Breaking News

ಕೊರೊನಾ ತಡೆಗೆ ಮೋದಿ ‘ತ್ರಿ’ ಸೂತ್ರ- ಕರ್ನಾಟಕದ 6 ಜಿಲ್ಲೆಗಳು ರೆಡ್ ಝೋನ್

Spread the love

ಬೆಂಗಳೂರು: ಪ್ರಧಾನಿ ಮೋದಿ ಕೊರೊನಾ ತಡೆಗೆ ತ್ರಿ ಝೋನ್ ಮಂತ್ರವನ್ನು ಇಂದೂ ಕೂಡ ಪಠಿಸಿದ್ದಾರೆ. ಸೋಂಕಿನ ತೀವ್ರತೆಯ ಆಧಾರದ ಮೇಲೆ ಝೋನ್‍ಗಳನ್ನು ವಿಂಗಡಿಸಲಾಗಿದ್ದು, ಅಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರಣಾಳಿಕೆ ರೂಪಿಸಿ ಎಂದು ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

View image on Twitter

View image on Twitter

ಮೋದಿ ಸಲಹೆ ಅನ್ವಯ ಬೆಂಗಳೂರು, ಮೈಸೂರು, ಕಲಬುರಗಿ ಸೇರಿದಂತೆ, ರೆಡ್ ಜೋನ್ ಜಿಲ್ಲೆಗಳಲ್ಲಿ ಕೊರೊನಾ ಲಾಕ್‍ಡೌನ್ ಮುಂದುವರೆಯುವ ಸಾಧ್ಯತೆಗಳಿವೆ ಹೆಚ್ಚಿವೆ. ಒಂದಿಷ್ಟು ಮಾನದಂಡಗಳನ್ನು ಇಟ್ಟುಕೊಂಡು ಇವತ್ತು ಕೊರೊನಾಗೆ ಸಂಬಂಧಿಸಿದಂತೆ ನಾಲ್ಕು ವಲಯಗಳನ್ನಾಗಿ ರೂಪಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಸಕ್ರಿಯ ಪ್ರಕರಣಗಳನ್ನು ಮಾತ್ರ ಇಲ್ಲಿ ಪರಿಗಣಿಸಲಾಗಿದೆ. ಜೊತೆಗೆ ಹೆಚ್ಚು ಕಡಿಮೆ ಅರ್ಧ ಕರ್ನಾಟಕ ಕೊರೋನಾ ಮುಕ್ತವಾಗಿದೆ.

ಕೊರೋನಾ ಲೆಕ್ಕಾಚಾರ ಏನು?
* ರೆಡ್‍ಝೋನ್- 15ಕ್ಕಿಂತ ಹೆಚ್ಚು ಪ್ರಕರಣಗಳು (6 ಜಿಲ್ಲೆಗಳು)
* ಆರೆಂಜ್ ಝೋನ್- 6ರಿಂದ 14 (5 ಜಿಲ್ಲೆಗಳು)
* ಹಳದಿ ಝೋನ್- 1ರಿಂದ 5 ಕೇಸ್ (5 ಜಿಲ್ಲೆಗಳು)
* ಗ್ರೀನ್‍ಝೋನ್- ಸೋಂಕು ರಹಿತ (14 ಜಿಲ್ಲೆಗಳು)

ರೆಡ್ ಝೋನ್ ಜಿಲ್ಲೆಗಳು: ಬೆಂಗಳೂರು ನಗರ-71 (ಸಕ್ರಿಯ ಪ್ರಕರಣಗಳು), ಮೈಸೂರು-46, ಕಲಬುರಗಿ-27, ಬೆಳಗಾವಿ-47, ವಿಜಯಪುರ-33, ಬಾಗಲಕೋಟೆ – 19
ಆರೆಂಜ್ ಝೋನ್ ಜಿಲ್ಲೆಗಳು: ಮಂಡ್ಯ-14, ದಕ್ಷಿಣ ಕನ್ನಡ-7, ಬೀದರ್-6, ಧಾರವಾಡ-7, ಬಳ್ಳಾರಿ-8
ಯೆಲ್ಲೋ ಝೋನ್ ಜಿಲ್ಲೆಗಳು: ಬೆಂಗಳೂರು ಗ್ರಾಮಾಂತರ-4, ಚಿಕ್ಕಬಳ್ಳಾಪುರ-5, ಉತ್ತರ ಕನ್ನಡ-1, ತುಮಕೂರು-1, ಗದಗ – 3
ಗ್ರೀನ್ ಝೋನ್ ಜಿಲ್ಲೆಗಳು: ಕೊಡಗು, ಉಡುಪಿ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಹಾವೇರಿ , ಕೋಲಾರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಯಾದಗಿರಿ, ರಾಮನಗರ


Spread the love

About Laxminews 24x7

Check Also

ಅರುಣ ಯಳ್ಳೂರಕರ ಗೆ ಕರ್ನಾಟಕ ಛಾಯಾರತ್ನ’ ಪ್ರಶಸ್ತಿ

Spread the love ಅರುಣ ಯಳ್ಳೂರಕರ ಗೆ ಕರ್ನಾಟಕ ಛಾಯಾರತ್ನ’ ಪ್ರಶಸ್ತಿ ಬೆಳಗಾವಿ: ಇಲ್ಲಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಅರುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ