಎಂ ಯಡಿಯೂರಪ್ಪ, ಬಾಕಿ ಉಳಿದ ಕ್ಷೇತ್ರಗಳಿಗೆ ವಿನಾಯಿತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿದ್ದಾರೆ. ಆರ್ಥಿಕ ಸುಧಾರಣೆಯಾಗಿ, ಜನ ಜೀವನ ಸರಿಯಾಗಿ ನಡೆಯಲು ಅಗತ್ಯ ವಿರುವ ಕ್ಷೇತ್ರಗಳಿಗೆ ವಿನಾಯಿತಿ ನೀಡುವಂತೆ ಸಿಎಂ ಬಿಎಸ್​ವೈ ಪ್ರಧಾನಿಗೆ ಮನವಿ ಮಾಡಿದ್ದಾರೆ.

ಎಲ್ಲಾ ಕ್ಷೇತ್ರಗಳನ್ನೂ ಮುಕ್ತಗೊಳಿಸಲು ಮನವಿ ಮಾಡಿಕೊಳ್ಳುವ ಮುನ್ನ ಯಡಿಯೂರಪ್ಪ ಅವರು ಲಾಕ್ ಡೌನ್ ಸಡಿಲಿಕೆ ನಂತರದ ಕ್ರಮಗಳನ್ನ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ್ಧಾರೆ. ಕೊವೀಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ಸೋಂಕಿತರ ಚಿಕಿತ್ಸೆಗೆ ಸರ್ಕಾರ ಮಾಡಿರುವ ಕ್ರಮಗಳು, ಲಾಕ್ ಡೌನ್ ಎಫೆಕ್ಟ್​ನಿಂದ ತೊಂದರಗೆ ಸಿಲುಕಿದ ಮಂದಿಗೆ ಸರ್ಕಾರ ಮಾಡಿರುವ ಪರಿಹಾರ ಕ್ರಮಗಳು, ಮುಂದೆ ಕೊರೋನಾ ಸೋಂಕು ಹೆಚ್ಚಾದ್ರೆ ಮುಂಜಾಗ್ರತೆಯಾಗಿ ಏನೆಲ್ಲಾ ಕ್ರಮ ವಹಿಸಬೇಕು, ಸದ್ಯ ಜನ ಜೀವನ ಹೇಗಿದೆ ಎಂಬುದರ ಬಗ್ಗೆ ಸಿಎಂ ವಿವರಿಸಿದರು.

ಈ ಮೂಲಕ ಬಾಕಿ ಉಳಿದ ಕ್ಷೇತ್ರಗಳಿಗೆ ವಿನಾಯಿತಿ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದು, ಶೀಘ್ರದಲ್ಲೇ ಈ ಬಗ್ಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ. ಒಂದು ವೇಳೆ ಆ ಮಾರ್ಗಸೂಚಿ ಪ್ರಕಟ ಆದ್ರೆ ಅದರಲ್ಲಿ ಮೆಟ್ರೋ ಸಂಚಾರ, ಸಿನಿಮಾ ಥಿಯೇಟರ್, ಪಬ್ ಅಂಡ್ ರೆಸ್ಟೋರೆಂಟ್, ಮದುವೆ ಕಲ್ಯಾಣ ಮಂಟಪಗಳು, ಸ್ಚಿಮ್ಕಿಂಗ್ ಪೂಲ್​ಗಳು, ಜಿಮ್ ಸೆಂಟರ್​ಗಳು, ಪ್ರವಾಸಿ ತಾಣಗಳು ವಸತಿ ಗೃಹಗಳು ಹಾಗೂ ವಿದೇಶಿ ರಫ್ತು ಸೇರಿದಂತೆ ಹಲವು ಕ್ಷೇತ್ರಗಳಿಗೆ ವಿನಾಯಿತಿ ಸಾಧ್ಯತೆ ಇದೆ.

 

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??

 


Spread the love

About Laxminews 24x7

Check Also

ಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್

Spread the loveಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್ ಬೆಂಗಳೂರು, ನವೆಂಬರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ